ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2020-21ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

2020-21ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

 

ಮಾತಿನ ಮಂಟಪ”: ಸಂವಾದ ಕಾರ್ಯಕ್ರಮ

                ಹೊತ್ತು ಮುಳುಗುವ ಹೊತ್ತಿನಲ್ಲಿ ರಂಗ ಮಂಟಪದಲ್ಲಿ ಮಿಂಚಿ ಮೆರೆದಾಡಬೇಕಿದ್ದ ಯಕ್ಷಗಾನ ಕಲಾವಿದರು ದುಡಿಮೆಯಿಲ್ಲದೆ ಈಗ ಮನೆಯಲ್ಲೇ ಕುಳಿತಿರಬೇಕಾದ ಪರಿಸ್ಥಿತಿಯಿದ್ದು, ಈ ನೊಂದ ಮನಸ್ಸುಗಳಿಗೊಂದಿಷ್ಟು ಆತ್ಮವಿಶ್ವಾಸ ತುಂಬಿಸುವ ದೃಷ್ಟಿಯಿಂದ ಯಕ್ಷಗಾನ ಮೇಳಗಳು ತಿರುಗಾಟ ನಿಲ್ಲಿಸಬೇಕಾದ ಸಂದರ್ಭದಲ್ಲಿ ಇಂಥ ಯೋಚನೆಯೊಂದಿಗೆ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಕನಿಷ್ಠ ನೂರು (೧೦೦) ಜನ ಕಲಾವಿದರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರತಿದಿನ ಸಂಜೆ ಈ ಫೇಸ್‌ಬುಕ್ ಲೈವ್ ಅಭಿಯಾನದ ಮೂಲಕವೇ ಮಾತಿನ ಮಂಟಪಕ್ಕೆಳೆದು ಮಾತನಾಡಿಸಲಾರಂಭಿಸಿದೆ. ಕಲಾವಿದರ ಸಂಕಷ್ಟವನ್ನು, ಅವರ ಸಾಧನೆಗಳನ್ನು, ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಕಲ್ಪಿಸಿದೆ.

           

            ಕಟೀಲು ಮೇಳದ ಭಾಗವತರಾದ ಶ್ರೀ ಪುತ್ತೂರು ರಮೇಶ್ ಭಟ್ ಅವರಿಂದ ೨೦೨೦ರ ಆಗಸ್ಟ್ ೨೯ರಂದು ಈ ಸಂವಾದ ಸರಣಿಯನ್ನು ಪ್ರಾರಂಭಿಸಿದ್ದು, ನಂತರ ಯಕ್ಷಗಾನ, ಮೂಡಲಪಾಯದ ಕಲಾವಿದರು, ಪ್ರಸಾಧನ ಕಲಾವಿದರು, ನೋವು-ನಲಿವು ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ದಣಿವರಿಯದೇ ದುಡಿದು ಪೆಟ್ಟಿಗೆ ಹೊತ್ತು ಊರಿಂದೂರು ಅಲೆದಾಡಿ ಪ್ರದರ್ಶನ ನೀಡಿದ, ಹೊಸ ಕಲಾವಿದರನ್ನು ಸೃಷ್ಟಿಸಿದ ಹಿರಿಯ ಕಲಾವಿದರು ಪಟ್ಟ ಪರಿಶ್ರಮ, ಅವರ ಅನುಭವದ ಮಾತುಗಳನ್ನು ದಾಖಲಿಸುವ ಪ್ರಯತ್ನವನ್ನು ಅಕಾಡೆಮಿಯು ನಡೆಸಿದೆ.

 

            ರಾತ್ರಿಯನ್ನು ಬೆಳಗಿಸುವ ಕಲಾವಿದರ ರಂಗದಾಚೆಗಿನ ಬದುಕಿನ ಕಥನ ಕೇಳುವ ಕುತೂಹಲದಿಂದ ವೀಕ್ಷಕರಿಗೂ ಹೆಚ್ಚಾಗುತ್ತಿದ್ದು, ‘ನಮ್ಮನ್ನೂ ಕೇಳುವವರಿದ್ದಾರೆ. ಕುಸಿದು ಹೋಗಿದ್ದ ಆತ್ಮಬಲ ವೃದ್ಧಿಯಾಗಿದೆ’ ಎನ್ನುತ್ತಾ ಭಾವುಕರಾದ ಕಲಾವಿದರು ದೂರವಾಣಿ ಮೂಲಕ ಸಂಪರ್ಕಿಸಿ ಆಡಿದ ಮಾತುಗಳನ್ನು ಸಾರ್ಥಕ್ಯ ಭಾವದಿಂದ ನೆನಪಿಸಿಕೊಳ್ಳುತ್ತಾರೆ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು.

 

            ಮಾತಿನ ಮಂಟಪಕ್ಕೆ ಕಲಾವಿದರನ್ನು ಸಜ್ಜುಗೊಳಿಸುತ್ತಿರುವ ಅಕಾಡೆಮಿ ಸದಸ್ಯೆ ಶ್ರೀಮತಿ ಆರತಿ ಪಟ್ರಮೆ ಇವರು ಸ್ವತಃ ಕಲಾವಿದೆಯೂ ಹೌದು. ಶ್ರೇಷ್ಠ ಕಲಾವಿದರನ್ನು ಮಾತನಾಡಿಸಿದಾಗ ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತು ಮನದಟ್ಟಾಗುತ್ತದೆ. ಅವರ ಮುಗ್ಧ ನುಡಿಗಳನ್ನು, ಅನುಭವಗಳನ್ನು ಕೇಳುವುದೇ ಚಂದ. ಈ ಕಲಾವಿದರು ಏರಿರುವ ಎತ್ತರವೇನು, ಆದರೂ ಅಷ್ಟೊಂದು ವಿನಯದಿಂದ, ಮುಗ್ಧತೆಯಿಂದ ಮನಬಿಚ್ಚಿ ಮಾತನಾಡುತ್ತಾರೆ. ಅವರ ಮಾತುಗಳು ಖಂಡಿತವಾಗಿಯೂ ಯಕ್ಷಗಾನದ ಇತಿಹಾಸ ಅರಿಯುವಲ್ಲಿ, ಮುಂದಿನ ಪೀಳಿಗೆಗೂ ತಲುಪಿಸುವಲ್ಲಿ ದಾರಿದೀಪ ಎನ್ನುತ್ತಾರೆ ಸದಸ್ಯರಾದ ಶ್ರೀಮತಿ ಆರತಿ ಪಟ್ರಮೆ. ಇದುವರೆಗೂ ೧೦೦ ಜನ ಕಲಾವಿದರು ಮಾತಿನ ಮಂಟಪ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇವರ ಇಂತಿದೆ.

 

 

೧.         ಶ್ರೀ ಪುತ್ತೂರು ರಮೇಶ್ ಭಟ್

೨.         ಶ್ರೀ ಮಹೇಶ್ ಮಣಿಯಾಣಿ

೩.         ಶ್ರೀ ಬಂಟ್ವಾಳ ಜಯರಾಮ ಆಚಾರ್ಯ

೪.         ಶ್ರೀ ಚಂದ್ರಶೇಖರ ಧರ್ಮಸ್ಥಳ

೫.         ಶ್ರೀ ಎ.ಪಿ.ಪಾಠಕ್

೬.         ಶ್ರೀ ಎನ್.ಜಿ.ಹೆಗಡೆ

೭.         ಶ್ರೀ ವಸಂತಗೌಡ ಕಾಯರ್ತಡ್ಕ

೮.        ಶ್ರೀ ಎಂ.ಕೆ.ರಮೇಶಾಚಾರ್ಯ

೯.         ಶ್ರೀ ಸಬ್ಬಣಕೋಡಿ ರಾಮಭಟ್

೧೦.      ಶ್ರಿ ತಲಕಾಡು ರವೀಂದ್ರ

೧೧.      ಶ್ರೀ ಕೋಡಿ ವಿಶ್ವನಾಥ ಗಾಣಿಗ

೧೨.      ಶ್ರೀ ಪೂಕಳ ಲಕ್ಷ್ಮಿ ನಾರಾಯಣ ಭಟ್

೧೩.      ಶ್ರೀ ಅಮ್ಮುಂಜೆ ಮೋಹನ್ ಕುಮಾರ್

೧೪.      ಶ್ರೀ ನೀಲ್ಕೋಡು ಶಂಕರ ಹೆಗಡೆ

೧೫.      ಶ್ರೀ ಕಲ್ಮನೆ ನಂಜಪ್ಪ

೧೬.      ಶ್ರೀ ಅಂಬಾಪ್ರಸಾದ ಪಾತಾಳ

೧೭.      ಶ್ರೀ ಪುತ್ತಿಗೆ ರಘುರಾಮ ಹೊಳ್ಳ

೧೮.      ಶ್ರೀ ತಮ್ಮಣ್ಣಾಚಾರ್ ಹಲ್ಲರೆ

೧೯.      ಶ್ರೀ ರಮೇಶ್ ಭಟ್ ಬಾಯಾರು

೨೦.      ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ

೨೧.      ಶ್ರೀ ಹರಿನಾರಾಯಣ ಬೈಪಾಡಿತ್ತಾಯ

೨೨.      ಶ್ರೀ ಮಂಕಿ ಈಶ್ವರ ನಾಯ್ಕ

೨೩.      ಶ್ರೀ ಅರಳಗುಪ್ಪೆ ಪುಟ್ಟಸ್ವಾಮಿ

೨೪.      ಶ್ರೀ ರಾಘವದಾಸ್

೨೫.      ಶ್ರೀ ಪೂರ್ಣೇಶ ಆಚಾರ್ಯ

೨೬.      ಶ್ರೀ ಅಜ್ರಿ ಗೋಪಾಲ ಗಾಣಿಗ

೨೭.      ಶ್ರೀ ಉಜಿರೆ ನಾರಾಯಣ

೨೮.      ಶ್ರೀಎಚ್.ಎಸ್.ಗಣೇಶಮೂರ್ತಿ ಹುಲುಗಾರು

೨೯.      ಶ್ರೀ ಪರಮೇಶ್ವರ ಹೆಗಡೆ ಐನಬೈಲು

೩೦.      ಶ್ರೀ ಪುತ್ತೂರು ಗಂಗಾಧರ ಜೋಗಿ

೩೧.      ಶ್ರೀ ಆರ್ಗೋಡು ಮೋಹನದಾಸ ಶೆಣೈ

೩೨.      ಶ್ರೀ ಗುರುರಾಜ ಮಾರ್ಪಳ್ಳಿ

೩೩.      ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿ

೩೪.      ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ

೩೫.      ಶ್ರೀ ಕೆ.ಎಚ್.ದಾಸಪ್ಪ ರೈ

೩೬.      ಶ್ರೀ ಅಶೋಕ ಭಟ್ ಸಿದ್ದಾಪುರ

೩೭.      ಶ್ರೀ ಬಿ. ರಾಜಣ್ಣ

೩೮.      ಶ್ರೀ ದಿನೇಶ ಅಮ್ಮಣ್ಣಾಯ

೩೯.      ಶ್ರೀ ವಿದ್ಯಾಧರ ಜಲವಳ್ಳಿ

೪೦.      ಶ್ರೀ ಪ್ರಸನ್ನ ಭಟ್ ಬಾಳ್ಕಲ್

೪೧.      ಶ್ರೀ ಗಣೇಶ ಕುಮಾರ್ ಹೆಬ್ರಿ

೪೨.      ಶ್ರೀ ರಮೇಶ್ ಭಂಡಾರಿ ಮೂರೂರು

೪೩.      ಶ್ರೀ ಗೋಪಾಲಾಚಾರಿ ತೀರ್ಥಹಳ್ಳಿ

೪೪.      ಶ್ರೀ ಹರಿನಾರಾಯಣ ಭಟ್ ಎಡನೀರು

೪೫.      ಶ್ರೀ ಜಗದೀಶ ಹೆಗಡೆ

೪೬.      ಶ್ರೀ ಉದಯ ಕಡಬಾಳ

೪೭.      ಶ್ರೀ ಮಾಧವ ಪಾಟಾಳಿ ನೀರ್ಚಾಲು

೪೮.      ಶ್ರೀ ನಿಡ್ಲೆ ಗೋವಿಂದ ಭಟ್

೪೯.      ಡಾ. ಚಂದ್ರು ಕಾಳೇನಹಳ್ಳಿ

೫೦.      ಶ್ರೀ ಬೇಗಾರು ಶಿವಕುಮಾರ್

೫೧.      ಶ್ರೀ ಹಿರಿಯಣ್ಣಾಚಾರ್ ಕಿಗ್ಗ

೫೨.      ಶ್ರೀ ಶೇಖರ ಡಿ. ಶೆಟ್ಟಿಗಾರ್

೫೩.      ಶ್ರೀ ತಾರಾನಾಥ ವರ್ಕಾಡಿ

೫೪.      ಶ್ರೀ ಎಸ್.ಪಿ.ಮುನಿಕೆಂಪಯ್ಯ

೫೫.      ಶ್ರೀ ಶ್ರೀಪಾದ ಭಟ್ ಥಂಡಿಮನೆ

೫೬.      ಶ್ರೀ ಪುತ್ತೂರು ಶ್ರೀಧರ ಭಂಡಾರಿ

೫೭.      ಶ್ರೀ ಸೂರಿಕುಮೇರು ಗೋವಿಂದ ಭಟ್

೫೮.      ಶ್ರೀ ಬಳ್ಕೂರು ಕೃಷ್ಣಯಾಜಿ

೫೯.      ಶ್ರೀ ಸರಪಾಡಿ ಅಶೋಕ ಶೆಟ್ಟಿ

೬೦.      ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ

೬೧.      ಶ್ರೀ ಪದ್ಯಾಣ ಶಂಕರನಾರಾಯಣ ಭಟ್

೬೨.      ಶ್ರೀ ಸುಬ್ರಹ್ಮಣ್ಯ ಧಾರೇಶ್ವರ

೬೩.      ಶ್ರೀ ಕೋಡಿ ಕೃಷ್ಣ ಗಾಣಿಗ

೬೪.      ಶ್ರೀ ಪಟ್ಲ ಸತೀಶ ಶೆಟ್ಟಿ

೬೫.      ವಿದ್ವಾನ್ ಗಣಪತಿ ಭಟ್

೬೬.      ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್

೬೭.      ಶ್ರೀ ಎ.ಎನ್.ಚನ್ನಬಸವಯ್ಯ

೬೮.      ಶ್ರೀ ಶಶಿಕಾಂತ ಶೆಟ್ಟಿ ಕಾರ್ಕಳ

೬೯.      ಶ್ರೀ ನರಸಿಂಹ ಚಿಟ್ಟಾಣಿ

೭೦.      ಶ್ರೀ ಸಂತೋಷ ಕುಮಾರ್ ಮಾನ್ಯ

೭೧.      ಶ್ರೀ ನರಸೇಗೌಡ ಮಧುಗಿರಿ

೭೨.      ಶ್ರೀ ದಿವಾಣ ಶಿವಶಂಕರ ಭಟ್

೭೩.      ಶ್ರೀ ಭಾಸ್ಕರ ಕೊಗ್ಗ ಕಾಮತ್

೭೪.      ಶ್ರೀ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ

೭೫.      ಶ್ರೀ ರವಿಚಂದ್ರ ಕನ್ನಡಿಕಟ್ಟೆ

೭೬.      ಶ್ರೀ ಕೆದಿಲ ಜಯರಾಮ ಭಟ್

೭೭.       ಶ್ರೀ ರಾಘವೇಂದ್ರ ಮಯ್ಯ

೭೮.      ಶ್ರೀ ಬಿ. ಪರಶುರಾಮ್

೭೯.       ಶ್ರೀ ಕೆರೆಮನೆ ಶಿವಾನಂದ ಹೆಗಡೆ

೮೦.      ಶ್ರೀ ಪದ್ಯಾಣ ಗಣಪತಿ ಭಟ್

೮೧.      ಶ್ರೀ ಸದಾಶಿವ ಅಮೀನ್

೮೨.      ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ

೮೩.      ಶ್ರೀ ಹೇರಂಜಾಲು ಗೋಪಾಲ ಗಾಣಿಗ

೮೪.      ಶ್ರೀ ಮಹಮ್ಮದ್ ಗೌಸ್

೮೫.      ಶ್ರೀ ಕುರಿಯ ಗಣಪತಿ ಶಾಸ್ತ್ರೀ

೮೬.      ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ

೮೭.      ಶ್ರೀ ಆನಂದ ಶೆಟ್ಟಿ ಐರಬೈಲು

೮೮.      ಶ್ರೀ ಕೋಟ ಶಿವಾನಂದ

೮೯.      ಶ್ರೀ ಎ.ಎಂ.ಶಿವಶಂಕರಯ್ಯ

೯೦.      ಶ್ರೀ ಕೋಟ ಸುರೇಶ ಬಂಗೇರ

೯೧.      ಶ್ರೀ ಸೀತಾರಾಮ ಕುಮಾರ್ ಕಟೀಲು

೯೨.      ಶ್ರೀ ಶೇಖರ್ ಶೆಟ್ಟಿ ಎಳಬೇರು

೯೩.      ಶ್ರೀ ಕಮಲಶಿಲೆ ಮಹಾಬಲ ದೇವಾಡಿಗ

೯೪.      ಶ್ರೀ ಹೊಸಂಗಡಿ ಕೃಷ್ಣ ಗಾಣಿಗ

೯೫.      ಶ್ರೀ ನರಾಡಿ ಭೋಜರಾಜ ಶೆಟ್ಟಿ

೯೬.      ಶ್ರೀ ಉಪ್ಪುಂದ ಶ್ರೀಧರ ಗಾಣಿಗ

೯೭.       ಶ್ರೀ ಪ್ರಭಾಕರ ಆಚಾರ್ಯ ಹೆಮ್ಮಾಡಿ

೯೮.      ಶ್ರೀ ಬಸವರಾಜು

೯೯.       ಶ್ರೀ ಕುಂಬ್ಳೆ ಶ್ರೀಧರರಾವ್

೧೦೦.    ಶ್ರೀ ಚಪ್ಪರಮನೆ ಶ್ರೀಧರ ಹೆಗಡೆ

 

 

 

 

ಮಹಿಳೆಯರಿಗಾಗಿ ಮೂಡಲಪಾಯ ಯಕ್ಷಗಾನ ಶಿಬಿರ:

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಂಪ್ರದಾಯ ಟ್ರಸ್ಟ್ನ ಸಹಯೋಗದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ಕಾಶಿಮಠ ಬಡಾವಣೆಯ ವಿದ್ಯಾಸಿರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಹಿಳೆಯರಿಗಾಗಿ ಎರಡು ತಿಂಗಳ ಮೂಡಲಪಾಯ ಯಕ್ಷಗಾನ ಶಿಬಿರವನ್ನು ದಿನಾಂಕ:೦೭.೦೯.೨೦೨೦ರಂದು ಏರ್ಪಡಿಸಲಾಗಿತ್ತು. ಶಿಬಿರವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಆಗಿರುವ  ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಉದ್ಘಾಟಿಸಿ, ವಿವಿಧೆಡೆ ನಶಿಸುವ ಹಂತ ತಲುಪಿರುವ ಯಕ್ಷಗಾನ ಪ್ರಕಾರದ ಕಲೆಗಳನ್ನು ರಕ್ಷಿಸಿ ಬೆಳೆಸಬೇಕಾಗಿದೆ. ಕೇವಲ ಅಧಿಕಾರಿಗಳಿಂದ ಕಲೆ, ಕಲಾವಿದರನ್ನು ಉಳಿಸಲು ಸಾಧ್ಯವಿಲ್ಲ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಯಕ್ಷಗಾನದ ಮೂಡಲಪಾಯ, ಘಟ್ಟದ ಪ್ರಾಯ, ಕೇಳಿಕೆಯಂತಹ ಕಲೆಗಳು ಕಣ್ಮರೆ ಆಗುತ್ತಿದ್ದು, ಅವುಗಳ ರಕ್ಷಣೆಗೆ ಅಕಾಡೆಮಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಸದರಿ ಶಿಬಿರದಲ್ಲಿ ಜೆ.ಸಿ.ಐ. ಸ್ಫೂರ್ತಿ ಸಮಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ವಿಶ್ವನಾಥ, ಕಲಾವಿದ ಎನ್.ಎಸ್.ರಾಜು, ಶಿಬಿರದ ಶಿಕ್ಷಕ ಶ್ರೀ ಬಿ.ಪರಶುರಾಮ್, ಸಹ ಶಿಕ್ಷಕಿ ಶ್ರೀಮತಿ ಶಿಲ್ಪಾ, ಉಪನ್ಯಾಸಕರಾದ ಶ್ರೀ ಆನಂದ ಕರುವಿನ, ಶ್ರೀ ಇಟ್ಟಿಗಿ ವೀರೇಶ್, ಶ್ರೀಮತಿ ಕವಿತಾ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

 

 

 

ಯಕ್ಷಗಾನ ಗೊಂಬೆಯಾಟ ಕಾರ್ಯಾಗಾರ:

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಹೊಂಗಿರಣ ಸಾಂಸ್ಕೃತಿಕ ಸಂಸ್ಥೆ, ಹಳಿಯಾಳ, ಶಿರಸಿ, ಉತ್ತರ ಕನ್ನಡ ಜಿಲ್ಲೆ ಇವರ ಸಹಯೋಗದಲ್ಲಿ ಹಳಿಯಾಳದಲ್ಲಿ ಎರಡು ತಿಂಗಳ ಯಕ್ಷಗಾನ ಗೊಂಬೆಯಾಟ ಕಾರ್ಯಾಗಾರವನ್ನು ದಿನಾಂಕ:೧೪.೦೯.೨೦೨೦ರಂದು ಏರ್ಪಡಿಸಲಾಗಿತ್ತು. ಕಾರ್ಯಾಗಾರವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್ ಆಗಿರುವ ಶ್ರೀ ಎಸ್.ಎಚ್.ಶಿವರುದ್ರಪ್ಪ ಅವರು ಉದ್ಘಾಟಿಸಿ, ಕಲೆಗಳಿಂದ ಜೀವನ ಸಮೃದ್ಧಿ, ಓದಿನೊಂದಿಗೆ ಜನಪದ ಕಲೆಗಳನ್ನು ಮೈಗೂಡಿಸಿಕೊಂಡಾಗ ಗುಣಾತ್ಮಕ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಚಿಬ್ಬಲಗೇರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಶ್ರೀ ನಾಗರಾಜ ಬೇಲಿಫ್‌ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀಮತಿ ನಿರ್ಮಲಾ ಹೆಗಡೆ ಅವರು ಭಾಗವಹಿಸಿ ಯಕ್ಷಗಾನವು ಆರೋಗ್ಯಪೂರ್ಣ ಕಲೆ ಎಂದರು. ಭಾಗವತರಾದ ಶ್ರೀ ಗಜಾನನ ಭಟ್, ಶ್ರೀ ಮಂಜುನಾಥ ಕೇಶವ ಹೆಗಡೆ, ಹೊಂಗಿರಣ ಸಂಸ್ಥೆಯ ಅಧ್ಯಕ್ಷತೆ ಶ್ರೀಮತಿ ಸುಜಾತಾ ಬಿರಾದಾರ ಉಪಸ್ಥಿತರಿದ್ದರು. ಶ್ರೀ ಸಿದ್ದಪ್ಪ ಬಿರಾದಾರ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಗಣೇಶ್ ದಿವಾಕರ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನ ಗೊಂಬೆಯಾಟ ತರಬೇತಿಯ ಕಾರ್ಯಾಗಾರ ಮುಂದುವರೆದು, ತರಬೇತಿಯಲ್ಲಿ ೧೨ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

 

೨೦೧೯ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ

                ಅಕಾಡೆಮಿಯು ೨೦೧೯ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭವನ್ನು ಕೋವಿಡ್-೧೯ನಿಂದಾಗಿ ರಾಜ್ಯದ ಮೂರು ಕಡೆಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

(೧) ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು, ಉಡುಪಿ

ಮೊದಲಿಗೆ ದಿನಾಂಕ:೦೭.೧೧.೨೦೨೦ರAದು ಶ್ರೀ ಕ್ಷೇತ್ರ ಮೂಕಾಂಬಿಕಾ ದೇಸ್ಥಾನ, ಕೊಲ್ಲೂರು, ಉಡುಪಿಯಲ್ಲಿ ಏರ್ಪಡಿಸಲಾಗಿತ್ತು. ಈ ಸಮಾರಂಭವನ್ನು ಶಾಸಕರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಅವರು ಉದ್ಘಾಟಿಸಿ, ಯಕ್ಷಗಾನಕ್ಕೆ ತನ್ನದೇ ಆದ ಗೌರವ, ಮಹತ್ವವಿದೆ. ಯಕ್ಷಗಾನದ ಸಂಪ್ರದಾಯ, ಪರಂಪರೆ, ಹಿನ್ನೆಲೆಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಗುಣಮಟ್ಟದ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುವಂತಾಗಬೇಕು. ಯಕ್ಷಗಾನದ ಹಿಂದಿನ ಗತವೈಭವ ಮತ್ತೆ ಮರಳಬೇಕು. ಅಂದಿನ ಉತ್ಕೃಷ್ಟಮಟ್ಟದ ಪ್ರದರ್ಶನವನ್ನು ನೀಡುವಂತಾಗಬೇಕು. ಪರಂಪರೆಯ ಚೌಕಟ್ಟಿನೊಳಗೆ ಯಕ್ಷಗಾನ ಕಲೆ ಮುಂದುವರಿಯಬೇಕೆಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಯಕ್ಷಗಾನ ಪರಂಪರೆ ಹಾಗೂ ಆಗುಹೋಗುಗಳ ಬಗ್ಗೆ ವಿವರಿಸಿದರಲ್ಲದೆ, ಪ್ರಶಸ್ತಿ ಆಯ್ಕೆ ವೇಳೆ ಅಕಾಡೆಮಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಯಕ್ಷಗಾನದ ದಿಗ್ಗಜ ಖ್ಯಾತ ಸಾಹಿತಿ, ವಿಮರ್ಶಕ ಅಂಬಾತನಯ ಮುದ್ರಾಡಿ (ಕೇಶವ ಶೆಟ್ಟಿಗಾರ್) ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಡಾ. ರಾಮಕೃಷ್ಣ ಗುಂದಿ ಅವರಿಗೆ ಗೌರವ ಪ್ರಶಸ್ತಿ,  ದಿ|| ನಲ್ಲೂರು ಜನಾರ್ಧನ ಆಚಾರ್ಯ ಅವರ ಪರವಾಗಿ ಶ್ರೀಮತಿ ಶಾರದಾ ಜನಾರ್ಧನ್ ಆಚಾರ್ಯ, ಆರ್ಗೋಡು ಮೋಹನದಾಸ ಶೆಣೈ, ಶ್ರೀ ಮೂರೂರು ರಾಮಚಂದ್ರ ಹೆಗಡೆ, ಶ್ರೀ ಎಂ.ಎನ್.ಹೆಗಡೆ ಹಳವಳ್ಳಿ, ಶ್ರೀ ಹಾರಾಡಿ ಸರ್ವೋತ್ತಮ ಗಾಣಿಗ ಅವರುಗಳಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗಳನ್ನು ಶಾಸಕರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಅವರು ಪ್ರದಾನ ಮಾಡಿದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬಾಬು ಬೆಕ್ಕೇರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಆದ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಕ್ಷೇತ್ರದ ಅರ್ಚಕ ನರಸಿಂಹ ಭಟ್ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್ ಆದ   ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯರಾದ ಶ್ರೀಮತಿ ನಿರ್ಮಲಾ ಮಂಜುನಾಥ ಹೆಗಡೆ,  ಶ್ರೀ ಯೋಗೀಶ್‌ರಾವ್ ಚಿಗುರುಪಾದೆ, ಶ್ರೀ ದಾಮೋದರ ಶೆಟ್ಟಿ, ಶ್ರೀ ಕೆ.ಎಂ.ಶೇಖರ್ ಅವರು ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.

(೨) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿ, ಮಂಗಳೂರು

ಎರಡನೆಯದಾಗಿ ದಿನಾಂಕ:೦೮.೧೧.೨೦೨೦ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿ, ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ ಪಾಂಡೇಶ್ವರ್ ಅವರು ಉದ್ಘಾಟಿಸಿ, ಶಾಲಾ-ಕಾಲೇಜು ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಕಲೆಯಲ್ಲಿ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವೆಂದು ತಿಳಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್‌ಸಾರ್ ಅವರು ತುಳು ಸಾಹಿತ್ಯ ಅಕಾಡೆಮಿಯು ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡಲು ಬದ್ಧವಿದೆ. ಮುಂದಿನ ದಿನಗಳಲ್ಲಿ ತುಳುನಾಡಿನ ವೈಭವದ ಯಕ್ಷಗಾನ ಕಲೆ ಮತ್ತಷ್ಟು ಸಮೃದ್ಧಿ ಕಾಣಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಯಕ್ಷಗಾನವನ್ನು ಶಾಲಾ ಪಠ್ಯವನ್ನಾಗಿಸುವ ಪ್ರಕ್ರಿಯೆ ಪಠ್ಯಪುಸ್ತಕ ನಿರ್ದೇಶನಾಲಯದ ಹಂತದಲ್ಲಿದ್ದು, ಪಠ್ಯಪುಸ್ತಕ ಸಮಿತಿ ರಚನೆಯಾಗಬೇಕಿದೆ. ಶೀಘ್ರದಲ್ಲೇ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದ್ದು, ಶಾಲೆಯಲ್ಲಿ ಯೋಗ, ನೃತ್ಯ, ಸಂಗೀತದಂತೆ ಯಕ್ಷಗಾನಕ್ಕೂ ಅವಕಾಶ ನೀಡಬೇಕೆಂಬ ಮನವಿಯನ್ನು ಯಕ್ಷಗಾನ ಅಕಾಡೆಮಿಯು ಶಿಕ್ಷಣ ಸಚಿವರಲ್ಲಿ ನೀಡಿದ್ದು, ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು. ೨೦೧೯ನೇ ಸಾಲಿನ ಗೌರವ ಪ್ರಶಸ್ತಿಯನ್ನು ಡಾ. ಚಂದ್ರಶೇಖರ ದಾಮ್ಲೆ ಅವರಿಗೆ, ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತಿç, ಕಲಾವಿದರ ಉಬರಡ್ಕ ಉಮೇಶ ಶೆಟ್ಟಿ ಅವರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಅಗರಿ ಮಾರ್ಗ ಕೃತಿಗಾಗಿ ಮದ್ದಳೆಗಾರರಾದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ ಅವರಿಗೆ ಹಾಗೂ ಯಕ್ಷಗಾನ ವೀರಾಂಜನೇಯ ವೈಭವ (ಸಮಗ್ರ ಹನುಮಾಯಾನ) ಪುಸ್ತಕಕ್ಕಾಗಿ ಪುಸ್ತಕ ಬಹುಮಾನವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ್ ಪಾಂಡೇಶ್ವರ್ ಅವರು ಪ್ರದಾನ ಮಾಡಿದರು. ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ್ ಕಲ್ಕೂರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುದ್ಧ, ಸ್ಪಷ್ಟ, ವ್ಯಾಕರಣಬದ್ಧ ಕನ್ನಡ ಯಕ್ಷಗಾನದಲ್ಲಿ ಮಾತ್ರ ಕೇಳಬಹುದು. ಯಕ್ಷಗಾನ ಸೀಮೋಲ್ಲಂಘನೆ ಆಗಲಿ. ಆದರೆ ಶಾಸ್ತ್ರೀಯ, ಪರಂಪರೆಯ ಚೌಕಟ್ಟು ಮೀರದಿರಲಿ, ಯಕ್ಷಗಾನ ಕರ್ನಾಟಕದ ರಾಜ್ಯ ಕಲೆ ಆಗಲಿ ಎಂದು ಆಶಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಯೋಗೀಶ್‌ರಾವ್ ಚಿಗುರುಪಾದೆ, ಶ್ರೀ ದಾಮೋದರ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು.

ತೆಂಕುತಿಟ್ಟು ಬಣ್ಣದ ವೇಷದ ಕಮ್ಮಟ:

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಇವರ ಸಹಯೋಗದಲ್ಲಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ, ಶ್ರೀನಿಲಯ, ಕೊಲ್ಲಂಗಾನದಲ್ಲಿ ದಿನಾಂಕ:೦೯.೧೧.೨೦೨೦ರAದು ಏರ್ಪಡಿಸಲಾಗಿತ್ತು. ಕಮ್ಮಟವನ್ನು ಶಿವರಾಮ ಕಾರಂತರ ಬಾಲವನದ ಕರ್ತವ್ಯಾಧಿಕಾರಿಯಾದ ಡಾ. ಸುಂದರ ಕೇನಾಜೆ ಅವರು ಉದ್ಘಾಟಿಸಿ, ಯಕ್ಷಗಾನ ಕಲಾಪ್ರಕಾರದೊಳಗಿನ ಪ್ರಾದೇಶಿಕ ವೈವಿಧ್ಯತೆಗಳ ದಾಖಲೀಕರಣ ಆಗಬೇಕಾಗಿದೆ. ಹೆಚ್ಚು ಅಧ್ಯಯನಕ್ಕೆ ಒಡ್ಡಿದಂತೆ ಸೃಜನಶೀಲತೆಗೆ ಅಧ್ಯಯನದ ದೃಷ್ಟಿಯಿಂದ ಪರಂಪರೆ, ಸಂಪ್ರದಾಯಗಳ ದಾಖಲೀಕರಣ ಈಗಿನ ಅನಿವಾರ್ಯವಾಗಿದೆ ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಕಮ್ಮಟದ ಅಧ್ಯಕ್ಷತೆ ವಹಿಸಿ ದಾಖಲೀಕರಣ ಇಲ್ಲದೆ ಇತಿಹಾಸ ರಚನೆ, ಪರಿಶೀಲನೆಗೆ ಒಳಪಟ್ಟು, ಪರಿಷ್ಕರಣೆ ಅಗತ್ಯವಿದ್ದಲ್ಲಿ ಇಂತಹ ದಾಖಲೀಕರಣ ನೆರವಾಗಲಿದೆ. ಜೊತೆಗೆ ಸೂಕ್ತ ಅಧ್ಯಯನಕ್ಕೆ ದಾಖಲೀಕರಣ ನೆರವಾಗುತ್ತದೆ. ತೆಂಕುತಿಟ್ಟಿನ ಬಣ್ಣದ ವೇಷಗಳ ವೈವಿಧ್ಯ ಅತ್ಯಪೂರ್ವವಾಗಿರುವ ಹಿನ್ನೆಲೆಯಲ್ಲಿ ಪರಂಪರೆಯ ದಾಖಲೀಕರಣ ಅಧ್ಯಯನಕ್ಕೆ ಯೋಗ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್, ಅಕಾಡೆಮಿಯ ಸದಸ್ಯರುಗಳಾದ    ಶ್ರೀ ರಾಧಕೃಷ್ಣ ಕಲ್ಚಾರ್, ಶ್ರೀ ಯೋಗೀಶ್ ರಾವ್ ಚಿಗುರುಪಾದೆ, ಶ್ರೀ ಕದ್ರಿ ನವನೀತ ಶೆಟ್ಟಿ, ಸಹ ಸದಸ್ಯರಾದ ಶ್ರೀ ದಾಮೋದರ ಶೆಟ್ಟಿ ಮೂಡಂಬೈಲು, ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಉಪಸ್ಥಿತರಿದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು. ಜಗದೀಶ ಕೂಡ್ಲು ನಿರೂಪಿಸಿ, ವಂದಿಸಿದರು. ತೆಂಕುತಿಟ್ಟಿನ ದಶಾವತಾರಿ ಸೂರಿಕುಮೇರಿ ಕೆ. ಗೋವಿಂದ ಭಟ್ ಅವರು ಕಮ್ಮಟದ ಅವಲೋಕನ ನಡೆಸಿದರು. ಖ್ಯಾತ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ನಿರ್ವಹಿಸಿದರು.

            ಸಮಾರೋಪ ಸಮಾರಂಭದಲ್ಲಿ ಕೆ.ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಸದಸ್ಯ ಸತಿಶ ಅಡಪ ಸಂಕಬೈಲು, ಡಾ. ಶ್ರುತ ಕೀರ್ತಿರಾಜ್ ಉಜಿರೆ, ಯೋಗೀಶ್ ರಾವ್ ಚಿಗುರುಪಾದೆ, ಮಂಜುನಾಥ ಡಿ. ಮಾನ್ಯ ಉಪಸ್ಥಿತರಿದ್ದರು. ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿಮ್ಮೇಳದಲ್ಲಿ ಪುಂಡಿಕೈ ಗೋಪಾಲಕೃಷ್ಣ ಭಟ್, ರಾಮಕೃಷ್ಣಮಯ್ಯ ಸಿರಿಬಾಗಿಲು, ಲಕ್ಷಿö್ಮನಾರಾಯಣ ರಾವ್ ಅಡೂರು, ಮುರಾರಿ ಕಂಡಬಳಿತ್ತಾಯ, ಲಕ್ಷ್ಮೀಶ ಬೆಂಗ್ರೋಡಿ, ಮುರಾರಿ ಭಟ್ ಪಂಜಿಗದ್ದೆ ಹಾಗೂ ಮುಮ್ಮೇಳದಲ್ಲಿ ಕೆ. ಗೋವಿಂದ ಭಟ್ ಸೂರಿಕುಮೇರು, ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಕೃಷ್ಣ ನಾವಡ ಮರೂರು, ಸುಬ್ರಾಯ ಹೊಳ್ಳ ಕಾಸರಗೋಡು, ಉಬರಡ್ಕ ಉಮೇಶ್ ಶೆಟ್ಟಿ, ರಮೇಶ್ ಭಟ್, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಬಾಲಕೃಷ್ಣ ಮಣಿಯಾಣೆ ಮುವ್ವಾರು, ಗಣಾಧಿರಾಜ ಉಪಾಧ್ಯಾಯ, ಹರಿನಾರಾಯಣ ಎಡನೀರು, ಶಂಭಯ್ಯ ಭಟ್ ಕಂಜರ್ಪಣೆ, ಮಹೇಶ್ ಪಾಟಾಳಿ, ರವಿರಾಜ ಪನೆಯಾಲ, ಜಯರಾಮ ಪಾಟಾಳಿ ಪಡುಮಲೆ, ಮಾಧವ ಪಾಟಾಳಿ ನೀರ್ಚಾಲು, ಕಿಶನ್ ಅಗ್ಗಿತ್ತಾಯ, ಶ್ರೀಗಿರಿ, ಸ್ವಸ್ತಿಕ್, ಉಪಾಸನಾ ಪಂಜರಿಕೆ, ಬಾಲಕೃಷ್ಣ ಸೀತಾಂ ಗೋಳಿ, ಪ್ರಕಾಶ್ ನಾಯಕ್, ಸುಬ್ರಹ್ಮಣ್ಯ ಭಟ್ ಬದಿಯಡ್ಕ ಭಾಗವಹಿಸಿದ್ದರು.   

೨೦೧೯ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ

(೩) ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ, ತುಮಕೂರು

ಮೂರನೆಯದಾಗಿ ದಿನಾಂಕ:೧೮.೧೧.೨೦೨೦ರAದು ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ, ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಅವರು ಉದ್ಘಾಟಿಸಿ, ಕಲೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸದಾ ಕಲಾವಿದರ ಪರವಾಗಿ ಇರುತ್ತದೆ. ಇಲಾಖೆಯು ಯಾವುದೇ ಸಲಹೆ ಸೂಚನೆಗಳನ್ನು ಸ್ವಾಗತಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಬಾ.ಹಾ.ರಮಾಕುಮಾರಿ ಅವರು ಯುವಜನಾಂಗಕ್ಕೆ ಪ್ರೋತ್ಸಾಹ ನೀಡಿದ್ದಷ್ಟು ಅವರು ಕಲೆಯಲ್ಲಿ ಮುಂದುವರೆಯುತ್ತಾರೆ. ಮೂಡಲಪಾಯಕ್ಕೆ ಆಧುನಿಕ ಸ್ಪರ್ಶವನ್ನು ನೀಡಿ ಮುಂದುವರೆಸುವುದು ಅಗತ್ಯವಾಗಿದೆ. ಬದಲಾವಣೆಗೆ ಮನಸ್ಸು ಒಪ್ಪದಿದ್ದಲ್ಲಿ ಮುಂದುವರೆಯುವುದಕ್ಕೆ ಸಾಧ್ಯವಿಲ್ಲವೆಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಮೂಡಲಪಯ ಅಪಾರ ಶಕ್ತಿಯಿರುವ ಕಲೆಯಾಗಿದ್ದು ಪಡುವಲಪಾಯದಂತೆ ಸಾಮಾಜಿಕ ಪ್ರತಿಷ್ಠೆ ತರಬೇಕು. ಸಾಮಾಜಿಕ ಮನ್ನಣೆ ಇಲ್ಲದೇ ಇರುವುದರಿಂದ ಇಂದಿನ ವಿದ್ಯಾರ್ಥಿಗಳು, ಯುವ ಸಮುದಾಯ ಈ ಕಲೆಯ ಕಲಿಕೆಯಲ್ಲಿ ಆಸಕ್ತಿ ವಹಿಸುತ್ತಿಲ್ಲವಾದ್ದರಿಂದ ಯಕ್ಷಗಾನ ಪ್ರಕಾರಗಳಲ್ಲಿ ಮೂಡಲಪಾಯ ಭಿನ್ನ ರೀತಿಯಲ್ಲಿ ಗುರುತಿಸುವಂತೆ ಮಾಡಬೇಕು. ಯುವಕರಿಗೆ ಈ ಕಲೆಯು ಸಾಮಾಜಿಕ ಅಶಿಸ್ತು ಇಲ್ಲದೆ ಕಲೆಯೆಂದು ತಿಳಿಸುವ ಪ್ರಯತ್ನ ಮಾಡಬೇಕು. ಈ ಕಲೆಯ ಬಗ್ಗೆ ಯೋಚನೆ ಕ್ರಮಬದ್ಧವಾಗಿ ಮುಂದುವರೆದಾಗ ಮೂಡಲಪಾಯ ಸತ್ವ, ಸಮೃದ್ಧವಾದ ಕಲೆ ಎಂಬುದನ್ನಾಗಿ ಸಮಾಜಕ್ಕೆ ತೋರಿಸಬಹುದು. ಜನರು ಈ ಕಲೆಯನ್ನು ತನ್ನದು ಎಂದು ಸ್ವೀಕಾರ ಮಾಡಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ. ಕಲೆಯಿಂದ ಬದುಕುತ್ತೇನೆ ಎಂಬ ಭರವಸೆ ಇಲ್ಲದೇ ಹೋದರೆ ಯಾರು ಆ ಕಲೆಯನ್ನು ಕಲಿಯುವುದಿಲ್ಲವೆಂದರು. 

 

“ಗೋಡೆ ನಾರಾಯಣ ಹೆಗಡೆ” ಇವರ `ಸಾಕ್ಷ್ಯಚಿತ್ರ ಬಿಡುಗಡೆ’, `ವಿಚಾರ ಸಂಕಿರಣ’, `ಪ್ರಾತ್ಯಕ್ಷಿಕೆ’ ಹಾಗೂ `ಯಕ್ಷಗಾನ ಕಾಯಕ್ರಮ’:

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ದಿನಾಂಕ:೧೨.೧೨.೨೦೨೦ರಂದು ಶ್ರೀ ಶಾರದಾಂಬ ದೇವಸ್ಥಾನ, ನಾಯ್ಕನಕೆರೆ, ಯಲ್ಲಾಪುರ, ಉತ್ತರ ಕನ್ನಡ ಜಿಲ್ಲೆಯಲ್ಲಿ “ಗೋಡೆ ನಾರಾಯಣ ಹೆಗಡೆ” ಇವರ `ಸಾಕ್ಷ್ಯಚಿತ್ರ ಬಿಡುಗಡೆ’, `ವಿಚಾರ ಸಂಕಿರಣ’, `ಪ್ರಾತ್ಯಕ್ಷಿಕೆ’ ಹಾಗೂ `ಯಕ್ಷಗಾನ ಕಾಯಕ್ರಮ’ವನ್ನು ಏರ್ಪಡಿಸಲಾಗಿತ್ತು. ಮಾನ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅರೆಬೈಲ್ ಅವರು ಕಾಯಕ್ರಮವನ್ನು ಉದ್ಘಾಟಿಸಿ, ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ, ಇಂತಹ ಸುಂದರ ಸಾಂಸ್ಕೃತಿಕ ಕಲೆಯಾದ ಯಕ್ಷಗಾನದ ಕುರಿತು ಸಂಪೂರ್ಣ ತಿಳಿವಳಿಕೆ ಇರುವವರು ಇಂದು ಅಕಾಡೆಮಿಯ ಅಧ್ಯಕ್ಷರಾಗಿದ್ದು, ಕಲೆಗೆ ಸಂದ ಗೌರವವಾಗಿದೆ. ನಮ್ಮ ನಡುವಿಲ್ಲದ ಅನೇಕ ಹಿರಿಯ ಯಕ್ಷಗಾನ ಕಲಾವಿದರು ಇಂದಿನ ನವಪೀಳಿಗೆಗೆ ಹಲವು ಸ್ವರೂಪದ ಆದರ್ಶವಾಗಿದ್ದಾರೆ. ವಿದೇಶಿ ಕಲೆಗಳ ಕುರಿತು ವ್ಯಾಮೋಹ ಅಧಿಕಗೊಳ್ಳುತ್ತಿರುವ ಸಂದರ್ಭದಲ್ಲಿಯು ಯಕ್ಷಗಾನ ಕಲೆಯ ಜೀವಂತಿಕೆಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಗಣನೀಯ ಕೊಡುಗೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಗೋಡೆಯವರಂತಹ ಕಲಾವಿದರ ಕುರಿತಾದ ಸಿಡಿ ಬಿಡುಗಡೆಯಾಗುತ್ತಿರುವುದು ಅತ್ಯುತ್ತಮ ಕಾರ್ಯ ಎಂದರು.

            ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಅಧ್ಯಕ್ಷತೆ ವಹಿಸಿ, ಉತ್ತರ ಕನ್ನಡ ಜಿಲ್ಲೆಯ ಕಲೆಗಳನ್ನು ಉಳಿಸಿ-ಬೆಳೆಸುವ ಮನಸ್ಸುಗಳನ್ನು ಹೊಂದಿದ ಪ್ರದೇಶವಾಗಿದ್ದು, ಇಲ್ಲಿಯ ಸಾಂಸ್ಕೃತಿಕ ಮನೋಭಾವದ ಕಲಾಭಿಮಾನಿಗಳ ಬೇಡಿಕೆಯಂತೆ ತಾಳಮದ್ದಲೆಗೂ ಅಕಾಡೆಮಿ ಸಾಧ್ಯವಿದ್ದಷ್ಟು ನೆರವು ನೀಡಲು ನಿರ್ಧರಿಸಿದೆ. ಕಲೆಗಾಗಿ ತಮ್ಮ ಜೀವ ಸವೆಸಿ, ಕಣ್ಮರೆಯಾದ ಅನೇಕಾನೇಕ ಕಲಾವಿದರನ್ನು ನಾವು ಎಂದಿಗೂ ಮರೆಯಬಾರದು. ಯಕ್ಷಗಾನದ ಒಳಿತಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಆರ್ಥಿಕ ಕೊರತೆಯಿಂದಾಗಿ ಎಲ್ಲವೂ ಸ್ಥಗಿತಗೊಳ್ಳುವಂತಾಗಿದೆ. ಸಾಂಸ್ಕೃತಿಕ ಕಾಳಜಿ ಇರುವ ರಾಜಕಾರಣಿಗಳು ಅಪರೂಪವಾಗಿದ್ದು, ಇಂತಹ ಅಕಾಡೆಮಿಗಳನ್ನು ಬಲಪಡಿಸಿದರೆ ಮಾತ್ರ ರಾಷ್ಟ್ರದ ಸಂಸ್ಕೃತಿ ಸಂರಕ್ಷಣೆ ಸಾಧ್ಯವೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದರಾದ ಗೋಡೆ ನಾರಾಯಣ ಹೆಗಡೆ ಅವರು ನಾಡಿನ ಪುರಾತನ ಕಲೆಗಳಲ್ಲೊಂದಾದ ಯಕ್ಷಗಾನವು ಇಂದು ಅತ್ಯಂತ ಜನಪ್ರಿಯ ಕಲೆಯಾಗಿದ್ದರೂ ಅದು ಎಲ್ಲಿ, ಯಾವಾಗ ಹುಟ್ಟಿತೆಂಬುದರ ಕುರಿತಾಗಿ ಮಾಹಿತಿ ದೊರಕುತ್ತಿಲ್ಲ. ಆರಾಧನಾ ಪೂರ್ವಕ ಸೌಂದರ್ಯವನ್ನು ಹೊಂದಿದ ಇಂತಹ ಕಲೆ ಕೇವಲ ಏಕವ್ಯಕ್ತಿಯ ಕಲೆಯಾಗಿರದೇ, ಸಾಮೂಹಿಕ ಕಲೆ ಎಂಬುದು ಅತ್ಯಂತ ಮಹತ್ವದ ಸಂಗತಿ. ಜನಜೀವನದ ಸುಖ, ಸೌಂದರ್ಯ ಹಾಗೂ ಸೊಬಗುಗಳು ಕೇವಲ ಊಟ-ತಿಂಡಿಗಳಲ್ಲಿ ಮಾತ್ರ ಇರದೇ, ವೈಚಾರಿಕತೆ, ಧರ್ಮ, ಶ್ರದ್ಧೆ ಸೇರಿದಂತೆ ಮನಸ್ಸಿನ ಭಾವನೆಗಳಲ್ಲೂ ಇದ್ದು, ಯಕ್ಷಗಾನ ಅದಕ್ಕೆ ಪೂರಕವಾಗಿ ನೆರವಾಗುತ್ತದೆ. ಇದರು ಭಾಗವತರ ಕಲೆ ಎಂದು ಕೆಲವರು ಪಡುವ ಅಭಿಪ್ರಾಯ ಸೂಕ್ತವಲ್ಲ. ಇದು ನಿಜವೆಂದರೆ ದಶಾವತಾರದ ಕಲೆ ಎಂದು ಗೋಡೆಯವರು ಪ್ರತಿಪಾದಿಸಿದರು. ಜಗತ್ತಿನ ಇನ್ನಾವುದೇ ರಂಗಭೂಮಿಯಲ್ಲಿಯೂ ಕಾಣದ ಅದ್ಭುತ ವೇಷಭೂಷಣಗಳನ್ನು ತೋರುವ ಇಂತಹ ಅಪರೂಪದ ಸಾಂಸ್ಕೃತಿಕ ಕಲೆ ಇಂದಿನ ಬದಲಾವಣೆ ಹಾಗೂ ಪರಿಷ್ಕಾರಗಳ ಭರಾಟೆಯಲ್ಲಿ ಮೂಲ ಪರಂಪರೆಗೆ ಧಕ್ಕೆಯಾಗದಂತೆ ರಂಗಕರ್ಮಿಗಳು ಹಾಗೂ ಕಲಾವಿದರು ಗಮನ ನೀಡಬೇಕೆಂದರು.

            ಖ್ಯಾತ ಇತಿಹಾಸ ಸಂಶೋಧಕ, ಮಂಗಳೂರಿನ ಸರೋಜಿನಿ ಮಧುಸೂದನ ಕುಶೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀಶ ಹೆಗಡೆ ಸೋಂದಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಯಕ್ಷರಂಗದ ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆಯವರ ಕುರಿತಾದ ಸಂಗತಿಗಳು ಅನೇಕರಿಗೆ ಗೊತ್ತಿಲ್ಲ. ರಂಗದಲ್ಲಿ ಸ್ವತಃ ತಮ್ಮ ಅಂತರಂಗದ ಭಾವನೆಗಳನ್ನು ಹೊಮ್ಮಿಸುವ ಅಪರೂಪದ ಕಲಾವಿದ ಗೋಡೆಯವರ ಕುರಿತಂತೆ ಅಕಾಡೆಮಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದು, ಅದು ಸಮುದ್ರದ ನೀರನ್ನು ಬಿಂದಿಗೆಯಲ್ಲಿ ಹಿಡಿದಿಟ್ಟುಕೊಂಡಂತೆ ಎನ್ನಬಹುದು. ಪ್ರಸ್ತುತ ಬಿಡುಗಡೆಗೊಂಡಿರುವ ಸಾಕ್ಷ್ಯಚಿತ್ರದಲ್ಲಿ ಗೋಡೆಯವರ ಸಾಧನೆ ಕುರಿತಂತೆ ವಿವಿಧ ಕ್ಷೇತ್ರದ ಪ್ರಮುಖರು ಮಾತನಾಡಿದ್ದು, ಗೋಡೆಯವರ ಕುರಿತಾದ ಸ್ಪಷ್ಟ ಪರಿಚಯ ಮಾಡಲಿದೆ ಎಂದರು. ಕಲಾಸಿದ್ಧಿ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಕೇಂದ್ರೀಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷರೂ, ಸಂಕಲ್ಪಾ ಸೇವಾ ಸಂಸ್ಥೆಯ ಅಧ್ಯಕ್ಷರೂ ಆದ ಪ್ರಮೋದ ಹೆಗಡೆ ಅವರು ಗೋಡೆಯವರಂತಹ ಅತ್ಯುತ್ತಮ ಕಲಾವಿದರಿಗೆ ಸಮಾಜ ಈವರೆಗೂ ನೀಡಬೇಕಾದಷ್ಟು ಪ್ರಮಾಣದ ನ್ಯಾಯ ನೀಡದಿರುವುದು ಬೇಸರದ ಸಂಗತಿ ಎಂದರು. ಯಾವುದೇ ಅನುಕರಣೆಯಿಲ್ಲದೇ, ಅನನ್ಯ-ಪರಿಪೂರ್ಣ ಕಲಾವಿದರಾಗಿ ಶುದ್ಧ ಪೌರಾಣಿಕ ಚೌಕಟ್ಟಿನೊಳಗೆ ಭಾವಪೂರ್ಣ ಅಭಿನಯವನ್ನು ಬಿಂಬಿಸುವ ಗೋಡೆಯವರು ಓರ್ವ ಪೂರ್ಣ ಕಲಾವಿದರೆನ್ನದೇ, ಪರಿಪೂರ್ಣ ಕಲಾವಿದ ಎಂಬುದೇ ಸೂಕ್ತ ನಾಮಾಂಕಿತವೆನಿಸಬಲ್ಲುದು ಎಂದರು. ಇಂತಹ ಉತ್ತಮ ಕಲಾವಿದರ ಕುರಿತಂತೆ ಇಂದಿನದು ಔಚಿತ್ಯಪೂರ್ಣ ಕಾರ್ಯಕ್ರಮವೆಂದರು.

            ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶಾರದಾಂಬ ದೇವಸ್ಥಾನದ ಅಧ್ಯಕ್ಷ ಶ್ರೀ ಡಿ.ಶಂಕರಭಟ್ಟ ಅವರು ಯಕ್ಷಗಾನದ ಶುದ್ಧ ಪರಂಪರೆಯ ಸಂರಕ್ಷಣೆಯ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿ ನಿರ್ದಿಷ್ಟ ರೂಪು-ರೇಷೆಗಳನ್ನು ನಿಗದಿಗೊಳಿಸಿ, ಪುಸ್ತಕವೊಂದನ್ನು ಪ್ರಕಟಿಸಬೇಕೆಂದು ಆಗ್ರಹಿಸಿದರು. ಸಾತ್ವಿಕತೆ ಹಾಗೂ ಮಡಿವಂತಿಕೆಗಳನ್ನು ಸ್ವಯಂ ಕಾಪಿಟ್ಟುಕೊಳ್ಳುವ ಶಕ್ತಿಯುಳ್ಳ ಯಕ್ಷಗಾನದಲ್ಲಿ ಇಂದು ಅನೇಕ ಭಾಗವತರಿಗೆ ಸಾಹಿತ್ಯದ ಕೊರತೆ ಇದೆ ಎಂದು ವಿಷಾದಿಸಿದರು. ಅತಿಥಿಗಳಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷತೆ ಶ್ರೀಮತಿ ಚಂದ್ರಕಲಾ ಭಟ್ಟ, ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ.ಭಟ್ಟ, ಅಗ್ಗಾಶಿಕುಂಬ್ರಿ ಮಾತನಾಡಿದರು. ಅನಂತ ಹೆಗಡೆ ದಂತಳಿಗೆ (ಪದ್ಯ), ಪ್ರಮೋದ ಕಬ್ಬಿನಗದ್ದೆ (ಮದ್ದಲೆ), ಭಾವನಾ ಹೆಗಡೆ (ಚಂಡೆ) ತಂಡದವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್ ಶ್ರೀ ಎಸ್.ಎಚ್.ಶಿವರುದ್ರಪ್ಪ ಸ್ವಾಗತಿಸಿದರು. ಶ್ರೀ ನಾಗರಾಜ ಹೆಗಡೆ ನಿರ್ವಹಿಸಿದರು. ಯಕ್ಷಗಾನ ಅಕಾಡೆಮಿಯ ಸದಸ್ಯೆ ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ವಂದಿಸಿದರು.

 

            ಚಿಣ್ಣರ ಕಲಾಬಳಗ ಜೋಯಿಡಾ ತಂಡದವರಿಂದ “ಸುದರ್ಶನ ವಿಜಯ” ಹಾಗೂ ಲಕ್ಷ್ಮಿನರಸಿಂಹ ಕಲಾಬಳಗ ತಂಡದವರಿಂದ “ಸುಧನ್ವಾರ್ಜುನ” ಎಂಬ ಯಕ್ಷಗಾನ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.

 

 

“ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ”

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಿತ್ರ ಸಂಗಮ (ರಿ), ಬೀಜಾಡಿ-ಗೋಪಾಡಿ ಇವರ ಸಹಯೋಗದೊಂದಿಗೆ ದಿನಾಂಕ:೨೦೨.೧೨.೨೦೨೦ರಂದು ಶ್ರೀ ವ್ಯಾಸರಾಜ ಮಠ, ವಡೇರ ಹೋಬಳಿ, ಕುಂದಾಪುರ, ಉಡುಪಿ ಜಿಲ್ಲೆಯಲ್ಲಿ “ಯಕ್ಷಗಾನದ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ದಾಖಲೀಕರಣ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

            ಈ ದಾಖಲೀಕರಣ ಕಾರ್ಯಕ್ರಮವನ್ನು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಶ್ರೀಧರ ಹಂದೆ ಅವರು ಉದ್ಘಾಟಿಸಿ, ದಾಖಲೀಕರಣ ಮಾತ್ರವಾಗದೇ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕು. ಯಕ್ಷಗಾನದ ಅನೇಕ ತಿಟ್ಟುಗಳು, ಶೈಲಿಗಳು ನಾಶ ಆಗುತ್ತಿವೆ. ೬೦ ವರ್ಷಗಳಿಂದ ಯಕ್ಷಗಾನದೊಂದಿಗೆ ಒಡನಾಟ ಇರಿಸಿಕೊಂಡಿರುವ ನನಗೆ ಇದು ಅತೀವ ನೋವು ನೀಡುತ್ತಿದೆ. ಜೀವನಾನುಭವ ನೀಡುವ ಯಕ್ಷಗಾನ ಬಯಲು ಶಿಕ್ಷಣ ರಂಗ ಎಂದು ನುಡಿದರು.

            ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಯಕ್ಷಗಾನದ ತಿಟ್ಟುಗಳಲ್ಲಿ ಪ್ರಭೇದಗಳಿದ್ದರೂ ಪ್ರಾದೇಶಿಕ ವೈಶಿಷ್ಟö್ಯಗಳಿವೆ. ಎಲ್ಲ ತಿಟ್ಟುಗಳ ಮೂಲವೂ ವೈವಿಧ್ಯತೆಯಲ್ಲಿ ಯಕ್ಷಗಾನವೇ ಮೂಲ ಆಕರ. ಜನರ ಮನದಲ್ಲಿ ಬೇರೂರಿರುವ ಪರಂಪರೆ (ತಿಟ್ಟು) ಉಳಿಸುವ ಪ್ರಯತ್ನಕ್ಕೆ ಅಕಾಡೆಮಿ ಮುಂದಾಗಿದ್ದು, ಶೈಲಿ, ಮಟ್ಟು ಭಿನ್ನ ಭಿನ್ನವಾಗಿದ್ದರೂ ಸಂಪ್ರದಾಯ ಒಂದೇ. ಸಂಪ್ರದಾಯದಿAದ ಬಂದುದೂ ಅನುಸರಣೀಯ ಎಂದು ನುಡಿದರು.

            ಮುಖ್ಯ ಅತಿಥಿಗಳಾಗಿ ಕುಂದಾಪುರ ಗಾಣಿಗ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಬಿ. ಕುಂಭಾಶಿ, ಬೀಜಾಡಿ-ಗೋಪಾಡಿಯ ಮಿತ್ರ ಸಂಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ, ಗಜಾನನ ಯಕ್ಷಗಾನ ವೇಷಭೂಷಣ ಕಲಾವಿದರಾದ ಶ್ರೀ ಬಿ.ಬಾಲಕೃಷ್ಣ ನಾಯಕ್ ಹಂದಾಡಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಪದ್ಮನಾಭ ಗಾಣಿಗ ಮೂಡುಕುದ್ರು ಮಾತನಾಡಿ, ಹಾರಾಡಿ ತಿಟ್ಟು ಬೆಳೆದು ಬಂದ ಬಗೆ ವಿವರಿಸಿದರು.

            “ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ಕಲಾವಿದರ ಪರಿಚಯ ಮತ್ತು ಸಾಧನೆ” ಎಂಬ ವಿಷಯ ಕುರಿತು ಶ್ರೀ ಬಿರ್ತಿ ಬಾಲಕೃಷ್ಣ ಗಾಣಿಗ ಅವರು ಮಾತನಾಡಿ, ಬಡಗು ಯಕ್ಷಗಾನ ಕ್ಷೇತ್ರದಲ್ಲಿ ಹಾರಾಡಿ ಮತ್ತು ಮಟಪಾಡಿ ತಿಟ್ಟು ಒಂದು ವಿಶಿಷ್ಟ ಪರಂಪರೆ. ರಾಷ್ಟçಪ್ರಶಸ್ತಿ ಪುರಸ್ಕೃತ ಹಾರಾಡಿ ರಾಮ ಗಾಣಿಗ ಹಾರಾಡಿ ತಿಟ್ಟಿನ ಮೇರು ಕಲಾವಿದರಾಗಿದ್ದು, ಮಟಪಾಡಿ ತಿಟ್ಟಿನ ವೀರಭದ್ರ ನಾಯಕ ಅವರ ಸಾಲಿಗೆ ಸೇರತಕ್ಕಂತವರು. ಹಾರಾಡಿ ತಿಟ್ಟಿಗೆ ಗಾಣಿಗ ಸಮಾಜ ಮತ್ತು ಮಟಪಾಡಿ ತಿಟ್ಟಿಗೆ ಚಪ್ಪೆಗಾರ ಕುಟುಂಬ ಮೂಲಕೊಂಡಿಯಾಗಿದ್ದರೂ, ತಿಟ್ಟಿನ ವಿಶಿಷ್ಟತೆ ಎಲ್ಲ ವರ್ಗಕ್ಕೂ ಪಸರಿಸಿದೆ. ಹಾರಾಡಿ ತಿಟ್ಟು ಗತ್ತು ಗಾಂಭೀರ್ಯತೆಗೆ ಹೆಸರಾದರೆ ಮಟಪಾಡಿ ಭಾವಾಭಿನಯ, ಆಂಗಿಕ ಚಲನೆಯಲ್ಲಿ ಖ್ಯಾತಿವೆತ್ತಿದೆ. ಹಾರಾಡಿ ಪುರಾಣ ಪ್ರಸಂಗಗಳಿಗೆ ಹೆಸರಾದರೆ ಮಟಪಾಡಿ ಪುರಾಣ ಸೇರಿದಂತೆ ಎಲ್ಲ ಪ್ರಸಂಗಗಳಿಗೂ ಒಗ್ಗಿಕೊಂಡಿದ್ದು, ಮಟಪಾಡಿ ವೀರಭದ್ರ ನಾಯಕ ಯಕ್ಷಗಾನದ ದಶವತಾರಿ ಎಂದೇ ಪ್ರಸಿದ್ಧರು ಎಂದು ವಿವರಿಸಿದರು.

            “ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟುಗಳ ಸಾಮ್ಯತೆ ಮತ್ತು ಭಿನ್ನತೆ” ಎಂಬ ವಿಷಯ ಕುರಿತು ಶ್ರೀ ಗುಂಡ್ಮಿ ಸದಾನಂದ ಐತಾಳ ಅವರು ಮಾತನಾಡಿ, ವಿಶಾಲ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಸೀಮಿತ ಪ್ರದೇಶವೊಂದರ ಯಕ್ಷಪ್ರಯೋಗ ಜನಮಾನಸದಿಂದ ಸ್ವೀಕೃತಿಯಾಗಿದ್ದರೆ ಅದು ಬಡಗಿನ ಹಾರಾಡಿ ಮತ್ತು ಮಟಪಾಡಿ ತಿಟ್ಟು ಚೌಕಿ ಸಂಪ್ರದಾಯ ಉಳಿಸಿಕೊಂಡು ಬಂದ ಪರಂಪರೆಯಿದು. ಹಾರಾಡಿಗೆ ಪುರಾಣ ಕಥಾನಕಗಳೇ ಅಸ್ತಿಯಾದರೆ ಮಟಪಾಡಿ ತಿಟ್ಟಿಗೆ ಪುರಾಣ ಆಧಾರಿತ ಕಥೆಗಳು ಕೂಢ ಸಹ್ಯವಾಗಿತ್ತು. ಎರಡು ಪರಂಪರೆಗಳು ಮೂರು ತಲೆಮಾರು ಕಂಡು ಮುಂದುವರಿದಿವೆ. ಪ್ರಸಂಗ ವಸ್ತು, ವೇಷಭೂಷಣ, ಅಭಿನಯ ಎರಡು ತಿಟ್ಟಿನಲ್ಲಿ ದೊಡ್ಡ ಮಟ್ಟದ ಭಿನ್ನತೆ ಇಲ್ಲದಿದ್ದರೂ ಹಾರಾಡಿ ತಿಟ್ಟಿನ ಆಳ್ತನ ತೀರಾ ಅಪರೂಪ. ಮಟಪಾಡಿಯ ಭಾವಾಭಿನಯ ವೈಶಿಷ್ಟö್ಯಪೂರ್ಣ ಎಂದು ತಿಳಿಸಿದರು.

            ಶ್ರೀ ಶ್ರೀಧರ ಹಂದೆ ಹಾಗೂ ಶ್ರೀ ಸುಜಯೀಂದ್ರ ಹಂದೆ ಅವರ ನೇತೃತ್ವದಲ್ಲಿ ಉಭಯ ತಿಟ್ಟುಗಳ ಪ್ರಾತ್ಯಕ್ಷಿಕೆ ನಡೆಯಿತು. ಶ್ರೀ ಹೇರಂಜಾಲು ಗೋಪಾಲ ಗಾಣಿಗ ಅವರ ನಿರ್ದೇಶನದಲ್ಲಿ ಹಾರಾಡಿ ತಿಟ್ಟು ಮಟಪಾಡಿ ತಿಟ್ಟುಗಳಲ್ಲಿ ವೀರ ವೃಷಸೇನ-ಕರ್ಣಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು.

 

            ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್ ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಸ್ವಾಗತಿಸಿ, ಅಕಾಡೆಮಿಯ ಸದಸ್ಯರಾದ  ಶ್ರೀ ಕೆ.ಎಂ.ಶೇಖರ್ ಅವರು ಪ್ರಸ್ತಾವಿಸಿ, ಶ್ರೀ ಶ್ರೀನಿವಾಸ ಸಾಸ್ತಾನ ಅವರು ವಂದಿಸಿ, ಪತ್ರಕರ್ತರಾದ ಶ್ರೀ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.

 

“ನೆನಪಿನ ಬುತ್ತಿ : ಸಂವಾದ ಕಾರ್ಯಕ್ರಮ”

                ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಾತಿನ ಮಂಟಪ ಸಂವಾದ ಕಾರ್ಯಕ್ರಮದ ಮಾದರಿಯಲ್ಲಿಯೇ ೨೦೨೧ರ ಜನವರಿ ಒಂದರಿAದ ೭೦ ದಾಟಿದ ನಿವೃತ್ತಿ ಬದುಕಿನಲ್ಲಿ ಇರುವ ಕಲಾವಿದರನ್ನು ಮಾತನಾಡಿಸಲು ಯೋಜಿಸಿದೆ. `ನೆನಪಿನ ಬುತ್ತಿ’ ಎಂಬ ಹೆಸರಿನಲ್ಲಿ ಪ್ರತಿ ದಿನ ಸಂಜೆ ೬.೩೦ಕ್ಕೆ ಈ ಸರಣಿ ಆರಂಭವಾಗಿದೆ. ಫೇಸ್ ಬುಕ್ ಲೈವ್‌ಗೆ ಬಂದು ಹೋದ ಕಲಾವಿದರಿಗೆ ಗೌರವ ಧನ ಕೊಡುವ ಕುರಿತು ಅಕಾಡೆಮಿ ಮುಂದಾಗಿದೆ. ಇದುವರೆಗೂ ೬ ಜನ ಕಲಾವಿದರು `ನೆನಪಿನ ಬುತ್ತಿ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇವರ ಇಂತಿದೆ.

 

೧.         ಶ್ರೀ ಗೋಡೆ ನಾರಾಯಣ ಹೆಗಡೆ

೨.         ಶ್ರೀ ಪೆರುವಡಿ ನಾರಾಯಣ ಭಟ್

೩.         ಶ್ರೀ ಪಾತಾಳ ವೆಂಕಟ್ರಮಣ ಭಟ್

೪.         ಶ್ರೀ ಐರೋಡಿ ಗೋವಿಂದಪ್ಪ

೫.         ಶ್ರೀ ಕೊಕ್ಕಡ ಈಶ್ವರ ಭಟ್

೬.         ಶ್ರೀ ಮಾರ್ಗೋಳಿ ಗೋವಿಂದ ಸೇರೆಗಾರ್

೭.         ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ

೮.         ಶ್ರೀ ಕೋಳ್ಯೂರು ರಾಮಚಂದ್ರ ರಾವ್

೯.         ಶ್ರೀ ವಿಷ್ಣು ಭಾಗವತ ಹಿರೇಮಕ್ಕಿ

೧೦.      ಶ್ರೀ ಸುಬ್ರಾಯ ಭಾಗವತ ಕಪ್ಪೆಕೆರೆ

೧೧.      ಶ್ರೀ ಕುಂಬ್ಳೆ ಸುಂದರ ರಾವ್

೧೨.      ಶ್ರೀ ಮುಖ್ಯಪ್ರಾಣ ಕಿನ್ನಿಗೋಳಿ

೧೩.      ಶ್ರೀ ಬೇಗಾರು ಪದ್ಮನಾಭ ಶೆಟ್ಟಿಗಾರ್

 

 

“ಯಕ್ಷ ಸಂಭ್ರಮ”

            ಕರ್ನಾಟಕ ಯಕ್ಷಗಾನ ಅಕಾಡೆಮಿಯು ಇಂಚರ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿ ಸಂಘ (ರಿ), ಕರ್ನಾಟಕ ಗ್ರಾಮೀಣ ಹವ್ಯಾಸಿ ಯಕ್ಷಗಾನ, ಮೂಡಲಪಾಯ, ಕಲಾವಿದರ ಒಕ್ಕೂಟ (ರಿ), ದಾವಣಗೆರೆ ಇವರುಗಳ ಸಹಯೋಗದೊಂದಿಗೆ ೨೦೨೧ರ ಜನವರಿ ೬ ಮತ್ತು ೭ರಂದು ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಅರಸೀಕೆರೆ, ಹರಪನಹಳ್ಳಿ ತಾಲೂಕು, ಬಳ್ಳಾರಿ ಜಿಲ್ಲೆಯಲ್ಲಿ “ಯಕ್ಷ ಸಂಭ್ರಮ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 

            ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ವೈ. ದೇವೇಂದ್ರಪ್ಪ ಅವರು ಉದ್ಘಾಟಿಸಿ, ಆಧುನಿಕ ತಂತ್ರಜ್ಞಾನ, ಮೊಬೈಲ್, ಟಿ.ವಿ., ಕಂಪ್ಯೂಟರ್, ಇಂಟರ್‌ನೆಟ್ ಭರಾಟೆಯಲ್ಲಿ ಹಲವು ಜಾನಪದ ಕಲೆಗಳು ಅವಸಾನದ ಹಾದಿ ಹಿಡಿದಿವೆ. ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನೇ ನಂಬಿ ಜೀವನದ ಬಂಡಿ ಸಾಗಿಸುವ ಕಲೆಗಾರರ ಬದುಕು ಈಚೆಗೆ ಮುಳುಗುತ್ತಿರುವ ದೋಣಿಯಾಗಿದೆ. ಸಂಕಷ್ಟದಲ್ಲಿರುವ ಕಲೆಗಾರರನ್ನು ಗುರುತಿಸಿ ಅಕಾಡೆಮಿ ಪ್ರೋತ್ಸಾಹಿಸಬೇಕು. ಇಂದಿನ ಯುವ ಪೀಳಿಗೆ ಕಲೆಯೊಂದಿಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದರೆ ಸಮ ಸಮಾಜದ ನಿರ್ಮಾಣ ಸಾಧ್ಯ. ಶಿಕ್ಷಣದೊಂದಿಗೆ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಗ್ರಾಮೀಣ ಪ್ರದೇಶದ ಕಲೆಗಾರರನ್ನು ಗುರುತಿಸಿ ಗೌರವ, ಪ್ರಶಸ್ತಿ ನೀಡಿ ಕಲೆಯನ್ನು ಉತ್ತೇಜಿಸಬೇಕು ಎಂದರು.

 

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ವಹಿಸಿ, ರಾಜ್ಯದ ಸಂಸದರಲ್ಲಿ ಬಳ್ಳಾರಿ ಸಂಸದ ಶ್ರೀ ವೈ.ದೇವೇಂದ್ರಪ್ಪ ಕಲಾವಿದರಾಗಿ ಸಂಸತ್ ಪ್ರವೇಶಿಸಿದ ಮೊದಲ ಸಂಸದರು ಎನ್ನುವುದು ಕಲಾವಿದರ ಹೆಮ್ಮೆಯಾಗಿದೆ. ಮೂಡಲಪಯ, ಪಡುವಲಪಾಯ ವಿಭಾಗಗಳಿಗೆ ರಾಜ್ಯ ಅಕಾಡೆಮಿ ಸಮಾನ ಅವಕಾಶವನ್ನು ಕಲ್ಪಿಸಿ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಯಿಂದ ಹೊರಗುಳಿದ ಕಲಾವಿದರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಅಕಾಡೆಮಿಯ ಹೆಮ್ಮೆಯಾಗಿದೆ. ಬಹುತೇಕ ಗ್ರಾಮೀಣ ಪ್ರದೇಶದ ಕಲಾವಿದರಿಗೆ ಅಕಾಡೆಮಿಯಿಂದ ದೊರೆಯುವ ಸವಲತ್ತುಗಳ ಮಾಹಿತಿ ಕೊರತೆ ಇದೆ. ಅಂತಹವರನ್ನು ಗುರುತಿಸಿ ಮಾಹಿತಿ ನೀಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು. ಕೋವಿಡ್ ಎದುರಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಅಕಾಡೆಮಿ ಶ್ರಮಿಸಿದೆ. ಸದ್ಯ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಕಲಾವಿದರ ಚಟುವಟಿಕೆ ನಿಧಾನ ಗತಿಯಲ್ಲಿ ಗರಿಗೆದರಿದೆ ಎಂದರು.

 

            ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಜೆ.ವಿ.ಪಿ. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಎ.ಬಿ.ರಾಮಚಂದ್ರಪ್ಪ ಅವರು ಇಂದು ಜನಪದ ಕಲೆ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಅಕ್ಷರವಂತರು ಜಾನಪದವನ್ನು ಪರಿಷ್ಕರಿಸಿ ಶಿಕ್ಷಣದಲ್ಲಿ ಅಳವಡಿಸಿ ಹೊಸ ಆಯಾಮ ಕಂಡುಕೊಳ್ಳಬೇಕು ಎಂದರು.

 

            ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರು “ಕರಾವಳಿ ಯಕ್ಷಗಾನ (ಪಡುವಲಪಾಯ)ದ ಸಾಮಾನ್ಯ ಸ್ವರೂಪ” ಎಂಬ ವಿಷಯ ಕುರಿತು ವಿಚಾರ ಮಂಡಿಸಿ, ಯಕ್ಷಗಾನ ಕಲೆಯನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಬೆಳಗಿದ ನಾಡು ನಮ್ಮದು. ಯಕ್ಷಗಾನ ದೈವೀ ಕಲೆಯಾಗಿದ್ದು, ಕೇವಲ ಪುರುಷರಿಗೆ ಸೀಮಿತವಾಗಿತ್ತು. ಈಚಿನ ದಿನಗಳಲ್ಲಿ ಸ್ತಿçÃಯರೂ ಈ ಕಲೆಯಲ್ಲಿ ತೊಡಗಿರುವುದು ಸಂತಸದ ವಿಷಯವಾಗಿದೆ. ಕನ್ನಡ ಭಾಷೆಯನ್ನು ವೈಭವೀಕರಣ ಮಾಡಿ ಜಗತ್ತಿನ ಉದ್ದಗಲಕ್ಕೂ ಸಾರುತ್ತಿರುವ ಮಹಾನ್ ಕಲೆ ಯಕ್ಷಗಾನ ಎಂದರು.

 

            ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾçರ್ ಆದ ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಜಾನಪದದ ವಿನೂತನ ಪ್ರಯೋಗ, ಜಾನಪದದ ಶ್ರೀಮಂತಿಕೆ ಮನೋವಿಕಾಸ ವೃದ್ಧಿಗೆ ಸಹಕಾರಿಯಾಗಿದೆ ಎಂದರು. ಅಕಾಡೆಮಿ ಸದಸ್ಯರುಗಳಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಮತ್ತು ಶ್ರೀ ಪಿ.ಮುನಿರೆಡ್ಡಿ ಅವರು, ಶ್ರೀ ಕೆ.ಎಂ.ಕೊಟ್ರಯ್ಯ, ಶ್ರೀ ಹಾದಿಮನೆ ನಾಗರಾಜ, ಶ್ರೀ ಕಬ್ಬಳ್ಳಿ ಬಸವರಾಜ,. ಡಾ. ಸುರೇಶ್, ಶ್ರೀ ರಾಜು, ಶ್ರೀ ಮಲ್ಲಪ್ಪ, ಶ್ರೀ ಅಜಯ ಕುಮಾರ ಚೂಟಿ, ಶ್ರೀ ಷಣ್ಮುಖಪ್ಪ, ಶ್ರೀ ಚಂದ್ರಪ್ಪ, ಶ್ರೀ ರಂಗಪ್ಪ, ಶ್ರೀ ಇಮಾಮ್ ಸಾಬ್, ಶ್ರೀ ಮರುಳಸಿದ್ದಪ್ಪ, ಶ್ರೀ ಗೋಪಾಲ, ಶ್ರೀ ಶಾಂತಪ್ಪ ಇವರುಗಳು ಭಾಗವಹಿಸಿದರು.

 

            ಶ್ರೀ ಹೇಮಾಂಬಿಕಾ ಯಕ್ಷಗಾನ ಕಲಾಸಂಘ, ಹೆಮ್ಮಿಗೆ, ತಲಕಾಡು ಇವರಿಂದ `ತಾಳ-ಮೇಳ: ಅಂಗದ-ಸAಧಾನ’ ಯಕ್ಷಗಾನ ಕಾರ್ಯಕ್ರಮ, ಜಗಳೂರಿನ ಶ್ರೀ ಬಿ.ಕೆ.ಅಜಯ ಮತ್ತು ತಂಡದವರಿAದ `ಮೂಡಲಪಾಯ ಯಕ್ಷಗಾನ: ಕಂಸಾಸುರನ ವಧೆ’ ಕಾರ್ಯಕ್ರಮವನ್ನು ಹಾಗೂ ಜಗಳೂರಿನ ಸಿದ್ದಮ್ಮನಹಳ್ಳಿ ಕಲಾವಿದರಿಂದ `ಮೂಡಲಪಾಯ ಯಕ್ಷಗಾನ; ಕರಿಭಂಟನ ಕಾಳಗ’ ಯಕ್ಷಗಾನ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

 

“ಕಾಳಿಂಗ ನಾವಡ ರಾಷ್ಟಿçÃಯ ವಿಚಾರ ಗೋಷ್ಠಿ [ವಿಚಾರ ಮಂಥನ-ದಾಖಲೀಕರಣ-ಸಮಗ್ರ ದರ್ಶನ]”

            ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಟ್ರಸ್ಟ್ ಮತ್ತು ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ೨೦೨೧ರ ಜನವರಿ ೯ ಮತ್ತು ೧೦ರಂದು ಡಾ. ವಿ.ಆರ್.ಗೌರೀಶಂಕರ್ ಸಭಾಂಗಣ, ಶೃಂಗೇರಿಯಲ್ಲಿ “ಕಾಳಿಂಗ ನಾವಡ ರಾಷ್ಟ್ರೀಯ ವಿಚಾರ ಗೋಷ್ಠಿ [ವಿಚಾರಮಂಥನ-ದಾಖಲೀಕರಣ-ಸಮಗ್ರ ದರ್ಶನ]” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

 

            ಜಿಲ್ಲಾ ಪಂಚಾಯಿತಿ ಮಾನ್ಯ ಸದಸ್ಯರಾದ ಶ್ರೀ ಬಿ.ಶಿವಶಂಕರ್ ಅವರು ಮದ್ದಳೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಿ|| ಕಾಳಿಂಗ ನಾವಡರ ಧರ್ಮಪತ್ನಿಯವರಾದ ಶ್ರೀಮತಿ ವಿಜಯಶ್ರೀ ಕೆ.ನಾವಡ ಅವರು ಗೌರವ ಉಪಸ್ಥಿತರಾಗಿ, ತಾಲೂಕು ಪಂಚಾಯಿತಿ ಮಾನ್ಯ ಅಧ್ಯಕ್ಷರಾದ ಶ್ರೀಮತಿ ಜಯಶೀಲ ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಯಕ್ಷಗಾನ ಪ್ರಪಂಚದಲ್ಲಿ ನಂದಳೀಕೆ ಲಕ್ಷ್ಮಿನಾರಾಯಣಪ್ಪ ಹಾಗೂ ಕಾಳಿಂಗ ನಾವಡ ಹೆಸರು ಶಾಶ್ವತವಾಗಿ ಉಳಿದಿವೆ. ಮುದ್ದಣ್ಣ ಎಂದು ಪ್ರಸಿದ್ಧಿಯಾದ ನಂದಳಿಕೆ ಲಕ್ಷ್ಮಿನಾರಾಯಣಪ್ಪ ಬರೆದ ಎರಡು ಯಕ್ಷಗಾನ ಪ್ರಸಂಗ `ರತ್ನಾವತಿ ಕಲ್ಯಾಣ ಹಾಗೂ ಕುಮಾರ ವಿಜಯ’ ಯಕ್ಷಗಾನ ಪ್ರಸಂಗ ಬರೆಯುವ ಕವಿಗಳ ಮೇಲೆ ಅತ್ಯಂತ ಪ್ರಭಾವ ಬೀರಿದೆ. ಭಾಗವತಿಕೆ ಮೂಲಕ ಜನಸಾಮಾನ್ಯರ ಹೃನ್ಮನಗಳಲ್ಲಿ ಶಾಶ್ವತ ಸ್ಥಾನ ಗಳಿಸಿದ ಕಾಳಿಂಗ ನಾವಡರ ಪ್ರಭಾವವನ್ನು ಈಗಿನ ಭಾಗವತರ ಹಾಡಿನ ಶೈಲಿಯಲ್ಲಿ ಕಾಣಬಹುದಾಗಿದೆ. ಯಕ್ಷಗಾನ ಪರಂಪರೆ ಉಳಿವಿಗಾಗಿ ಅಕಾಡೆಮಿಯು ವಿಚಾರ ಮಂಥನ, ದಾಖಲೀಕರಣ, ಸಮಗ್ರ ದರ್ಶನವನ್ನು ಅನಾವರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಯಕ್ಷಗಾನ ತರಬೇತಿ ನೀಡುವ ಜತೆಗೆ ಪರಂಪರೆಯ ಮೌಲ್ಯವನ್ನು ವಿಸ್ತಿರಸುವ ಕಾರ್ಯ ಮಾಡುತ್ತಿದೆ. ಸಂರಕ್ಷಣಾ, ಸಂವರ್ಧನಾ ಇತ್ಯಾದಿ ಹೆಸರಿನಲ್ಲಿ ಯಕ್ಷಗಾನದ ಮೌಲ್ಯವನ್ನು ಎತ್ತಿಹಿಡಿಯುವ ಕಾರ್ಯವನ್ನು ಅಕಾಡೆಮಿಯಿಂದ ಸಾಗುತ್ತಿದೆ.

 

            ವಿಚಾರ ಗೋಷ್ಠಿ-೧ರಲ್ಲಿ `ಕಾಳಿಂಗ ನಾವಡ-ನಾಮವೊಂದು ರೂಪ ಹಲವು’ ಎಂಬ ಶೀರ್ಷಿಕೆಯಡಿ `ತಾಳಮದ್ದಳೆ ಮತ್ತು ಕ್ಯಾಸೆಟ್ ಪ್ರಪಂಚದಲ್ಲಿ ಕಾಳಿಂಗ’ ಎಂಬ ವಿಷಯ ಕುರಿತು ಶ್ರೀ ಎಂ.ಕೆ.ರಮೇಶ್ ಆಚಾರ್ಯ ಅವರು ವಿಷಯ ಮಂಡಿಸಿ, ಕಾಳಿಂಗ ನಾವಡರು ಯಕ್ಷಗಾನ ಕ್ಷೇತ್ರದ ಯುಗಪುರುಷ, ಕ್ರಾಂತಿಪುರುಷ, ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ವ್ಯಕ್ತಿತ್ವ, ವಿನೂತನ ಪ್ರಯೋಗಗಳ ಮೂಲಕ ಹೊಸ ಅಯಾಮ ಮೂಡಿಸಿದರು. ವಿದ್ಯೆಗೆ ವಿನಯ ಭೂಷಣವೆಂಬಂತೆ ಸೌಜನ್ಯ, ಸಾತ್ವಿಕತೆ, ಪ್ರತಿಯೊಂದು ಮುಖ್ಯ. ಇದು ನಾವಡರಲ್ಲಿ ಇವತ್ತು, ನಾವಡರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ಅವರು ಸತ್ತರೂ ಇಂದು ನಮ್ಮ ನಡುವೆ ಬದುಕಿದ್ದಾರೆ. ಶತಮಾನಗಳು ಕಳೆದರೂ ಅವರ ಹೆಸರು ಅಳಿಯುವುದಿಲ್ಲ ಎಂದರು.

 

            ಇದೇ ಶೀರ್ಷಿಕೆಯಡಿ `ಪ್ರಭಾವಿ ವ್ಯಕ್ತಿತ್ವದ ಕಾಳಿಂಗ’ ಎಂಬ ವಿಷಯ ಕುರಿತು ಶ್ರೀ ರಾಘವೇಂದ್ರ ಮಯ್ಯ ಅವರು ವಿಷಯ ಮಂಡಿಸಿ, ಯಕ್ಷಗಾನ ಕ್ಷೇತ್ರದಲ್ಲಿಯೇ ಕ್ರಾಂತಿಯನ್ನುಂಟು ಮಾಡಿದ ಭಾಗವತ, ರಂಗನಿರ್ದೇಶಕರ ದಿ|| ಕಾಳಿಂಗ ನಾವಡ ಕಲಾವಿದರಿಗೆಲ್ಲ ಯುಕ್ತಿಯಾಗಿ, ಶಕ್ತಿಯಾಗಿ ಯಕ್ಷರಂಗದಲ್ಲಿ ಎಂದೆಂದಿಗೂ ಶಾಶ್ವತವಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಯಕ್ಷ ರಂಗಕ್ಕೆ ಬಂದು ಅತ್ಯಲ್ಪ ಅವಧಿಯಲ್ಲಿಯೇ ಉತ್ತಮ ಸಾಧನೆಗೈದು ಪದ್ಯ, ಭಾಗವತಿಕೆ, ರಂಗನಿರ್ದೇಶನ, ಸೇರಿದಂತೆ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ವಿಶಿಷ್ಟ ಶಿಸ್ತು ಪಾಲನೆ, ರಂಗತಂತ್ರ, ರಂಗದ ವ್ಯವಸ್ಥೆ, ಹೊಸ ಪ್ರಯೋಗಗಳು, ರಂಗ ನಿಯಂತ್ರಣ, ಕಲಾವಿದರ ಬಗ್ಗೆ ತೋರಿಸುವ ಆಸಕ್ತಿ, ಕಾರ್ಯಕ್ರಮದ ವ್ಯವಸ್ಥೆ ಇವುಗಳ ಮೂಲಕ ಯಕ್ಷಗಾನ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದವರು ಕಾಳಿಂಗ ನಾವಡ. ಒಂದು ಆಟದ ಯಶಸ್ಸು, ರಂಗನ ಸ್ಥಳದ ನಿರ್ಮಾಣ ಭಾಗವತನ ಕೈಯಲ್ಲಿತ್ತು. ಇದು ನಾವಡರಲ್ಲಿ ಇತ್ತು ಎಂದು ಸ್ಮರಿಸಿದರು. ನಾನು ಯಕ್ಷಗಾನ ಕ್ಷೇತ್ರಕ್ಕೆ ಬರಲು ಕಾಳಿಂಗ ನಾವಡರೇ ಸ್ಫೂರ್ತಿ. ನಾವಡರ ಪದ್ಯ, ರಂಗ ನಿರ್ದೇಶನ ಸೇರಿದಂತೆ ಯಕ್ಷರಂಗದಲ್ಲಿನ ಅವರ ವ್ಯಕ್ತಿತ್ವ ನಮಗೆ ಸ್ಫೂರ್ತಿಯಾಗಿತ್ತು. ನಾವಡರು ಪ್ರತ್ಯಕ್ಷವಾಗಿ ನಮ್ಮ ನಡುವೆ ಇಂದು ಇಲ್ಲದಿದ್ದರೂ ಯಕ್ಷಗಾನ ಕ್ಷೇತ್ರದಲ್ಲಿ ಯುಕ್ತಿ, ಶಕ್ತಿಯಾಗಿ ಸದಾ ನಮ್ಮೊಂದಿಗೆ ಇದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ನಾವು ಅಭೂತಪೂರ್ವ ಆಸ್ತಿ ಪಡೆದಿದ್ದೇವೆ ಎಂದರು.

 

            ದಿನಾಂಕ:೧೦.೦೧.೨೦೨೧ರAದು ನಡೆದ ಸಮಾರೋಪ ಸಮಾರಂಭದಲ್ಲಿ `ನಲ್ಲೂರು ಮರಿಯಪ್ಪ ಆಚಾರ್ ಪರಂಪರೆಯ ದಾಖಲೀಕರಣ ಸಿ.ಡಿ.’ಯನ್ನು ಮಾನ್ಯ ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಡುಗಡೆಗೊಳಿಸಿ, ಯಕ್ಷಗಾನ ಕಲೆ ಶ್ರೇಷ್ಠ ಕಲೆಯಾಗಿದ್ದು, ತನ್ನದೇ ಆದ ಪ್ರಾಚೀನತೆ, ಪರಂಪರೆಯನ್ನು ಹೊಂದಿದೆ. ಇಂತಹ ಶ್ರೇಷ್ಠ ಕಲೆ, ಪರಂಪರೆಯನ್ನು ಉಳಿಸಿ ಬೆಳೆಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿಲ್ಲಿ ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಉಚಿತ ಯಕ್ಷಗಾನ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಯಕ್ಷಗಾನ ಉಳಿಸಿ ಬೆಳೆಸಲು ಸರ್ಕಾರದಿಂದ ಯೋಜನೆ ರೂಪಿಸಲಾಗುವುದು. ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿದ ಕಲಾವಿದರಿಗೆ, ಕಲೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ಉದ್ದೇಶವಾಗಿದೆ. ಮುಜರಾಯಿ ದೇವಸ್ಥಾನಗಳಲ್ಲಿ ಯಕ್ಷಗಾನ ನಡೆಸಲು ಸೂಚಿಸಲಾಗಿತ್ತು. ಈ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕೊರೋನಾದಿಂದಾಗಿ ಈ ಯೋಜನೆ ಕಾರ್ಯಗತವಾಗಲಿಲ್ಲ. ಕಾಳಿಂಗ ನಾವಡ ಯಕ್ಷ ರಂಗ ಕಂಡ ಶ್ರೇಷ್ಠ, ಮೇರು ಭಾಗವತ. ಯಕ್ಷಗಾನ ಕ್ಷೇತ್ರದಲ್ಲಿ ಶಿವರಾಮ ಕಾರಂತರು ಹೇಗೆ ಹೆಸರು ಗಳಿಸಿದ್ದಾರೆಯೋ ಹಾಗೆಯೇ ಕಾಳಿಂಗ ನಾವಡರು ಜನಪ್ರಿಯತೆಯನ್ನು ಗಳಿಸಿದ್ದಾರೆ. ಕಾಳಿಂಗ ನಾವಡರ ಪರಂಪರೆ ಆರಂಭದೊಂದಿಗೆ ನಾವಡರು ಜನಪ್ರಿಯತೆ ಗಳಿಸುವುದರ ಜೊತೆಗೆ ಯಕ್ಷಗಾನಕ್ಕೂ ಜನಪ್ರಿಯತೆ ತಂದುಕೊಟ್ಟರು. ಯಕ್ಷಗಾನಕ್ಕೆ ಹೊಸ ಮೆರುಗು ಬರುವುದರ ಜೊತೆಗೆ ಹೊಸ ಪ್ರೇಕ್ಷಕ ವರ್ಗ ಹಾಗೂ ಹೊಸ ಶೈಲಿ ಹುಟ್ಟಿಕೊಂಡಿತು. ನಾವಡರು ಯಕ್ಷಗಾನ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಕೊಡುಗೆಯನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಪಾರಂಪಾರಿಕ ಕಟ್ಟುಪಾಡು, ಮೂಲ ಚೌಕಟ್ಟಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಯಕ್ಷಗಾನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದರು. ಅದ್ಭುತ ಶಕ್ತಿಯಾಗಿ, ವ್ಯಕ್ತಿಯಾಗಿ ಯಕ್ಷರಂಗದಲ್ಲಿ ಉತ್ತುಂಗದ ಸ್ಥಾನಕ್ಕೇರಿದ್ದರು. ನಾವಡರು ಮರೆಯಾಗಿ ದಶಕಗಳು ಕಳೆದರೂ ಅವರ ಅಭಿಮಾನಿಗಳು ಅವರನ್ನು ಮತ್ತೆ ಮತ್ತೆ ನೆನಪಿಸುವ ಮೂಲಕ ಅಮರರನಾಗಿದ್ದಾರೆ ಎಂದು ನುಡಿದರು. ಕಾಳಿಂಗ ನಾವಡರ ಯಕ್ಷಗಾನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಆರ್ಥಿಕ ನೆರವು ನೀಡಬಹುದು. ಆದರೆ ಅನುಷ್ಠಾನಕ್ಕೆ ತರುವುದು ನಾವಡರ ಅಭಿಮಾನಿಗಳ ಕೆಲಸವಾಗಿದೆ. ನಾವಡರ ಅಭಿಮಾನಿಗಳ ಕೆಲಸವಾಗಿದೆ. ಈ ನಿಟ್ಟನಲ್ಲಿ ನಾವಡರ ಅಭಿಮಾನಿಗಳು ನಾವಡರ ಹೆಸರನ್ನು ಶಾಶ್ವತವಾಗಿ ಉಳಿಸಿ ಬೆಳೆಸಬೇಕು ಎಂದರು.

 

            ಕಾರ್ಯಕ್ರಮದ ಸಂಚಾಲಕರು ಹಾಗೂ ಅಕಾಡೆಮಿ ಸದಸ್ಯರಾಗಿರುವ ಶ್ರೀ ರಮೇಶ್ ಬೇಗಾರ್ ಅವರು ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕರು ಎಂದೇ ಕರೆಸಿಕೊಳ್ಳುವ ಕಾಳಿಂಗ ನಾವಡ ಅವರ ಬದುಕು ಹಾಗೂ ಸಾಧನೆ ಸ್ಮರಿಸುವ ಜತೆಗೆ ಯಕ್ಷಗಾನದ ಪಾರಂಪರಿಕ ಮೌಲ್ಯಗಳ ದಾಖಲೀಕರಣ ಮಾಡುವುದು ವಿಚಾರಗೋಷ್ಠಿಯ ಉದ್ದೇಶ. ಆಧುನಿಕತೆ ಭರಾಟೆಯಲ್ಲಿ ನಶಿಸುತ್ತಿರುವ ಯಕ್ಷಗಾನದ ಮೌಲ್ಯಗಳ ಕುರಿತು ಯುವ ಪೀಳಿಗೆ ಅರಿಯಬೇಕು. ಆಗ ಮಾತ್ರ ಸಾಂಸ್ಕೃತಿಕ ನೆಲೆಗಟ್ಟಿನ ಮೂಲ ಮೌಲ್ಯಗಳ ಅಸ್ತಿತ್ವ ಉಳಿಯಲು ಸಾಧ್ಯ ಎಂದರು.

 

            ಕಾಳಿAಗ ನಾವಡರ ವ್ಯಕ್ತಿತ್ವ ಹಾಗೂ ಕಾರ್ಯಕ್ಷೇತ್ರದ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಶ್ರೀ ಐರೋಡಿ ರಾಜಶೇಖರ್ ಹೆಬ್ಬಾರ್, ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ, ಶ್ರೀ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ, ಶ್ರೀ ಕಿಶನ್ ಹೆಗಡೆ ಅವರು ಮಾತನಾಡಿದರು. ಯಶಸ್ವಿ ಕಲಾವೃಂದ ಕೊಮೆತೆಕ್ಕಟ್ಟೆ ಅವರಿಂದ ಹೂವಿನ ಕೋಲು ಪ್ರಾತ್ಯಕ್ಷಿಕೆ, ಕಾಳಿಂಗ ನಾವಡರ ಪುರಾಣ ನಿರ್ಮಾಣ ವಿಷಯದ ಕುರಿತು ಪ್ರೊ. ಎಸ್.ವಿ.ಉದಯಕುಮಾರ್ ಶೆಟ್ಟಿ ಉಪನ್ಯಾಸ ನೀಡಿದರು. ಶ್ರೀ ಬಾಡ ಉಮೇಶ್ ಭಟ್, ಶ್ರೀ ಕಿಗ್ಗಾ ಹಿರಿಯಣ್ಣ ಆಚಾರ್, ಶ್ರೀ ಬಾಳ್ಕುದ್ರು ಶಂಕರ್ ಅವರಿಂದ ಭಾಗವತಿಕೆ ಪ್ರಾತ್ಯಕ್ಷಿಕೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾಧರ ಜಲವಳ್ಳಿ ಮತ್ತು ತಂಡ ಪ್ರಸ್ತುತ ಪಡಿಸಿದ ಚಂದ್ರಹಾಸ ಚರಿತ್ರೆ ಜನಮೆಚ್ಚುಗೆಗೆ ಪಾತ್ರವಾಯಿತು.

 

“ರಂಗಸಿರಿ ಸಾಂಸ್ಕೃತಿಕ ವೇದಿಕೆ : ಉಚಿತ ಯಕ್ಷಗಾನ ಎರಡು ತಿಂಗಳ ತರಬೇತಿ ಶಿಬಿರ ಉದ್ಘಾಟನೆ”

ಯಕ್ಷಗಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಕಾಡೆಮಿಕ್ ಶಿಸ್ತಿನ ಕಾರ್ಯಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಾಚರಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ರಂಗಸಿರಿಯಂತಹ ಸಕ್ರಿಯ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಹೇಳಿದರು. ಅವರು ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ರಂಗಸಿರಿ ನಡೆಸುವ ಉಚಿತ ಯಕ್ಷಗಾನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಅಕಾಡೆಮಿಯ ಇನ್ನೋರ್ವ ಸದಸ್ಯ ಡಾ. ದಾಮೋದರ ಶೆಟ್ಟಿ ಯವರು ಮಾತಾಡಿ, ಯಕ್ಷಗಾನವು ಒಬ್ಬನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧತೆಯನ್ನು ಮೂಡಿಸುತ್ತದೆ. ಹೊಸ ತಲೆಮಾರು ಯಕ್ಷಗಾನ ಕಲಿಕೆಯತ್ತ ಒಲವು ತೋರುತ್ತಿರುವುದು ಸಂತಸದ ವಿಚಾರ ಎಂದರು. ಉದ್ಘಾಟನೆ ವೈಶಿಷ್ಟ್ಯ: ವೇದಿಕೆಯಲ್ಲಿನ ಗಣ್ಯರು ದೀಪೋಜ್ವಲನೆ ಮಾಡುತ್ತಿದ್ದಂತೇ, ವೇದಿಕೆಯಲ್ಲಿ ಯಕ್ಷಗಾನ ಸ್ತುತಿ "ಮುದದಿಂದ ನಿನ್ನ ಕೊಂಡಾಡುವೆ..." ಉದಯೋನ್ಮುಖ ಭಾಗವತೆ ಕು|| ವಿದ್ಯಾ ಕುಂಟಿಕಾನಮಠ ಅವರ ಸುಶ್ರಾವ್ಯ ಕಂಠದಿಂದ ಹೊಮ್ಮಿತು. ಅದಕ್ಕೆ ಇಂಬು ನೀಡುವಂತೆ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಚೆಂಡೆಯ, ಕೃಷ್ಣಮೂರ್ತಿ ಎಡನಾಡು ಮದ್ದಳೆಯ ಹಾಗೂ ಉಪಾಸನಾ ಪಂಜರಿಕೆ ಚಕ್ರತಾಳದ ಉತ್ತಮ ಹಿಮ್ಮೇಳ ಸಾಥಿ ನೀಡಿದರು. ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಉಪಸ್ಥಿತರಿದ್ದರು. ಕು|| ಸುಸ್ಮಿತ ಪ್ರಾರ್ಥನೆ ಹಾಡಿದರು. ಕು|| ಅಭಿಜ್ಞ ಭಟ್ ಸ್ವಾಗತಿಸಿ, ಕು|| ಸುಜಾತಾ ಮಾಣಿಮೂಲೆ ಧನ್ಯವಾದ ಸಮರ್ಪಿಸಿದರು. ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಶ್ರೀಶ ಕುಮಾರ ಪಿ ನಿರೂಪಿಸಿದರು. ಶಿಬಿರಾರ್ಥಿಗಳು ತುಂಬು ಉತ್ಸಾಹದಲ್ಲಿ ಯಕ್ಷಗಾನ ಕಲಿಕೆಯನ್ನು ಆರಂಭಿಸಿದರು.

 

ಯಕ್ಷಗಾನ ತರಬೇತಿಗಳು

2020-21ನೇ ಸಾಲಿನಲ್ಲಿ ಎರಡು ತಿಂಗಳ ಯಕ್ಷಗಾನ ತರಬೇತಿಗೆ ಅವಕಾಶ ನೀಡಿರುವ ಜಿಲ್ಲಾವಾರು ಸಂಸ್ಥೆಗಳು

 

ಕ್ರ. ಸಂ.

ಸಂಸ್ಥೆಯ ಹೆಸರು & ವಿಳಾಸ

ಕ್ರ. ಸಂ.

ಸಂಸ್ಥೆಯ ಹೆಸರು & ವಿಳಾಸ

ಉಡುಪಿ

1.

ಶ್ರೀ ದಿನಕರ ಮರಕಾಲ, ಮಾತುಂಗ ನಿಲಯ, ನಡೂರು ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು & ಜಿಲ್ಲೆ-೫೭೬೨೨೩, ದೂ:೯೪೮೩೨೯೪೦೭೬

2.

ಅಧ್ಯಕ್ಷರು, ಶ್ರೀ ಬನ್ನಿ ಮಹಾಕಾಳಿ ಯಕ್ಷಗಾನ ಕಲಾಸಂಘ, ಸಿಂಹಾಸನಗುಡ್ಡೆ, ಬಾರಕೂರು-೫೭೬೨೧೦, ಬ್ರಹ್ಮಾವರ ತಾಲೂಕು,

ಉಡುಪಿ ಜಿಲ್ಲೆ, ದೂ: ೯೪೮೧೪೨೯೦೫೨

3.

ಶ್ರೀ ಎನ್.ಜಿ.ಹೆಗಡೆ, ಕೇರಾಫ್ ಮಾಧವ ಕಾರಂತ್, ಪ್ರಶಾಂತಿ, ಪುರಾಣಿಕರ ಮಠ, ಚಿತ್ರಪಾಡಿ, ಸಾಲಿಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ-೫೭೬೨೨೧, ದೂ: ೯೪೪೮೭೦೦೦೨೪

4.

ಅಧ್ಯಕ್ಷರು, ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್, ತೆಕ್ಕಟ್ಟೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-೫೭೬೨೩೧, ದೂ: ೭೮೯೨೬೩೮೯೨೩

5.

ಅಧ್ಯಕ್ಷರು, ಮಿತ್ರ ಕಲಾ ಸಂಘಮ (ರಿ), ಮಾವಿನಕಟ್ಟೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ,

ದೂ:೯೪೮೧೨೨೬೬೧೫ / ೮೮೬೧೨೯೭೭೪೫

6.

ಅಧ್ಯಕ್ಷರು, ಶ್ರೀ ವೀರಭದ್ರ ಯಕ್ಷಗಾನ ಕಲಾ ಸಂಘ, ಸಾಲಿಕೇರಿ, ಬ್ರಹ್ಮಾವರ-೫೭೬೨೧೩, ಉಡುಪಿ ಜಿಲ್ಲೆ, ದೂ:೯೯೬೪೦೭೦೧೧೯

7.

ಶ್ರೀ ಪ್ರತೀಶ್ ಕುಮಾರ್, #೩-೪೧೯, ಇಂದಿರಾ ನಗರ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು-೫೭೬೨೧೩, ಉಡುಪಿ ಜಿಲ್ಲೆ, ದೂ:೯೮೮೦೨೩೬೨೬೮

8.

ಅಧ್ಯಕ್ಷರು, ಪ್ರೇರಣಾ ಯುವ ವೇದಿಕೆ (ರಿ), ನೈಕಂಬ್ಳಿ, ಚಿತ್ತೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ

 

ಶ್ರೀ ನಾಗರಾಜ, ಶ್ರೀ ಆದಿಶಕ್ತಿ ನಿಲಯ, ಕಟ್ ಬೇಲ್ತೂರು ಅಂಚೆ, ಕುಂದಾಪುರ ತಾಲೂಕು-೫೭೬೨೩೦, ಉಡುಪಿ ಜಿಲ್ಲೆ., ದೂ:೯೮೪೫೧೫೦೭೮೫

 

ಶ್ರೀ ಶ್ರೀಧರ ಕಾಂಚನ್, ಶುಭಮಸ್ತು, ಕೋಣಿ ಅಗ್ನಿಶಾಮಕ ದಳದ ಹತ್ತಿರ, ಹಂಗಳೂರು ಗ್ರಾಮ, ಕೋಣಿ ಪೋಸ್ಟ್, ಬೀಜಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ದೂ: ೬೩೬೩೮೭೦೬೩೯

 

ಶ್ರೀ ರಕ್ಷಿತ್ ರಾವ್, ಶ್ರೀ ನಾಗರಾಜ, ಗುಜ್ಜಾಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ

 

ಶ್ರೀ ಶ್ರೀಧರ ಗಾಣಿಗ, ಹಾಡಿಗೆದ್ದೆ (ವಾಸುಕಿ ನಿಲಯ), ಉಪ್ಪುಂದ ಪೋಸ್ಟ್ & ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ, ದೂ: ೯೯೪೫೭೩೬೮೩೦ / ೭೪೮೩೦೪೫೮೨೯

 

ಶ್ರೀ ಗಣೇಶ, ತೊಂಡೆಮಕ್ಕಿ, ಬೈಂದೂರು, ಮಯ್ಯಾಡಿ ಅಂಚೆ, ಉಡುಪಿ ತಾಲೂಕು & ಜಿಲ್ಲೆ, ದೂ: ೯೪೪೮೭೭೦೭೯೪

 

ಶ್ರೀಮತಿ ಸುಲೇಖಾ, ತಂದೆ: ದಿ|| ವಿಠಲ ಮರಕಾಲ, ಕಾಡೂರು, ಹೆಗ್ಗಡು, ಕಾಡೂರು ಪೋಸ್ಟ್, ಉಡುಪಿ ಜಿಲ್ಲೆ-೫೭೬೨೩೪, ದೂ:೯೦೦೮೧೫೮೦೭೬ / ೯೮೪೪೮೨೮೧೪೯

ಉತ್ತರ ಕನ್ನಡ

8.

ಅಧ್ಯಕ್ಷರು, ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ (ರಿ), ರಂಜನಾಳ್ ಕಾಂಪ್ಲೆಕ್ಸ್, ಅಂಚೆ ಕಚೇರಿ ಹತ್ತಿರ, ಮಾರುತಿ ಗಲ್ಲಿ, ಹಳಿಯಾಳ-೫೮೧೩೨೯, ಉತ್ತರ ಕನ್ನಡ ಜಿಲ್ಲೆ, ದೂ: ೯೯೪೫೬೯೪೬೪೨/೯೪೮೦೨೬೮೧೩೧

9.

ಅಧ್ಯಕ್ಷರು, ಶ್ರೀ ವೀರಮಾರುತಿ ಯಕ್ಷ ಕಲಾ ಬಳಗ (ರಿ), ಗುಂಡಿಬೈಲ್, ಚಿಕ್ಕನಕೋಡಿ, ಹೊನ್ನಾವರ ತಾಲೂಕು, ಉತ್ತರ ಕನ್ನಡ-೫೮೧೩೬೧, ದೂ: ೯೪೮೩೪೫೮೮೧೫

10.

ಅಧ್ಯಕ್ಷರು, ಯಕ್ಷ ಪಲ್ಲವಿ ಸಂಸ್ಥೆ (ರಿ), ಮಾಳ್ಕೋಡ್, ಕೆ. ಇಡಗುಂಜಿ ಅಂಚೆ, ಹೊನ್ನಾವರ ತಾಲೂಕು, ಉತ್ತರ ಕನ್ನಡ-೫೮೧೪೨೩, ದೂ: ೮೮೮೪೫೦೩೪೯೪

11.

ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಶ್ರೀ ರಮಾನಂದ ದತ್ತಿ ಮತ್ತು ಶಿಕ್ಷಣ ಸಂಸ್ಥೆ (ರಿ), ವಿದ್ಯಾಗಿರಿ, ಕ್ಷೇತ್ರಗಾಲ, ಕ್ಯಾದಗಿ ಅಂಚೆ, ಸಿದ್ಧಾಪುರ ತಾಲೂಕು, ಉತ್ತರ ಕನ್ನಡ -೫೮೧೩೨೨, ದೂ: ೯೪೮೧೪೬೨೨೫೫

12.

ಶ್ರೀ ನಂದನ್ ಕುಮಾರ್, ಯಕ್ಷ ತರಂಗಿಣಿ, ಸಂಚಾಲಕರು, ಹಾರ್ಸಿಕಟ್ಟೆ, ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ:೯೪೮೦೯೭೭೭೦೫

13.

ಶ್ರೀ ಶ್ರೀಧರ ಹೆಗಡೆ ನಕ್ಷೆ, ಸಂಚಾಲಕರು, ಶ್ರೀ ಲಕ್ಷಿö್ಮ ನರಸಿಂಹ ಕಲಾ ಬಳಗ ನಕ್ಕೆ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ:೯೪೮೧೨೨೧೩೦೯

14.

ಅಧ್ಯಕ್ಷರು, ಯಕ್ಷಕಲಾ ಸಂಗಮ (ರಿ), ಮಹಿಳಾ ಯಕ್ಷಗಾನ ಮಂಡಳಿ, ಶ್ರೀಪದ್ಮ, ೮ನೇ ಅಡ್ಡರಸ್ತೆ, ಪ್ರಗತಿ ನಗರ, ಶಿರಸಿ-೫೮೧೪೦೨, ಉತ್ತರ ಕನ್ನಡ ಜಿಲ್ಲೆ, ದೂ: ೯೪೪೮೧೧೬೩೮೨

 

ಅಧ್ಯಕ್ಷರು, ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನ (ರಿ), ಜಾನ್ಮನೆ ಅಂಚೆ, ಶಿರಸಿ ತಾಲೂಕು, ಉತ್ತರ ಕನ್ನಡ – ೫೮೧೩೧೫, ದೂ:೦೮೩೮೪-೨೬೩೫೭೯ / ೯೪೪೮೯೩೩೬೮೩

 

ಕಾರ್ಯದರ್ಶಿಗಳು, ಮಹಾಗಣಪತಿ ಯಕ್ಷಗಾನ ಕಲಾ ಬಳಗ ದೊಡ್ಮನೆ, ದೊಡ್ಮನೆ ಅಂಚೆ, ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ: ೯೪೮೨೦೯೦೪೫೭

 

ಅಧ್ಯಕ್ಷರು, ಮೈತ್ರಿ ಕಲಾ ಬಳಗ (ರಿ), ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಲ್ಲೆ-೫೮೧೩೩೭, ದೂ:೦೮೪೧೯-೨೩೮೦೮೬/೨೯೦೧೪೩

 

ಸಂಚಾಲಕರು, ಯಕ್ಷಗಾನ ಹಾಗೂ ಕಲಾ ಮಿತ್ರ ಮಂಡಳಿ ಟ್ರಸ್ಟ್ (ರಿ), ಆನಗೋಡ, ಯಲ್ಲಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ

 

ಶ್ರೀಮತಿ ನಯನಾ ಹೆಗಡೆ, ಸುದರ್ಶನ ಯಕ್ಷಕಲಾ ಮಹಿಳಾ ಬಳಗ, ಹೊಂಕಣಕೇರಿ, ಮಂಚಿಕೇರಿ, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ: ೯೪೮೩೪೮೫೭೯೮

 

ಅಧ್ಯಕ್ಷರು, ಸಪ್ತಸ್ವರ ಸೇವಾ ಸಂಸ್ಥೆ (ರಿ), ಯರಮುಖ, ಗುಂದ, ಜೋಯಿಡಾ ತಾಲೂಕು, ಉತ್ತರ ಕನ್ನಡ-೫೮೪೩೨೫, ದೂ:೯೪೮೩೦೬೯೪೩೨

 

ಶ್ರೀಮತಿ ಶಾರದಾ ದುರ್ಗಪ್ಪ ಗುಡಿಗಾರ, ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ (ರಿ), ಯಕ್ಷ ಕುಟೀರ, ಚೌಥನಿ, ಭಟ್ಕಳ-೫೮೧೩೨೦, ಉತ್ತರ ಕನ್ನಡ ಜಿಲ್ಲೆ.

 

ಅಧ್ಯಕ್ಷರು, ಮಾಚಿದೇವ ಯುವಕ ಸಂಘ (ರಿ), ಅಮದಳ್ಳಿ ಪೋಸ್ಟ್, ಕಾರವಾರ ತಾಲೂಕು, ಉತ್ತರ ಕನ್ನಡ ಜಿಲ್ಲೆ.

 

ಕಾರ್ಯದರ್ಶಿಗಳು, ಶಬರ (ರಿ), ಶ್ರಮಿಕ ಬಾಲರ ರಂಗ, ಸೋಂದಾ ಪೋಸ್ಟ್, ಶಿರಸಿ ತಾಲೂಕು, ಉತ್ತರ ಕನ್ನಡ-೫೮೧೩೩೬, ದೂ:೯೪೪೮೭೫೬೨೭೩ / ೯೧೪೧೬೩೩೭೯೬

 

ಶ್ರೀಮತಿ ಸೌಮ್ಯ ಭಟ್, ಮೈತ್ರೇಯಿ ನೃತ್ಯಕಲಾ ಟ್ರಸ್ಟ್ (ರಿ), ಗೋಕರ್ಣ ಶಾಖೆ, ಕುಮುಟಾ, ಉತ್ತರ ಕನ್ನಡ ಜಿಲ್ಲೆ.

 

ಶ್ರೀ ಅಶೋಕ ಟಿ. ನಾಯ್ಕ, ಅಧ್ಯಕ್ಷರು, ಕನ್ನಡ ಬಳಗ, ತೋಡೂರು ಅಂಚೆ, ಕಾರವಾರ ತಾಲೂಕು, ಉತ್ತರ ಕನ್ನಡ ಜಿಲ್ಲೆ-೫೮೧೩೨೪, ದೂ: ೯೬೮೬೨೪೧೯೫೬

 

ಅಧ್ಯಕ್ಷರು, ಶ್ರೀ ಕಾಂಚಿಕಾ ಚಿಣ್ಣರ ಯಕ್ಷಗಾನ ಮಂಡಳಿ, ಗುಡೇ ಅಂಗಡಿ, ಕುಮುಟಾ-೫೮೧೩೫೧, ಉತ್ತರ ಕನ್ನಡ ಜಿಲ್ಲೆ, ದೂ:೯೪೪೮೨೦೬೩೫೫

   

ದಕ್ಷಿಣ ಕನ್ನಡ

15.

ಶ್ರೀಮತಿ ಕಿಶೋರಿ ಕೆ., ಅಧ್ಯಕ್ಷರು, ಯಕ್ಷರಂಗ ಯಕ್ಷಗಾನ ತರಬೇತಿ ಕೇಂದ್ರ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ದೇರಳಕಟ್ಟೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ದೂ: ೯೯೦೧೧೪೨೪೦೧

16.

ಶ್ರೀ ರಾಕೇಶ್ ರೈ ಅಡ್ಕ, ಯಕ್ಷಗಾನ ಗುರುಗಳು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ

17.

ಶ್ರೀ ವಿಠಲ ಹೆಬ್ಬಾರ್, ಯಕ್ಷಗಾನ ಕಲಾ ಶಿಕ್ಷಕರು, ಮಾತೃಶ್ರೀ ನಿಲಯ, ಕೌಕ್ರಾಡಿ ಗ್ರಾಮ, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ದೂ: ೮೭೬೨೬೩೭೦೪೨

 

ಶ್ರೀ ಚಣಿಲ ಸುಬ್ರಹ್ಮಣ್ಯ ಭಟ್, ಸಂಚಾಲಕರು, ಯಕ್ಷ ಸಿಂಧೂರ ಪ್ರತಿಷ್ಠಾನ (ರಿ), ಕೊಡಪದವು ಅಂಚೆ-೫೮೧೪೨೧, ವಿಟ್ಲ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

 

ಶ್ರೀ ಶಾರದಾಕೃಷ್ಣ ಯಕ್ಷಗಾನ ಸಂಘ, ಶಾರದಾನಗರ, ಶ್ರೀ ಶಾರದಾಂಬ ಭಜನಾ ಮಂದಿರ, ಮೊಂಟೆಪದವು, ಬಂಟ್ವಾಲ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ದೂ: ೯೪೪೮೯೧೦೬೩೫

   

ಕಾಸರಗೋಡು

18.

ಶ್ರೀ ಕೆ.ವಿ.ರಮೇಶ್, ನಿರ್ದೇಶಕರು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೆಂಬೆಯಾಟ ಸಂಘ (ರಿ), ಯಕ್ಷಪುತ್ಥಳಿ ಬೊಂಬೆಮನೆ, ಪಿಲಿಕುಂಚೆ, ಕಾಸರಗೋಡು ದೂ: ೮೯೦೭೮೬೮೨೩೦ / ೯೪೪೬೭೭೨೨೭೭

19.

ರಂಗಸಿರಿ ಸಾಂಸ್ಕೃತಿಕ ವೇದಿಕೆ (ರಿ), ಕೇರಾಫ್ ಶ್ರೀಶ ಕುಮಾರ್, ಪಂಜಿತ್ತಡ್ಕ, ಬಡಿಯಡ್ಕ, ಪೆರಡಾಲ ಅಂಚೆ, ಕಾಸರಗೋಡು-೫೭೧೫೫೧, ದೂ: ೦೯೬೩೩೮೭೬೮೩೩

 

ಡಾ. ರತ್ನಾಕರ ಮಲ್ಲಮೂಲೆ, ಸಂಯೋಜನಾಧಿಕಾರಿ, ಯಕ್ಷಗಾನ ಸಂಶೋಧನಾ ಕೇಂದ್ರ,, ಸರ್ಕಾರಿ ಕಾಲೇಜು, ವಿದ್ಯಾನಗರ ಅಂಚೆ, ಕಾಸರಗೋಡು. ದೂ: ೯೪೪೬೦೯೫೫೪೩

 

ಶ್ರೀ ಚಂದ್ರಹಾಸ ಪಿ., ನಿರ್ದೇಶಕರು, ಬಾಲ ಕಲಾವಿದರ ಯಕ್ಷ ಕಲಾಕೇಂದ್ರ, ಪೊನ್ನೆತ್ತೋಡು ಕಯ್ಯಾರು, ಕಾಸರಗೋಡು, ಕೇರಳ

ಬೆಂಗಳೂರು

20.

ಶ್ರೀ ರವೀಶ ಹೆಗಡೆ, ನಾಟ್ಯ ಸಂಪದ (ರಿ), #೪೭, ೪ನೇ ಮುಖ್ಯರಸ್ತೆ, ರಾಮಾಂಜನೇಯ ನಗರ, ಚಿಕ್ಕಲಸಂದ್ರ, ಬೆಂಗಳೂರು-೬೧, ದೂ: ೯೪೮೧೫೮೦೫೦೫

21.

ಶ್ರೀ ಅರ್ಜುನ ಕೋರ್ಡೇಲ್, #೪೦೧, ರೇವತಿ, ಸಿಂಧು ನದಿ ರಸ್ತೆ, ಬೃಂದಾವನ ಶಾಲೆಯ ಸಮೀಪ, ಶ್ರೀನಗರ, ಬೆಂಗಳೂರು-೫೦, ದೂ: ೯೮೪೫೨೪೪೨೧೪

22.

ಶ್ರೀ ಹೆಚ್.ಜಗದೀಶ್, ಪ್ರಧಾನ ಕಾರ್ಯದರ್ಶಿಗಳು, ಸೋಮಕ್ಷತ್ರಿಯ ಗಾಣಿಗ ಸಮಾಜ (ರಿ), #೧೭, ಶ್ರೀ ವ್ಯಾಸರಾಜ ಭವನ, ೨ನೇ ಮುಖ್ಯರಸ್ತೆ, ೮ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮

23.

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), #೧೦೧/ಎ, ೧೧ನೇ ಕ್ರಾಸ್, ೮ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು-೦೩, ದೂ:೦೮೦-೨೩೩೪೮೧೯೩

ಶಿವಮೊಗ್ಗ

24.

ಶ್ರೀ ಪರಮೇಶ್ವರ ಹೆಗಡೆ, ಯಕ್ಷ ಸಂವರ್ಧನಾ (ರಿ), ಏಕದಂತ ನಿಲಯ, ೨ನೇ ಅಡ್ಡರಸ್ತೆ, ಸಹಕಾರಿ ನಗರ, ಜೆ.ಎಚ್.ಪಟೇಲ್ ಬಡಾವಣೆ, ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಸೋವಿನಕೊಪ್ಪ, ಶಿವಮೊಗ್ಗ-೫೭೭೨೦೨, ದೂ:೯೪೮೦೦೧೮೯೧೫

25

ಅಧ್ಯಕ್ಷರು, ಶರಾವತಿ ಸಾಂಸ್ಕೃತಿಕ ವೇದಿಕೆ (ರಿ), ಕರೂರು ಹೋಬಳಿ, ಬ್ಯಾಕೋಡು, ಬ್ಯಾಕೋಡು ಅಂಚೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ, ದೂ: ೯೪೮೦೨೫೭೨೮೧

ಧಾರವಾಡ

27.

ಶ್ರೀಮತಿ ಶಶಿಕಲಾ ಮೋಹನ ಜೋಶಿ, ಯಕ್ಷ ಗೆಳತಿಯರು, #೧೮, ಲಕ್ಷö್ಮಣಗಿರಿ, ಜಮಖಂಡಿ ಮಠ ವಿನ್ಯಾಸ, ೨ನೇ ಅಡ್ಡರಸ್ತೆ, ಸಾಧನಕೇರಿ, ಧಾರವಾಡ-೫೮೦೦೦೮, ದೂ: ೯೦೩೬೪೮೭೫೮೧

   

ಮೈಸೂರು

28.

ಕರಾವಳಿ ಯಕ್ಷಗಾನ ಕೇಂದ್ರ (ನೋಂ), #೮, ೧೪ನೇ ವಿಭಾಗ, ಭ್ರಮರಾಂಬ ಕಲ್ಯಾಣ ಮಂಟಪ ರಸ್ತೆ, ಮಧುವನ ಬಡಾವಣೆ, ಶ್ರೀರಾಂಪುರ, ೨ನೇ ಹಂತ, ವಿವೇಕಾನಂದ ನಗರ, ಮೈಸೂರು-೫೭೦೦೨೩

   

 

2020-21ನೇ ಸಾಲಿನಲ್ಲಿ ಎರಡು ತಿಂಗಳ ಮೂಡಲಪಾಯ ಯಕ್ಷಗಾನ ತರಬೇತಿಗೆ ಅವಕಾಶ ನೀಡಿರುವ ಸಂಸ್ಥೆಗಳು

1.

ಸಂಪ್ರದಾಯ ಟ್ರಸ್ಟ್ (ರಿ), #೮೧೪, ಉಪ್ಪಾರಕೇರಿ, ಹಡಗಲಿ ರಸ್ತೆ, ಹರಪ್ಪನಹಳ್ಳಿ ತಾಲೂಕು, ಬಳ್ಳಾರಿ ಜಿಲ್ಲೆ, ದೂ:೯೪೪೯೪೩೪೬೬೪/೮೨೯೬೮೯೦೨೪೪

2.

ಶ್ರೀ ಹೆಚ್.ಎನ್.ನಾರಾಯಣಸ್ವಾಮಿ, ಹಂಚಾಳ ಗ್ರಾಮ, ಸೂಲಿಕುಂಟೆ ಅಂಚೆ, ಬಂಗಾರಪೇಟೆ ತಾಲೂಕು, ಕೋಲಾರ ಜಿಲ್ಲೆ, ದೂ:೯೭೪೦೪೬೦೨೧೬

3.

ಶ್ರೀ ಚಿಕ್ಕ ಚೌಡಯ್ಯ, ಶ್ರೀ ಹೇಮಾಂಭಿಕ ಯಕ್ಷಗಾನ ಕಲಾ ಸಂಘ (ರಿ), ಹೊಸ ಹೆಮ್ಮಿಗೆ ಗ್ರಾಮ, ಟಿ.ನರಸೀಪುರ ತಾಲೂಕು, ಮೈಸೂರು ಜಿಲ್ಲೆ, ದೂ: ೮೬೯೪೦೨೯೬೬೧

4.

ಕಾರ್ಯದರ್ಶಿ, ಸಮಸ್ತರು ಸಾಂಸ್ಕೃತಿಕ ಸಂಘ (ರಿ), ಹರಡಗಲಿ ರಸ್ತೆ, ಹರಪನಹಳ್ಳಿ, ಬಳ್ಳಾರಿ ಜಿಲ್ಲೆ-೫೮೩೧೩೧, ದೂ:೯೪೪೯೪೩೪೬೬೪

5.

ಶ್ರೀ ಎ.ಆರ್.ಪುಟ್ಟಸ್ವಾಮಿ ಬಿನ್ ರಾಮದಾಸಯ್ಯ, ಅರಳಗುಪ್ಪೆ, ತಿಪಟೂರು ತಾಲೂಕು, ತುಮಕೂರು-೫೭೭೨೧೨, ದೂ:೯೯೭೨೧೪೧೯೫೬

6.

ಶ್ರೀಮತಿ ಬಿ.ಪಿ.ಕೋಮಲ್ ರಾಜ್, ಕೋಮಲ ಸಾಂಸ್ಕೃತಿಕ ಕಲಾನಿಕೇತನ (ರಿ), #೧೭೫೪, ೬ನೇ ಅಡ್ಡರಸ್ತೆ, ೬ನೇ ಮುಖ್ಯರಸ್ತೆ, ರಾಜಾಜಿನಗರ, ವೀಣಾ ಮೆಡಿಕಲ್ ಸೆಂಟರ್ ಹತ್ತಿರ, ಬೆಂಗಳೂರು-೫೬೦೦೧೦ ದೂ: ೯೭೩೯೪೩೫೨೨೭

7.

ಶ್ರೀ ಪಿ.ನಿಂಗಪ್ಪ, ತಂದೆ: ಕೋಟೆ ಕಾಟಪ್ಪ, ತೋರಣಗಟ್ಟೆ, ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ ದೂ: ೯೯೭೨೪೫೪೨೩೮

8.

ಶ್ರೀ ಎ.ಎನ್.ಚನ್ನಬಸವಯ್ಯ, ಕಲ್ಲೊಕು, ಅರಳಗುಪ್ಪೆ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ ದೂ: ೮೪೫೩೮೮೨೮೭೯

9.

ಡಾ. ಚಂದ್ರು ಕಾಳೇನಹಳ್ಳಿ, ಜನಪದ ರಂಗ ಮಾಧ್ಯಮ, ಗಾಯಿತ್ರಿ ಬಡಾವಣೆ, ಚನ್ನರಾಯಪಟ್ಟಣ-೫೭೩೧೧೬, ಹಾಸನ ಜಿಲ್ಲೆ, ದೂ:೯೪೪೮೮೬೮೫೪೮

10.

ಶ್ರೀ ಎಸ್.ಪಿ.ಮುನಿಕೆಂಪಯ್ಯ ಬಿನ್ ಲೇಟ್ ಬಾಲಪ್ಪ, ಸಾದೇನಹಳ್ಳಿ, ಹೆಸರಘಟ್ಟ ಹೋಬಳಿ, ಯಲಹಂಕ ತಾಲೂಕು, ಬೆಂಗಳೂರು ಉತ್ತರ, ಬೆಂಗಳೂರು ನಗರ ಜಿಲ್ಲೆ-೫೬೨೧೧೦, ದೂ: ೯೧೦೮೫೪೨೮೩೩

11.

ಅಧ್ಯಕ್ಷರು, ಶ್ರೀ ಚೆನ್ನಕೇಶವ ಮೂಡಲಪಾಯ ಭಾಗವತ, ಯಕ್ಷಗಾನ ಮಂಡಳಿ, ಮಲ್ಲಾತಹಳ್ಳಿ ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ: ೭೨೦೪೩೪೬೬೬೭

12.

ಶ್ರೀ ಎ.ಎಂ.ಶಿವಶAಕರಯ್ಯ, ಅರಳಗುಪ್ಪೆ ಗ್ರಾಮ & ಅಂಚೆ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ, ದೂ: ೮೪೫೩೨೪೫೮೫೩

 

ಶ್ರೀ ವೆಂಕಟೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ (ರಿ), ಮ್ಯಾಗೇರಿ ಗ್ರಾಮ, ಸೂಲಿಕುಂಟೆ ಅಂಚೆ, ಕೋಲಾರ ಜಿಲ್ಲೆ-೫೬೩೧೦೧, ದೂ: ೯೧೧೦೪೭೩೧೩೨

 

ರೂಪದರ್ಶಿ ಮಹಿಳಾ ಮಂಡಳೀ (ರಿ), ಹೊಲಿಗೆ ತರಬೇತಿ ಕೇಂದ್ರ, ಸಿದ್ಧ ಉಡುಪು ಕೇಂದ್ರ ಕರಕುಶಲ ತಯಾರಿಕೆ ಹಾಗೂ ವಸ್ತು ಪ್ರದರ್ಶನ, ಡಿ.ಇ.ಡಿ. ಕಾಲೇಜ್ ಹತ್ತಿರ, ಕೆ.ಇ.ಬಿ.ರಸ್ತೆ, ಹೊನ್ನಾಳಿ ಅಂಚೆ-೫೭೭೨೧೭, ದಾವಣಗೆರೆ ಜಿಲ್ಲೆ, ದೂ:೯೮೮೦೧೪೪೩೧೬/೯೭೩೧೫೩೩೭೩೫

 

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್, #೧೧೯, ೩ನೇ ತಿರುವು, ೮ನೇ ಮುಖ್ಯರಸ್ತೆ, ಕೃಷ್ಣಾಪುರದೊಡ್ಡಿ, ಹಂಪಿನಗರ, ಬೆಂಗಳೂರು-೫೬೦೧೦೪, ದೂ: ೯೪೪೮೧೦೨೧೫೮

   

 

2020-21ನೇ ಸಾಲಿನಲ್ಲಿ ಹಿರಿಯರ ನೆನಪು ಯೋಜನೆಯಡಿ ಒಂದು ಕಾರ್ಯಕ್ರಮಕ್ಕೆ ಅವಕಾಶ ನೀಡಿರುವ ಜಿಲ್ಲಾವಾರು ಸಂಸ್ಥೆಗಳು

ಉತ್ತರ ಕನ್ನಡ

1.

ಅಧ್ಯಕ್ಷರು, ಸೇವಾರತ್ನ ಮಾಹಿತಿ ಕೇಂದ್ರ (ರಿ), ಕಾನಸೂರು ಅಂಚೆ-೫೮೧೩೪೦, ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ:೯೨೪೨೬೫೨೫೨೮ / ೯೪೪೯೧೪೫೦೫೮

2.

ಶ್ರೀ ಗಜಾನನ ಭಟ್ಟ, ಮುಖ್ಯ ಸಂಚಾಲಕರು, ಯಕ್ಷಚೇತನ ಬಳಗ, ಮೆಣಸಿ, ಅಂಚೆ-ವಾನಳ್ಳಿ, ಶಿರಸಿ ತಾಲೂಕು, ಉತ್ತರ ಕನ್ನಡ

3.

ಶ್ರೀ ವಾಸುದೇವ.ಕೆ.ನಾಯ್ಕ, ಕಿಲಾರ, ಹಿತ್ತಲಗದ್ದೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಮತ್ತು ಯಕ್ಷಗಾನ ಆಭರಣ ಭಂಡಾರ, ಕಿಲಾರ, ಸಾ|| ಕಿಲಾರ, ಪೋ|| ಮಾವಿನಗುಂಡಿ, ತಾ|| ಸಿದ್ದಾಪುರ, ಉತ್ತರ ಕನ್ನಡ-೫೮೧೩೫೫, ಮೊ.೯೪೮೨೪-೧೭೬೮೨

 

ಶ್ರೀ ಬಸವೇಶ್ವರ ಯಕ್ಷ ಸಮೂಹ ಕಟ್ಟೇಮನೆ, ದೊಡ್ಮನೆ, ಸಿದ್ದಾಪುರ ತಾಲೂಕು, ಉತ್ತರ ಕನ್ನಡ-೫೮೧೩೫೫, ಮೊ.೯೪೮೦೭-೯೦೮೯೩

 

ಶ್ರೀ ಸುದರ್ಶನ ಸೇವಾ ಪ್ರತಿಷ್ಠಾನ (ರಿ), ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಆನಗೋಡ, ತಾ|| ಯಲ್ಲಾಪುರ, ಉತ್ತರ ಕನ್ನಡ

 

ಅಭಿಮಾನ ಸಾಂಸ್ಕೃತಿ ವೇದಿಕೆ, “ಚಿನ್ಮಯ”, ವಿಶಾಲನಗರ, ಶಿರಸಿ ತಾಲೂಕು, ಉತ್ತರ ಕನ್ನಡ-೫೮೧೪೦೨, ಮೊ.೯೪೪೮೮-೯೮೮೪೬

 

ಕಾಶ್ಯಪ ಪ್ರತಿಷ್ಠಾನ (ರಿ), ಶ್ರೀ ವಿದ್ಯಾ ಸಂಸ್ಕೃತಿ ಸಂಘ, ಗಡಿಗೆಹೊಳೆ, ಅಂಚೆ: ಭೈರುಂಬೆ, ತಾಲೂಕು:ಶಿರಸಿ, ಉತ್ತರ ಕನ್ನಡ, ದೂ:೦೮೩೮೪-೨೭೯೩೮೫

 

ಮೈತ್ರೇಯಿ ಮಹಿಳಾ ತಾಳಮದ್ದಳಾ ಕಲಾಬಳಗ, ನಿಟ್ಟೂರು, ಸುಕನ್ಯಾ ವಿಶ್ವನಾಥ್ ಭಟ್, ಸಂಜಿಬೈಲ್, ಇಡಗುಂದಿ (ಪೋಸ್ಟ್), ಯಲ್ಲಾಪುರ ತಾಲ್ಲೂಕು, ಕಾರವಾರ, ಉ.ಕ.ಜಿಲ್ಲೆ, ಮೊ.೯೪೮೩೨-೮೩೯೭೭

 

ಶ್ರೀ ವಿ.ಆರ್.ಹೆಗಡೆ ಮತ್ತಿಘಟ್ಟಾ, ಅಂಚೆ: ಮುಂಡಗನಮನೆ, ಶಿರಸಿ ತಾಲೂಕು, ಉತ್ತರ ಕನ್ನಡ -೫೮೧೪೦೩, ಮೊ.೯೪೪೮೫-೭೫೮೨೮

 

ಶ್ರೀ ಲಕ್ಷಿö್ಮ ನಾರಾಯಣ ಯಕ್ಷಕಲಾ ಪ್ರತಿಷ್ಠಾನ, ಮಾಲೆಕೊಡ್ಲು, ಬೇಂಗ್ರೆ ಗ್ರಾಮ, ಉಳ್ಮಣ್ಣು ಅಂಚೆ-೫೮೧೪೨೧, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ: ೯೦೦೮೦೭೫೦೭೦

ದಕ್ಷಿಣ ಕನ್ನಡ

4.

ಯುವಕ ಮಂಡಲ ಮೂಡಂಬೈಲು (ರಿ), ಮೂಡಂಬೈಲು ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ-೫೭೪೨೬೦

5.

ಆರಾಧನಾ ಕಲಾವೇದಿಕೆ ಸಾರಡ್ಕ, ಅಡ್ಯನಡ್ಕ ಅಂಚೆ, ಬಂಟ್ವಾಲ ತಾಲೂಕು, ದಕ್ಷಿಣ ಕನ್ನಡ ಜಲ್ಲೆ-೫೭೪೨೬೦, ದೂ: ೯೪೮೩೨೧೧೩೮೮

6.

ಮಾಲೆಕೊಡ್ಲು ಭಾಗವತ ಸಾಂಸ್ಕೃತಿಕ ಪ್ರತಿಷ್ಠಾನ, ಮಾಲೆಕೊಡ್ಲು, ಬೇಂಗ್ರೆ ಗ್ರಾಮ, ಉಳ್ಮಣ ಅಂಚೆ-೫೮೧೪೨೧, ಭಟ್ಕಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ದೂ: ೯೦೦೮೦೭೫೦೭೦

   

ಶಿವಮೊಗ್ಗ

7.

ಶ್ರೀ ಗೋಪಾಲಕೃಷ್ಣ ದೇವಾಲಯ, ಅಭಿವೃದ್ಧಿ ಪ್ರತಿಷ್ಠಾನ (ರಿ), ಗುಮಗೋಡು, ಹೊಸಳ್ಳಿ-ಕಳಸವಳ್ಳಿ, ಅಂಚೆ: ತುಮರಿ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ, ಮೊ.೯೪೮೧೨-೫೩೪೬೩

8.

ಸಂಸ್ಕೃತಿ ಸಮಾಜ ಟ್ರಸ್ಟ್ (ರಿ), ಕೇಡಲಸರ, ಹೊನ್ನೇಸರ ಅಂಚೆ-೫೭೭೪೧೭, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ, ದೂ:೭೩೩೮೩೬೫೧೬೭

9.

ಸಾರ ಸೆಂಟರ್, ದೊಂಬೆಕೊಪ್ಪ ಗ್ರಾಮ, ಹರಟಳು ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ ಜಿಲ್ಲೆ, ದೂ:೯೮೭೩೧೭೨೧೧೧/೯೮೭೩೧೭೭೨೧೧

10.

 

ಮಂಡ್ಯ

12.

ವೇ||ಬ್ರ||ಶ್ರೀ||ಎನ್.ಟಿ.ಮೂರ್ತಾಚಾರ್ಯ, ನೆಲ್ಲಿಗೆರೆ ಭಾಗವತರು, ಪುತ್ಥಳ್ಳಿ ಬೊಂಬೆ ಪ್ರದರ್ಶನ ಯುವಜನ ಯಕ್ಷಗಾನ ಮಂಡಳಿ, ನೆಲ್ಲಿಗೆರೆ, ನಾಗಮಂಗಲ ತಾ||, ಮಂಡ್ಯ ಜಿಲ್ಲೆ-೫೭೪೧೮, ದೂ:೯೯೬೪೩-೯೪೬೨೩/೮೬೧೮೮-೯೪೯೬೩೦

13.

 

ಕಾಸರಗೋಡು

14.

ಯಕ್ಷಬಳಗ, ಹೊಸಂಗಡಿ, ಮಂಜೇಶ್ವರ, ಕಾಸರಗೋಡು ಜಿಲ್ಲೆ-೬೭೧೩೨೩

 

ಯಕ್ಷ ಭಾರತಿ(ರಿ) ನಿರ್ಚಾಲ, ಪೋ|| ನೀರ್ಚಾಲ, ಕುಂಬ್ಲ, ಕಾಸರಗೋಡು-೬೭೧೩೨೧, ಮೊ.೯೪೦೦೮೮೪೪೭೪/೯೯೪೬೧೯೫೮೯೧

ಬೆಂಗಳೂರು

15.

ಯಕ್ಷದೇಗುಲ, #೧೪೩/೭೩, ೬ನೇ ಕ್ರಾಸ್, ೩ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-೫೬೬೨೮, ದೂ:೯೪೪೮೫-೧೦೬೦೬

16.

 

 

 

 

 

೨೦೧೯-೨೦ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ತರಬೇತಿ ಏರ್ಪಡಿಸಲು ಅವಕಾಶ ನೀಡಿರುವ ಶಿಬಿರಾರ್ಥಿಗಳು

೧.        ಶ್ರೀ ನಾಗರಾಜು ಎ.ಜಿ., ತಂದೆ: ಕೆ. ಗುಡ್ಡಯ್ಯ, ಅರಳಗುಪ್ಪೆ – ೫೭೨೧೧೪, ತಿಪಟೂರು ತಾಲೂಕು, ತುಮಕೂರು, ದೂ:೯೭೪೧೦೮೦೪೭೪

ಶ್ರೀ ನಾಗರಾಜು ಎ.ಜಿ., ಅರಳಗುಪ್ಪೆ, ತುಮಕೂರು ಜಿಲ್ಲೆ ಇವರ ನೇತೃತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ:೨೬.೦೮.೨೦೨೦ರAದು ತರಬೇತಿಯನ್ನು ಸೋಮಲಾಪುರ, ತುರುವೇಕರೆ ತಾಲೂಕಿನಲ್ಲಿ ಆಯೋಜಿಸಿದ್ದು, ಮೂಡಲಪಾಯ ಯಕ್ಷಗಾನ ಭಾಗವತರಾದ ಶ್ರೀ ಕಲ್ಮನೆ ಎ.ಎಸ್.ನಂಜಪ್ಪ ಅವರು ತರಬೇತಿಯನ್ನು ಉದ್ಘಾಟಿಸಿ, ಇತಿಹಾಸ ಪರಂಪರೆ ಹೊಂದಿರುವ ಯಕ್ಷಗಾನ ತರಬೇತಿಯನ್ನು ಈ ಭಾಗದಲ್ಲಿ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಹೀಗೆ ಕಲಾತ್ಮಕ ಕಾರ್ಯಕ್ರಮಗಳು ಎಲ್ಲಾ ಭಾಗದಲ್ಲೂ ಸಹ ನಡೆಯುತ್ತಿರಬೇಕು. ಯಾವುದೇ ಭಾಗಕ್ಕೆ ಯಕ್ಷಗಾನ ಎಂಬುದು ಸೀಮಿತವಾಗಿಲ್ಲ. ಕಲೆಯು ಎಲ್ಲರಲ್ಲಿಯೂ ಸಹ ಅಡಗಿದೆ. ಇಂತಹ ಕಲೆಗಳನ್ನು ಇಂದಿನ ದಿನಗಳಲ್ಲಿ ಪ್ರೋತ್ಸಾಹಿಸಬೇಕಾಗಿದೆ ಹಾಗೂ ಮುಂದೆಯೂ ಸಹ ಇಂತಹ ಕಲಾತ್ಮಕ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹೇಳಿದರು. ವೆಂಕಟಾಪುರದ ವೀರೇಂದ್ರ ಪಾಟೀಲ್ ಅವರು ಅಧ್ಯಕ್ಷತೆಯನ್ನು ವಹಿಸದಿದರು. ಜಯರಾಮಪ್ಪ, ಟಿ. ಮಹಾಲಿಂಗಯ್ಯ, ಶಾಂತಕುಮಾರಿ, ಎಸ್.ಟಿ. ಮಹಾಲಿಂಗಯ್ಯ, ಸೋಮಶೇಖರಯ್ಯ, ಮಲ್ಲಿಕಾರ್ಜುನಯ್ಯ, ಸೋಮಲಾಪುರ ಹಾಗೂ ಪುಟ್ಟಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

೨.        ಶ್ರೀ ನವೀನ್, ಯಕ್ಷ ಸೌರಭ, ಹರ್ತಟ್ಟು, ಗಿಳಿಯಾರು, ಕೋಟ ಅಂಚೆ, ಉಡುಪಿ ಜಿಲ್ಲೆ ದೂ: ೯೯೮೦೧೯೮೧೦೦

ಶ್ರೀ ನವೀನ್, ಕೋಟ, ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ:೨೧.೦೮.೨೦೨೦ರAದು ತರಬೇತಿಯನ್ನು ಹಾಲ್ಕಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದು, ಯಕ್ಷಚಿಂತಕ ಸುಜಯೇಂದ್ರ ಹಂದೆ ಅವರು ಉದ್ಘಾಟಿಸಿ, ಯಕ್ಷಗಾನ ಕಲೆ ನಿಂತ ನೀರಲ್ಲ. ಅದು ಸದಾ ಚಲನಶೀಲವಾಗಿದ್ದು ದೀಪವು ಕತ್ತೆಲ ಹೋಗಲಾಡಿಸುವಂತೆ ಜ್ಞಾನ ದೀಪವು ನಮ್ಮಲ್ಲಿ ಸುಜ್ಞಾನದ ಬೆಳಕನ್ನು ನೀಡುತ್ತದೆ. ಅಂಥದರಲ್ಲಿ ಯಕ್ಷಗಾನವೂ ಒಂದು ಎಂದು ಹೇಳಿದರು. ಹಾಲ್ಕಲ್ ಕೋಟೆ ಜೈನ ಜಟ್ಟಿಗ ದೇವ್ಥಾನ ಮುಖ್ಯಸ್ಥ ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಲಂಬೋದರ ಹೆಗಡೆ, ಕೃಷ್ಣ ಬಿಲ್ಲವ ದೊಂಬೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಶ್ರೀನಿವಾಸ ಸಾಸ್ತಾನ ಅವರು ಉಪಸ್ಥಿತರಿದ್ದರು. ನವೀನ ಕೋಟ ಕಾರ್ಯಕ್ರಮ ನಿರ್ವಹಿಸಿದರು. ಉದಯ ಬೋವಿ ವಂದಿಸಿದರು.

 

೩.        ಶ್ರೀ ದೇವರಾಜ್ ದಾಸ್ ಭಾಗವತ್, ನರಸಿಂಹ ಕೃಪಾ, ಮರವಂತೆ ಅಂಚೆ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ, ದೂ: ೯೪೮೧೪೪೫೦೫೯

ಶ್ರೀ ದೇವರಾಜ್ ದಾಸ್ ಭಾಗವತ್, ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ:೩೦.೦೮.೨೦೨೦ರAದು ಹಟ್ಟಿಯಂಗಡಿ, ಬಾಚಿನಕೊಡ್ಲು ನಮ್ಮ ನಾಳಂದ ವಿದ್ಯಾಪೀಠದ ಜಂಟಿ ಆಶ್ರಯದಲ್ಲಿ ಯಕ್ಷಗಾನ ನೃತ್ಯ ಮತ್ತು ಭಾಗವತಿಕೆ ತರಬೇತಿಯನ್ನು ಕನ್ಸರ್ನ್ಸ್ ಫಾರ್ ವರ್ಕಿಂಗ್ ಚಿಲ್ಡçನ್ ಸಂಸ್ಥೆಯ ಅಧಿಕಾರಿ ಶ್ರೀನಿವಾಸ ಗಾಣಿಗ ಅವರು ತರಬೇತಿಯನ್ನು ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಕೆ.ಎಂ.ಶೇಖರ್ ಅವರು ಅಧ್ಯಕ್ಷತೆ ವಹಿಸಿ, ಯಕ್ಷಗಾನದತ್ತ ಯುವಕರು ಒಲವು ತೋರುತ್ತಿರುವುದು ಕಲೆಯ ಉಳಿವು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಒಂದು ಆಶಾದಾಯಕ ಬೆಳವಣಿಗೆ. ರಾಜ್ಯ ಯಕ್ಷಗಾನ ಅಕಾಡೆಮಿ ಈ ನಿಟ್ಟಿನಲ್ಲಿ ತನ್ನ ಹೊಣೆ ನಿರ್ವಹಿಸುತ್ತಿದೆ. ಅವಕಾಶ ವಂಚಿತ ಸಮುದಾಯದ ಮಕ್ಕಳನ್ನು ಬಹು ಆಯಾಮದ ಯಕ್ಷಗಾನದಂತಹ ಪ್ರದರ್ಶನ ಕಲೆಯಲ್ಲಿ ತೊಡಗಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಅವರು ಅವಕಾಶವನ್ನು ಅರಸಿ, ಬಳಸಿಕೊಳ್ಳುವ ಸಾಮರ್ಥ್ಯ ಗಳಿಸುತ್ತಾರೆ. ಅಕಾಡೆಮಿ ಮತ್ತು ವಿದ್ಯಾಪೀಠದ ಈ ಪ್ರಯೋಗ ಉದ್‌ದೇಶಿತ ಫಲ ನೀಡಲಿ ಎಂದು ಹಾರೈಸಿದರು. ಶಯದೇವಿಸುತೆ ಮರವಂತೆ ನಿರೂಪಿಸಿದರು. ಸತೀಶ ಗಂಗೊಳ್ಳಿ ವಂದಿಸಿದರು. ದೆಹಲಿಯ ಶಿವಾನಂದ ತಲ್ಲೂರು, ನಮ್ಮಸಭಾ ಸದಸ್ಯರ ಭಾಸ್ಕರ ಸಾಗರ, ಕನ್ಯಾನದ ಶಿವಶಂಕರ ಭಜನಾ ಮಂಡಳಿಯ ಗೌರವಾಧ್ಯಕ್ಷ ಮಂಜುನಾಥ ಗುಡ್ಡೆಯಂಡಗಿ, ಮಕ್ಕಳ ಪಂಚಾಯಿತಿ ಸದಸ್ಯೆ ಸಂಗೀತಾ ತ್ರಾಸಿ ಉಪಸ್ಥಿತರಿದ್ದರು.

 

೪.        ಶ್ರೀ ಶರತ್ ಚಂದ್ರ, #೧/೧೭/೩೭೦, ಲ್ಯಾಂಡ್ ಲಿಂಕ್ಸ್, ದೊರೆಬೈಲ್, ಕೂಂಚಾಡಿ, ಮಂಗಳೂರು-೫೭೫೦೦೮, ದಕ್ಷಿಣ ಕನ್ನಡ, ದೂ: ೯೬೮೬೫೯೬೧೮೯

ಶ್ರೀ ಶರತ್‌ಚಂದ್ರ, ಪಣಂಬೂರು, ದಕ್ಷಿಣ ಕನ್ನಡ ಜಿಲ್ಲೆ ಇವರ ನೇತೃತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ:೧೯.೦೯.೨೦೨೦ರAದು ತರಬೇತಿಯನ್ನು ಶ್ರೀ ಓಂಕಾರೇಶ್ವರಿ ಭಜನಾ ಮಂದಿರ ೧೦ನೇ ತೋಕೂರು, ಹಳೆಯಂಗಡಿಯಲ್ಲಿ ಆಯೋಜಿಸಲಾಗಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ  ಶ್ರೀ ಕದ್ರಿ ನವನೀತ ಶೆಟ್ಟಿ ಅವರು ತರಬೇತಿಗೆ ಚಾಲನೆ ನೀಡಿ, ಯಕ್ಷಗಾನವು ಕೇವಲ ಮನೋರಂಜನೆಯಲ್ಲ, ನಿರತರ ಕಲಿಕೆಯಿಂದ ಮಕ್ಕಳ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ಆತ್ಮಸ್ಥೆöÊರ್ಯವನ್ನು ಹೆಚ್ಚಿಸುವುದಲ್ಲದೆ ಕಲಿಕೆಯಲ್ಲೂ ಪ್ರಗತಿಯನ್ನು ಸಾಧಿಸುವಿರಿ ಎಂದು ತಿಳಿಸಿದರು. ಶಲಾ ಮುಖ್ಯ ಶಿಕ್ಷಕಿ ಕಾಂತಿ ಕಿರಣ್ ಅಧ್ಯಕ್ಷತೆಯನ್ನು ವಹಿಸಿದ್ದರು ಯಕ್ಷಗಾನ ಅಕಾಡೆಮಿಯ ಮತ್ತೊಬ್ಬ ಸದಸ್ಯರಾದ ಶ್ರೀ ಮಾಧವ ಭಂಡಾರಿ, ಡಾ. ದಿನಕ ಎಸ್. ಪಚ್ಚನಾಡಿ ಉಪಸ್ಥಿತರಿದ್ದರು.

 

೫.        ಶ್ರೀ ಶಾಂತಿಕಾಪರಮೇಶ್ವರಿ ಯಕ್ಷಕಲಾ ವೇದಿಕೆ (ರಿ), ಬಂಕದೊಳ್ಳಿ ಗ್ರಾಮ, ಹೆಲ್ಲೂರ ಅಂಚೆ, ಅಂಕೋಲಾ ತಾಲೂಕು, ಉತ್ತರ ಕನ್ನಡ-೫೮೧೩೪೪, ದೂ: ೯೪೮೧೯೫೩೬೪೯

ಶ್ರೀ ಶಾಂತಿಕಾಪರಮೇಶ್ವರಿ ಯಕ್ಷಕಲಾ ವೇದಿಕೆ (ರಿ), ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ದಿನಾಂಕ:೨೭.೦೯.೨೦೨೦ರAದು ಶಾಲಾ ಆವಾರ ಹಿಲ್ಲೂರಿನಲ್ಲಿ ಯಕ್ಷಗಾನ ಹಿಮ್ಮೇಳ ತರಬೇಯನ್ನು ಆಯೋಜಿಸಲಾಗಿದ್ದು, ಜಿಲ್ಲಾ ಪಂಚಾಯತ ಸದಸ್ಯ ಜಗದೀಶ ನಾಯಕ ಮೊಗಟಾ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿಲ್ಲೂರಿನ ಹಿರಿಯ ಭಾಗವತ ಗಣಪತಿ ಹೆಗಡೆ ಹಬ್ಬಳಮನೆ, ಸಂಘಟನೆ ಗೌರವ ಅಧ್ಯಕ್ಷ ನಿತ್ಯಾನಂದ ನಾಯ ಅಂಗಡಿಬೈಲ್, ಹಿಲ್ಲೂರು ಪಿ.ಡಿ.ಓ. ಮಂಜುನಾಥ ಟಿ.ಸಿ., ಯಕ್ಷಗಾನ ಗುರುಗಳಾದ ಸದಾಶಿವ ಮಳವಳ್ಳಿ, ಜಾಗೃತಿ ಸಂಘದ ಬಾಲಚಂದ್ರ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷರ ರಮೇಶ ನಾಯಕ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿಲ್ಲೂರು ವಿದ್ಯಾರ್ಥಿ ನಿಲಯದ ನಿವೃತ್ತ ಮೇಲ್ವಿಚಾರಕ ಹೊನ್ನಪ್ಪ ನಾಯಕ ಹೊಸ್ಕೇರಿ ಅವರನ್ನು ಸನ್ಮಾನಿಸಲಾಯಿತು. ತ್ರಿಯಂಬಕ ಬಾಂದೇಕರ ಪ್ರಾಸ್ತಾವಿಕ ಮಾತನಾಡಿದರು, ಪ್ರವೀಣ ನಾಯಕ ಸ್ವಾಗತಿಸಿದರು. ಶಿವಾನಂದ ಗೌಡ ಕಾರ್ಯಕ್ರಮ ನಿರೂಪಿಸಿದರು.

 

ಇತ್ತೀಚಿನ ನವೀಕರಣ​ : 06-02-2021 02:24 PM ಅನುಮೋದಕರು: Admin

 
×
ABOUT DULT ORGANISATIONAL STRUCTURE PROJECTS