ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2022-23ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

೨೦೨೧ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ

ಸ್ಥಳ:ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಉಡುಪಿ ದಿನಾಂಕ:೦೧.೦೪.೨೦೨೨

 

೨೦೨೧ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ೨೦೨೦ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭವನ್ನು ೨೦೨೨ರ ಏಪ್ರಿಲ್ ೧ರಂದು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಿ, ಅಮೃತ ಮಹೋತ್ಸವ ಆಚರಣೆಯ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು `ಅಮೃತ ಭಾರತಿಗೆ ಕನ್ನಡದ ಆರತಿ’ಘೋಷಣೆ ಮುಂದಿರಿಸಿಕೊAಡು ವರ್ಷವಿಡೀ ಕಾರ್ಯಕ್ರಮ ನಡೆಸುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ವಿಶೇಷ ಉತ್ಸವ, ಅಕಾಡೆಮಿಗಳಿಂದ ಹೊಸ ಕಾರ್ಯಕ್ರಮ ಆಯೋಜಿಸುತ್ತಿದ್ದು ಮಕ್ಕಳನ್ನು ಸಂಸ್ಕೃತಿ, ಬರಹದೆಡೆಗೆ ಪ್ರೇರೇಪಿಸಲು ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಸಮ್ಮೇಳನ ನಡೆಸಲಾಗುವುದು. ರಾಜ್ಯದ ಸಾಂಸ್ಕೃತಿಕ ಸಂಗತಿಗಳನ್ನು ದೇಶಕ್ಕೆ ಪರಿಚಯಿಸುವ ಬೃಹತ್ ಅಭಿಯಾನಕ್ಕೆ ಸಂಸ್ಕೃತಿ ಇಲಾಖೆ ಸಿದ್ಧವಾಗುತ್ತಿದ್ದು, ಮುಂದಿನ ಏಳೆಂಟು ತಿಂಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ಹೊಸ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಲಿದೆ. ಯಕ್ಷ ರಂಗಾಯಣ ಕೇಂದ್ರ ಸ್ಥಾಪನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಯಕ್ಷಗಾನ-ನಾಟಕ ಎರಡಕ್ಕೂ ಪ್ರೋತ್ಸಾಹ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ದತ್ತಿನಿಧಿ ಸ್ಥಾಪಿಸಲಾಗಿದೆ. ಕರಾವಳಿಯಲ್ಲಿ ಯಕ್ಷಗಾನ ಮಹಾ ಸಮ್ಮೇಳನ ನಡೆಸಬೇಕಿದ್ದು, ಯಕ್ಷಗಾನಕ್ಕೆ ಅದರದೇ ಆದ ಘನತೆ, ಗೌರವವಿದೆ. ಈ ಕಾರಣಕ್ಕೆ ಸಿಎಂ ಜೊತೆ ಮಾತುಕತೆ ನಡೆಸಿ ಬಜೆಟ್‌ನಲ್ಲಿ ವಿಶೇಷ ಅನುದಾನ ಕಾದಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮೊದಲ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ. ಜೊತೆಗೆ ಮುಂಬರುವ ವರ್ಷಗಳಲ್ಲಿ ಯಕ್ಷಗಾನ ಅಕಾಡೆಮಿ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ - “ದತ್ತಿನಿಧಿ” ಹಾಸ್ಯಗಾರ ಪ್ರಶಸ್ತಿಯನ್ನು ನೀಡಲಿದೆ. ಎಲ್ಲ ಅಕಾಡೆಮಿಗಳು ಹೊಸ ಹೊಸ ಚಿಂತನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶ್ರೀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿ, ಪ್ರೌಢಶಾಲೆ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಕೆಲಸವಾಗಬೇಕು. ಬಾಲ್ಯದಲ್ಲಿ ಅಭಿರುಚಿ ಬೆಳೆಸಿದಾಗ ಯಕ್ಷಗಾನದ ವಿಕಸನಕ್ಕೆ ಕಾರಣವಾಗುತ್ತದೆ. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಪರಿಸರವು ಯಕ್ಷಗಾನದ ಹಲವು ದಿಗಜ್ಜರನ್ನು ಬೆಳೆಸಿರುವ ಭೂಮಿಯಾಗಿದೆ. ಮಾಳದ ಪ್ರಭಾಕರ ಜೋಷಿ, ರಾಘವ ನಂಬಿಯಾರ್ ಒಳಗೊಂಡಿದ್ದಾರೆ ಎಂದರು. ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ, ಶ್ರೀ ಸತ್ಯನಾರಾಯಣ ವರದ ಹಾಸ್ಯಗಾರ, ಶ್ರೀ ಮುತ್ತಪ್ಪ ತನಿಯ ಪೂಜಾರಿ, ಶ್ರೀ ಎಸ್.ಬಿ.ನರೇಂದ್ರ ಕುಮಾರ್,                            ಶ್ರೀ ಮೂಡಲಗಿರಿಯಪ್ಪ ಹಾಗೂ ಶ್ರೀ ಎನ್.ಟಿ.ಮೂರ್ತಾಚಾರ್ಯ ಅವರುಗಳಿಗೆ ಗೌರವ ಪ್ರಶಸ್ತಿಗಳನ್ನು, ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀ ಗೋಪಾಲ ಗಾಣಿಗ ಆಜ್ರಿ, ಶ್ರೀ ಬೋಳಾರ ಸುಬ್ಬಯ್ಯ ಶೆಟ್ಟಿ, ಶ್ರೀ ಸೀತೂರು ಅನಂತ ಪದ್ಮನಾಭರಾವ್, ಶ್ರೀ ಕಡತೋಕ ಲಕ್ಷ್ಮಿöನಾರಾಯಣ ಶಂಭು ಭಾಗವತರು, ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ, ಶ್ರೀ ಕೊಕ್ಕಡ ಈಶ್ವರ ಭಟ್, ಶ್ರೀ ಅಡಿಗೋಣ ಬೀರಣ್ಣ ನಾಯ್ಕ, ಶ್ರೀ ಭದ್ರಯ್ಯ ಹಾಗೂ ಶ್ರೀ ಬಸವರಾಜಪ್ಪ ಅವರುಗಳಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗಳನ್ನು, ಹಾಗೂ ೨೦೨೦ನೇ ಸಾಲಿನ ಪುಸ್ತಕ ಬಹುಮಾನಗಳನ್ನು ಡಾ|| ಕೆ.ರಮಾನಂದ ಬನಾರಿ ಹಾಗೂ ಡಾ|| ಹೆಚ್.ಆರ್.ಚೇತನ ಅವರಿಗೆ ಮಾನ್ಯ ಇಲಾಖಾ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಡಾ|| ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿ, ಕಲಾವಿದರನ್ನು ಪ್ರೋತ್ಸಾಹಿಸಿ ಸನ್ಮಾನಿಸುತ್ತಿರುವುದು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ|| ಜಿ.ಎಲ್.ಹೆಗಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಶಿವಾನಂದ ಪೈ, ಪ್ರಾಂಶುಪಾಲ ಡಾ|| ಮಂಜುನಾಥ ಕೋಟ್ಯಾನ್ ವೇದಿಕೆಯಲ್ಲಿದ್ದರು. ಅಕಾಡೆಮಿಯ ರಿಜಿಸ್ಟಾçರ್ ಆದ ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕಾಡೆಮಿಯ ಸದಸ್ಯರುಗಳಾದ ಶ್ರೀ ಶ್ರೀನಿವಾಸ ಸಾಸ್ತಾನ ಹಾಗೂ ಶ್ರೀ ಕೆ.ಎಂ.ಶೇಖರ್ ಕಾರ್ಯಕ್ರಮ ನಿರ್ವಹಿಸಿದರು. ಉಳಿದ ಸದಸ್ಯರುಗಳು ಪ್ರಶಸ್ತಿ ಪುರಸ್ಕೃತರ ಕಿರುಪರಿಚಯವನ್ನು ಗಣ್ಯರಿಗೆ, ಕಲಾವಿದರಿಗೆ, ಕಲಾಭಿಮಾನಿಗಳಿಗೆ ಓದಿ ತಿಳಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಾಳ ಮದ್ದಳೆ - `ಶಲ್ಯ ಸಾರಥ್ಯ’ವನ್ನು ಹಾಗೂ `ಪಾರಿಜಾತ ನರಕಾಸುರ’ಎಂಬ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

 

ಪುಣ್ಯಸ್ಮೃತಿ, ಕೃತಿವಿಮರ್ಶೆ, ಸಾಕ್ಷ್ಯಚಿತ್ರ ಬಿಡುಗಡೆ ಕೃತಿ ಬಿಡುಗಡೆ ಮತ್ತು ತಾಳಮದ್ದಳೆ: ಸ್ಥಳ : ಶ್ರೀ ಎಡನೀರು ಮಠಕಾಸರಗೋಡು

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಶ್ರೀ ಎಡನೂರು ಸಂಸ್ಥಾನದ ಆಶ್ರಯದಲ್ಲಿ ಸಿರಿಚಂದನ ಕನ್ನಡ ಯುವಬಳಗ (ರಿ), ಕಾಸರಗೋಡು ಇವರ ಸಹಯೋಗದಲ್ಲಿ ದಿನಾಂಕ: ೦೪.೦೪.೨೦೨೨ರAದು ಶ್ರೀ ಎಡನೀರು ಮಠದ ಸಭಾಂಗಣದಲ್ಲಿ “ಪುಣ್ಯಸ್ಮೃತಿ, ಕೃತಿವಿಮರ್ಶೆ, ಸಾಕ್ಷ್ಯಚಿತ್ರ ಬಿಡುಗಡೆ, ಕೃತಿ ಬಿಡುಗಡೆ ಮತ್ತು ತಾಳಮದ್ದಳೆ”ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಒಲವು ಕಾಸರಗೋಡಿನ ಮೇಲೆ ಸದಾ ಇರಬೇಕು. ಆ ಮೂಲಕ ಯಕ್ಷಗಾನದ ಕಲಾ ಪೋಷಣೆಗೆ ಮತ್ತು ಕನ್ನಡದ ಉಳಿವು ಬೆಳವಣಿಗೆಗಳಿಗೆ ಅಕಾಡೆಮಿ ಕಾರಣವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಡಾ|| ಜಿ.ಎಲ್. ಹೆಗಡೆ ಅವರು ಕಾಸರಗೋಡಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬAಧವಿದೆ. ಆದ್ದರಿಂದ ಕಾಸರಗೋಡು ಯಾವತ್ತೂ ಯಕ್ಷಗಾನ ಮತ್ತು ಕನ್ನಡದ ವಿಷಯದಲ್ಲಿ ಬೇರೆಯಾಗುವುದಿಲ್ಲ ಎಂದರು. ಬ್ರಹ್ಮೆöÊಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮೃತಿಯಲ್ಲಿ ಭಾಗವಹಿಸಿದ್ದ ಹಿರಿಯ ವಿದ್ವಾಂಸರಾದ ಡಾ|| ಎಂ.ಪ್ರಭಾಕರ ಜೋಶಿ ಅವರು ಎಡನೀರು ಮಠದ ಹೆಸರನ್ನು ರಾಷ್ಟçಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಮಠವನ್ನು ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ ಕಲಾ ಪೋಷಣೆಯ ಪ್ರಧಾನ ಕೇಂದ್ರವಾಗಿ ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಆದಕಾರಣ ಅವರು ಕಲಾ ಸಂತನೂ ಹೌದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮುದ್ರಿಸಿರುವ ಡಾ|| ರಮಾನಂದ ಬನಾರಿ ಅವರು ಬರೆದ `ಯಕ್ಷಗಾನ ಸಂವಾದ ಭೂಮಿಕೆ’ ಎಂಬ ಕೃತಿಯನ್ನು ಯಕ್ಷಗಾನ ಕಲಾವಿದ ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಹಾಗೂ ಪ್ರೊ. ಎಂ.ಎ.ಹೆಗಡೆ ಮತ್ತು ಯೋಗೀಶ್ ರಾವ್ ಚಿಗುರುಪಾದೆ ಸಂಪಾದಿಸಿದ `ಪಾರ್ತಿಸುಬ್ಬ: ಬದುಕು-ಬರಹ’ಎಂಬ ಕೃತಿಯನ್ನು ಸಾಹಿತಿ ಹಾಗೂ ವಿಮರ್ಶಕರಾದ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕ ಅವರು ಪರಿಚಯಿಸಿದರು. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ತಯಾರಿಸಿದ ಹಿರಿಯ `ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತಿçಯವರ ಬಗೆಗಿನ ಸಾಕ್ಷ್ಯಚಿತ್ರವನ್ನು’ ಹಾಗೂ ಕದ್ರಿ ನವನೀತ ಶೆಟ್ಟಿ ಅವರು ಸಂಪಾದಿಸಿದ `ತುಳು ಯಕ್ಷಗಾನ ಪ್ರಸಂಗ ಸಂಪುಟ-೨’ ಇವುಗಳನ್ನು ಎಡನೀರು ಶ್ರೀಗಳು ಬಿಡುಗಡೆ ಮಾಡಿದರು. ಸಾಕ್ಷ್ಯಚಿತ್ರದ ಬಗ್ಗೆ ಯಕ್ಷಗಾನ ಅರ್ಥಧಾರಿ ಹಾಗೂ ಸಾಹಿತಿಗಳಾದ ಶ್ರೀ ರಾಧಾಕೃಷ್ಣ ಕಲ್ಚಾರ್ ಮಾತನಾಡಿದರು. ತುಳು ಯಕ್ಷಗಾನ ಕೃತಿಯ ಬಗ್ಗೆ ಯಕ್ಷಗಾನ ಸಂಘಟಕ ಶ್ರೀ ಅಮ್ಮುಂಜೆ ಜನಾರ್ಧನ ಮಾತನಾಡಿದರು. ಹಿರಿಯರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತಿç, ಡಾ. ರಮಾನಂದ ಬನಾರಿ, ಅಕಾಡೆಮಿಯ ರಿಜಿಸ್ಟಾçರ್ ಆದ ಶ್ರೀ ಎಸ್.ಹೆಚ್.ಶಿವರುದ್ರಪ್ಪ, ಯೋಗೀಶ್ ರಾವ್ ಚಿಗುರುಪಾದೆ, ದಾಮೋದರ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಸುಜಾತ ಸಿ.ಹೆಚ್, ಕು|| ಅನುರಾಧ ಕಲ್ಲಂಗೋಡ್ಲು ಮುಂತಾದವರು ಮಾತನಾಡಿದರು. ಡಾ| ರತ್ನಾಕರ ಮಲ್ಲಮೂಲೆ ಅವರು ಸ್ವಾಗತಿಸಿ, ಸುಜಿತ್ ಉಪ್ಪಳ ವಂದಿಸಿದರು. ಸುನೀತಾ ಮಯ್ಯ ಮತ್ತು ಪವಿತ್ರಾ ಎಡನೀರು ಪ್ರಾರ್ಥಿಸಿದರು. ಕಾರ್ತಿಕ್ ಪಡ್ರೆ ಹಾಗೂ ಸುಬ್ರಹ್ಮಣ್ಯ ಹೇರಳ ಕಾರ್ಯಕ್ರಮ ನಿರೂಪಿಸಿದರು.

 

ಮಹಿಳಾ ಯಕ್ಷಗಾನ ಉತ್ಸವ : ಸ್ಥಳ : ವಿದ್ಯಾಧಿರಾಜ ಸಭಾಭವನ, ದಾಂಡೇಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೇಯಾ ಅಭಿವೃದ್ಧಿ ಟ್ರಸ್ಟ್ (ರಿ), ಹೋಟೆಲ್ ಸಂತೋಷ ಇವರ ಸಹಕಾರದೊಂದಿಗೆ ದಿನಾಂಕ:೨೬.೦೪.೨೦೨೨ರAದು ವಿದ್ಯಾಧಿರಾಜ ಸಭಾಭವನ, ದಾಂಡೇಲಿಯಲ್ಲಿ “ಮಹಿಳಾ ಯಕ್ಷಗಾನ ಉತ್ಸವ”ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಹಿಳಾ ಯಕ್ಷಗಾನ ಉತ್ಸವವನ್ನು ದಾಂಡೇಲಿ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ರಜಪುತ್ ಅವರು ಉದ್ಘಾಟಿಸಿ, ಮಹಿಳಾ ಯಕ್ಷಗಾನ ಉತ್ಸವಕ್ಕೆ ಶುಭಕೋರಿ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸ್ವಾಗತಾರ್ಹ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್.ಹೆಗಡೆ ಅವರು ಆಸಕ್ತಿ ಮತ್ತು ರೋಚಕತೆಯಿಂದ ಕೂಡಿರುವ ಯಕ್ಷಗಾನ ಕಲೆಯು ಸರ್ವಾಂಗ ಸುಂದರ ಕಲೆಯಾಗಿದೆ. ಅದು ಎಲ್ಲರಿಗೂ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಆಧುನಿಕ ದಿನಗಳಲ್ಲಿ ಯಕ್ಷಗಾನದ ಕಡೆಗೆ ಮಹಿಳೆಯರು ಒಲವು ತೊರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಯಕ್ಷಗಾನ ಅಧ್ಯಯನದಲ್ಲಿ ಮಹಿಳೆಯರದ್ದು ಗಮನಾರ್ಹ ಪಾತ್ರವಿದೆ. ತನ್ನಲ್ಲಿರುವ ಕಲೆಯನ್ನು ಹೊರ ಹಾಕಲು ಅವಕಾಶ ಸಿಗದೆ ರಂಗದ ಮೇಲೆ ಪುರುಷರೇ ಸ್ತಿçà ಪಾತ್ರ ಮಾಡುವ ಅನಿವಾರ್ಯತೆ ಹಿಂದೆ ಸೃಷ್ಠಿಯಾಗಿತ್ತು. ಈಗ ಮಹಿಳೆ ಸ್ತಿçà ಪಾತ್ರದ ಜೊತೆಗೆ ಪುರುಷ ಪಾತ್ರವನ್ನೂ ಮಾಡಬಲ್ಲಳು. ಯಕ್ಷಗಾನದ ಕುರಿತು ಅಧ್ಯಯನದಲ್ಲಿ ಮಹಿಳೆಯು ತನ್ನ ಛಾಪು ಮೂಡಿಸಿದ್ದಾಳೆ. ನವರಸಗಳ ಜೊತೆಗೆ ಆಂಗಿಕ ಅಭಿನಯಗಳ ಪ್ರಾಧಾನ್ಯತೆ ಹೊಂದಿರುವ ಯಕ್ಷಗಾನ ಕಲಿಕೆ ಮತ್ತು ಕಲಿಸುವಿಕೆ ಎರಡು ರೋಚಕತೆಯಿಂದ ಕೂಡಿದೆ. ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯು ಯಕ್ಷಗಾನ ತನ್ನ ವರ್ಚಸ್ಸನ್ನು ಇನ್ನೂ ಉಳಿಸಿಕೊಂಡಿದೆ. ಇಂದಿನ ಯುವ ಪೀಳಿಗೆಗೆ ಕಲೆಯನ್ನು ಕಲಿಸುವ ಜರೂರತ್ತು ಇದೆ. ಋಷಿ ಪರಂಪರೆಯ ನೆಲಮೂಲ ಕಲೆಯ ಉಳಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರೀನ್ ಇಂಡಿಯಾದ ನಿರ್ದೇಶಕರಾದ ಡಾ. ಮಹೇಂದ್ರ ಕುಮಾರ ಬಿ.ಪಿ. ಅವರು ಬಯಲು ಸೀಮೆ, ಬಯಲಾಟ, ಕರಾವಳಿಯ ಯಕ್ಷಗಾನ ಎರಡೂ ಒಂದೇ ಮರದ ಕೊಂಬೆಗಳಾಗಿವೆ. ಮಹಾಭಾರತ, ರಾಮಾಯಣ, ಜಾನಪದ ಕಲೆಗಳು ಯಕ್ಷಗಾನದ ಕಥನ ರೂಪಗಳಾಗಿವೆ. ಕರಾವಳಿಯಲ್ಲಿ ತೆಂಕಿನ ಕಲೆ, ಉತ್ತರ ಕನ್ನಡದಲ್ಲಿ ಬಡಗಣ ರೂಪದಲ್ಲಿ ಯಕ್ಷಗಾನ ಪ್ರಚಲಿತವಿದ್ದು, ದಾಂಡೇಲಿಯಲ್ಲಿ ಮಹಿಳಾ ಯಕ್ಷಗಾನ ಉತ್ಸವ ಆಯೋಜಿಸಿದ್ದು ಪ್ರಸ್ತುತವಾಗಿದೆ. ದಾಂಡೇಲಿಯಲ್ಲಿ ಹೆಚ್ಚಾಗಿ ಬಯಲು ಸೀಮೆಯ ಜನ ಇದ್ದು ಇವರಿಗೆ ಯಕ್ಷಗಾನದ ಒಲವು ಬೆಳೆಸಲು ಸಾಧ್ಯ ಎಂದರು. ಶಿರಸಿಯ ಡಾ. ವಿಜಯ ನಳಿನಿ ರಮೇಶ ಹಾಗೂ ಸಂಗಡಿಗರಿAದ ಯಕ್ಷಗಾನ ಮತ್ತು ಮಹಿಳೆ, ಯಲ್ಲಾಪುರದ ಚಂದ್ರಕಲಾ ಭಟ್ಟ ಅವರಿಂದ `ತಾಳಮದ್ದಳೆ-ಮಹಿಳೆ’, ಸಿದ್ದಾಪುರದ ಸುಜಾತಾ ದಂಟ್ಕಲ್ ಅವರಿಂದ `ಯಕ್ಷಗಾನ ಹಿಮ್ಮೇಳನದಲ್ಲಿ ಮಹಿಳೆ’ಎಂಬ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಸಿದರು. ಸಪ್ತಸ್ವರ ಸೇವಾ ಸಂಸ್ಥೆಯಿAದ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ ಮೂಡಿಬಂದರೆ, ಸುಜಾತಾ ಮಹಿಳಾ ಮಂಡಳಿಯಿAದ ಸುಧನ್ವಾರ್ಜುನ ಕಾಳಗ ತಾಳಮದ್ದಳೆ ಪ್ರಸಂಗದ ಪ್ರದರ್ಶನವು ಗಮನ ಸೆಳೆಯಿತು. ಶಿರಸಿಯ ಮೈತ್ರೇಯಿ ಕಲಾ ಟ್ರಸ್ಟ್ ಅವರಿಂದ ಜಾಂಬವಂತಿ ಕಲ್ಯಾಣ ಪ್ರಸಂಗ ಮೂಡಿಬಂತು. ಅಂತಿಮವಾಗಿ ಅಮೃತ ನಾಯ್ಕ ಮತ್ತು ತಂಡದವರು ನಡೆಸಿಕೊಟ್ಟ ಯಕ್ಷಗಾನದ ನೃತ್ಯ ವೈಭವ ಪ್ರೇಕ್ಷಕರ ಗಮನ ಸೆಳೆಯಿತು.

 

ಮೂಡಲಪಾಯ ಯಕ್ಷಗಾನ ಮಹಿಳಾ ತರಬೇತಿ, ಸ್ಥಳ : ಹರಪನಹಳ್ಳಿ ದಾವಣಗೆರೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಂಪ್ರದಾಯ ಸಾಂಸ್ಕೃತಿಕ ಟ್ರಸ್ಟ್ ಸಂಘಟನೆ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ “ಮೂಡಲಪಾಯ ಯಕ್ಷಗಾನ ಮಹಿಳಾ ತರಬೇತಿ”ಯನ್ನು ಆಯೋಜಿಸಲಾಗಿತ್ತು. ತರಬೇತಿಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಮಂಜುನಾಥ್ ಇಜಂತಕರ್ ಅವರು ಉದ್ಘಾಟಿಸಿ, ಮೂಡಲಪಾಯ ಬಯಲು ಸೀಮೆಯಲ್ಲಿ ಅನಕ್ಷರಸ್ಥರ ಮಧ್ಯೆ ಇದ್ದು ಸೊರಗುತ್ತಲಿದೆ. ಅದಕ್ಕೆ ಚೈತನ್ಯ ನೀಡುವ ಕೆಲಸ ಮಾಡುತ್ತಿದ್ದೇವೆ. ಪಾಶ್ಚಿಮಾತ್ಯ ಸಂಗೀತ ಕಲೆಗಳಿಗೆ ಮಾರು ಹೋಗಿ ಯಕ್ಷಗಾನ, ಜನಪದ, ನಾಟಕ, ಸಾಹಿತ್ಯದ ಕಾರ್ಯಕ್ರಮಗಳು ನಶಿಸುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದರು. ತರಬೇತಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್ ಆದ ಶ್ರೀ ಹೆಚ್.ಎಸ್.ಶಿವರುದ್ರಪ್ಪ ಅವರು ಪಡುವಾಲಪಾಯ ವಿಶ್ವವ್ಯಾಪಿ ಪ್ರಸಿದ್ಧಿ ಪಡೆದು ಅಭಿವೃದ್ಧಿಗೊಂಡಿದೆ. ಆದರೆ ಸೊರಗಿದ ಸ್ಥಿತಿಯಲ್ಲಿರುವ ಮೂಡಲಪಾಯವನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಡಾ|| ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಯಕ್ಷಗಾನ ಅಕಾಡೆಮಿಗೆ ಸರ್ಕಾರದ ಅನುದಾನದ ಕೊರತೆಯಾಗಿದ್ದರೂ ಅಕಾಡೆಮಿಯ ಕಾರ್ಯಚಟುವಟಿಕೆಗಳು ನಡೆಯಲಿ ಎಂದು ಮಹಿಳಾ ತರಬೇತಿಗಳನ್ನು ಹರಪನಹಳ್ಳಿ ಹಾಗೂ ಕೋಲಾರಕ್ಕೆ ನೀಡಿದ್ದೇವೆ ಎಂದರು. ಸಂಪ್ರದಾಯ ಸಾಂಸ್ಕೃತಿಕ ಟ್ರಸ್ಟ್ನ ಸಂಘಟಕರಾದ ಶ್ರೀ ಬಿ. ಪರಶುರಾಮ್ ಅವರು ನೂರಾರು ವರ್ಷಗಳ ಕಾಲ ನೋವನ್ನು ಅನುಭವಿಸಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಲಾರದೆ ದೇವದಾಸಿಯಂತಹ ಅನಿಷ್ಠ ಪದ್ಧತಿ ತೊಡೆದು ಹಾಕಲು ಸರ್ಕಾರ ದೇವದಾಸಿಯರ ವಿಮೋಚನೆಗಾಗಿ ಶ್ರಮಿಸುತ್ತಿದ್ದು ದೇವದಾಸಿಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ಮಾಡುವ ಕೆಲಸ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಸಹಾಯ ಹಸ್ತ ಚಾಚುತ್ತಿದೆ ಎಂದರು. ಸದರಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಅಧ್ಯಕ್ಷೆ ಶ್ರೀಮತಿ ಟಿ.ವಿ.ರೇಣುಕಮ್ಮ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಶ್ರೀ ಕೆ. ಉಚ್ಚೆಂಗೆಪ್ಪ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಕಾರ್ಯದರ್ಶಿ ಶ್ರೀಮತಿ ಮಾಳಮ್ಮ ಹಾಗೂ ಶಿಕ್ಷಕ ಎಸ್. ಮಕಬುಲ್ ಭಾಷ ಸೇರಿದಂತೆ ಇತರರು ಭಾಗವಹಿಸಿದ್ದರು. ಇಲ್ಲಿಯವರೆಗೆ ೩ ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿ, ೪ನೇ ತಿಂಗಳ ತರಬೇತಿಯನ್ನು ನಡೆಸಲಾಗುತ್ತಿದೆ.

  

ಯಕ್ಷಗಾನ ಕೇಳಿಕೆ ತರಬೇತಿ  - ಕೋಲಾರ ಜಿಲ್ಲೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೀ ಬಸವೇಶ್ವರ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಕೇಳಿಕೆ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣ, ಬೆಳಮಾರನಹಳ್ಳಿ ಗ್ರಾಮ ಕೋಲಾರದಲ್ಲಿ “ಯಕ್ಷಗಾನ ಕೇಳಿಕೆ ತರಬೇತಿ”ಯನ್ನು ದಿನಾಂಕ:೨೯.೦೪.೨೦೨೨ರAದು ಆಯೋಜಿಸಲಾಗಿದ್ದು, ತರಬೇತಿಯ ಉದ್ಘಾಟನೆಯನ್ನು ಶ್ರೀ ಬಿ.ಎ.ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬೆಳಮಾರನಹಳ್ಳಿ ಇವರು ನೆರವೇರಿಸಿರುತ್ತಾರೆ. ಶ್ರೀಮತಿ ಆರ್.ನಾಗವೇಣಿ ಮತ್ತು ಶ್ರೀ ಸೂರ್ಯಪ್ರಕಾಶ್, ಶ್ರೀ ವಿಜಯಕುಮಾರ್, ಶ್ರೀಮತಿ ಮಂಜಮ್ಮ ಮತ್ತು ಶ್ರೀ ವೆಂಕಟೇಶಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳು ಭಾಗವಹಿಸಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಸದಸ್ಯರಾದ ಶ್ರೀ ಮದ್ದೇರಿ ಪಿ.ಮುನಿರೆಡ್ಡಿ ಇವರು ವಹಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಬಿ.ವಿ.ರಾಮಕೃಷ್ಣಮೂರ್ತಿ, ಶ್ರೀ ಎ.ಎಂ.ಮುಳವಾಗಿಲಪ್ಪ, ಶ್ರೀ ಎಲ್.ಇ.ಕೃಷ್ಣೇಗೌಡ ಇವರುಗಳು ಭಾಗವಹಿಸಿರುತ್ತಾರೆ. ಇಲ್ಲಿಯವರೆಗೆ ೩ ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿ, ೪ನೇ ತಿಂಗಳ ತರಬೇತಿಯನ್ನು ನಡೆಸಲಾಗುತ್ತಿದೆ.

 

ಹಿರಿಯರ ಸಂಸ್ಮರಣಾ ಕಾರ್ಯಕ್ರಮ :

ಅಕಾಡೆಮಿಯ ವತಿಯಿಂದ ೨೦೨೨-೨೩ನೇ ಸಾಲಿನಲ್ಲಿ ಈ ಕೆಳಕಂಡ ೦೪ ಸಂಘ-ಸAಸ್ಥೆಗಳಿಗೆ ಹಿರಿಯರ ಸಂಸ್ಮರಣಾ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡಿದ್ದು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

 1. ಶ್ರೀ ರಾಮಕೃಷ್ಣ ಗಣಪತಿ ಭಟ್, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
 2. ಹರಿಕಥಾ ಪರಿಷತ್ ಟ್ರಸ್ಟ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
 3. ವಸುಂಧರಾ ಸಮೂಹ ಸೇವಾ ಸಂಸ್ಥೆ (ರಿ), ಶಿರಸಿ ತಾಲೂಕು, ಉತ್ತರ ಕನ್ನಡ
 4. ಶ್ರೀ ಮಾರಿಕಾಂಬ ಪ್ರಸಾದಿತ ತಾಳಮದ್ದಳೆ ಕೂಟ, ಶಿರಸಿ ತಾಲೂಕು, ಉ.ಕ.

 

ಯಕ್ಷಾರಾಧನೆ:

ನಮ್ಮ ಕುಡ್ಲ ಸಂಸ್ಥೆಯು ಅಕಾಡೆಮಿಯ ಸಹಕಾರದಲ್ಲಿ ವಾರಕ್ಕೊಂದು ಕಾರ್ಯಕ್ರಮ ಅಭಿಯಾನದಡಿ ವಾರಕ್ಕೆ ಒಬ್ಬ ಕಲಾವಿದರಂತೆ ಪಡುವಲಪಾಯ ಮೂಡಲಪಾಯ, ಘಟ್ಟದಕೋರೆ, ಕೇಳಿಕೆ, ಯಕ್ಷಗಾನ ಗೊಂಬೆಯಾಟ ಈ ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ವಿದ್ವಾಂಸರು, ಕಲಾವಿದರುಗಳ ಸಂದರ್ಶನದ ನೇರಪ್ರಸಾರ ಕಾರ್ಯಕ್ರಮವನ್ನು ದಿನಾಂಕ:೦೪.೦೩.೨೦೨೨ರಿAದ ಒಂದು ವರ್ಷಗಳ ಅವಧಿಗೆ ನಡೆಸಲಾಗುತ್ತಿದ್ದು, ನೇರ ಪ್ರಸಾರದ ಸಂದರ್ಭದಲ್ಲಿ ಅಕಾಡೆಮಿಯ ಪ್ರಾಯೋಜಕತ್ವವನ್ನು ಸ್ಮರಿಸಲಾಗುತ್ತಿದೆ. ನೇರಪ್ರಸಾರ ಕಾರ್ಯಕ್ರಮವು ಪ್ರತಿ ಶುಕ್ರವಾರ ಸಂಜೆ ೩.೦೦ಕ್ಕೆ ನಡೆಯುತ್ತಿದ್ದು, ಈ ಕಾರ್ಯಕ್ರಮದ ಸಂದರ್ಭದಲ್ಲಿ ಕಲಾವಿದರೊಂದಿಗೆ ದೂರವಾಣಿ ಕರೆ ಮೂಲಕ ಅಕಾಡೆಮಿ ಅಧ್ಯಕ್ಷರು ಮಾತುಕತೆ ನಡೆಸುತ್ತಾರೆ. ಇಲ್ಲಿಯವರೆಗೆ ಒಟ್ಟಾರೆಯಾಗಿ ಈ ಕೆಳಕಂಡ ೨೧ ಯಕ್ಷಗಾನ ಕಲಾವಿದರುಗಳು ಸಂದರ್ಶನದಲ್ಲಿ ಭಾಗವಹಿಸಿರುತ್ತಾರೆ.

 1. ಶ್ರೀ ಮುರಳಿ ಕಡೆಕಾರ್
 2. ಡಾ|| ಭಾಸ್ಕರಾನಂದ ಕುಮಾರ್ ಕಟೀಲು
 3. ಶ್ರೀ ಕುಂದಾಪುರ ಕುಷ್ಠ
 4. ಭಾಸ್ಕರ ಬಿಲ್ಲವ ತುಂಬ್ರಿ
 5. ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ
 6. ಪ್ರೊ|| ಎಸ್.ವಿ.ಉದಯ ಕುಮಾರ್ ಶೆಟ್ಟಿ
 7. ಕು|| ತುಳಸಿ ಹೆಗಡೆ
 8. ಶ್ರೀ ಕರ್ನೂರು ಮೋಹನ ರೈ
 9. ಶ್ರೀ ಜನಾರ್ಧನ ಗುಡಿಗಾರ
 10. ಶ್ರೀ ಕೊಳ್ತಿಗೆ ನಾರಾಯಣ ಗೌಡ
 11. ಡಾ|| ಚಿಕ್ಕಣ್ಣ ಯಣ್ಣೆಕಟ್ಟೆ
 12. ಶ್ರೀ ಕಣಿಪುರದ ಎಂ.ನಾ.ಚAಬಲ್ತಿಮಾರ್
 13. ಶ್ರೀ ರಮೇಶ್ ಕೆ.ವಿ.
 14. ಶ್ರೀ ಬೊಂಬಟ್ಟು ವಿಶ್ವನಾಥ ಆಚಾರ್ಯ
 15. ಶ್ರೀ ಬಿ. ಪರುಶುರಾಮ, ಹರಪನಹಳ್ಳಿ
 16. ಶ್ರೀಮತಿ ಪೂರ್ಣಿಮಾ ಯತೀಶ್ ರೈ
 17. ಪ್ರೊ|| ಶಿವರಾಮ್ ಪಣಂಬೂರು
 18. ಶ್ರೀ ದಿನೇಶ ಕೊಡಪದವು
 19. ಶ್ರೀ ರಮೇಶ ಕುಲಶೇಖರ
 20. ಶ್ರೀ ಡಿ. ಮನೋಹರ ಕುಮಾರ್
 21. ಶ್ರೀ ರವಿ ಅಲೆವೂರಾಯ ಕಟಪಾಡಿ

 

ಶ್ರೀರಾಮ ಚರಿತಾಮೃತ:

ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ, ಮಂಗಳೂರು ಇವರು ಅಕಾಡೆಮಿಯ ಸಹಯೋಗದೊಂದಿಗೆ ೧೦೦ರ ಸಂಭ್ರಮದ ಹಿನ್ನೆಲೆಯಲ್ಲಿ ದಿನಾಂಕ:೧೩.೦೩.೨೦೨೨ರಿAದ ಪ್ರತಿ ಭಾನುವಾರ ಶತಮಾನೋತ್ಸವ ೧೯೨೨-೨೦೨೨ರ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಈ ಸಂದರ್ಭದಲ್ಲಿ ತಾಳಮದ್ದಳೆ-ಸಂಸ್ಮರಣೆ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಈ ರೀತಿಯಾಗಿ ಸುಮಾರು ೫೦ ಮಂದಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲು ಆಯೋಜಿಸಲಾಗಿದ್ದು, ಇಲ್ಲಿಯವರೆಗೆ ಈ ಕೆಳಕಂಡ ೨೦ ಯಕ್ಷಗಾನ ಕಲಾವಿದರುಗಳು ಭಾಗವಹಿಸಿರುತ್ತಾರೆ.

 1. ಶ್ರೀ ಗುಂಡಿಲ ಗುತ್ತು ಶ್ರೀ ಶಂಕರ ಶೆಟ್ಟಿ
 2. ಶ್ರೀ ಉಳ್ಳಾಲ ಆನಂದ ಸುವರ್ಣ
 3. ಶ್ರೀ ಮೋಹನ ಬಂಗೇರ
 4. ಶ್ರೀ ಕೆ. ಸಂಜೀವ ರಾಮ ಪೂಜಾರಿ
 5. ಶ್ರೀ ಬಿ. ನಾಗೇಶ್ ಪ್ರಭು
 6. ಶ್ರೀ ರವಿ ಅಲೆವೂರಾಯ
 7. ಶ್ರೀ ಕೇಶವ ಶಕ್ತಿನಗರ
 8. ಪ್ರೊ|| ಜಿ.ಕೆ. ಭಟ್ ಸೇರಾಜೆ
 9. ಶ್ರೀ ಶಾಂತಾರಾಮ ಕುಡ್ವ
 10. ಶ್ರೀ ಕಿರಣ್ ಕುಮಾರ್ ಪಿ.
 11. ಶ್ರೀ ರಮೇಶ ಕುಲಶೇಖರ
 12. ಶ್ರೀ ಪುರುಷೋತ್ತಮ ಬೆಳ್ಮಣ್
 13. ಶ್ರೀ ಬೊಳಂತೂರುಗುತ್ತು ಲಯನ್ ಸಂಜೀವ ಶೆಟ್ಟಿ
 14. ಶ್ರೀ ಸತೀಶ್ ಆಚಾರ್ಯ, ಮಾಣಿ
 15. ಶ್ರೀ ರಮೇಶ್ ಆಚಾರ್ಯ ಕಾವೂರು
 16. ವಿದ್ವಾನ್ ಶ್ರೀ ಕೃಷ್ಣರಾಜ ಭಟ್ ನಂದಳಿಕೆ
 17. ಶ್ರೀ ಸತೀಶ್ ಮಡಿವಾಳ, ಕಾರ್ಕಳ
 18. ಶ್ರೀ ಸತೀಶ್ ಶೆಟ್ಟಿ ಬೋಂದೆಲ್
 19. ಶ್ರೀ ಶರತ್ ಕುಮಾರ್ ಕದ್ರಿ
 20. ಶ್ರೀ ದಯಾನಂದ ಕೋಡಿಕಲ್
 21. ಶ್ರೀ ಕೆ. ಕೃಷ್ಣ ಶೆಟ್ಟಿ ಕುಡುಮಲ್ಲಿಗೆ
 22. ಶ್ರೀ ಸೂರ್ಯನಾರಾಯಣ ಪದಕಣ್ಣಾಯ
 23. ಶ್ರೀ ಸುಬ್ರಹ್ಮಣ್ಯ ಹೊಳ್ಳ ಶಕ್ತಿನಗರ
 24. ಶ್ರೀ ಗಣಪತಿ ಭಟ್ ಪೆರ್ಲ
 25. ಶ್ರೀ ದಿವಾಕರ ಆಚಾರ್ಯ ಪೊಳಲಿ
 26. ಶ್ರೀ ಶ್ರೀನಿವಾಸ ಕೆ. ಕುಡ್ವ
 27. ಶ್ರೀ ನಾಗೇಶ್ ಕುಲಶೇಖರ
 28. ಶ್ರೀ ಸುಬ್ರಹ್ಮಣ್ಯ ಭಟ್ ಒಡ್ಡೂರು
 29. ಶ್ರೀ ಸುದಾಸ್ ಆಚಾರ್ಯ, ಕಾವೂರು
 30. ಶ್ರೀ ಕೆ. ಜಯಂತ ಕಾರಂತ
 31. ಶ್ರೀ ಮಧುಸೂದನ ಅಲೆವೂರಾಯ, ವರ್ಕಾಡಿ
 32. ಶ್ರೀ ಪಕಳಕುಂಜ ಗೋಪಾಲಕೃಷ್ಣ ಭಟ್
 33. ಶ್ರೀ ವಸಂತ ಶೇಣವ
 34. ಶ್ರೀ ಮೋಹನ ಕಲಂಬಾಡಿ
 35. ಶ್ರೀ ರಾಜೇಶ ಕುಡುಪಾಡಿ
 36. ಅಂಡಾಲ ಶ್ರೀ ದೇವಿಪ್ರಸಾದ್ ಶೆಟ್ಟಿ
 37. ಶ್ರೀ ಉಮೇಶ್ ಆಚಾರ್ಯ ಗೇರುಕಟ್ಟೆ
 38. ಶ್ರೀ ಶಿವಪ್ರಸಾದ್ ಅಡ್ಯಾರ್
 39. ಶ್ರೀ ಹರೀಶ್ಚಂದ್ರ ನಾಯ್ಗ
 40. ಶ್ರೀ ಕೆ. ಸುಧಾಕರ ಸಾಲಿಯನ್

 

ಯಕ್ಷ ಸಂಪದ ಬಾನುಲಿ ಸರಣಿ

ಆಕಾಶವಾಣಿಯು ಬಗಡುತಿಟ್ಟಿನ ೧೨೫ ಯಕ್ಷಗಾನದ ಮಟ್ಟುಗಳನ್ನು ವ್ಯವಸ್ಥಿತ ವಿವರಣೆಯೊಂದಿಗೆ ಧ್ವನಿಮುದ್ರಣ ಮಾಡಿದ್ದು, ಅದನ್ನು ಬಾನುಲಿ ಕೇಂದ್ರಗಳಿAದ ನೇರಪ್ರಸಾರ ಮಾಡಿ ಯಕ್ಷಗಾನದ ಕಾವ್ಯದ ಮತ್ತು ಸಂಗೀತದ ಶಾಸ್ತçಬದ್ಧ ಪರಿಚಯ ಇಡೀ ರಾಜ್ಯಕ್ಕೇ ಮಾಡಿಸುವ ನಿಟ್ಟಿನಲ್ಲಿ ‘ಯಕ್ಷ ಸಂಪದ’ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಒಂಬತ್ತು ತಾಳಗಳಿಗೆ ಸಂಬAಧಿಸಿದ ಒಟ್ಟು ೧೨೫ ಮಟ್ಟುಗಳ ಹಾಡುಗಳನ್ನು ಧ್ವನಿ ಮುದ್ರಣ ಮಾಡಲಾಗಿದೆ. ಧ್ವನಿ ಮುದ್ರಣಕ್ಕೆ ಸಂಬAಧಿಸಿದAತೆ ಸಿಡಿಗಳನ್ನು ಅಕಾಡೆಮಿಗೆ ನೀಡಲಾಗುತ್ತಿದ್ದು, ಈ ಕಾರ್ಯದಲ್ಲಿ ಕೆಳಕಂಡ ೭ ಯಕ್ಷಗಾನ ಕಲಾವಿದರುಗಳು ಭಾಗವಹಿಸಿದ್ದಾರೆ.

 

 1. ವಿದ್ವಾನ್ ಗಣಪತಿ ಭಟ್
 2. ಶ್ರೀ ಗೋಪಾಲ ಗಾಣಿಗ
 3. ಶ್ರೀ ತಿಮ್ಮಪ್ಪ ಹೆಗಡೆ ಬಾಳೆಹದ್ದ
 4. ಶ್ರೀ ಪರಮೇಶ್ವರ ಹೆಗಡೆ ಐನಬೈಲು
 5. ಶ್ರೀ ಶಂಕರ ಭಾಗವತರು
 6. ಶ್ರೀ ಅನಂತ ಪದ್ಮನಾಭ ಘಾಟಕರು
 7. ಶ್ರೀ ದಿ. ಕೃಷ್ಣಯಾಜಿ ಇಡಗುಂಜಿ

 

ಸಮಗ್ರ ಯಕ್ಷಗಾನ ಸಮ್ಮೇಳನ:

ಸಮಗ್ರ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಘನಸರ್ಕಾರವು ಸಮಗ್ರ ಯಕ್ಷಗಾನ ಸಮ್ಮೇಳವನ್ನು ನಡೆಸಲು ೨೦೨೧-೨೨ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದು, ೨೦೨೨-೨೩ನೇ ಸಾಲಿನಲ್ಲಿ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಘನಸರ್ಕಾರದ ವತಿಯಿಂದ ಆಯೋಜಿಸಲು ರೂ.೨.೦೦ಕೋಟಿಗಳ ಅನುದಾನ ನೀಡಲಾಗಿದೆ. ಸಮ್ಮೇಳನವನ್ನು ಆಯೋಜಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಕಳುಹಿಸಲಾಗಿದೆ.

 

ಸಮಗ್ರ ಮೂಡಲಪಾಯ ವಿಶ್ವಕೋಶ

ಯಕ್ಷಗಾನವು ದಿನನಿತ್ಯ ಸಾವಿರಾರು ಕುಟುಂಬಗಳಿಗೆ ಅನ್ನ ನೀಡುತ್ತಿರುವ ಕಲೆ. ಅಷ್ಟೇ ಅಲ್ಲದೆ ಉಳಿದಾವ ಕ್ಷೇತ್ರಗಳಲ್ಲಿಯೂ ಇಲ್ಲದ ಕನ್ನಡದ ದೇಶೀಬಳಕೆಯು ಈ ಕಲೆಯಲ್ಲಿದೆ. ಯಕ್ಷಗಾನ ಉಳಿಯುವವರೆಗೂ ಕನ್ನಡ ಉಳಿಯುತ್ತದೆ. ಆದಕಾರಣ ಕನ್ನಡ ಉಳಿಸುವ ಈ ಕಲೆಗೆ “ಸಮಗ್ರ ಯಕ್ಷಗಾನ” ವಿಶ್ವಕೋಶವನ್ನು ರಚಿಸಲು ಅಕಾಡೆಮಿ ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಈಗಾಗಲೇ ೦೫ ಮಂದಿ ಸದಸ್ಯರನ್ನೊಳಗೊಂಡAತೆ ಸಂಪಾದಕ ಸಮಿತಿಯನ್ನು ರಚಿಸಲಾಗಿದ್ದು ವರದಿಯನ್ನು ಸಿದ್ಧಪಡಿಸುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಸಮಗ್ರ ಮೂಡಲಪಾಯ ವಿಶ್ವಕೋಶವನ್ನು ಪುಸ್ತಕ ರೂಪದಲ್ಲಿ ಹೊರತರುವ ಸಂಬಂಧ ಇಲ್ಲಿಯವರೆಗೆ ೦೩ ಸಭೆಗಳನ್ನು ನಡೆಸಿ, ಸಂಗ್ರಹಿಸಲಾದ ಮಾಹಿತಿಯನ್ನು ಡಿ.ಟಿ.ಪಿ. ಮಾಡಿಸಲಾಗುತ್ತಿದೆ.

 

ಸಮಗ್ರ ಪಡುವಲಪಾಯ ವಿಶ್ವಕೋಶ

ಸಮಗ್ರ ಪಡುವಲಪಾಯ ವಿಶ್ವಕೋಶವನ್ನು ೨೦೨೧-೨೨ನೇ ಸಾಲಿನಿಂದ ಮೊದಲ ಬಾರಿಗೆ ಪಾರಂಭಿಸಿದ್ದು, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ. ಪಾದೇಕಲ್ಲು ವಿಷ್ಣುಭಟ್,                   ಡಾ. ಆನಂದರಾಮ ಉಪಾಧ್ಯ, ಡಾ.ದಿನಕರ್.ಎಸ್.ಪಚ್ಚನಾಡಿ, ಡಾ.ಶುಭಾಮರವಂತೆ, ಶ್ರೀ ಕದ್ರಿ ನವನೀತ್ ಶೆಟ್ಟಿ, ಡಾ.ಶ್ರೀಧರ್ ಹೆಗಡೆ ಭದ್ರನ್ ಇವರುಗಳನ್ನೊಳಗೊಂಡ ಒಂದು ಸಂಪಾದಕ ಸಮಿತಿ ರಚಿಸಿದ್ದು, ಇಲ್ಲಿಯವರೆಗೆ ೦೩ ಸಭೆಗಳನ್ನು ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

 

ಯಕ್ಷಗಾನ  ಕಲಾವಿದರಾದ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ದಿ|| ಕರ್ಕಿ ಮನೆತನದವರಾದ ದಿ|| ಹಿರಿಯ ಪರಮಯ್ಯ ಹಾಸ್ಯಗಾರರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಕರ್ಕಿ ಮನೆತನದವರು ಎಲ್ಲರೂ ಸೇರಿ ದತ್ತಿನಿಧಿಯನ್ನು ಅಕಾಡೆಮಿಗೆ ನೀಡಲು ಒಪ್ಪಿದ್ದು, ಅವರ ಮನೆಯ ಪ್ರತಿನಿಧಿಯಾದ ಶ್ರೀ ಆರ್.ಜಿ.ಹಾಸ್ಯಗಾರ, ಚಿಕ್ಕಮಗಳೂರು, ಇವರು ರೂ.೫,೦೦,೦೦೦/-(ರೂಪಾಯಿ ಐದು ಲಕ್ಷ ಮಾತ್ರ)ಗಳ ಚೆಕ್‌ನ್ನು ಅಕಾಡೆಮಿಗೆ ನೀಡಿದ್ದಾರೆ. ಈ ಚೆಕ್‌ನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸ್ವೀಕರಿಸಿ ದತ್ತಿನಿಧಿ ಠೇವಣಿಯಾಗಿ ಹೂಡಿಕೆ ಮಾಡಿದೆ.  ವರ್ಷಕ್ಕೆ ಇದರಿಂದ ಬಂದಂತಹ ಬಡ್ಡಿಯ ಮೊತ್ತದಲ್ಲಿ ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನಲ್ಲಿ ಒಬ್ಬರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುವುದು. ಅಕಾಡೆಮಿ ಹಾಗೂ ಸಂಬAಧಿತರ ಒಡಂಬಡಿಕೆಯಿAದ ಈ ಕಾರ್ಯ ನೆರವೇರಿಸಲಾಗುತ್ತಿದೆ. ಪ್ರತಿವರ್ಷ ನಿರಂತರವಾಗಿ ವಾರ್ಷಿಕ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿಯನ್ನು ಸಹ ನೀಡುತ್ತಾ ಬರಲಾಗುವುದು. ಈ ಸಾಲಿನಲ್ಲಿಯೂ ಈ ಪ್ರಶಸ್ತಿ ನೀಡಲಾಗುವುದು.

 

ಬೇಗಾರು ಪದ್ಮನಾಭ ಶೆಟ್ಟಿಗಾರ್ - ಸಾಕ್ಷ್ಯಚಿತ್ರ ನಿರ್ಮಾಣ:

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಾದ ಮಲೆನಾಡು ಭಾಗದ ಬೇಗಾರು ಪದ್ಮನಾಭ ಶೆಟ್ಟಿಗಾರ್ ಅವರ ಜೀವನ ಸಾಧನೆ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

×
ABOUT DULT ORGANISATIONAL STRUCTURE PROJECTS