ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

ಅಕಾಡೆಮಿಯ ಧ್ಯೇಯೋದ್ದೇಶಗಳು

Home

 1. ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.
 2. ಸಂಶೋಧನಾಲಯ, ಗ್ರಂಥಾಲಯ ಮುಂತಾದವುಗಳನ್ನು ಸ್ಥಾಪಿಸುವುದು.
 3. ಕರ್ನಾಟಕ ಯಕ್ಷಗಾನ ಅಕಾಡೆಮಿಯು ತನ್ನ ಉದ್ದೇಶಗಳ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಅದೇ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಸ್ಥೆಗಳೊಡನೆ ಸಹಕರಿಸುವುದು; ಉತ್ತೇಜನ ನೀಡುವುದು.
 4. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ. ಸರ್ಕಾರದಿಂದ ಪಡೆದ ಅನುದಾನ ಹಾಗೂ ವಿವಿಧ ಮೂಲಗಳಿಂದ ವಂತಿಕೆಗಳು ಮತ್ತು ದಾನಗಳ ಮೂಲಕ ನಿಧಿ ಸಂಗ್ರಹಣೆ ಮಾಡಬಹುದು. ಹೀಗೆ ಸಂಗ್ರಹಿಸಿದ ನಿಧಿಯನ್ನು ಅಕಾಡೆಮಿಯ ಕಾರ್ಯೋದ್ದೇಶಗಳಿಗೆ ಬದ್ಧವಾಗಿ ಬಳಸಿದ ಬಗ್ಗೆ ಕರ್ನಾಟಕ ಆರ್ಥಿಕ ಸಂಹಿತೆ ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚಿನ ವಿವರಗಳನ್ನು ಇಡುವುದು. ವಂತಿಕೆ ಹಾಗೂ ದಾನ ಕೊಟ್ಟವರು ಅಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗೂ ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವುದು.
 5. ಕರ್ನಾಟಕ ಯಕ್ಷಗಾನ ಅಕಾಡೆಮಿಯು ತನ್ನ ವಿಷಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಗಾರ ಸಂವಾದ, ಉನ್ನತ ಮಟ್ಟದ ಅಕಾಡೆಮಿಕ್ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು. ಈ ಕಾರ್ಯಕ್ರಮಗಳನ್ನು ಎರಡು ವಿಧಾನಗಳಲ್ಲಿ ವ್ಯವಸ್ಥೆಗೊಳಿಸುವುದು.
  (ಅ) ಅಕಾಡೆಮಿಯೇ ನೇರವಾಗಿ ಈ ಕಾರ್ಯಕ್ರಮಗಳನ್ನು ರೂಪಿಸಿ ವ್ಯವಸ್ಥೆಗೊಳಿಸುವುದು.
  (ಆ) ವಿವಿಧ ಸಂಘ-ಸಂಸ್ಥೆಗಳ ಜೊತೆ ಸಂಯುಕ್ತವಾಗಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವುದು.
 6. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆಗಳನ್ನು ನೀಡುವುದು.
 7. ಕರ್ನಾಟಕ ಯಕ್ಷಗಾನ ಅಕಾಡೆಮಿಯು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ರೀತಿ ಮಾಡಬಹುದು. ಈ ಪ್ರಕಟಣೆಗಳಿಗೆ ವಾರ್ಷಿಕ ಅನುದಾನದಲ್ಲಿ ವಾರ್ಷಿಕ ಕಾರ್ಯಕ್ರಮಗಳಿಗೆ ಗೊತ್ತುಪಡಿಸಿದ ಮೊತ್ತದಲ್ಲಿ ಶೇ.೧೫ರಷ್ಟನ್ನು ಮಾತ್ರ ಹಂಚಿಕೆ ಮಾಡಿ ಬಳಸಿಕೊಳ್ಳಬೇಕು.
 8. ಅಕಾಡೆಮಿಯು ಯಕ್ಷಗಾನ ಕ್ಷೇತ್ರ ಹಾಗೂ ವ್ಯಾಪ್ತಿಗೆ ಸೇರಿದ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುವುದು.
 9. ಅಕಾಡೆಮಿಯು ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ ಮೇಲೆ ತಿಳಿಸಿದಂತೆ ಧ್ಯೇಯೋದ್ದೇಶಗಳಿಗೆ ಅನುಗುಣವಾದ ಕಾರ್ಯಗಳನ್ನು ನಿರ್ವಹಿಸುವುದು.
 10. ಆಯಾ ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಆರ್ಥಿಕ ವರ್ಷದ ಪ್ರಾರಂಭದಲ್ಲಿಯೇ ಕ್ರಿಯಾಯೋಜನೆ ಮತ್ತು ಬಜೆಟ್‌ನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯಬೇಕು ಮತ್ತು ಆ ಪ್ರಕಾರ ಅನುಷ್ಠಾನಗೊಳಿಸಬೇಕು.
 11. ಅಕಾಡೆಮಿಯು ಯಕ್ಷಗಾನ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ-ಪುರಸ್ಕಾರ ಹಾಗೂ ಬಹುಮಾನಗಳನ್ನು ಪ್ರತಿವರ್ಷವೂ ನೀಡಬೇಕು. ಅವುಗಳ ವಿವರ ಈ ಮುಂದಿನಂತಿರುತ್ತದೆ.
    
  • ಯಕ್ಷಗಾನದ ಸೀಮಾಪುರುಷ ಮಹಾಕವಿ “ಪಾರ್ತಿಸುಬ್ಬ” ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು. ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:೧೬೪:ಕರಅ:೨೦೦೯ ದಿನಾಂಕ:೧೫.೦೩.೨೦೧೯ರ ಆದೇಶದಂತೆ ಪಾರ್ತಿಸುಬ್ಬ ಪ್ರಶಸ್ತಿ ಮೊತ್ತ ರೂ.೧.೦೦ಲಕ್ಷಗಳಾಗಿರುತ್ತದೆ.
  • ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಹತ್ತು ಜನರನ್ನು ಮೀರದಂತೆ ಹತ್ತು ವಾರ್ಷಿಕ ಗೌರವ ಪ್ರಶಸ್ತಿಯನ್ನು ನೀಡುವುದು. ಗೌರವ ಪ್ರಶಸ್ತಿಯ ಮೊತ್ತ ರೂ.೧೦,೦೦೦/-ಗಳು. ಸದರಿ ಮೊತ್ತವನ್ನು ಸರ್ಕಾರದ ಆದೇಶ ಸಂಖ್ಯೆ:ಕಸಂವಾ:೮೪೫:ಕಸಧ:೨೦೧೪, ದಿನಾಂಕ:೦೬.೧೨.೨೦೧೪ರ ಆದೇಶದಂತೆ ಪ್ರಶಸ್ತಿ ಮೊತ್ತವನ್ನು ರೂ.೫೦,೦೦೦/-ಗಳಿಗೆ ಹೆಚ್ಚಿಸಲಾಗಿದೆ.
  • ಆಯಾ ವರ್ಷದಲ್ಲಿ ಪ್ರಕಟಿಸಲಾದ ಒಂದು ಉತ್ತಮ ಪುಸ್ತಕಕ್ಕೆ ಬಹುಮಾನ ನೀಡುವುದು. ಹೀಗೆ ಬಹುಮಾನಕ್ಕೆ ಪರಿಗಣಿಸುವಾಗ ಆ ವರ್ಷದಲ್ಲಿ ಕನಿಷ್ಠ ಮೂರು (೩) ಶೀರ್ಷಿಕೆಗಳಾದರು ಪ್ರಕಟವಾಗಿರಬೇಕು. ಬಹುಮಾನದ ಮೊತ್ತ ರೂ.೫,೦೦೦/-ಗಳು. ಸದರಿ ಮೊತ್ತವನ್ನು ಸರ್ಕಾರದ ಆದೇಶ ಸಂಖ್ಯೆ:ಕಸಂವಾ:೮೪೫:ಕಸಧ:೨೦೧೪, ದಿನಾಂಕ:೦೬.೧೨.೨೦೧೪ರ ಆದೇಶದಂತೆ ಬಹುಮಾನ ಮೊತ್ತವನ್ನು ರೂ.೨೫,೦೦೦/-ಗಳಿಗೆ ಹೆಚ್ಚಿಸಲಾಗಿದೆ.
  • ಸರ್ಕಾರದ ಆದೇಶ ಸಂಖ್ಯೆ:ಕಸಂವಾ:೪೭೯:ಕಸಧ:೨೦೧೮ ದಿನಾಂಕ:೨೫.೦೧.೨೦೧೯ರ ಅನ್ವಯ ಹೊಸದಾಗಿ ರೂ.೨೫,೦೦೦/-ಗಳ ಮೊತ್ತದ ೧೦ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಮಂಜೂರು ಮಾಡಿದೆ. ಯಕ್ಷಗಾನ ಹಾಗೂ ಮೂಡಲಪಾಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಹತ್ತು ಜನರನ್ನು ಮೀರದಂತೆ ಹತ್ತು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ನೀಡುವುದು.
 12. ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಪ್ರಪ್ರಥಮ ಬಾರಿಗೆ ದಿ|| ಕರ್ಕಿ ಮನೆತನದವರಾದ ದಿ|| ಹಿರಿಯ ಪರಮಯ್ಯ ಹಾಸ್ಯಗಾರರ ಹೆಸರಿನಲ್ಲಿ "ದತ್ತಿನಿಧಿ ಪ್ರಶಸ್ತಿ" ನೀಡಲು ತೀರ್ಮಾನಿಸಲಾಗಿದೆ.    ಪ್ರಶಸ್ತಿ ಪುರಸ್ಕೃತರಿಗೆ ರೂ.25,000/-ಗಳ ಪ್ರಶಸ್ತಿ ಮೊತ್ತವನ್ನು ನೀಡಲಾಗುವುದು.   ಆಯ್ಕೆಗೊಂಡ ಪುಸ್ತಕ ಬಹುಮಾನಿತರಿಗೆ ಪ್ರಶಸ್ತಿ ಮೊತ್ತದ ಜೊತೆಗೆ ಫಲಕ, ಶಾಲು, ಹಾರ, ಫಲತಾಂಬೂಲ ನೀಡಲಾಗುವುದು.

 

×
ABOUT DULT ORGANISATIONAL STRUCTURE PROJECTS