ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2021-22ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

“ಯಕ್ಷಗಾನ : ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ ಸಹಚಿಂತನೆ ಮತ್ತು ಸಂವಾದ”, ಸ್ಥಳ : ಮಂಗಳೂರು:

ದಿನಾoಕ:೧೦ ಏಪ್ರಿಲ್ ೨೦೨೧ರಂದು ಅಕಾಡೆಮಿಯು ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ), ಮಂಗಳೂರು ಇಲ್ಲಿ “ಯಕ್ಷಗಾನ:ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ ಸಹಚಿಂತನೆ ಮತ್ತು ಸಂವಾದ”ಎಂಬ ಕಾರ್ಯಕ್ರಮವನ್ನು ನಡೆಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಯ ಡೈರೆಕ್ಟರ್ ಆದ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಇವರು ವಹಿಸಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ಯಕ್ಷಗಾನದ ಭಾಷಿಕ ಲೀಲೆ, ಅರ್ಥಗಾರಿಕೆಯಲ್ಲಿ ಭಾರತೀಯ ತತ್ವಜ್ಞಾನ, ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕತೆ ಮತ್ತು ಯಕ್ಷಗಾನ: ಸಂಸ್ಕೃತಿ ಮತ್ತು ಆಧುನಿಕತೆ ವಿಷಯಗಳ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಚಾರ ಗೋಷ್ಠಿಗಳಲ್ಲಿ ಕೆರೆಮನೆ ಶಿವಾನಂದ ಹೆಗಡೆ, ವಾಸುದೇವ ರಂಗಭಟ್, ಸುನೀಲ್, ಡಾ. ಕೆ ಚಿನ್ನಪ್ಪಗೌಡ, ವೆಂಕಟ್ರಮಣ ಐತಾಳ್ ಎಸ್.ಎಂ ಜಬ್ಬಾರ್ ಸಮೋ, ಮಧುಸೂದನ ಅಲೆವೂರ, ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ ಎ ಹೆಗಡೆ ಹಾಗೂ ಅಕಾಡೆಮಿಯ ರಿಜಿಸ್ಟಾçರ್ ಎಸ್. ಹೆಚ್ ಶಿವರುದ್ರಪ್ಪ ಮತ್ತಿತರು ಭಾಗವಹಿಸಿದ್ದರು.

 

ಪ್ರಶಸ್ತಿ ಪ್ರದಾನಧ್ವನಿಮುದ್ರಣ ಬಿಡುಗಡೆಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ:

ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ (ರಿ) ಇವರು ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ದಿನಾಂಕ೧೮.೦೯.೨೦೨೧ರAದು ಕೆರೆಮನೆ ಶಿವರಾಮ ಹೆಗಡೆ ರಂಗಮAದಿರ, ಗುಣವಂತೆ, (ಉ.ಕ) ಇಲ್ಲಿ ಅಕಾಡೆಮಿಯ ಸಹಯೋಗದಲ್ಲಿ ಮುದ್ರಣ ಮಾಡಲಾಗಿದ್ದ ೭೨ ರಾಗಗಳ ಪರಿಚಯದೊಂದಿಗೆ ಯಕ್ಷಗಾನ ಹಾಡುಗಳ ಧ್ವನಿ ಮುದ್ರಣ ಸಿಡಿಗಳನ್ನು ಈ ಕಾರ್ಯಕ್ರಮದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮಾನ್ಯ ಶಾಸಕರು ಭಟ್ಕಳ-ಹೊನ್ನಾವರ ವಿಧಾನ ಸಭಾಕ್ಷೇತ್ರ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅಕಾಡೆಮಿಯ ರಿಜಿಸ್ಟಾರ್ ಆದ ಎಸ್.ಹೆಚ್.ಶಿವರುದ್ರಪ್ಪ ಇವರು ಧ್ವನಿ ಮುದ್ರಣದ ಸಿ.ಡಿಗಳನ್ನು ಬಿಡುಗಡೆ ಮಾಡಿದರು. ಶ್ರೀಪಾದ ಹೆಗಡೆ ಇವರಿಗೆ ಮರಣೋತ್ತರವಾಗಿ “ಡಾ. ಮಹಾಬಲ ಪ್ರಶಸ್ತಿ”ಯನ್ನಿತ್ತು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗುರುರಾಜ ಮಾರ್ಪಳ್ಳಿ, ಡಾ. ಶ್ರೀಪಾದ ಶೆಟ್ಟಿ, ನಿರ್ಮಲಾ ಮಂಜುನಾಥ ಹೆಗಡೆ, ನಾಗರಾಜ ಹೆಗಡೆ ಅಪಗಾಲ, ಗಂಗಾಧರ ಗೌಡ, ವಿದ್ವಾನ್ ಉಮಾಕಾಂತ್ ಭಟ್ ಮತ್ತಿತರು ಉಪಸ್ಥಿತರಿದ್ದರು.

 

ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವ:

ಅಕಾಡೆಮಿಯು ದಿನಾಂಕ ೦೩.೦೧.೨೦೨೨ರಂದು ಟಿ. ಚೆನ್ನಯ್ಯ ರಂಗಮAದಿರ ಕೋಲಾರ ಇಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವ ಕಾರ್ಯಕ್ರಮವನ್ನು ನಡೆಸಲಾಗಿದೆ. ಶಾಸಕ ಕೆ. ಶ್ರೀನಿವಾಸ ಗೌಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿ ಈಗಿನ ಕಾಲದಲ್ಲಿ ಸಿನಿಮಾ ಹೆಚ್ಚು ಬೆಳವಣಿಗೆಯಾಗುತ್ತಿದ್ದು ಯುವಕರು ಹೆಚ್ಚು ಅದಕ್ಕೆ ಆಕರ್ಷಿತರಾಗಿದ್ದಾರೆ. ಆದ್ದರಿಂದ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನ ಎಂಬುವುದನ್ನು ನಮ್ಮ ಸಾರ್ವಜನಿಕರು ಮರೆತುಹೋಗುವ ಪರಿಸ್ಥಿತಿ ಬಂದಿದೆ. ಎಂದು ತಿಳಿಸಿದರು. ಕೇಳಿಕೆ ವಿದ್ವಾಂಸರು, ಪ್ರಸಿದ್ಧ ಗಾಯಕರು ಹಾಗೂ ನಿವೃತ್ತ ಪೋಲೀಸ್ ಅಧಿಕಾರಿಗಳಾದ                  ಡಾ. ವೇಮಗಲ್ ನಾರಾಯಣ ಸ್ವಾಮಿ ಇವರು ಮಾತನಾಡಿ ಕರಾವಳಿಯ ಯಕ್ಷಗಾನಕ್ಕೂ ಮತ್ತು ಕೇಳಿಕೆ ಮೂಡಲಪಾಯ ಯಕ್ಷಗಾನಕ್ಕೂ ತುಂಬಾ ಬದಲಾವಣೆಗಳಿವೆ ಎಂದರು. ಮೂಡಲಪಾಯ ವಿದ್ವಾಂಸರಾದ ಡಾ. ಕುರುವ ಬಸವರಾಜು ಮಾತನಾಡಿ ಕೇಳಿಕೆಯನ್ನು ಕಳೆದು ಹೋಗುದಂತೆ ರಕ್ಷಿಸಬೇಕು. ಅಂತಹ ಕೇಳಿಕೆಯು ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಲಿ ಎಂದು ತಿಳಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಮದ್ದೇರಿ. ಪಿ.ಮುನಿರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಎನ್.ನರೇಂದ್ರಬಾಬು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್ ಆದ ಎಸ್.ಹೆಚ್.ಶಿವರುದ್ರಪ್ಪ ಸೇರಿದಂತೆ ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.

 

ಕೃತಿ ಬಿಡುಗಡೆ ಸಮಾರಂಭಸುರತ್ಕಲ್:

ದಿನಾಂಕ:೨೨.೦೧.೨೦೨೨ರಂದು ಗೋವಿಂದದಾಸ ಕಾಲೇಜು, ಸುರತ್ಕಲ್ ಇಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಆ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್.ಹೆಗಡೆ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರ ನಿಸ್ವಾರ್ಥ ಸೇವೆಯಿಂದ ಯಕ್ಷಗಾನ ಕಲೆ ಉಳಿದು ಬೆಳೆದು ಬಂದಿದೆ ಅದನ್ನು ಪೋಷಿಸುವ ಅಗತ್ಯವಿದ್ದು, ಯಕ್ಷಗಾನ ಸಮ್ಮೇಳನ ಯಕ್ಷಗಾನ ವಿಶ್ವಕೋಶ, ಯಕ್ಷಗಾನ ವಸ್ತುಸಂಗ್ರಹಾಲಯದAತಹ ಯೋಜನೆಯನ್ನು ಯಕ್ಷಗಾನ ಅಕಾಡೆಮಿ ರೂಪಿಸಿದೆ ಇದಕ್ಕೆ ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದು ಹೇಳಿದರು. ಅಕಾಡೆಮಿ ಪ್ರಕಟಿಸಿರುವ ಕದ್ರಿ ನವನೀತ ಶೆಟ್ಟಿ ಇವರು ಸಂಪಾದಿಸಿರುವ ತುಳು ಯಕ್ಷಗಾನ ಪ್ರಸಂಗ ಸಂಪುಟ-೭, ರಮಾನಂದ ಬನಾರಿ ಅವರ ಸಂವಾದ ಭೂಮಿಕೆ, ಪ್ರೊ. ಎಂ.ಎ ಹೆಗಡೆ ಹಾಗೂ ಯೋಗೀಶರಾವ್ ಚಿಗುರುಪಾದೆ ಇವರು ಸಂಪಾದಿಸಿರುವ ಪಾರ್ತಿಸುಬ್ಬನ ಬದುಕು ಬರಹ ಎಂಬ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ.ಎಸ್ ಯಡಪಡಿತ್ತಾಯ ಇವರು ಕೃತಿಯನ್ನು ಅನಾವರಣಗೊಳಿಸಿ ಯಕ್ಷಗಾನದ ಬೆಳವಣಿಗೆಗೆ ಶೈಕ್ಷಣಿಕ ಸಂಸ್ಥೆಗಳು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಮಂಗಳೂರು ವಿ.ವಿ ಯಕ್ಷಗಾನ ಸಂಶೋಧನೆ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿದೆ ಎಂದರು. ಕಲಾವಿದ ಪೊಳಲಿ ನಿತ್ಯಾನಂದ ಕಾರಾಂತ, ಡಾ. ಸುಧಾರಾಣಿ, ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಅವರು ಕ್ರಮವಾಗಿ ತುಳು ಪ್ರಸಂಗ, ಪಾರ್ತಿಸುಬ್ಬ ಬದುಕು ಬರಹ, ಯಕ್ಷಗಾನ ಸಂವಾದ ಭೂಮಿಕೆ ಕುರಿತಾಗಿ ಕೃತಿ ಪರಿಚಯ ಮಾಡಿಸಿಕೊಟ್ಟರು. ಗೋವಿಂದ ದಾಸ ಕಾಲೇಜು ಸೂರತ್ಕಲ್ ಇದರ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ., ಮಾಧವ ಭಂಡಾರಿ ಕುಳಾಯಿ ಮತ್ತಿತರಿದ್ದರು. ಸದಸ್ಯ ಸಂಚಾಲಕ ಯೋಗೀಶ ರಾವ್ ಚಿಗುರುಪಾದೆ ಸ್ವಾಗತಿಸಿದರು. ಕದ್ರಿ ನವನೀತಶೆಟ್ಟಿ ನಿರೂಪಿಸಿದರು. ರಿಜಿಸ್ಟಾçರ್ ಎಸ್ ಹೆಚ್ ಶಿವರುದ್ರಪ್ಪ ಪ್ರಸ್ತಾವಿಸಿದರು. ಸದಸ್ಯ ದಾಮೋದರ ಶೆಟ್ಟಿ ವಂದಿಸಿದರು.

 

ಶೇಣಿ ಸಂಸ್ಮರಣಾ ಕಾರ್ಯಕ್ರಮ:

ಶೇಣಿ ಗೋಪಾಲಕೃಷ್ಣ ಭಟ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಲಿತಕಲಾ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ, ಗೋವಿಂದ ದಾಸ ಕಾಲೇಜು, ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವತಿಯಿಂದ ಶೇಣಿ ಸಂಸ್ಮರಣಾ ಕಾರ್ಯಕ್ರಮ ಸುರತ್ಕಲ್‌ನ ಗೋವಿಂದ ದಾಸ ಕಾಲೇಜು ರಂಗಮAದಿರದಲ್ಲಿ ೨೦೨೨ರ ಜನವರಿ ೨೧ ಮತ್ತು ೨೨ರಂದು ಜರುಗಿತು. ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಹಿರಿಯ ಕಲಾವಿದರು ಮಾಜಿ ಅಧ್ಯಕ್ಷರಾದ ಕುಂಬಳೆ ಸುಂದರರಾವ್ ೨೦೨೧ರ ‘ಶೇಣಿ ಪ್ರಶಸ್ತಿ’ಯನ್ನು ಪ್ರದಾನಿಸಿ ಗೌರವಿಸಲಾಯಿತು. ಯಕ್ಷಗಾನ ಸಂಘಟಕರಾದ ಅರುಣ್ ಪೈ ಶೇಣಿಯವರು ಸರಳ ವ್ಯಕ್ತಿತ್ವದ ಸಜ್ಜನಿಕೆ ಕಲಾವಿದರಾಗಿ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದರು. ಇಂತಹ ಉತ್ತಮ ಕಲಾವಿದರ ದಂಡು ಇದ್ದಾಗ ಯಕ್ಷಗಾನ ಶ್ರೀಮಂತಿಕೆ ದುಪ್ಪಟ್ಟು ಆಗುತ್ತದೆ ಎಂದರು. ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣಗೈದರು. ಶ್ರೀ ಕ್ಷೇತ್ರ ಕಟೀಲು ಇಲ್ಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಅಸ್ರಣ್ಣ ಆಶೀರ್ವಚನ ನೀಡಿ, ಶೇಣಿಯವರು ಆಗಾಧವಾದ ಜ್ಞಾನ ಸಂಪತ್ತು ಹೊಂದಿದ್ದರು ಇಂತಹ ಮೇಧಾವಿಗಳಿಂದ ಯಕ್ಷಗಾನ ಇಂದು ಮಹತ್ತರ ಬದಲಾವಣೆ ಕಂಡಿದೆ ಎಂದರು.  ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್ ಭಟ್ ಮಾತನಾಡಿ ಯಕ್ಷಗಾನದ ಒಳಿತಿಗಾಗಿ ಸರ್ಕಾರದ ವತಿಯಿಂದ ಮೂರು ದಿನಗಳ ಯಕ್ಷಗಾನ ಸಮ್ಮೇಳನ ಆಯೋಜಿಸಲು ನಿರ್ಧರಿಸಿದ್ದೇವೆ. ಸಂಸ್ಕೃತಿಗೆ ನ್ಯಾಯ ಒದಗಿಸುವ ಜಾಣ್ಮೆ ಶೇಣಿಯವರಿಗೆ ಅಂತರ್ಗತವಾಗಿತ್ತು. ಜಟಿಲ ಸಮಸ್ಯೆಯನ್ನು ಸರಳವಾಗಿ ಬಿಡಿಸಿ ಹೇಳುವ ಚಾಕಚಕ್ಯತೆ ಅವರಲ್ಲಿ ಇತ್ತು. ಇಂತಹ ಮೇರು ಕಲಾವಿದನ ನೆನಪಿನಲ್ಲಿ ನಿರಂತರವಾಗಿ ಪ್ರಶಸ್ತಿ ಪ್ರದಾನ ಮಾಡಿ ನೆನಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

 

೨೦೨೦ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ:

ದಿನಾಂಕ:೨೦.೦೨.೨೦೨೨ರಂದು ಟಿ.ಆರ್.ಸಿ ಬ್ಯಾಂಕ್ ಸಭಾಂಗಣ, ನ್ಯೂ ಮಾರ್ಕೆಟ್ ಯಾರ್ಡ್, ಶಿರಸಿ ಇಲ್ಲಿ ೨೦೨೦ನೇ ಸಾಲಿನ ಪ್ರಶಸ್ತಿ ಪ್ರಾದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಆರಂಭದಲ್ಲಿ ಬೆಳಿಗ್ಗೆ ೯.೩೦ಕ್ಕೆ ಅಕಾಡೆಮಿಯ ಹಿಂದಿನ ಅಧ್ಯಕ್ಷರಾಗಿದ್ದ ದಿ|| ಪ್ರೊ. ಎಂ.ಎ. ಹೆಗಡೆ ಇವರ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಸ್ಮರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಅಧ್ಯಕ್ಷರು ಹಾಗೂ ಇತರ ಸದಸ್ಯರುಗಳು ನೆರವೇರಿಸಿದರು. ನಂತರ ೧೨.೦೦ಗಂಟೆಗೆ ೨೦೨೦ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಗರ ಸಭೆ ಉಪಾಧ್ಯಕ್ಷೆ ವೀಣಾಶೆಟ್ಟಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ. ಎಲ್ ಹೆಗಡೆ ಹಾಗೂ ಇತರರು ಶ್ರೀ ಡಿ.ಎಸ್.ಶ್ರೀಧರ್, ಶ್ರೀಮತಿ ಗುಲಾಬಿ ವೈ/೦ ಕೆ.ತಿಮ್ಮಪ್ಪ ಗುಜರನ್, ಶ್ರೀ ಬಿ.ಸಂಜೀವ ಸುವರ್ಣ, ಡಾ. ವಿಜಯ ನಳಿನಿ ರಮೇಶ್, ಡಾ.ಚಕ್ಕೆರೆ ಶಿವಶಂಕರ್, ಶ್ರೀ ಬಿ.ಪರಶುರಾಮ್, ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಶ್ರೀ ಬೇಲ್ತೂರು ರಮೇಶ್, ಶ್ರೀ ಆವರ್ಸೆ ಶ್ರೀನಿವಾಸ ಮಡಿವಾಳ, ಶ್ರೀ ಹರಿನಾರಾಯಣ ಬೈಪಾಡಿತ್ತಾಯ, ಶ್ರೀ ಸಂಜಯ್ ಕುಮಾರ್ ಶೆಟ್ಟಿ, ಶ್ರೀ ಎಂ.ಆರ್.ಹೆಗಡೆ ಕಾನಗೋಡ,  ಶ್ರೀ ಸುಬ್ರಮಣ್ಯ ಧಾರೇಶ್ವರ, ಶ್ರೀ ವಿಟ್ಲ ಶಂಭುಶರ್ಮ, ಎ. ಎಂ ಮುಳುವಾಗಿಲಪ್ಪ, ಶ್ರೀ ಹನುಮಂತರಾಯಪ್ಪ. ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಮಾತನಾಡಿದ ಡಾ. ಜಿ. ಎಲ್ ಹೆಗಡೆ ಇವರು ಮಾತನಾಡಿ ನಿತ್ಯ ಯಕ್ಷಗಾನ ಪ್ರದರ್ಶನ ನಡೆಯಬೇಕು. ಗುಂಡುಬಾಳದAಥ ಯಕ್ಷಗಾನ ಕೇಂದ್ರ ರಾಜ್ಯಾದ್ಯಂತ ವಿಸ್ತರಿಸಬೇಕು ಎಂದರು. ಯಕ್ಷಗಾನ ಅವಿನಾಶೀ ಕಲೆ. ರೂಪಾಂತರದ ನಡುವೆಯೂ ಕನ್ನಡ ಸಂಸ್ಕೃತಿಯ ಮೂಲವಾದ ಈ ಕಲೆ ಬೆಳೆಯುತ್ತಿದೆ. ಕಲಾವಿದರು, ಪ್ರೇಕ್ಷಕರು ಇದರತ್ತ ಇನ್ನಷ್ಟು ಒಲವು ಬೆಳೆಸಿಕೊಳ್ಳಬೇಕು ಎಂದ ಅವರು, ಯಕ್ಷಗಾನ ಹಿನ್ನೆಲೆಯಿರುವ ಮನೆತನದವರು ತಮ್ಮ ಮನೆತನದ ಗೌರವದ ರೂಪದಲ್ಲಿ ಅಕಾಡೆಮಿಗೆ ದತ್ತಿನಿಧಿ ನೀಡಿ ಸಹಕರಿಸಬೇಕು. ಯಕ್ಷಗಾನ ವಿಶ್ವಕೋಶ ತರಲು ಆಯೋಜಿಸಲಾಗುತ್ತಿದೆ. ಭವಿಷ್ಯದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲೂ ಕೋರಲಾಗಿದೆ ಎಂದರು. ಅಕಾಡೆಮಿಯ ಹಿರಿಯ ಸದಸ್ಯರಾದ ಜಿ ಎಸ್ ಭಟ್ ಇವರು ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕ ಬಿಡುಗಡೆ ಮಾಡಿದರು. ವೇದಿಕೆ ಮೇಲೆ ಅಕಾಡೆಮಿಯ ಸದಸ್ಯರಾದ ನಿರ್ಮಲಾ ಮಂಜುನಾಥ ಹೆಗಡೆ, ಆರತಿ ಪಟ್ರಮೆ, ಇತರರಿದ್ದರು. ಅಕಾಡೆಮಿಯ ಸದಸ್ಯರಾದ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ರಿಜಿಸ್ಟಾçರ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರುಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

 

ಹಿರಿಯರ ಸಂಸ್ಮರಣಾ ಕಾರ್ಯಕ್ರಮ:

ಅಕಾಡೆಮಿಯ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ಸುಮಾರು ೦೮ ಸಂಘ-ಸAಸ್ಥೆಗಳಿಗೆ ಹಿರಿಯರ ಸಂಸ್ಮರಣಾ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡಿದ್ದು, ಕಾಸರಗೋಡು, ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

  1. ಇಬ್ಬನಿ ಪೌಂಡೇಶನ್(ರಿ), ಅಂಚೆ: ಮಾಗೋಡ, ತಾ. ಯಲ್ಲಾಪುರ (ಉ.ಕ)-೫೮೧೩೫೯
  2. ಶ್ರೀ ಕಾವೀ ಯಕ್ಷ ಬಳಗ, (ಅಂಚೆ) ವರ್ಕಾಡಿ, ಮಂಜೇಶ್ವರ-೬೭೧೩೨೩, ಮೊ.೮೯೨೧೮೧೭೬೯೩
  3. ಶ್ರೀಮತಿ ಅರುಣಾವತಿ, ಸಂಚಾಲಕರು, ಮಹಿಳಾ ಯಕ್ಷಕೂಟ, ಪೊನ್ನೆತ್ತೋಡು ಕಯ್ಯಾರು, ಕಾಸರಗೋಡು, ಕೇರಳ-೬೭೧೩೨೨, ಮೊ.೮೯೪೩೯೦೫೨೧೫
  4. ಕಲಾ ಭಾಸ್ಕರ(ರಿ.), ಯಕ್ಷಗಾನ, ನಾಟಕ ರಂಗಭೂಮಿ ಮತ್ತು ಜಾನಪದ ಕಲಾಸಂಸ್ಥೆ, ನಂ:’೨೫೮’ ವೈಜಯಂತ, ಇಟಗಿ, ಅಂಚೆ:ಇಟಗಿ, ಸಿದ್ಧಾಪುರ(ಉ.ಕ), ಮೊ.೯೪೪೯೪೫೪೦೪೩/ ೯೪೮೦೦೧೯೪೦೨
  5. ಶ್ರೀ ರಾಮಕೃಷ್ಣ ಭಟ್ ಬೆಳಖಂಡ, ಕೇರ್/ಆಪ್ ಶ್ರೀ ಕೃಷ್ಣ ನಿಲಯ, ಲಯನ್ಸ್ ನಗರ, ಶಿರಸಿ(ಉ.ಕ.-೫೦೧೪೦೨), ಮೊ.೯೪೮೧೪೬೧೪೭೨
  6. ಶ್ರೀ ಎನ್.ಟಿ.ಮೂರ್ತಾಚಾರ್ಯ, ನೆಲ್ಲಿಗೆರೆ ಭಾಗವತರು, ಪುತ್ಥಳ್ಳಿ ಬೊಂಬೆ ಪ್ರದರ್ಶನ ಯುವಜನ, ಯಕ್ಷಗಾನ ಮಂಡಳಿ, ನೆಲ್ಲಿಗೆರೆ ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ-೫೭೧೪೧೮
  7. ಅರಸು ಕೃಪಾ ಹವ್ಯಾಸಿ ಯಕ್ಷಗಾನ ಸಂಘ, ಉದ್ಯಾವರ ಮಾಡ, ಕುಂಜತ್ತೂರು, ಮಂಜೇಶ್ವರ
  8. ಗುರುನರಸಿಂಹ ಯಕ್ಷಬಳಗ ಮೀಯಪದವು, ಅಂಚೆ:ಮೀಯಪದವು, ಮಂಜೇಶ್ವರ-೬೭೧೩೨೩, ಕಾಸರಗೋಡು ಜಿಲ್ಲೆ

 

ಯಕ್ಷ ಸಂಭ್ರಮ-೨೦೨೨:

ಕನ್ನಡ ಸಾಹಿತ್ಯ ಕಲಾಕೂಟ ವತಿಯಿಂದ ಕಲಾಮಂದಿರ ಆವರಣದ ಕಿರು ರಂಗಮAದಿರದಲ್ಲಿ ದಿನಾಂಕ:೨೬.೦೨.೨೦೨೨ರಂದು ಯಕ್ಷ ಸಂಭ್ರಮ-೨೦೨೨ರ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಈ ಸಂದರ್ಭದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಸೇರಿದಂತೆ ಇತರ ಗಣ್ಯರು ಇದ್ದರು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ರ ಯಕ್ಷಗಾನ ಕವಿಗಳ ಚಿತ್ರಕಾವ್ಯ ಹಾಗೂ ಚಿಕ್ಕಚೌಡಯ್ಯ ನಾಯ್ಕರ ಮೂಡಲಪಾಯ ಯಕ್ಷಗಾನ ಪ್ರಸಂಗ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಯಕ್ಷಗಾನದಲ್ಲಿ ಒಂದೇ ಒಂದು ಆಂಗ್ಲ ಪದವನ್ನು ಬಳಸುವುದಿಲ್ಲ ಶುದ್ಧ ಕನ್ನಡವಷ್ಟೇ ಬಳಕೆಮಾಡಲಾಗುತ್ತದೆ. ಹೀಗಾಗಿ ಎಲ್ಲಿಯವರೆಗೆ ಯಕ್ಷಗಾನ ಇರುತ್ತದೋ ಅಲ್ಲಿಯವರೆಗೂ ಕನ್ನಡ ಉಳಿಯುವುದು ಖಚಿತ' ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ. ಎಲ್ ಹೆಗಡೆ ಅವರು ತಿಳಿಸಿದರು. ಕೇವಲ ಭಾಷಣದಿಂದ ಯಕ್ಷಗಾನ ಉಳಿಯದು ನಿರಂತರವಾಗಿ ಪ್ರದರ್ಶನ ನೀಡುವುದರಿಂದ ಮಾತ್ರವೇ ಚಿರಸ್ಥಾಯಿ ಆಗುತ್ತದೆ ಇದನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಆಗ ಸಂಸ್ಕೃತಿಯು ಉಳಿಯಲಿದೆ ಈ ದಿಕ್ಕಿನಲ್ಲಿ ಎಲ್ಲರೂ ಯೋಚಿಸಬೇಕು ಎಂದು ಹೇಳಿದರು. ಟಿವಿಗಳ ಮುಂದೆ ಕುಳಿತಾಗ ವಿದ್ಯುತ್ ಹೋದರಂತೂ ಇಡೀ ವಿದ್ಯುತ್ ಸರಬರಾಜು ನಿಗಮವನ್ನು ಜನರು ಬೈಯ್ಯುತ್ತಾರೆ. ನೆಂಟರು ಬಂದರೂ ಧಾರವಾಹಿಗಳನ್ನು ಬಿಡಲೊಲ್ಲರು ಇಂತಹವರ ಮಧ್ಯೆ ಯಕ್ಷಗಾನ ಉಳಿದಿದೆ ಎಂದರೆ ಅದು ಯಕ್ಷಗಾನದ ವಿಶೇಷ ಎಂದು ತಿಳಿಸಿದರು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ, ಯಕ್ಷಗಾನವೇ ಒಂದು ಭಾಷೆ, ಯಕ್ಷಗಾನವೇ ಒಂದು ಕಾವ್ಯ, ಯಕ್ಷಗಾನವೇ ಒಂದು ವಿಶ್ವವಿದ್ಯಾಲಯವೆಂದು ಯಕ್ಷಗಾನವನ್ನು ಬಣ್ಣಿಸಿದರು. ಶರೀರ ಮತ್ತು ಶಾರೀರವನ್ನು ಬೃಹತ್ ಆಗಿ ತೋರಿಸುವ ಕಲೆ ಯಕ್ಷಗಾನ, ಯಕ್ಷಗಾನ ಒಂದು ಪ್ರಯೋಗ ಶಾಲೆ ಆದ್ದರಿಂದ ಯಕ್ಷಗಾನದಲ್ಲಿ ವಿಭಿನ್ನ ಪ್ರಯೋಗಗಳು ನಡೆಯಬೇಕು ಅಲ್ಲದೇ ಈ ಬಾರಿಯ ಬಹುರೂಪಿ ನಾಟಕೋತ್ಸವನ್ನು ಯಕ್ಷಗಾನದಿಂದಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ವಿದ್ವಾನ್ ಕೈ ಕೃಷ್ಣಕುಮಾರಾಚಾರ್ಯ ಮತ್ತು ದಿವಾಕರ ಹೆಗಡೆ ಅರ್ಥದಾರಿಗಳಾಗಿ ಯಕ್ಷಗಾನ ತಾಳಮದ್ದಳೆಗಳೊಂದಿಗೆ `ಶೂರ್ಪನಕಾ ನಾಸಾಭಂಗ’ ಹಾಗೂ ಯಕ್ಷಗಾನ ಗುರು ಕಲಾವಿದೆ ಕೆ. ಗೌರಿ ನಿರ್ದೇಶನದ `ಭಕ್ತ-ಸುಧನ್ವ’ಪ್ರಸಂಗಗಳು ಜರುಗಿದವು. ಹಿರಿಯ ಲೇಖಕ, ಯಕ್ಷಗಾನ ಅಕಾಡೆಮಿಯ ಸದಸ್ಯ ಜಿ.ಎಸ್ ಭಟ್ ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡಿಕೇರಿ ಗೋಪಾಲ್ ಇತರರು ಇದ್ದರು.

 

ಯಕ್ಷಾರಾಧನೆ:

ನಮ್ಮ ಕುಡ್ಲ ಸಂಸ್ಥೆಯು ಅಕಾಡೆಮಿಯ ಸಹಕಾರದಲ್ಲಿ ವಾರಕ್ಕೊಂದು ಕಾರ್ಯಕ್ರಮ ಅಭಿಯಾನದಡಿ ವಾರಕ್ಕೆ ಒಬ್ಬ ಕಲಾವಿದರಂತೆ ಪಡುವಲಪಾಯ ಮೂಡಲಪಾಯ, ಘಟ್ಟದಕೋರೆ, ಕೇಳಿಕೆ, ಯಕ್ಷಗಾನ ಗೊಂಬೆಯಾಟ ಈ ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ವಿದ್ವಾಂಸರು, ಕಲಾವಿದರುಗಳ ಸಂದರ್ಶನದ ನೇರಪ್ರಸಾರ ಕಾರ್ಯಕ್ರಮವನ್ನು ದಿನಾಂಕ:೦೪.೦೩.೨೦೨೨ರಿಂದ ಒಂದು ವರ್ಷಗಳ ಅವಧಿಗೆ ನಡೆಸಲಾಗುತ್ತಿದೆ. ನೇರ ಪ್ರಸಾರದ ಸಂದರ್ಭದಲ್ಲಿ ಅಕಾಡೆಮಿಯ ಪ್ರಾಯೋಜಕತ್ವವನ್ನು ಸ್ಮರಿಸುವುದು. ನೇರಪ್ರಸಾರ ಕಾರ್ಯಕ್ರಮವು ಪ್ರತಿ ಶುಕ್ರವಾರ ಸಂಜೆ೩.೦೦ಕ್ಕೆ ನಡೆಯುತ್ತಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ವೀಕ್ಷಕರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಲಾಗುತ್ತಿದೆ.

 

ಶ್ರೀರಾಮ ಚರಿತಾಮೃತ:

ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ, ಮಂಗಳೂರು ಇವರು ಅಕಾಡೆಮಿಯ ಸಹಯೋಗದೊಂದಿಗೆ ೧೦೦ರ ಸಂಭ್ರಮದ ಹಿನ್ನೆಲೆಯಲ್ಲಿ ೧೩.೦೩.೨೦೨೨ರಿಂದ ಪ್ರತಿ ಭಾನುವಾರ ಶತಮಾನೋತ್ಸವ ೧೯೨೨-೨೦೨೨ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಈ ಸಂಧರ್ಭದಲ್ಲಿ ತಾಳಮದ್ದಳೆ-ಸಂಸ್ಮರಣೆ-ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ ಈ ರೀತಿಯಾಗಿ ಸುಮಾರು ೫೦ ಮಂದಿ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲು ಆಯೋಜಿಸಲಾಗಿದೆ.

 

`ಯಕ್ಷ ಸಂಪದ ಬಾನುಲಿ ಸರಣಿ’:

ಆಕಾಶವಾಣಿಯು ೨೦೨೧-೨೨ನೇ ಸಾಲಿಗೆ ಬಗಡುತಿಟ್ಟಿನ ೧೨೫ ಯಕ್ಷಗಾನದ ಮಟ್ಟುಗಳನ್ನು ವ್ಯವಸ್ಥಿತ ವಿವರಣೆಯೊಂದಿಗೆ ಧ್ವನಿಮುದ್ರಣ ಮಾಡಿದೆ. ಅದನ್ನು ಬಾನುಲಿ ಕೇಂದ್ರಗಳಿAದ ನೇರಪ್ರಸಾರ ಮಾಡಿ ಯಕ್ಷಗಾನದ ಕಾವ್ಯದ ಮತ್ತು ಸಂಗೀತದ ಶಾಸ್ತçಬದ್ಧ ಪರಿಚಯ ಇಡೀ ರಾಜ್ಯಕ್ಕೇ ಮಾಡಿಸುವ ನಿಟ್ಟಿನಲ್ಲಿ `ಯಕ್ಷ ಸಂಪದ’ ಎನ್ನುವ ಈ ಸಂಗ್ರಹದಲ್ಲಿ ಒಂಬತ್ತು ತಾಳಗಳಿಗೆ ಸಂಬAಧಿಸಿದ ಒಟ್ಟು ೧೨೫ ಮಟ್ಟುಗಳ ಹಾಡುಗಳನ್ನು ಧ್ವನಿ ಮುದ್ರಣ ಮಾಡಲಾಗಿದೆ. ಧ್ವನಿ ಮುದ್ರಣಕ್ಕೆ ಸಂಬAಧಿಸಿದAತೆ ಸಿಡಿಗಳನ್ನು ಅಕಾಡೆಮಿಗೆ ನೀಡುವುದು.

 

ಸಮಗ್ರ ಯಕ್ಷಗಾನ ಸಮ್ಮೇಳನ:

ಸಮಗ್ರ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಘನಸರ್ಕಾರವು ಸಮಗ್ರ ಯಕ್ಷಗಾನ ಸಮ್ಮೇಳವನ್ನು ನಡೆಸಲು ೨೦೨೧-೨೨ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದು, ಮುಂದಿನ ಆರ್ಥಿಕ ವರ್ಷದಿಂದ ಕಾರ್ಯಕ್ರಮವನ್ನು ನಡೆಸಲಾಗುವುದು. ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಘನಸರ್ಕಾರದ ವತಿಯಿಂದ ಆಯೋಜಿಸಲು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ.

 

 

ಸಮಗ್ರ ಮೂಡಲಪಾಯ ವಿಶ್ವಕೋಶ:

ಯಕ್ಷಗಾನವು ದಿನನಿತ್ಯ ಸಾವಿರಾರು ಕುಟುಂಬಗಳಿಗೆ ಅನ್ನ ನೀಡುತ್ತಿರುವ ಕಲೆ. ಅಷ್ಟೇ ಅಲ್ಲದೆ ಉಳಿದಾವ ಕ್ಷೇತ್ರಗಳಲ್ಲಿಯೂ ಇಲ್ಲದ ಕನ್ನಡದ ದೇಶೀಬಳಕೆಯು ಈ ಕಲೆಯಲ್ಲಿದೆ. ಯಕ್ಷಗಾನ ಉಳಿಯುವವರೆಗೂ ಕನ್ನಡ ಉಳಿಯುತ್ತದೆ.  ಆದ ಕಾರಣ ಕನ್ನಡ ಉಳಿಸುವ ಈ ಕಲೆಗೆ `ಸಮಗ್ರ ಯಕ್ಷಗಾನ’ವಿಶ್ವಕೋಶವನ್ನು ರಚಿಸಲು ಅಕಾಡೆಮಿ ಉದ್ದೇಶಿಸಿದ್ದು. ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಈಗಾಗಲೇ ೦೫ ಮಂದಿ ಸದಸ್ಯರನ್ನೊಳಗೊಂಡAತೆ ಸಮಿತಿಯನ್ನು ರಚಿಸಲಾಗಿದ್ದು ವರದಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಪುಸ್ತಕ ರೂಪದಲ್ಲಿ ಹೊರತರಲಾಗುವುದು.

 

ಸಮಗ್ರ ಪಡುವಲಪಾಯ ವಿಶ್ವಕೋಶ:

ಸಮಗ್ರ ಪಡುವಲಪಾಯ ವಿಶ್ವಕೋಶವನ್ನು ೨೦೨೧-೨೨ನೇ ಸಾಲಿನಿಂದ ಮೊದಲ ಬಾರಿಗೆ ಪಾರಂಭಿಸಿದೆ. ಡಾ. ಪಾದೇಕಲ್ಲು ವಿಷ್ಣುಭಟ್, ಡಾ. ಆನಂದರಾಮ ಉಪಾಧ್ಯ, ಗೋಪಾಲಕೃಷ್ಣ ಭಾಗವತರು ಕಡತೋಕ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಇವರುಗಳನ್ನೊಳಗೊಂಡ ಒಂದು ಉಪಸಮಿತಿಯನ್ನು ರಚಿಸಿದೆ.

 

ಮಲೆನಾಡು ಉತ್ಸವ:

ಶ್ರೀ ಭಾರತಿತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್(ರಿ) ಇವರು ಅಕಾಡೆಮಿಯ ಸಹಯೋಗದೊಂದಿಗೆ ೨೦೨೨ರ ಫೆಬ್ರವರಿ ೨೬, ೨೭, ೨೮ರಂದು “ಮಲೆನಾಡು ಉತ್ಸವ” ಕಾರ್ಯಕ್ರಮವನ್ನು ಶ್ರೀ ಬಿ.ಜಿ.ಎಸ್, ವೆಂಕಟೇಶ್ವರ ವಿದ್ಯಾಮಂದಿರ ಆವರಣ, ಕೊಪ್ಪ ಇಲ್ಲಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಸನಾತನ ಭಾರತವು ಸಂಸ್ಕೃತಿಯ ನೆಲೆಯಲ್ಲಿ ರೂಪುಗೊಂಡಿದ್ದು ಸಾಂಸ್ಕೃತಿಕ ಪರಂಪರೆಯು ಅದರ ಔನತ್ಯದ ರೂಪಕವಾಗಿದೆ. ವಿವಿಧ ಸಾಂಸ್ಕೃತಿಕ ಪ್ರಕಾರಗಳು ಭಾರತದ ಶ್ರೇಷ್ಠತೆಯ ಪ್ರತೀಕವಾಗಿ ಕಣ್ಮನ ಸೆಳೆಯುತ್ತದೆ. ಮಲೆನಾಡು ಉತ್ಸವ ಅಂತಹ ಕಲಾಪ್ರಪಂಚವನ್ನು ಚಂದದಿAದ ಕಟ್ಟಿಕೊಡುತ್ತಿದೆ ಎಂದು ಹೊರನಾಡಿನ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಹೇಳಿದರು. `ಮಲೆನಾಡು ಉತ್ಸವ’ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು. ಅಕಾಡೆಮಿಯ ಸಹಕಾರದಲ್ಲಿ ಯಕ್ಷಗಾನ ರಸಪ್ರತಿವಾದನೆಯ ವಿನೂತನ ಕಾರ್ಯಕ್ರಮ, ಸ್ಥಳೀಯ ರೋಟರಿ ಸಂಸ್ಥೆ ಸಂಯೋಜಿಸಿದ ಸಾಂಸ್ಕೃತಿಕ ವೈಭವ, ನಟರಾಜ್ ನಾಗರತ್ನ, ಎ.ಜಿ. ಸುಬ್ರಮಣ್ಯರವರಿಂದ ಗಾಯನ, ಮಂಜುನಾಥ್ ಸಂಗಡಿಗರ ಕಿರುನಾಟಕ, ರೇಖಾ ಉದಯಶಂಕರ್ ತಂಡದವರಿAದ ಕಂಗೀಲು ನೃತ್ಯ ಪ್ರೇಕ್ಷಕರನ್ನು ರಂಜಿಸಿದವು.

 

ಮೂಡಲಪಾಯ ಯಕ್ಷಗಾನ ಕೃತಿಗಳ ಲೋಕಾರ್ಪಣೆ:

ಅಕಾಡೆಮಿಯು ಮೂಡಲಪಾಯ ಯಕ್ಷಗಾನ ಹಾಗೂ ತಾಳಮದ್ದಳೆ ಕಾರ್ಯಕ್ರಮ ಹಾಗೂ ಮೂಡಲಪಾಯ ಯಕ್ಷಗಾನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮಗಳನ್ನು ೨೦೨೨ರ ಮಾರ್ಚ್ ೦೫ರಂದು ತುಮಕೂರಿನ ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ನಡೆಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ ಎಲ್ ಹೆಗಡೆ ಇವರು ವಹಿಸಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಗಾನದ ಪಾತ್ರ ಅಗಾಧವಾಗಿದೆ. ಯಕ್ಷಗಾನ ಎಂದರೆ ಅದು ಪುಸ್ತಕದ ವಿಚಾರವಲ್ಲ, ಮಸ್ತಕದ ವಿಚಾರ. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆಯಿದೆ. ಆದ್ದರಿಂದ ಎಲ್ಲರೂ ಸೇರಿ ಯಕ್ಷಗಾನವನ್ನು ಕರ್ನಾಟಕದ ಕಲೆಯಾಗಿಸುವ ಪಣ ತೊಡಬೇಕಿದೆ ಎಂದರು. ಕಾರ್ಯಕ್ರಮದ ಸಂದರ್ಭದಲ್ಲಿ ಎಸ್ ನಂಜಪ್ಪ ಇವರ ರಾಮಾಯಣದ ಮೂಡಲಪಾಯ ಯಕ್ಷಗಾನ ಪ್ರಸಂಗಳು ಸಂಪುಟ -೧ ಮತ್ತು ಸಂಪುಟ-೨ ಹಾಗೂ ಎ. ಎನ್ ಚನ್ನಬಸವಯ್ಯ ಇವರ ಪುರಾಣದ ೫ ಮೂಡಲಪಾಯ ಯಕ್ಷಗಾನ ಪ್ರಸಂಗಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಡಾ ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ವಿ ಪರಮಶಿವಮೂರ್ತಿ ಅಕಾಡೆಮಿಯ ರಿಜಿಸ್ಟಾçರ್ ಆದ ಎಸ್. ಹೆಚ್ ಶಿವರುದ್ರಪ್ಪ  ಮತ್ತಿತರಿದ್ದರು.

 

ಕುರಿಯ ವಿಠಲಶಾಸ್ತಿç ಯಕ್ಷಗಾನ ಪ್ರತಿಷ್ಠಾನದ ರಜತ ವರ್ಷ ಉದ್ಘಾಟನೆ ಹಾಗೂ ಯಕ್ಷಬ್ರಹ್ಮ ಅಗರಿ ಸ್ಮೃತಿಗೌರವ ಗ್ರಂಥ ಲೋಕಾರ್ಪಣೆ ಅಗರಿ ಪ್ರಶಸ್ತಿ ಪ್ರದಾನ ತಾಳಮದ್ದಳೆ ಮತ್ತು ಬಯಲಾಟ:

ಅಕಾಡೆಮಿಯ ಸಹಯೋಗದೊಂದಿಗೆ ಕುರಿಯ ವಿಠಲಶಾಸ್ತಿç ಯಕ್ಷಗಾನ ಪ್ರತಿಷ್ಠಾನ ಇವರು ದಿನಾಂಕ:೧೨.೦೨.೨೦೨೨ರಂದು ಹಮ್ಮಿಕೊಳ್ಳಲಾಗಿದ್ದ ಕುರಿಯ ವಿಠಲಶಾಸ್ತಿç ಯಕ್ಷಗಾನ ಪ್ರತಿಷ್ಠಾನದ ರಜತ ವರ್ಷ ಉದ್ಘಾಟನೆ ಹಾಗೂ ಯಕ್ಷಬ್ರಹ್ಮ ಅಗರಿ ಸ್ಮೃತಿಗೌರವ ಗ್ರಂಥ ಲೋಕಾರ್ಪಣೆ ಅಗರಿ ಪ್ರಶಸ್ತಿ ಪ್ರದಾನ ತಾಳಮದ್ದಳೆ ಮತ್ತು ಬಯಲಾಟ ಕಾರ್ಯಕ್ರಮವನ್ನು ಸುರತ್ಕಲ್‌ನ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಕ್ಷೇತ್ರ ಕಟೀಲಿನ ವೇ.ಮೂ.ಕೆ ಲಕ್ಷ್ಮೀöನಾರಾಯಣ ಅಸ್ರಣ್ಣ ಉದ್ಘಾಟಿಸಿ, ಪ್ರತಿಷ್ಠಾನವು ಮಾಡಿಕೊಂಡು ಬರುತ್ತಿರುವ ಯಕ್ಷಕಲಾ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಬ್ರಹ್ಮ ಕೃತಿಯನ್ನು ಲೋಕಾರ್ಪಣೆ ಮಾಡಿದ ಹಿರಿಯ ರಂಗಭೂಮಿ ಚಿಂತಕ ಡಾ. ಕೆ. ಚಿನ್ನಪ್ಪಗೌಡ ಅವರು ಮಾತನಾಡಿ ಐದು ಸಾವಿರಕ್ಕೂ ಹೆಚ್ಚು ಪದ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುವುದೆಂದರೆ ಅಸಾಮಾನ್ಯ ಹಾಗೂ ವಿಶೇಷವಾಗಿದೆ. ಹಾಗೂ ಯಕ್ಷಗಾನ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಇತಿಹಾಸ ನಿರ್ಮಿಸಿದ್ದಾರೆ ಎಂದರಲ್ಲದೇ ಯಕ್ಷಗಾನ ಎಷ್ಟೇ ಬಾರಿ ಪ್ರಯೋಗಕ್ಕೆ ಒಳಗಾದರೂ ತನ್ನ ಪರಂಪರಾಗತ ಶೈಲಿ ಬಿಟ್ಟುಕೊಟ್ಟಿಲ್ಲ, ಮುಂದೆಯೂ ಶ್ರೇಷ್ಟ ಕಲೆಯಾಗಿ ಉಳಿಯಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಸಂಗಕರ್ತ ಗೌರವ ಸಂಭಾವನೆಯನ್ನು ಶ್ರೀ ಗಣೇಶ ಕೊಲೆಕಾಡಿಯವರಿಗೆ, ೨೦೨೦ನೇ ಸಾಲಿನ ಅಗರಿ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ ಡಾ. ಕೆ ಎಂ ರಾಘವ ನಂಬಿಯಾರ್ ಇವರಿಗೆ, ೨೦೨೧ರ ಅಗರಿ ಪ್ರಶಸ್ತಿಯನ್ನು ಕಲಾ ಸಂಘಟಕ ಅಶೋಕ್ ಭಟ್, ಉಜಿರೆ ಇವರಿಗೆ ಅಗರಿಶೈಲಿ ಪ್ರಶಸ್ತಿಯನ್ನು ಭಾಗವತರಾದ ರಮೇಶ್ ಭಟ್ ಪುತ್ತೂರು ಮತ್ತು ಪರಮೇಶ್ವರ್ ಐತಾಳ್ ಪಣಂಬೂರು ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ ಎಲ್ ಹೆಗಡೆ, ಮಾತಾಡಿ ಯಕ್ಷಗಾನ ಅಕಾಡೆಮಿಯು ಹಣ ಹಂಚುವುದಕ್ಕೆ ಇಲ್ಲ. ಆದರೆ ಕಲೆಯ ಸರ್ವಾಂಗೀಣ ಪ್ರಗತಿಗೆ ಯೋಜಿಸಲಿದೆ. ಸರ್ಕಾರ ನೀಡುವ ಸೀಮಿತ ಅನುದಾನದಲ್ಲಿ ಬೃಹತ್ ಯೋಜನೆಯನ್ನು ಕಾರ್ಯಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಇದಕ್ಕೆ ತಾವೆಲ್ಲ ಕೈಜೋಡಿಸಬೇಕಾದ ಅಗತ್ಯ ಇದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್, ಇಡ್ಯಾಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರ ಐ. ರಮಾನಂದ ಭಟ್, ಅಗರಿ ಭಾಸ್ಕರ ರಾವ್ ಮತ್ತಿತರು ಉಪಸ್ಥಿತರಿದ್ದರು.

 

ದಿದುರ್ಗಾದಾಸ ಗಂಗೊಳ್ಳಿ ವೇದಿಕೆ ಯಕ್ಷಗಾನ ಕಾರ್ಯಾಗಾರ:

ಅಕಾಡೆಮಿಯು ಕಲಾಗಂಗೋತ್ರಿ ಕುಮಟಾ ಇವರ ಸಹಕಾರದೊಂದಿಗೆ ೨೦೨೨ರ ಮಾರ್ಚ್ ೧೨ ಮತ್ತು ೧೩ರಂದು “ಹವ್ಯಕ ಸಭಾಭವನ”, ಕುಮಟಾ ಇಲ್ಲಿ ಯಕ್ಷಗಾನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ ಎಲ್ ಹೆಗಡೆ ಇವರು ಅಧ್ಯಕ್ಷತೆಯನ್ನು ವಹಿಸಿದ್ದಲ್ಲದೇ ಉದ್ಘಾಟನೆಯನ್ನು ನೆರವೇರಿಸಿದರು. ಸ್ಥಳೀಯ ಶಾಸಕರಾದ ಶ್ರೀ ದಿನಕರ್ ಶೆಟ್ಟಿ ನಂತರದಲ್ಲಿ ಕಾರ್ಯಕ್ರಮದಲ್ಲಿ ಸೇರ್ಪಡೆಯಾದರು. ಯಕ್ಷಗಾನ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಇವರು ಯಕ್ಷಗಾನ ಕಲಾವಿದರಲ್ಲಿ `ಪಾತ್ರ ಪ್ರಜ್ಞೆ ಹಾಗೂ ಪ್ರಸಂಗ ಪ್ರಜ್ಞೆಯ ಕೊರತೆ ಕಾಣುತ್ತದೆ. ಎನ್ನುವುದು ಪ್ರೇಕ್ಷಕ ವರ್ಗದ ಆಕ್ಷೇಪ’ಎಂದು ತಿಳಿಸಿದರು. `ಯಕ್ಷಗಾನದಲ್ಲಿ ರಸ ಭಾವಗಳು’ಕುರಿತು ಮಾತನಾಡಿದ ಹಿರಿಯ ಕಲಾವಿದ ಗೋಪಾಲ ಆಚಾರಿ, `ಯಕ್ಷಗಾನದಲ್ಲಿ ಶೃಂಗಾರ ರಸವನ್ನು ಅಗ್ಗವಾಗಿ ಅರ್ಥೈಸಬಾರದು ದುಃಖದ ಹೊರತಾಗಿ ಕರುಣಾ ರಸಕ್ಕೆ ಬೇರೆ ಆಯಾಮಗಳಿವೆ. ಎಲ್ಲಾ ಇದ್ದ ಕೌರವ ಮಹಾಭಾರತದ ಕೊನೆಯಲ್ಲಿ ಏಕಾಂಗಿಯಾಗಿ ಕಂಗೆಡುವುದು ಅದ್ಭುತರಸ ಸನ್ನಿವೇಶಕ್ಕೆ ಮಾದರಿ ಎಂದು ತಿಳಿಸಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷರಾದ ಭಾಸ್ಕರ್ ಪಟಗಾರ, `ಕನ್ನಡ ಭಾಷೆಯನ್ನು ಶುದ್ಧವಾಗಿ ಬಳಸುವ ಏಕೈಕ ಕಲೆಯಾದ ಯಕ್ಷಗಾನದ ಅಭಿವೃದ್ಧಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತಿ ಹೆಚ್ಚು ಅನುದಾನ ನೀಡಬೇಕು’ಎಂದು ಒತ್ತಾಯಿಸಿದರು. ಆರ್ ಟಿ ಹೆಗಡೆ, ಗೋವಿಂದ ಹೆಗಡೆ, ಶಂಕರನಾರಾಯಣ ಭಟ್ಟ, ಎಂ ಜಿ ನಾಯ್ಕ, ಎಂ ಆರ್ ನಾಯಕ, ಗಣೇಶ ಭಟ್ಟ, ಶಿವರಾಮ ಹೆಗಡೆ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ನಿರ್ಮಲಾ ಮಂಜುನಾಥ ಹೆಗಡೆ, ನಾರಾಯಣ ಭಟ್ಟ, ಧನಂಜಯ ಅವಧಾನಿ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು.

×
ABOUT DULT ORGANISATIONAL STRUCTURE PROJECTS