ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2019-20ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ

ಅಕಾಡೆಮಿಯು ಯಕ್ಷಗಾನ ಕೇಂದ್ರ, ಇಂದ್ರಾಳಿ ಈ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ:೨೨.೦೬.೨೦೧೯ ರಂದು ಯಕ್ಷಗಾನ ಕೇಂದ್ರ, ಇಂದ್ರಾಳಿಯಲ್ಲಿ “ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ” ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರದಲ್ಲಿ ಶ್ರೀ ಅಂಬಾತನಯ ಮುದ್ರಾಡಿಯವರ ‘ಪಂಚಭೂತ ಪ್ರಪಂಚ’ ಹಾಗೂ ಶ್ರೀ ಕಂದಾವರ ರಘುರಾಮ ಶೆಟ್ಟಿಯವರ ‘ಯಕ್ಷಗಾನ ಪ್ರಸಂಗ ಪಂಚಮಿ’ ಪುಸ್ತಕಗಳನ್ನು ಯಕ್ಷಗಾನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ವಹಿಸಿದ್ದರು.  ಪಂಚಭೂತ ಪ್ರಪಂಚ ಪುಸ್ತಕದ ಬಗ್ಗೆ ಡಾ. ಕೆ.ಎಂ.ರಾಘವ ನಂಬಿಯಾರ್ ಅವರು ಮಾತನಾಡಿದರು. ‘ಯಕ್ಷಗಾನ ಪ್ರಸಂಗ ಪಂಚಮಿ’ ಪುಸ್ತಕದ ಬಗ್ಗೆ. ಯಕ್ಷಗಾನ ಕೇಂದ್ರ, ಹಂಗಾರಕಟ್ಟೆಯ ಪ್ರಾಚಾರ್ಯರಾದ ಶ್ರೀ ಗುಂಡ್ಮಿ ಸದಾನಂದ ಐತಾಳ ಅವರು ಮಾತನಾಡಿದರು.  ಯಕ್ಷಗಾನ ಕಲಾ ಚಿಂತಕರಾದ ಡಾ. ಭಾಸ್ಕರಾನಂದ ಕುಮಾರ್, ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀ ಪಿ.ಕಿಶನ್ ಹೆಗ್ಡೆ, ಯಕ್ಷಗಾನ ಕೇಂದ್ರದ ಪ್ರಾಚಾರ್ಯರಾದ ಶ್ರೀ ಬನ್ನಂಜೆ ಸಂಜೀವ ಸುವರ್ಣ ಮೊದಲಾದ ಗಣ್ಯರು ಭಾಗವಹಿಸಿದ್ದರು. ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್‌ರವರಾದ ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ        ಶ್ರೀ ರಾಜಶೇಖರ ಹೆಬ್ಬಾರ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಮೂಡಲಪಾಯ ಯಕ್ಷಗಾನ – ಯಕ್ಷಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ, ಹಾವೇರಿ

            ಅಕಾಡೆಮಿಯು ಹಾವೇರಿ ಜಿಲ್ಲಾ ದುರ್ಗಾದೇವಿ ಮೂಡಲಪಾಯ/ದೊಡ್ಡಾಟ ಪ್ರದರ್ಶನ ಮತ್ತು ತರಬೇತಿ ಕಲಾಮಂಡಳಿ ಸಂಸ್ಥೆಯ ಸಹಯೋಗದೊಂದಿಗೆ ೨೦೧೯ರ ಜೂನ್ ೨೯ ಮತ್ತು ೩೦ರಂದು ಹಾವೇರಿಯ ಜಿಲ್ಲಾ ಗುರುಭವನದಲ್ಲಿ “ಮೂಡಲಪಾಯ ಯಕ್ಷಗಾನ-ಯಕ್ಷಸಂಭ್ರಮ ಮತ್ತು ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ.ಎಸ್.ಕರಿಯಣ್ಣನವರು ನೆರವೇರಿಸಿದರು. ಹಳ್ಳಿಗಳಲ್ಲಿ ಸೌಹಾರ್ದತೆ ಕಾಪಾಡಲು ನಮ್ಮ ಜಾನಪದ ಕಲೆಗಳಾದ ಯಕ್ಷಗಾನ, ಬಯಲಾಟಗಳು ಸಹಕಾರಿಯಾಗಿವೆ ಎಂದು ಹೇಳಿದರು.  ಗ್ರಾಮೀಣ ಸೊಗಡಿನ ಕಲೆಗಳ, ಜಾತಿ ಮತ-ಪಂಥಗಳ ಭೇದ ಮೀರಿ ಸೌಹಾರ್ದತೆಯ ಕೊಂಡಿಯಾಗಿ ಈಗಲೂ ಕೆಲಸ ನಿರ್ವಹಿಸುತ್ತಿದೆ ಎಂದರು. ಮಾಜಿ ಸಚಿವರಾದ ಶ್ರೀ ರುದ್ರಪ್ಪ ಲಮಾಣಿ, ಸಾಹಿತಿಗಳಾದ ಶ್ರೀ ಸತೀಶ್ ಕುಲಕರ್ಣಿ ಹಾಗೂ ಶ್ರೀ ಸಂಜಯ್ ಡಾಂಗೆ, ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ, ರಿಜಿಸ್ಟ್ರಾರ್ ರಾದ  ಶ್ರೀ ಎಸ್.ಹೆಚ್.ಶಿವರುದ್ರಪ್ಪ ಹಾವೇರಿ ಜಿಲ್ಲಾ ದುರ್ಗಾದೇವಿ ಕಲಾಮಂಡಳಿಯ ಅಧ್ಯಕ್ಷರಾದ ಶ್ರೀ ಬೀರಪ್ಪ ಡೊಳ್ಳಿನ ಮೊದಲಾದ ಗಣ್ಯರು ಭಾಗವಹಿಸಿದ್ದರು.  ಅಂಗದ ಸಂಧಾನ ಪ್ರಸಂಗದ ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣ ಸಂಧಾನ ಪ್ರಸಂಗದ ಮಹಿಳಾ ತಾಳಮದ್ದಳೆ ಪ್ರಸ್ತುತಗೊಂಡಿತು.  ಮೂಡಲಪಾಯ ಯಕ್ಷಗಾನ-ಯಕ್ಷಗಾನ ಹಾಗೂ ತಾಳಮದ್ದಳೆ ಕುರಿತ ವಿಚಾರ ಸಂಕಿರಣ ನಡೆಯಿತು. ಯಕ್ಷಗಾನ ಗೊಂಬೆಯಾಟದ ಬಗ್ಗೆ    ಶ್ರೀ ಸಿದ್ದಪ್ಪ ವಿ.ಬಿರಾದಾರ, ಯಕ್ಷಗಾನದ ಬಗ್ಗೆ ಶ್ರೀ ಸುಮಂಗಲಾ ದೇಸಾಯಿ, ತಾಳಮದ್ದಳೆಯ ಬಗ್ಗೆ ಶ್ರೀಮತಿ ಸಂಧ್ಯಾ ದೇಸಾಯಿ ಹಾಗೂ ಮೂಡಲಪಾಯದ ಬಗ್ಗೆ ಶ್ರೀ ಪ್ರಮೋದ ನೆಲವಾಗಿಲು ಅವರುಗಳು ಉಪನ್ಯಾಸ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ  ಪ್ರೊ. ಎಂ.ಎ.ಹೆಗಡೆ ಅವರು ವಹಿಸಿದ್ದರು. ಹವ್ಯಾಸಿ ಗ್ರಾಮೀಣ ಸಂಘದ ಅಧ್ಯಕ್ಷರಾದ ಶ್ರೀ ಎನ್.ಎಸ್.ರಾಜು ಮೊದಲಾದ ಗಣ್ಯರು ಭಾಗವಹಿಸಿದ್ದರು. ಗಿರಿಜಾ ಕಲ್ಯಾಣ ಪ್ರಸಂಗದ ಮೂಡಲಪಾಯ ಯಕ್ಷಗಾನ ಹಾಗೂ ಸುಧನ್ವಾರ್ಜುನ ಪ್ರಸಂಗದ ಯಕ್ಷಗಾನ ಪ್ರಸಂಗಗಳು ಪ್ರಸ್ತುತಗೊಂಡಿತು.

 

ಯಕ್ಷೋತ್ಸವ, ಮುಂಬಯಿ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಕನ್ನಡ ಕಲಾ ಕೇಂದ್ರ, ಮುಂಬಯಿ ಹಾಗೂ ಶ್ರೀ ಶನೀಶ್ವರ ಸೇವಾ ಸಮಿತಿ, ನೆರೊಳ್ ಈ ಸಂಸ್ಥೆಗಳ ಸಹಕಾರದೊಂದಿಗೆ ೨೦೧೯ರ ಆಗಸ್ಟ್ ೨೧ ಮತ್ತು ೨೨ರಂದು ನವಿ ಮುಂಬಯಿನ ನೆರೂಳ್‌ನ ನಗರಪಾಲಿಕ ಸಭಾಗೃಹದಲ್ಲಿ ‘ಯಕ್ಷೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಭಾರತ್ ಕೋಚ್ ಬಿಲ್ರ‍್ಸ್, ಸಿ.ಎಂ.ಡಿ.ಯವರಾದ ಶ್ರೀ ಸದಾಶಿವ ಎಸ್ ಶೆಟ್ಟಿ ಅವರು ಉದ್ಘಾಟಿಸಿ, ಯಕ್ಷಗಾನದ ಮೇಧಾವಿ ಹಾಗೂ ಮೇರು ಕಲಾವಿದರಿಂದ ಯಕ್ಷಗಾನಕ್ಕೆ ಹೆಚ್ಚಿನ ಮಾನ್ಯತೆ ದೊರೆಕಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಶ್ರೀ ಬಿ. ಬಾಲಚಂದ್ರ ರಾವ್ ಅವರು ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್‌ರವರಾದ                 ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಮಾತನಾಡಿ ಯಕ್ಷಗಾನದ ಉನ್ನತಿಗೆ ಹೆಚ್ಚಿನ ಕೊಡುಗೆಯನ್ನು ಸಂಘ-ಸಂಸ್ಥೆಗಳು, ಕಲಾಪೋಷಕರು ನೀಡಿದ್ದಾರೆ ಎಂದು ಹೇಳಿದರು. ಯಕ್ಷ ಮಿತ್ರ ಮುಂಬಯಿ, ಇವರು ಭೀಷ್ಮ ವಿಜಯ ಪ್ರಸಂಗದ ತಾಳಮದ್ದಳೆಯನ್ನು ಹಾಗೂ ಸಿರಿ ಕಲಾ ಮೇಳ, ಬೆಂಗಳೂರು, ಇವರು ‘ಕಂಸ ದಿಗ್ವಿಜಯ’ ಮತ್ತು ‘ಭಸ್ಮಾಸುರ ಮೋಹಿನಿ’ ಪ್ರಸಂಗಗಳ ಯಕ್ಷಗಾನವನ್ನು ಪ್ರಸ್ತುತಪಡಿಸಿದರು. ವಿಚಾರ ಸಂಕಿರಣದಲ್ಲಿ ಯಕ್ಷಗಾನ ಅಂದು-ಇಂದು-ಮುಂದು ಎಂಬ ಬಗ್ಗೆ. ಶ್ರೀ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ ಅವರು, ಮುಂಬಯಿಯ ಯಕ್ಷಗಾನ ಮಂಡಳಿಗಳು ಮತ್ತು ಅವರ ಸಾಧನೆಗಳು ಎಂಬ ವಿಷಯದ ಬಗ್ಗೆ ಶ್ರೀ ಅನಿಲ್ ಹೆಗ್ಡೆ ಅವರು ಹಾಗೂ ಯಕ್ಷಗಾನ ಬಡಗುತಿಟ್ಟು, ತೆಂಕುತಿಟ್ಟುಗಳ ವಿಶೇಷತೆ ಬಗ್ಗೆ ಶ್ರೀ ಶಿವಾನಂದ ಹೆಗಡೆ ಅವರು ಉಪನ್ಯಾಸ ನೀಡಿದರು. ಗೋಪಾಲಕೃಷ್ಣ ಯಕ್ಷಗಾನ ಕಲಾ ಕೇಂದ್ರ ಇವರು ‘ಬಬ್ರುವಾಹನ’ ಪ್ರಸಂಗದ ಯಕ್ಷಗಾನವನ್ನು ಪ್ರಸ್ತುತಪಡಿಸಿದರು ಹಾಗೂ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಇವರು ‘ಮಾರುತಿ ಪ್ರತಾಪ’ ಪ್ರಸಂಗದ ಯಕ್ಷಗಾನವನ್ನು ಪ್ರಸ್ತುತಪಡಿಸಿದರು.

ಯಕ್ಷಸಂಭ್ರಮ, ಕೊಯಂಬತ್ತೂರು

ಅಕಾಡೆಮಿಯು ಶ್ರೀ ವಿಶ್ವ ಶಿಲ್ಪ ಸಂಘ (ರಿ), ಕೊಯಂಬತ್ತೂರು ಈ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ:೨೨.೦೯.೨೦೧೯ ರಂದು ಕೊಯಂಬತ್ತೂರಿನ ಆರ್.ಟಿ.ಎಂ.ತಿರುಮಣ ಮಂಟಪಂನಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆ ವಿಭಾಗದ ಸಂರಕ್ಷಣಾ ಸಹಾಯಕರಾದ ಶ್ರೀ ಎಂ.ಲೋಕೇಶ್ ಅವರು ಉದ್ಘಾಟಿಸಿದರು. ಶ್ರೀ ವಿಶ್ವ ಶಿಲ್ಪ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಯೋಗೇಶ ಎ.ವಿ. ಅವರು ಗೌರವ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿದ್ದರು. ಹಾಗೂ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿಯ ಕಾರ್ಯದರ್ಶಿಗಳಾದ ಶ್ರೀ ಸಂಕಬೈಲ್ ಸತೀಶ್ ಅಡಪ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯಕ್ಷಬಳಗ ಹೊಸಂಗಡಿ ಇವರು ಅಂಗದ ಸಂಧಾನ ಪ್ರಸಂಗದ ತಾಳಮದ್ದಳೆಯನ್ನು ಪ್ರಸ್ತುತಪಡಿಸಿದರು.  ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿಶ್ವ ಶಿಲ್ಪ ಸಂಘ(ರಿ)ದ ಅಧ್ಯಕ್ಷರಾದ ಶ್ರೀ ಯೋಗೇಶ ಎ.ವಿ. ಅವರು ವಹಿಸಿದ್ದರು.  ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಬಿ.ಎಂ.ಹೊಸಂಗಡಿಯವರು ಸಮಾರೋಪ ಭಾಷಣ ಮಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ಆದ                   ಶ್ರೀ ಎಸ್.ಹೆಚ್.ಶಿವರುದ್ರಪ್ಪ ಹಾಗೂ ಶ್ರೀ ವಿಶ್ವ ಶಿಲ್ಪ ಸಂಘ(ರಿ)ದ ಕಾರ್ಯದರ್ಶಿಗಳಾದ ಶ್ರೀ ಹರಿಶ್ಚಂದ್ರ ಕೆ.ಎ. ಅವರುಗಳು ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿದ್ದರು.  ಭಾರತಿ ಕಲಾ ಆರ್ಟ್ಸ್, ಇವರು ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನವನ್ನು ಪ್ರಸ್ತುತಪಡಿಸಿದರು.

 

 

ಯಕ್ಷಗಾನ ಗೊಂಬೆಯಾಟ ಉತ್ಸವ-ಯಕ್ಷಸಂಭ್ರಮ ವಿಚಾರ ಸಂಕಿರಣ

ಅಕಾಡೆಮಿಯು ಹಳಿಯಾಳ ನಗರದ ಕೆನರಾ ಬ್ಯಾಂಕ್ ಆರ್‌ಸೆಟಿ ಸಭಾ ಭವನದಲ್ಲಿ ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ೨೦೧೯ರ ನವೆಂಬರ್ ೭ ಮತ್ತು ೮ ರಂದು ನಡೆದ ಯಕ್ಷಗಾನ ಗೊಂಬೆಯಾಟ ಉತ್ಸವ, ಯಕ್ಷ ಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದರು. ಹಳಿಯಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಜ್ಯೋತಿ ಬೆಳಗಿಸುವುದರ ಮೂಲಕ ಗೊಂಬೆಯಾಟ ಉತ್ಸವವನ್ನು ಉದ್ಘಾಟಿಸಿ ಯಕ್ಷಗಾನ ಕಲೆ ವಿಶಿಷ್ಟವಾದ ಕಲೆಯಾಗಿದ್ದು ಅದರ ಎಲ್ಲ ಪ್ರಕಾರಗಳು ಈ ಭಾಗದ ಜನರಿಗೆ ಪರಿಚಯವಾಗಲಿ ಎಂದು ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ಕರ್ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಎಸ್ ಎಚ್ ಶಿವರುದ್ರಪ್ಪ, ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ, ಹಳಿಯಾಳ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಪದ್ಮಕ್ಕ, ವಿ ಆರ್‌ಡಿ ಎಮ್ ಟ್ರಸ್ಟನ ವಿವೇಕ ಹೆಗಡೆ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ ನಾಯ್ಕ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಪ್ರಾಶಾಂತ ನಾಯ್ಕ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಜಿ ಡಿ ಗಂಗಾಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಭಾವಿಕೇರಿ ಮುಂತಾದವರು ಭಾಗವಹಿಸಿದ್ದರು. ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರ ಕೇರಳದ ಕಾಸರಗೋಡಿನ ಗೋಪಾಲಕೃಷ್ಣ ಗೊಂಬೆಯಾಟ ತಂಡದವರು ನರಕಾಸುರ ವಧೆ ಪ್ರಸಂಗದ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ಪ್ರದರ್ಶಿಸಿದರು. ಎಂ.ಎನ್.ಹೆಗಡೆ, ಹಳವಳ್ಳಿ  ಹಾಗೂ ತಂಡ ಉತ್ತರ ಕನ್ನಡ, ಇವರು ವಿದುರಾತಿಥ್ಯ ಪ್ರಸಂಗದ ತಾಳಮದ್ದಳೆಯನ್ನು ಪ್ರಸ್ತುತ ಪಡಿಸಿದರು. ಸಂಜೆ ದುರ್ಗಾದೇವಿ ಸಭಾ ಭವನ, ಪೋಲಿಸ್ ಮೈದಾನದಲ್ಲಿ ಸಾಯಿರಾಮ ಯಕ್ಷಗಾನ ಮಂಡಳಿ, ಇವರು ಲವ-ಕುಶ ಪ್ರಸಂಗದ ಬಡಗುತಿಟ್ಟು ಯಕ್ಷಗಾನ ಮತ್ತು ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಹಳುವಳ್ಳಿ ಇವರು ನರಕಾಸುರ ಮೋಕ್ಷ ಪ್ರಸಂಗದ ತೆಂಕುತಿಟ್ಟು ಯಕ್ಷಗಾನವನ್ನು ಪ್ರಸ್ತುತ ಪಡಿಸಿದರು. ಶಿವಾಜಿ ಕಾಲೇಜಿನ ಸಭಾ ಭವನದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ನಿರ್ದೇಶಕರಾದ ಡಾ. ಬಸು ಬೇವಿನಗಿಡದ ಇವರು ಯಕ್ಷಗಾನ ಗೊಂಬೆಯಾಟ ಕುರಿತ ಉಪನ್ಯಾಸವನ್ನು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಕರಿಶೆಟ್ಟಿ ರುದ್ರಪ್ಪ ಅವರು ಮೂಡಲಪಾಯ ಯಕ್ಷಗಾನ ಕುರಿತ ಉಪನ್ಯಾಸವನ್ನು ಹಾಗೂ ಯಕ್ಷಗಾನ ಕಲಾವಿದರಾದ ಮಯೂರಿ ಉಪಾಧ್ಯಾಯ ಇವರು ಯಕ್ಷಗಾನ ಕಲಾವಿದರ ಅವಲೋಕನದಲ್ಲಿ ಮಹಿಳೆಯರ ಸ್ಥಿತಿಗತಿಯನ್ನು ಕುರಿತು ಉಪನ್ಯಾಸ ಮಾಡಿದರು. ನಂತರ ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಇವರು ಏಕಲವ್ಯ ಪ್ರಸಂಗದ ಯಕ್ಷಗಾನ ಗೊಂಬೆಯಾಟವನ್ನು ಪ್ರಸ್ತುತಪಡಿಸಿದರು.  ದುರ್ಗಾದೇವಿ ಸಭಾ ಭವನದಲ್ಲಿ ಸಂಪ್ರದಾಯ ಟ್ರಸ್ಟ್ ಇವರು ಏಕಲವ್ಯ ಪ್ರಸಂಗದ ಮೂಡಲಪಾಯ ಯಕ್ಷಗಾನವನ್ನು ಹಾಗೂ ಸುಜಾತಾ ಮಹಿಳಾ ಯಕ್ಷಗಾನ ಮಂಡಳಿ, ಇವರು ಸುಧನ್ವಾರ್ಜುನ ಪ್ರಸಂಗದ ಬಡಗುತಿಟ್ಟು ಯಕ್ಷಗಾನವನ್ನು ಪ್ರಸ್ತುತಪಡಿಸಿದರು.

 

೨೦೧೮ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ

            ಅಕಾಡೆಮಿಯು ೨೦೧೮ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭವನ್ನು ದಿನಾಂಕ:೦೯.೧೨.೨೦೧೯ರಂದು ಕುವೆಂಪು ಕಲಾಮಂದಿರ, ಚಿಕ್ಕಮಗಳೂರು ಇಲ್ಲಿ ಏರ್ಪಡಿಸಲಾಗಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸನ್ಮಾನ್ಯ ಇಲಾಖಾ ಸಚಿವರಾದ  ಶ್ರೀ ಸಿ.ಟಿ.ರವಿ, ರವರು ಉದ್ಘಾಟಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ  ಶ್ರೀ ಎಸ್.ರಂಗಪ್ಪ. ಎಫ್.ಸಿ.ಎ, ಕ.ಆ.ಸೇ ಇವರು ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕ ಬಿಡುಗಡೆಯನ್ನು ಮಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾನ್ಯ ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ  ಶ್ರೀ ಜಯಣ್ಣ ಅವರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸಿ.ರಮೇಶ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯರು ಒಡಗೂಡಿ ಶ್ರೀ ಬಂಗಾರಾಚಾರಿ, ಕಬ್ಬಳ್ಳಿ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  ಶ್ರೀ ರಾಮರಾಜೇ ಅರಸ್, ಶ್ರೀ ಸುಬ್ರಮಣ್ಯಭಟ್ ಮಾಂಬಾಡಿ, ಶ್ರೀ ಬಿ.ಗುಂಡ್ಮಿ ಸದಾನಂದ ಐತಾಳ್, ಶ್ರೀ ಎಸ್.ಸಿ. ಜಗದೀಶ್, ಶ್ರೀ ಕೆ.ಮೋಹನ್ ಇವರುಗಳಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಶ್ರೀ ಕುಂಬ್ಳೆ ಶ್ರೀಧರರಾವ್, ಶ್ರೀ ಮೋಹನ ಬೈಪಡಿತ್ತಾಯ, ಶ್ರೀ ಮಣೂರು ನರಸಿಂಹ ಮಧ್ಯಸ್ಥ, ಶ್ರೀ ನಿತ್ಯಾನಂದ ಹೆಬ್ಬಾರ್, ಶ್ರೀ ಕೃಷ್ಣ ಮಾಣಿ ಅಗೇರ [ನಿಧನ], ಶ್ರೀ ಭಾಸ್ಕರ್ ಜೋಶಿ, ಶಿರಳಗಿ, ಶ್ರೀ ಎಸ್.ಪಿ.ಮುನಿಕೆಂಪಯ್ಯ,   ಶ್ರೀ ನಾರಾಯಣಸ್ವಾಮಿ, ಡಾ. ಪಿ.ಶಾಂತಾರಾಮ ಪ್ರಭು, ಶ್ರೀ ಮದಂಗಲ್ಲು ಆನಂದ ಭಟ್ ಇವರುಗಳಿಗೆ ಯಕ್ಷಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಡಾ. ಎನ್.ನಾರಾಯಣ ಶೆಟ್ಟಿ-ಛಂದಸ್ಪತಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್-ಪ್ರಸಂಗಾಭರಣ, ಡಾ. ಕೆ.ಎಂ.ರಾಘವ ನಂಬಿಯಾರ್-ರAಗವಿದ್ಯೆಯ ಹೊಲಬ ಇವರುಗಳಿಗೆ ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕರಿಸಿ ಗೌರವಿಸಲಾಯಿತು. ಜೊತೆಗೆ ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಶ್ರೀಮತಿ ಕಾವ್ಯಶ್ರೀ ನಾಯಕ ಇವರು ತೆಂಕುತಿಟ್ಟು, ಶ್ರೀ ಪ್ರಸಾದ ಮೊಗೆಬೆಟ್ಟು ಇವರು ಬಡಗುತಿಟ್ಟು ಮತ್ತು ಶ್ರೀ ಎ.ಎನ್.ತಿಮ್ಮಯ್ಯ ಅವರು ಮೂಡಲಪಾಯ ಯಕ್ಷಗಾನ ಕೂಡುವಿಕೆಯನ್ನು ಪ್ರಸ್ತುತ ಪಡಿಸಿದರು. ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ, ಸಿದ್ದಾಪುರ ಇವರು ಶರಸೇತು ಬಂಧನ ಪ್ರಸಂಗದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.

 

ಭಾರತೀಯ ಸಾಂಪ್ರದಾಯಿಕ ರಂಗಭೂಮಿ ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು (ಸಂಬAಧ ಮತ್ತು ಸಮನ್ವಯ) ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ

            ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಬೆಂಗಳೂರಿನ ನೂಪುರ ಭ್ರಮರಿ (ರಿ) ಇವರ ಸಹಯೋಗದಲ್ಲಿ ದಿನಾಂಕ:೧೫.೧೨.೨೦೧೯ರಂದು ಶ್ರೀ ಜಯರಾಮ ಸೇವಾ ಮಂಡಳಿ (ರಿ), ಜಯನಗರ, ಬೆಂಗಳೂರು ಇಲ್ಲಿ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಸಂಸ್ಕೃತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ವಿದ್ವಾಂಸರಾದ ಶತಾವಧಾನಿ ಡಾ. ಆರ್.ಗಣೇಶ್ ಅವರು ನೃತ್ತ, ನೃತ್ಯ, ನಾಟ್ಯಗಳಲ್ಲಿ ಎಲ್ಲಾ ಪ್ರಾದೇಶಿಕ ರಂಗಭೂಮಿಗಳು ಬೇರೆ ಬೇರೆ ಸ್ತರಗಳನ್ನು ವ್ಯಾಖ್ಯಾನ ರೂಪವನ್ನು ಅವಲಂಬಿಸಿಕೊಳ್ಳುತ್ತಾ ಮುನ್ನಡೆಗೆ ಬಂದಿದೆ. ಆದರೆ, ನಾಟ್ಯ ಪದ್ಧತಿಗಳು ಹಿಂದುಳಿದಿರುವುದು ದುರದೃಷ್ಟಕರ. ನಾಟ್ಯ ಪದ್ಧತಿಯ ಆಕರ್ಷಣೆಯೇ ತಾಂತ್ರಿಕವಾಗಿ ಬೆಳೆದು ಬಂದು ಸಿನಿಮಾ ಆಗಿದೆ. ಯಕ್ಷಗಾನವನ್ನು ಪ್ರಾತಿನಿಧಿಕವಾಗಿ ಇಟ್ಟುಕೊಂಡರೆ ಅದು ಒಂದು ಬಗೆಯ ಸನಾತನ ಧರ್ಮವಿದ್ದಂತೆ. ತುಂಬಾ ಸ್ವಾತಂತ್ರö್ಯವಿರುವ ಜತೆಗೆ ಬಾಧ್ಯತೆಯೂ ಅದಕ್ಕಿರುತ್ತದೆ. ಯಕ್ಷಗಾನವು ರಂಜನೆ ತಾತ್ಪರ್ಯ ಹೊಂದಿರುವ ನೃತ್ತ. ದಕ್ಷಿಣ ಭಾರತದಲ್ಲಿ ಯಕ್ಷಗಾನಕ್ಕೆ ಹತ್ತಿರವಾದ ಹಲವು ರಂಗ ಕಲೆಗಳಿವೆ. ಕೇರಳದಲ್ಲಿ ಕಥಕ್ಕಳಿ, ಕೃಷ್ಣನಾಟ್ಟಂ, ಇವೆರಡಕ್ಕೂ ಮೂಲವಾದ ಕೂಡಿಯಾಟ್ಟಮ, ಯಕ್ಷಗಾನದಲ್ಲೂ ಪಡುವಲ್ಪಾಯ, ಮೂಡಲ್ಪಾಯ ಸೇರಿ ಹಲವು ಪ್ರಕಾರದ ರಂಗಭೂಮಿಗಳಿವೆ. ಯಕ್ಷಗಾನದ ಗಾನ ಕ್ರಮ ಚಲನೆಗೆ ತಕ್ಕಂತೆ ರೂಪುಗೊಂಡಿರುತ್ತದೆ. ಉಪರೂಪಗಳಲ್ಲಿ ಸಾಹಿತ್ಯದ ಗಾನ ಸ್ವರೂಪವಿರುತ್ತದೆ. ಸಂವಾದವನ್ನೂ ಅವರೇ ಬೆಳೆಸಿಕೊಂಡು ಹೋಗುತ್ತಾರೆ. ಯಕ್ಷಗಾನಕ್ಕೆ ಈ ಸ್ವಾತಂತ್ರö್ಯ ಬಹಳ ದೊಡ್ಡದಾಗಿದ್ದು, ಅನುಕೂಲಕ್ಕೆ ತಕ್ಕಂತೆ ಹಿಗ್ಗಿಸುವುದು ಮತ್ತು ಕುಗ್ಗಿಸಬಹುದಾಗಿದೆ ಎಂದರು.

 

 

ಈ ಕೆಳಕಂಡಂತೆ ೫ ಅಧ್ಯಯನ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

೧. ಏಕವ್ಯಕ್ತಿ ಪ್ರಯೋಗ ಮತ್ತು ನಾಟ್ಯಶಾಸ್ತç - ಶತಾವಧಾನಿ ಡಾ. ಆರ್.ಗಣೇಶ್, ಬೆಂಗಳೂರು

೨. ತೆಂಕುತಿಟ್ಟು ಆಂಗೀಕಾಭಿನಯಕ್ಕೆ ಭರತನಾಟ್ಯದ ಪ್ರಭಾವ: ಸಾಧ್ಯತೆ ಬಾಧ್ಯತೆಗಳು -            

   ಶ್ರೀ ಸೂರಿಕುಮೇರು ಗೋವಿಂದ ಭಟ್, ಸಫಲಪುರ (ಪ್ರಾತ್ಯಕ್ಷಿಕೆ: ಶ್ರೀ ದಿವಾಣ ಶಿವಶಂಕರ್ ಭಟ್)

೩. ಯಕ್ಷಗಾನದೊಂದಿಗೆ ಭರತನೃತ್ಯದ ಹೊಂದಾಣಿಕೆ: ಪ್ರಯೋಗ ಮೀಮಾಂಸೆ

    ಡಾ. ಶೋಭಾ ಶಶಿಕುಮಾರ್, ಬೆಂಗಳೂರು (ಪ್ರಾತ್ಯಕ್ಷಿಕೆ: ಶ್ರೀಮತಿ ಮಧುಲಿಕಾ ಶ್ರೀವತ್ಸ)

೪. ಬಡಗು ಯಕ್ಷಗಾನ: ಉತ್ತರ ದಕ್ಷಿಣಾದಿ ಕಲೆಗಳ ಪ್ರಭಾವ ಮತ್ತು ಕೊರಿಯೋಗ್ರಫಿ ಪ್ರಯೋಗ –

    ಶ್ರೀ ಕೆರೆಮನೆ ಶಿವಾನಂದ ಹೆಗಡೆ, ಇಡಗುಂಜಿ

೫. ಯಕ್ಷಗಾನಾಧಾರಿತ ಕೂಚಿಪುಡಿ ಅಡವುಗಳ ಪ್ರಾತ್ಯಕ್ಷಿಕೆ – ಡಾ. ವೀಣಾಮೂರ್ತಿ ವಿಜಯ್ ಮತ್ತು ತಂಡ

                                        (ಪ್ರಾತ್ಯಕ್ಷಿಕೆ: ಶ್ರೀಮತಿ ಶಮಾಕೃಷ್ಣ)

 

ಡಾ. ಪಾದೇಕಲ್ಲು ವಿಷ್ಣುಭಟ್, ಶ್ರೀ ಉಜಿರೆ ಅಶೋಕ ಭಟ್, ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ. ದ್ವರಿತಾ ವಿಶ್ವನಾಥ, ಶ್ರೀಮತಿ ಶಾಲಿನಿ ವಿಠಲ್, ಶ್ರೀಮತಿ ಸಾವಿತ್ರಿ ಶಾಸ್ತಿç ಮತ್ತು ಶ್ರೀ ದಿವಾಕರ ಹೆಗಡೆ ಇವರುಗಳು ಅವಲೋಕನಾರರಾಗಿ ಭಾಗವಹಿಸಿದ್ದರು.

ಲುಪ್ತ ನಾಟ್ಯ-ಯಕ್ಷಗಾನ ತಾಳಮದ್ದಳೆ – ರಸಪ್ರತಿಪಾದನೆ-ಕರ್ಣಭೇದನ

ಹಿಮ್ಮೇಳ: ಶ್ರೀಮತಿ ಕಾವ್ಯಶ್ರೀ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀ ವೇಣು ಮಾಂಬಾಡಿ, ಶ್ರೀ ಮುರಾರಿ ಭಟ್

ಮುಮ್ಮೇಳ: ಶ್ರೀ ಉಜಿರೆ ಅಶೋಕ್ ಭಟ್, ಶ್ರೀ ದಿವಾಕರ ಹೆಗಡೆ

 

ಯಕ್ಷಭಾಣಿಕ – ಯಕ್ಷಗಾನ ಮತ್ತು ಭರತನೃತ್ಯ ಸಮಾಹಾರದ ಅಧ್ಯಯನನಿಷ್ಠ ಏಕವ್ಯಕ್ತಿ ಪ್ರಯೋಗ

ಹಿಮ್ಮೇಳ: ಶ್ರೀಮತಿ ಕಾವ್ಯಶ್ರೀ ಅಜೇಯ, ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್,

               ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀ ವೇಣು ಮಾಂಬಾಡಿ, ಶ್ರೀ ಮುರಾರಿ ಭಟ್

ರಂಗ ಪ್ರಸ್ತುತಿ: ಡಾ. ಮನೋರಮಾ ಬಿ.ಎನ್.

 

ಯಕ್ಷಗಾನ ಸಂಭ್ರಮ-೨೦೧೯ ಉಪನ್ಯಾಸ-ಸಂವಾದ-ಪ್ರದರ್ಶನ

ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕರ್ನಾಟಕ ಸಂಘ (ರಿ), ಮಂಡ್ಯ, ಕ್ಷೀರಸಾಗರ ಮಿತ್ರಕೂಟ (ರಿ), ಕೀಲಾರ ಮತ್ತು ಜಾನಪದ ಜನ್ನೆಯರು (ರಿ), ಮಂಡ್ಯ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ:೧೮.೧೨.೨೦೧೯ರAದು ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನ, ಮಂಡ್ಯ ಇಲ್ಲಿ ಯಕ್ಷಗಾನ ಸಂಭ್ರಮ-೨೦೧೯ ಉಪನ್ಯಾಸ-ಸಂವಾದ-ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಎಫ್.ಸಿ.ಎ., ಕ.ಆ.ಸೇ., ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಡ್ಯ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಆರ್. ಅನಿತಾ ಅವರು, ಮಂಡ್ಯ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಡಿ.ಪಿ.ಸ್ವಾಮಿ ಅವರು, ಕ್ಷೀರಸಾಗರ ಮಿತ್ರಕೂಟದ ಪೋಷಕರುಗಳಾದ ಶ್ರೀ ಡಿ. ಶಿವರಾಜು ಮತ್ತು ಶ್ರೀ ಕೆ.ಎಸ್.ಚಂದ್ರಶೇಖರ್ ಅವರು ಮತ್ತು ಪ್ರಗತಿಪರ ಯುವ ಲೇಖಕರಾದ ಶ್ರೀ ನಾರಾಯಣ ತಿರುಮಲಾಪುರ ಅವರುಗಳು ಉಪಸ್ಥಿತರಿದ್ದರು.

 

ಈ ಕಾರ್ಯಕ್ರಮದಲ್ಲಿ ಈ ಕೆಳಕಂಡಂತೆ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

 

ಗೋಷ್ಠಿ-೧

೧. ವಿಷಯ : ಮೂಡಲಪಾಯ-ಸಂಗೀತ ವೈಶಿಷ್ಟö್ಯತೆಗಳು         ಮಂಡನೆ : ಶ್ರೀ ಹೆಚ್.ಡಿ. ನರಸೇಗೌಡ

೨. ವಿಷಯ : ಕನ್ನಡ ಉಪನ್ಯಾಸಕರು, ಬೆಂಗಳೂರು            ಮAಡನೆ : ಡಾ. ಎಸ್.ಬಿ. ನಂದೀಶಪ್ಪ

ಅಧ್ಯಕ್ಷತೆ : ಡಾ. ಚಕ್ಕರೆ ಶಿವಶಂಕರ್, ಹಿರಿಯ ಜಾನಪದ ವಿದ್ವಾಂಸರು, ಬೆಂಗಳೂರು

ಉಪಸ್ಥಿತಿ: ಶ್ರೀ ಕೆ.ಎಸ್. ಸೋಮಶೇಖರ್, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಕೆ.ಆರ್.ಪೇಟೆ

               ಶ್ರೀ ಎಂ.ಬಸಪ್ಪ, ನೆಲಮಾಕನಹಳ್ಳಿ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಮಳವಳ್ಳಿ

 

ಗೋಷ್ಠಿ-೨

ಸಂವಾದ ಗೋಷ್ಠಿ ಹಾಗೂ ಸಮಾರೋಪ

ಅಧ್ಯಕ್ಷತೆ : ಪ್ರೊ. ಬಿ.ಜಯಪ್ರಕಾಶ ಗೌಡ, ಅಧ್ಯಕ್ಷರು, ಕರ್ನಾಟಕ ಸಂಘ (ರಿ), ಮಂಡ್ಯ

ಉಪಸ್ಥಿತಿ : ಪ್ರೊ. ಎಂ.ಎ. ಹೆಗಡೆ, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ

ಆಶಯ ನುಡಿ: ಡಾ. ಚಿಕ್ಕಣ್ಣ ಎಣ್ಣೆಕಟ್ಟೆ, ಜಾನಪದ ವಿದ್ವಾಂಸರು, ತುಮಕೂರು

ಸಮನ್ವಯ : ಡಾ. ಕುರುವ ಬಸವರಾಜು, ಜಾನಪದ ವಿದ್ವಾಂಸರು, ಬೆಂಗಳೂರು

 

ಡಾ. ಜಯಲಕ್ಷ್ಮಮ್ಮ ಸೀತಾಪುರ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ರಂಗಾರೆಡ್ಡಿ ಕೋಡಿರಾಂಪುರ,            ಡಾ. ಚಂದ್ರು ಕಾಳೇನಹಳ್ಳಿ, ಶ್ರೀ ಕೆ.ಬಿ.ಮಲ್ಲಿಕಾರ್ಜುನ ಮಹಾ ಮಾನೆ, ಶ್ರೀಮತಿ ಬಾ.ಹ.ರಮಾಕುಮಾರಿ,           ಶ್ರೀ ಕೆ.ಜೆ.ವೆಂಕಟೇಶ್ ಹಾಸನ, ಡಾ. ಆರ್.ಪಿ.ಛಾಯಾ ಮತ್ತು ಡಾ. ತೇಜಸ್ವಿನಿ ಇವರುಗಳು ಸಂವಾದದಲ್ಲಿ ಭಾಗವಹಿಸಿದ್ದರು.

 

ಹೇಮಾಂಬಿಕ ಯಕ್ಷಗಾನ ಕಲಾಸಂಘ (ರಿ), ತಲಕಾಡು ಇವರಿಂದ ಮೂಡಲಪಾಯ ತಾಳ-ಮೇಳ ಪ್ರದರ್ಶನ, ಶ್ರೀ ಭೈರವೇಶ್ವರ ಗ್ರಾಮಾಂತರ ಪ್ರೌಢಶಾಲೆ, ಬಿಳಿದೇಗುಲ, ಮಂಡ್ಯ ತಾಲೂಕು ವಿದ್ಯಾರ್ಥಿಗಳಿಂದ ಕರಿಭಂಟನ ಕಾಳಗ-ಯಕ್ಷಗಾನ ಪ್ರದರ್ಶನವನ್ನು ಹಾಗೂ ಸಮಸ್ತರು (ರಿ), ಹರಪ್ಪನಹಳ್ಳಿ, ಬಳ್ಳಾರಿ ಇವರಿಂದ ಏಕಲವ್ಯ – ಮೂಡಲಪಾಯ ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತ ಪಡಿಸಿದರು.

 

ಯಕ್ಷಗಾನ ರಂಗಕ್ಕೆ ದಶಾವತಾರಿ ಶ್ರೀ ಸೂರಿಕುಮೇರು ಗೋವಿಂದ ಭಟ್ಟರ ಕೊಡುಗೆ ಒಂದು ದಿನದ ವಿಚಾರ ಸಂಕಿರಣ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಕ್ಷಿಣ ಕನ್ನಡ ಮಿತ್ರವೃಂದ (ರಿ) ಹಾಗೂ ಯಕ್ಷದೀವಿಗೆ (ರಿ) ಸಹಕಾರದೊಂದಿಗೆ ೨೦೧೯ರ ಡಿಸೆಂಬರ್ ೨೨ರಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಎಸ್.ಎಸ್.ಪುರಂ, ತುಮಕೂರು ಇಲ್ಲಿ “ಯಕ್ಷಗಾನ ರಂಗಕ್ಕೆ ದಶಾವತಾರಿ ಶ್ರೀ ಸೂರಿಕುಮೇರು ಗೋವಿಂದ ಭಟ್ಟರ ಕೊಡುಗೆ” ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಈ ವಿಚಾರ ಸಂಕಿರಣದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ನೆರವೇರಿಸಿದರು. ಹೆಸರಾಂತ ಯಕ್ಷಗಾನ ಕಲಾವಿದರಾದ ಶ್ರೀ ಸೂರಿಕುಮೇರು ಗೋವಿಂದ ಭಟ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಸಂಕಿರಣದಲ್ಲಿ ೪ ವಿಷಯಗಳುಳ್ಳ ೩ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಗೋಷ್ಠಿ-೧

೧) ಗೋವಿಂದ ಭಟ್ಟರ ಪಾತ್ರ ಪ್ರಸ್ತುತಿಯಲ್ಲಿ ಅಂಗೋಪಾAಗ ಸಮನ್ವಯ -

     ಶ್ರೀ ಉಜಿರೆ ಅಶೋಕ ಭಟ್, ಹಿರಿಯ ಯಕ್ಷಗಾನ ಕಲಾವಿದರು

೨) ಗೋವಿಂದ ಭಟ್ಟರ ವಾಚಿಕೆ

    - ಶ್ರೀ ರಾಧಕೃಷ್ಣ ಕಲ್ಚಾರ್ ವಿಟ್ಲ, ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಸದಸ್ಯರು, ಕ.ಯ.ಬ.

 

ಗೋಷ್ಠಿ-೨

೩) ಕಲೋಪಾಸಕರ ದೃಷ್ಟಿಯಲ್ಲಿ ಗೋವಿಂದ ಭಟ್ಟರು

     ಶ್ರೀ ಗಣರಾಜ ಕುಂಬ್ಳೆ, ಹಿರಿಯ ಕಲಾವಿದರು ಹಾಗೂ ಕನ್ನಡ ಉಪನ್ಯಾಸಕರು

     ಶ್ರೀ ರಾಮಕುಂಜೇಶ್ವರ, ಪ.ಪೂ. ಕಾಲೇಜು, ರಾಮಕುಂಜ

೪) ಹಿಮ್ಮೇಳ ಹಾಗೂ ಸಹಕಲಾವಿದರೊಂದಿಗೆ ಗೋವಿಂದ ಭಟ್ಟರ ಸಾಂಗತ್ಯ

     ಶ್ರೀ ಪುರುಷೋತ್ತಮ ಭಟ್, ಅರ್ಥಶಾಸ್ತç ಪ್ರಾಧ್ಯಾಪಕರು ಹಾಗೂ ಹಿರಿಯ ಭಾಗವತರು

 

ಗೋಷ್ಠಿ-೩

ಶ್ರೀ ಸೂರಿಕುಮೇರು ಗೋವಿಂದ ಭಟ್ಟರೊಂದಿಗೆ ಸಂವಾದದಲ್ಲಿ ಶ್ರೀ ಉಜಿರೆ ಅಶೋಕ್ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಗಣರಾಜ ಕುಂಬ್ಳೆ, ಶ್ರೀ ಸಿಬಂತಿ ಪದ್ಮನಾಭ ಕೆ.ವಿ., ಶ್ರೀ ಶಶಾಂಕ ಅರ್ನಾಡಿ, ಶ್ರೀಮತಿ ಆರತಿ ಪಟ್ರಮೆ ಈ ವಿದ್ವಾಂಸರುಗಳು ಭಾಗವಹಿಸಿದ್ದರು.

ಶ್ರೀ ಸೂರಿಕುಮೇರು ಗೋವಿಂದ ಭಟ್ಟರಿಗೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ವಹಿಸಿದ್ದರು. ಹೆಸರಾಂತ ಯಕ್ಷಗಾನ ಕಲಾವಿದರಾದ                    ಶ್ರೀ ಸರಿಕುಮೇರು ಗೋವಿಂದ ಭಟ್ ಅವರು, ದಕ್ಷಿಣ ಕನ್ನಡ ಮಿತ್ರವೃಂದ ಅಧ್ಯಕ್ಷರಾದ ಶ್ರೀ ಲ್ಯಾನ್ಸಿ ಹೆಚ್. ಪಾಯಸ್ ಅವರು ಮತ್ತು ವಾಸವಿ ಸಂಘದ ಅಧ್ಯಕ್ಷರಾದ ಶ್ರೀ ಆರ್.ಎಲ್.ರಮೇಶ್ ಬಾಬು ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಏಕಾದಶೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವನ್ನು ಕು|| ಪ್ರಮೋದಿನಿ ಎನ್. ಆಚಾರ್ಯ ಮತ್ತು ತಂಡದವರು (ವಿದ್ಯಾರ್ಥಿಗಳಿಂದ) ಪ್ರಸ್ತುತ ಪಡಿಸಿದರು. ಈ ಪ್ರದರ್ಶನದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಈ ಕೆಳಕಂಡ ವಿದ್ವಾಂಸರುಗಳು/ಕಲಾವಿದರು ಭಾಗವಹಿಸಿದ್ದರು.

 

ಹಿಮ್ಮೇಳದಲ್ಲಿ

ಶ್ರೀ ಅರ್ಜುನ್ ರಾವ್ ಕೋರ್ಡೇಲು, ಶ್ರೀ ವೇಣು ಮಾಂಬಾಡಿ, ಶ್ರೀ ಅಕ್ಷಯರಾವ್ ವಿಟ್ಲ, ಶ್ರೀ ಮುರಳಿ ಬಾಯಾಡಿ

 

ಮುಮ್ಮೇಳ

ದೇವೇಂದ್ರ - ಪ್ರಮೋದಿನಿ ಎನ್. ಆಚಾರ್ಯ, ಅಗ್ನಿ - ಸಂವೃತ ಶರ್ಮಾ ಎಸ್.ಪಿ., ವರುಣ – ಜನ್ಯ ಟಿ.ಜೆ.,              ನಾಡೀಜಂಘ – ಲಹರಿ ಟಿ.ಜೆ., ಮಂತ್ರಿ - ನಿಶಾಂತ್ ಓಂಕಾರ್, ದೇವದೂತ – ಕಿರಣ್, ಗರುಡ - ಧನುಷ್ ಓಂಕಾರ್, ಮೇಘಮುಖಿ - ನಾಗಮಣಿ, ಮುರಾಸುರ - ಪೃಥ್ವಿಚಂದ್ರ ಪೆರುವಡಿ, ಈಶ್ವರ – ಇಂಚರ, ವಿಷ್ಣು - ಸಾತ್ವಿಕ ನಾರಾಯಣ ಕೆ, ದೇವಿ - ಖುಷಿ ಶರ್ಮಾ ಎಸ್.ಪಿ.ಮ, ರಕ್ಕಸದೂತ - ವೈಭವ್

 

ಗದಾಯುದ್ಧ ಯಕ್ಷಗಾನ ಪ್ರದರ್ಶನ (ಹಿರಿಯ ಕಲಾವಿದರಿಂದ) ವಿದುಷಿ ಪ್ರೇಮಾ ಹೆಗಡೆ ಮತ್ತು ತಂಡದವರು ಪ್ರಸ್ತುತ ಪಡಿಸಿದರು. ಈ ಪ್ರದರ್ಶನದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಈ ಕೆಳಕಂಡ ವಿದ್ವಾಂಸರುಗಳು/ಕಲಾವಿದರು ಭಾಗವಹಿಸಿದ್ದರು.

 

ಹಿಮ್ಮೇಳದಲ್ಲಿ

ಶ್ರೀ ಪುರುಷೋತ್ತಮ ಭಟ್, ಶ್ರೀ ವೇಣು ಮಾಂಬಾಡಿ, ಶ್ರೀ ಅಕ್ಷಯರಾವ್ ವಿಟ್ಲ, ಶ್ರೀ ಶ್ರೀಶರಾವ್ ನಿಡ್ಲೆ

 

ಮುಮ್ಮೇಳ

ಕೌರವ - ಆರತಿ ಪಟ್ರಮೆ, ಭೀಮ - ಶಶಾಂಕ ಅರ್ನಾಡಿ, ಸಂಜಯ - ಉಜಿರೆ ಅಶೋಕ ಭಟ್, ಅಶ್ವತ್ಥಾಮ – ಕುಮಾರ ಸುಬ್ರಹ್ಮಣ್ಯ, ಧರ್ಮರಾಯ - ಸಿಬಂತಿ ಪದ್ಮನಾಭ, ಅರ್ಜುನ - ಪ್ರೇಮಾ ಹೆಗಡೆ, ನಕುಲ - ವಿಜಯಶಂಕರ್, ಸಹದೇವ - ಹೇಮಲತಾ ಎಂ.ಎಸ್., ಕೃಷ್ಣ - ವಾಹಿನಿ ಅರವಿಂದ, ಬಲರಾಮ - ಈಶ್ವರಚಂದ್ರ ನಿಡ್ಲೆ

 

ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ-ಪಂಚ ಪಾವನ ಕಥಾ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷವಾಹಿನಿ (ರಿ), ಬೆಂಗಳೂರು ಇವರ ಸಹಯೋಗದಲ್ಲಿ ೨೦೧೯ರ ಡಿಸೆಂಬರ್ ೨೭ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ-ಪಂಚ ಪಾವನ ಕಥಾ” ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  ಮಾನ್ಯ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಕ್ಕರೆ ಖಾತೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಈ ಡಿಜಿಟಲೀಕರಣದ ಲೋಕಾರ್ಪಣೆಯನ್ನು ಮಾಡಿ, ಡಿಜಿಟಲೀಕರಣ ವಿಚಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಉತ್ತಮ ಕೆಲಸ ಮಾಡಿದೆ. ಇದು ನಮ್ಮ ಕಲೆ ಮತ್ತು ಸಮಸ್ಕೃತಿಯನ್ನು ಸಂರಕ್ಷಿಸುವ ಮಾರ್ಗವಾಗಿದೆ ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಶಿಶು ಸಾಹಿತ್ಯ, ಮಹಿಳಾ ಸಾಹಿತ್ಯವನ್ನು ಗಂಭೀರ ಸಾಹಿತ್ಯವೆಂದು ಪರಿಗಣಿಸುವ ಹಾಗೂ ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯದ ವಸ್ತುವಾಗಿ ನೋಡುತ್ತಿಲ್ಲ. ಯಾವ ಪ್ರಕಾರದ ಸಾಹಿತ್ಯಕ್ಕೂ ಯಕ್ಷಗಾನ ಸಾಹಿತ್ಯ ಕಡಿಮೆ ಇಲ್ಲ. ಪೌರಾಣಿಕ ಕಥೆಗಳನ್ನು ತನ್ನದೇ ಶೈಲಿಯಲ್ಲಿ ಜನರನ್ನು ಯಕ್ಷಗಾನಗಳು ಮುಟ್ಟಿಸುತ್ತಿವೆ ಎಂದರು.

 

ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರಾದ (ಇ-ಆಡಳಿತ) ಶ್ರೀ ಬೇಳೂರು ಸುದರ್ಶನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯಕ್ಷಗಾನ ಅಕಾಡೆಮಿಯು ೪೪ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿರುವುದು ಅಭಿನಂದನಾರ್ಹ. ಯಕ್ಷಗಾನ ಪ್ರಸಂಗಗಳನ್ನು ತಾಳೆಗರಿಯಲ್ಲಿ ಮುದ್ರಣ ಮಾಡಿದರೆ ಆಧುನಿಕ ತಂತ್ರಜ್ಞಾನವನ್ನು ನಮ್ಮ ಸಂಸ್ಕೃತಿ, ಪರಂಪರೆಯು ಜ್ಞಾನದ ರಕ್ಷಣೆಗೆ ಬಳಕೆ ಮಾಡಿದಂತೆ ಆಗಲಿದೆ. ಜೊತೆಗೆ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಐನಕೈ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎಸ್.ರಂಗಪ್ಪ ಎಫ್.ಸಿ.ಎ. ಕ.ಆ.ಸೇ., ಹಾಗೂ ಯಕ್ಷವಾಹಿನಿಯ ಅಧ್ಯಕ್ಷರಾದ ಡಾ. ಆನಂದರಾಮ ಉಪಾಧ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಮೂಡಲಪಾಯ ಯಕ್ಷಗಾನ ಪರಂಪರೆ - ಪುನರ್ ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು, ಕರ್ನಾಟಕ ಸಂಘ (ರಿ), ಮಂಡ್ಯ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ತುಮಕೂರು ಜಿಲ್ಲಾ ಘಟಕದ ಸಹಯೋಗದಲ್ಲಿ ೨೦೨೦ರ ಜನವರಿ ೯ರಂದು ಕನ್ನಡ ಭವನ, ಅಮಾನಿಕೆರೆ ಪಾರ್ಕ್ ಮುಂಭಾಗ, ತುಮಕೂರು ಇಲ್ಲಿ “ಮೂಡಲಪಾಯ ಯಕ್ಷಗಾನ ಪರಂಪರೆ-ಪುನರ್ ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶ”ವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದ ಉದ್ಘಾಟನೆಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ ಅವರು ನೆರವೇರಿಸಿ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಶಕ್ತಿ ತುಂಬಿ ಅವುಗಳನ್ನು ಅಭ್ಯುದಯಕ್ಕೆ ತರುವವರನ್ನು ಸಂಸ್ಕಾರವಂತರೆಂದು ಕರೆಯುತ್ತೇವೆ. ಇಂತಹ ಸಂಸ್ಕಾರವಂತರ ಅವಶ್ಯಕತೆ ಇಂದು ಹೆಚ್ಚಿದೆ. ಯುವ ಜನಾಂಗ ಸಿನಿಮಾ ಮತ್ತಿತರೆ ಖುಷಿ ಕೊಡುವ ಮಾಧ್ಯಮಗಳತ್ತ ಆಸಕ್ತಿ ಬೆಳೆಸಿಕೊಂಡಿರಬಹುದು. ಆದರೆ ಅವೆಲ್ಲವೂ ಅವರಿಗೆ ನಿರಾಸಕ್ತಿ ಮೂಡಿಸಿ ಪುನಃ ಪ್ರಾಚೀನ ಕಲೆಗಳ ಕಡೆಗೆ ವಾಲುವುದರಲ್ಲಿ ಅಂಶಯವಿಲ್ಲ. ಅಲ್ಲಿಯವರೆಗೆ ನಾವು ಪ್ರಾಚೀನ ಕಲೆಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ. ತಿಮ್ಮೇಗೌಡ ಐ.ಎ.ಎಸ್. (ನಿ), ಅವರು ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ, ೧೪ ಜಿಲ್ಲೆಗಳಲ್ಲಿ ಮೂಡಲಪಾಯ ಯಕ್ಷಗಾನ ಪ್ರಾದೇಶಿಕ ಕಲೆಯಾಗಿದೆ. ಮೂಡಲಪಾಯವು ಕಲೆ ಉಳಿವು ಮತ್ತು ಬೆಳವಣಿಗೆಗೆ ಭಾಗವತರು, ಕಲಾವಿದರು ಒಟ್ಟಾಗಬೇಕಿದೆ ಎಂದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ಘನ ಉಪಸ್ಥಿತರಿದ್ದು, ಮೂಡಲಪಾಯ ಯಕ್ಷಗಾನ ಕಲೆಯೂ ಪಡುವಲಪಾಯ ಯಕ್ಷಗಾನ ಕಲೆಗಿಂತ ಕಡಿಮೆಯೇನಿಲ್ಲ. ಆದರೆ ವಿದ್ವಾಂಸರು ಸೇರಿದಂತೆ ಅನೇಕರು ಪಡುವಲಪಾಯ ಯಕ್ಷಗಾನ ಶ್ರೇಷ್ಠವೆಂದು, ಮೂಡಲಪಾಯ ಯಕ್ಷಗಾನ ಕನಿಷ್ಠವೆಂದು ಬಿಂಬಿಸುತ್ತಿರುವುದು ಬೇಸರದ ಸಂಗತಿ. ಕಲಾವಿದರು, ಭಾಗವತರು ಮೂಡಲಪಾಯ ಕಲೆಯ ಕನಿಷ್ಠ ಎಂಬ ಭಾವನೆಯನ್ನು ಮೊದಲು ತೆಗೆದು ಹಾಕಬೇಕು. ಈ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ. ಜಯಪ್ರಕಾಶ ಗೌಡ ಅವರು ಮೂಡಲಪಾಯ ಯಕ್ಷಗಾನ ಕಲಾವಿದರು ಹೆಚ್ಚು ಓದದೇ ಇದ್ದರೂ ಪರಂಪರೆಯಿAದ ಬಂದ ಜ್ಞಾನ ಪಡೆದವರಾಗಿದ್ದಾರೆ. ಮೂಡಲಪಾಯ ಯಕ್ಷಗಾನದ ಬಗ್ಗೆ ಹಳೇ ಮೈಸೂರು ಭಾಗದ ಜನರಿಗೆ ಹೆಚ್ಚು ಗೊತ್ತಿಲ್ಲ. ಇದು ಮೂಡಲಪಾಯ ಯಕ್ಷಗಾನದ ಅವನತಿ ಸೂಚಿಸುತ್ತದೆ. ಹಾಗಾಗಿ ಹಳೆ ಮೈಸೂರು ಭಾಗದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಕಲೆಯ ಬಗ್ಗೆ ತಿಳಿಯಪಡಿಸಬೇಕು. ಕಲಾವಿದರನ್ನು ಒಗ್ಗೂಡಿಸಬೇಕು. ಈ ಕಲೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ನವೀಕರಿಸಬೇಕೆಂದರು. ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಬಾ.ಹ.ರಮಾಕುಮಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಇವರ ಸಹಯೋಗದಲ್ಲಿ ಹಾಗೂ ಕುರಿಯ ವಿಠಲ ಶಾಸ್ತ್ರೀ ಯಕ್ಷಗಾನ ಪ್ರತಿಷ್ಠಾನ (ರಿ), ಉಜಿರೆ ಇವರ ಸಂಯೋಜನೆಯೊಂದಿಗೆ ೨೦೨೦ರ ಜನವರಿ ೧೧ ಮತ್ತು ೧೨ರಂದು ಶ್ರೀ ಸಿದ್ಧವನ ಗುರುಕುಲ, ಉಜಿರೆಯಲ್ಲಿ “ಯಕ್ಷಗಾನ ಹಾಸ್ಯ ಪರಂಪರೆ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ” ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ.ವೀರೇಂದ್ರ ಹೆಗಡೆ ಅವರು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಹಾಸ್ಯಗಾರರಾದ         ಶ್ರೀ ಪೆರುವಡಿ ನಾರಾಯಣ ಭಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಡಗುತಿಟ್ಟಿನ ಯಕ್ಷಗಾನದ ಬೇಹಿನ ಚರ, ದಾರುಕ, ದೇವದೂತ, ರಕ್ಕಸದೂತ, ಕುದುರೆ ದೂತ, ವನಪಾಲಕಿ ಮತ್ತು ಕಂದರ ಹಾಗೂ ತೆಂಕು ತಿಟ್ಟಿನ ಯಕ್ಷಗಾನದ ಹೊಗಳಿಕೆ, ಹನುಮನಾಯಕ, ಮಂತ್ರವಾದಿ, ಕೊರವಂಜಿ, ಭೈರಾಗಿ, ರಂಗ-ರಂಗಿ ಮತ್ತು ಸಿಂಗ-ಸಿಂಗಿ– ಇವುಗಳ ಹಾಸ್ಯ ದಾಖಲೀಕರಣವನ್ನು ಮಾಡಿಸಲಾಯಿತು. ಉಜಿರೆಯ ಗೋವಿಂದ ಕಲಾ ಭಾವಾರ್ಪಣ ಸಂಯೋಜನಾ ಸಮಿತಿಯವರು ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಇದರಲ್ಲಿ ಹಿಮ್ಮೇಳ ಕಲಾವಿದರಾಗಿ ಶ್ರೀ ಪುತ್ತೂರು ರಮೇಶ ಭಟ್, ಶ್ರೀ ಬಿ.ಜನಾರ್ಧನ ತೋಳ್ಪಾಡಿತ್ತಾಯ, ಶ್ರೀ ಪಿ.ಜಿ.ಜಗನ್ನಿವಾಸರಾವ್ ಪುತ್ತೂರು ಮತ್ತು ಶ್ರೀ ನಂದಕುಮಾರ ಉಜಿರೆ ಇವರುಗಳು ಭಾಗವಹಿಸಿದ್ದರು. ಮುಮ್ಮೇಳ ಕಲಾವಿದರುಗಳಾಗಿ ಶ್ರೀಮತಿ ಆರತಿ ಪಟ್ರಮೆ, ಕು|| ನವ್ಯಾ ಹೊಳ್ಳ, ಶ್ರೀ ಲೋಹಿತ್ ಅಂಚನ್ ಎಸ್.ಕೆ., ಶ್ರೀ ಸಿಬಂತಿ ಪದ್ಮನಾಭ ಕೆ.ವಿ., ಕು|| ನಿಶಾ ಭಟ್ ಉಜಿರೆ ಮತ್ತು ಡಾ. ಮಾಧವ ಮೂಡುಕೊಣಾಜೆ ಇವರುಗಳು ಭಾಗವಹಿಸಿದ್ದರು. ಪರಂಪರೆ ಸಂಪ್ರದಾಯದ ಅಪಶಕುನಗಳು (ಒಂಟಿ ಬ್ರಾಹ್ಮಣ, ಮಡಕೆ ಮಾರುವವ, ಸೌದೆ ಮಾರುವವ, ಕಳ್ಳು ಮಾರುವವ, ಹರಿವೆ ಸೊಪ್ಪು ಮಲ್ಲಮ್ಮ, ಉರ್ದು ಸಾಯ್ಬ, ಮಾಪಿಳ್ಳೆ, ಕಿರಿಸ್ತಾನ್, ನರಸಣ್ಣ, ಗಾಣಿಗ ಮತ್ತು ಅಂಡುಕುಟ್ಟಿ – ಇವುಗಳ ಹಾಸ್ಯ ದಾಖಲೀಕರಣವನ್ನು ಮಾಡಿಸಲಾಯಿತು.

 

ಈ ಸಮಾರೋಪ ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ                  ಶ್ರೀ ಡಿ. ಹರ್ಷೇಂದ್ರ ಕುಮಾರ್ ಹಾಗೂ ಇದೇ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಬಿ.ಯೋಶವರ್ಮ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ              ಪ್ರೊ. ಎಂ.ಎ. ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಈ ಕೆಳಕಂಡ ಕಲಾವಿದರುಗಳಿಗೆ ಗೌರವ ಸಮರ್ಪಣೆಯನ್ನು ನೀಡಲಾಯಿತು.

 

ಗೌರವ ಸಮರ್ಪಣೆ:

ಶ್ರೀ ಪೆರುವಡಿ ನಾರಾಯಣ ಭಟ್, ಶ್ರೀ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಶ್ರೀ ಮುಖ್ಯಪ್ರಾಣ ಕಿನ್ನಿಗೋಳಿ

 

ಹಿರಿಯ ಸಂಪನ್ಮೂಲ ಕಲಾವಿದರು:

ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ಪೆರುವಡಿ ನಾರಾಯಣ ಭಟ್, ಶ್ರೀ ಸೂರಿಕುಮೇರು ಗೋವಿಂದ ಭಟ್,             ಶ್ರೀ ಕೋಳ್ಯೂರು ರಾಮಚಂದ್ರ ರಾವ್, ಶ್ರೀ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಶ್ರೀ ಮುಖ್ಯಪ್ರಾಣ ಕಿನ್ನಿಗೋಳಿ

 

 

ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸುವ ಕಲಾವಿದರು:

ಹಿಮ್ಮೆಳ:

ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಸೀತಾರಾಮ ತೋಳ್ಪಾಡಿತ್ತಾಯ, ಶ್ರೀ ಲಕ್ಷಿö್ಮÃಶ ಅಮ್ಮಣ್ಣಾಯ, ಶ್ರೀ ಜನಾರ್ಧನ ತೋಳ್ಪಾಡಿತ್ತಾಯ,   ಶ್ರೀ ಎನ್.ಜಿ.ಹೆಗಡೆ, ಶ್ರೀ ಕಾರ್ತಿಕ್ ಧಾರೇಶ್ವರ

 

ಮುಮ್ಮೇಳ:

ಶ್ರೀ ಬಂಟ್ವಾಳ ಜಯರಾಮ ಆಚಾರ್ಯ, ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ, ಶ್ರೀ ಎಂ.ಕೆ.ರಮೇಶ ಆಚಾರ್ಯ,                           ಶ್ರೀ ಉಬರಡ್ಕ ಉಮೇಶ ಶೆಟ್ಟಿ, ಶ್ರೀ ನಿಡ್ಲೆ ಗೋವಿಂದ ಭಟ್, ಶ್ರೀ ಅಂಬಾಪ್ರಸಾದ ಪಾತಾಳ, ಶ್ರೀ ಚಪ್ಪರಮನೆ ಶ್ರೀಧರ ಹೆಗಡೆ, ಶ್ರೀ ಉಜಿರೆ ನಾರಾಯಣ ಹಾಸ್ಯಗಾರ, ಶ್ರೀ ವಳಕ್ಕುಂಜ ರವಿಶಂಕರ ಭಟ್, ಶ್ರೀ ಮಹೇಶ ಮಣಿಯಾಣಿದೊಡ್ಡತೋಟ, ಶ್ರೀ ಮುವ್ವಾರು ಬಾಲಕೃಷ್ಣ ಮಣಿಯಾಣಿ

 

ಮಹಿಳಾ ಯಕ್ಷಸಂಭ್ರಮ (ಮಹಿಳೆಯರ ಕಾರ್ಯಕ್ರಮ)

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗೆಜ್ಜೆ (ರಿ), ಶಿರಸಿ, ಉತ್ತರ ಕನ್ನಡ, ಇವರ ಸಹಯೋಗದಲ್ಲಿ ೨೦೨೦ರ ಫೆಬ್ರವರಿ ೬ ಮತ್ತು ೭ರಂದು ಟಿ.ಎಂ.ಎಸ್. ಸಭಾಭವನ, ಶಿರಸಿಯಲ್ಲಿ “ಮಹಿಳಾ ಯಕ್ಷಸಂಭ್ರಮ” ಎಂಬ ಎರಡು ದಿನಗಳ ಮಹಿಳೆಯರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಿಳಾ ಯಕ್ಷಸಂಭ್ರಮ ಕಾರ್ಯಕ್ರಮದ ಉದ್ಘಾಟನೆ, ಶ್ರೀ ಇಟಗಿ ಮಹಾಬಲೇಶ್ವರ ಭಟ್ಟ ಅವರ ಇಟಗಿಯವರ ಯಕ್ಷಗಾನ ಪ್ರಸಂಗಗಳು ಮತ್ತು ಶ್ರೀ ಜಿ.ಎಂ.ಭಟ್, ಕೆ.ವಿ. ಅವರ ಪಂಚಧ್ರುಮ ಎಂಬ ಎರಡು ಪುಸ್ತಕಗಳು ಮತ್ತು ನೆಬ್ಬೂರು ನಾರಾಯಣ ಭಾಗವತರ ಸಾಕ್ಷö್ಯಚಿತ್ರ ಬಿಡುಗಡೆಯನ್ನು ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಸಂಸದಾರದ                   ಶ್ರೀ ಅನಂತಕುಮಾರ ಹೆಗಡೆ ಅವರು, ಯಲ್ಲಾಪುರ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ ಅವರು, ಶಿರಸಿ ತಾಲೂಕು ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ ಕಾಳೇರಮನೆ ಅವರು, ಶಿರಸಿಯ ಸಹಾಯಕ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ಹಾಗೂ ಶಿರಸಿಯ ಟಿ.ಎಂ.ಎಸ್. ಅಧ್ಯಕ್ಷರಾದ ಶ್ರೀ ಜಿ.ಎಂ.ಹಗಡೆ ಹುಳಗೋಳ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾಡಿನ ಸಮೃದ್ಧ ಕಲೆ ಯಕ್ಷಗಾನ ಪುರುಷ ಪ್ರಧಾನವಾಗಿದ್ದು, ದಕ್ಷಿಣೋತ್ತರ ಕನ್ನಡ ಜಿಲ್ಲೆಗೆ ಸೀಮಿತ ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ ರಾಜ್ಯದ ಮತ್ತಷ್ಟು ಜಿಲ್ಲೆಗಳಲ್ಲಿ ಯಕ್ಷಗಾನ ಕಲೆ ವ್ಯಾಪಿಸಿದೆ. ಈ ಕಲೆಗೆ ಕೊಡುಗೆ ನೀಡುತ್ತಿದ್ದಾರೆ ಎನ್ನುವುದನ್ನು ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ ಮಹಿಳಾ ಯಕ್ಷ ಸಂಭ್ರಮ ಪ್ರತಿಬಿಂಬಿಸುತ್ತಿದೆ.

 

ಈ ಕೆಳಕಂಡಂತೆ ೩ ಅಧ್ಯಯನ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

೧. ಉತ್ತರ ಕನ್ನಡದ ಬಡಗು – ಡಾ. ವಿಜಯನಳಿನಿ ರಮೇಶ, ನಿವೃತ್ತ ಪ್ರಾಧ್ಯಾಪಕರು

೨. ತೆಂಕುತಿಟ್ಟು ಯಕ್ಷಗಾನ ಮತ್ತು ಮಹಿಳೆಯರು-ಶ್ರೀಮತಿ ಸುಮಂಗಲಾ ರತ್ನಾಕರ್, ಭರತನಾಟ್ಯ ವಿದುಷಿ    

     ಹಾಗೂ ಯಕ್ಷಗಾನ ಕಲಾವಿದೆ

೩. ಮೂಡಲಪಾಯ ಯಕ್ಷಗಾನ – ಡಾ. ಸುಜಾತ ಅಕ್ಕಿ, ಅಧ್ಯಕ್ಷರು, ಜಾನಪದ ಜನ್ನೆಯರು (ರಿ), ಮಂಡ್ಯ

 

ಯಕ್ಷಗಾನ ಕಲಾ ಸಡಗರದಲ್ಲಿ ನಾಡಿನ ಮಹಿಳಾ ಯಕ್ಷಗಾನ ಹಾಗೂ ತಾಳಮದ್ದಲೆ ತಂಡಗಳು ಕಲಾ ಪ್ರದರ್ಶನ ನೀಡಿವೆ. ಈ ಮಹಿಳಾ ಯಕ್ಷ ಸಂಭ್ರಮದಲ್ಲಿ ಈ ಕೆಳಕಂಡಂತೆ ಒಟ್ಟು ೯ ಮಹಿಳಾ ಯಕ್ಷಗಾನ ತಂಡಗಳು ಪಾಲ್ಗೊಂಡಿದ್ದು, ಮೂಡಲಪಾಯ, ತೆಂಕುತಿಟ್ಟು, ಬಡಗುತಿಟ್ಟು ಪ್ರಕಾರಗಳ ಕಲಾಪ್ರದರ್ಶನಕ್ಕೆ ಬೆಂಗಳೂರು, ತುಮಕೂರು, ಮಂಗಳೂರು, ಜೊಯಿಡಾ ಭಾಗದ ಮಹಿಳಾ ತಂಡಗಳು ಭಾಗವಹಿಸಿವೆ.

 

ಯಕ್ಷಗಾನ ಕಾರ್ಯಕ್ರಮಗಳು

೧. ಮೂಡಲಪಾಯ ಗೊಂಬೆಯಾಟ : ಶ್ರೀಮತಿ ಕೋಮಲ್‌ರಾಜ್ ಮತ್ತು ತಂಡ, ಬೆಂಗಳೂರು

೨. ಯಕ್ಷಗಾನ : ಜಾಂಬವತಿ ಕಲ್ಯಾಣ (ರಚನೆ: ಹಲಸಿನಹಳ್ಳಿ ನರಸಿಂಹ ಶಾಸ್ತಿç) ಯಕ್ಷಸಿರಿ, ಬೆಂಗಳೂರು

೩. ಮೂಡಲಪಾಯ ಯಕ್ಷಗಾನ : ಶ್ರೀ ಎ.ಎನ್.ತಿಮ್ಮಯ್ಯ ಮತ್ತು ತಂಡ, ಅರಳಗುಪ್ಪೆ, ತುಮಕೂರು

೪. ಯಕ್ಷಗಾನ ಪೂರ್ವರಂಗ : ಶಾಲಾ ವಿದ್ಯಾರ್ಥಿನಿಯರಿಂದ

೫. ತೆಂಕುತಿಟ್ಟು ಯಕ್ಷಗಾನ : ಅಶ್ವಮೇಧ, ಮಹಿಳಾ ಯಕ್ಷಕೂಟ ಕದ್ರಿ, ಮಂಗಳೂರು

೬. ತಾಳಮದ್ದಲೆ : ಶ್ರೀ ಕೃಷ್ಣ ಸಂಧಾನ (ದೇವಿದಾಸ) - ಸಂಧ್ಯಾ ದೇಸಾಯಿ ಹಾಗೂ ತಂಡ

೭. ಯಕ್ಷಗಾನ : ಭಗವದ್ಗೀತೆ (ರಚನೆ-ಮಂಜುನಾಥ ಭಾಗ್ವತ ಹೊಸ್ತೋಟ) - ಸುದರ್ಶನ ಕಲಾಬಳಗ ಉಮ್ಮಚಗಿ

೮. ಯಕ್ಷಗಾನ : ಸುಧನ್ವಾರ್ಜುನ ಕಾಳಗ (ರಚನೆ- ಮೂಲಿಕೆ ರಾಮಕೃಷ್ಣಯ್ಯ) - ಸಪ್ತಸ್ವರ ಸೇವಾ ಸಂಸ್ಥೆ, ಗುಂದ

೯. ಯಕ್ಷಗಾನ : ಉಷಾ ಪರಿಣಯ (ರಚನೆ – ಮಂಜುನಾಥ ಭಾಗ್ವತ ಹೊಸ್ತೋಟ) - ಕಾಶ್ಯಪ ಪ್ರತಿಷ್ಠಾನ,

    ಗಡಿಗೆಹೊಳೆ

ಎರಡು ದಿನಗಳು ನಡೆದ ಒಟ್ಟಾರೆ ಯಕ್ಷಸಂಭ್ರಮದಲ್ಲಿ ಈ ಮೇಲ್ಕಂಡ ಯಕ್ಷಗಾನ ಪ್ರದರ್ಶನಗಳು ಕಲಾಸಕ್ತರಿಗೆ ವಿಭಿನ್ನ ಅನುಭವ ಮೂಡಿಸುವಲ್ಲಿ ಸಫಲವಾಯಿತು.

 

ಪಾರ್ತಿಸುಬ್ಬ-ಬದುಕು ಬರಹ ದ್ವಿದಿನ ವಿಚಾರ ಸಂಕಿರಣ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಕನ್ನಡ ವಿಭಾಗ, ಭಾಷಾ ಅಧ್ಯಯನ ಕೇಂದ್ರ, ಕಣ್ಣೂರು ವಿಶ್ವವಿದ್ಯಾಲಯ, ಕಾಸರಗೋಡು ಹಾಗೂ ಯಕ್ಷಗಾನ ಸಂಶೋಧನಾ ಕೇಂದ್ರ, ಸರ್ಕಾರಿ ಕಾಲೇಜು, ಕಾಸರಗೋಡು ಇವರುಗಳ ಸಹಯೋಗದಲ್ಲಿ ೨೦೨೦ರ ಫೆಬ್ರವರಿ ೧೩ ಮತ್ತು ೧೪ರಂದು ಕಣ್ಣೂರು ವಿಶ್ವವಿದ್ಯಾಲಯ ಚಾಲಾ ವಿ.ವಿ. ಆವರಣ, ವಿದ್ಯಾನಗರ, ಕಾಸರಗೋಡು ಇಲ್ಲಿ “ಪಾರ್ತಿಸುಬ್ಬ-ಬದುಕು ಬರಹ” ಎಂಬ ದ್ವಿದಿನ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಸಂಕಿರಣದ ಉದ್ಘಾಟನೆಯನ್ನು ಕಣ್ಣೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ವಿ.ಪಿ.ಪಿ. ಮುಸ್ತಾಫ ಅವರು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಯಕ್ಷಗಾನ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಅವರು ದಿಕ್ಸೂಚಿ ಭಾಷಣವನ್ನು ಮಾಡಿದರು. ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ.ಚಿನ್ನಪ್ಪ ಗೌಡ ಅವರು, ಕಾಸರಗೋಡಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಎಲ್.ಅನಂತ ಪದ್ಮನಾಭ ಅವರು, ರಂಗಕಲಾವಿದರಾದ ಶ್ರೀ ಕಾಸರಗೋಡು ಚಿನ್ನ ಅವರು ಹಾಗೂ ಕಾಸರಗೋಡಿನ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಮಾಜಿ ಅಧ್ಯಕ್ಷರಾದ ಶ್ರೀ ಜಯರಾಮ ಎಡನೀರು ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಈ ಕೆಳಕಂಡಂತೆ ೪ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಗೋಷ್ಠಿ - ೧

ಅಧ್ಯಕ್ಷತೆ : ಡಾ. ಚಂದ್ರಶೇಖರ್ ದಾಮ್ಲೆ, ಯಕ್ಷಗಾನ ಹಿರಿಯ ವಿದ್ವಾಂಸರು, ಸುಳ್ಯ

೧. ಪಾರ್ತಿಸುಬ್ಬನ ಕಾಲ ಹಾಗೂ ಕರ್ತೃತ್ವ ಚರ್ಚೆಗಳು-ಡಾ. ಪಾದೆಕಲ್ಲು ವಿಷ್ಣು ಭಟ್, ಯಕ್ಷಗಾನ ಹಿರಿಯ    

     ವಿದ್ವಾಂಸರು, ಉಡುಪಿ ೨. ಪಾರ್ತಿಸುಬ್ಬನ ಬಗೆಗಿನ ಅಧ್ಯಯನಗಳು ಹಾಗೂ ಕೃತಿ ಪ್ರಕಟಣೆಗಳು

   - ಶ್ರೀ ಗಣರಾಜ ಕುಂಬ್ಳೆ, ಕನ್ನಡ ಉಪನ್ಯಾಸಕರು, ಸ.ಪ.ಪೂ.ಕಾಲೇಜು, ರಾಮಪುಂಜ

 

ಗೋಷ್ಠಿ - ೨

ಅಧ್ಯಕ್ಷತೆ : ಡಾ. ಯು. ಶಂಕರನಾರಾಯಣ ಭಟ್, ಯಕ್ಷಗಾನ ಹಿರಿಯ ವಿದ್ವಾಂಸರು, ಕಾಸರಗೋಡು

೧. ಪಾರ್ತಿಸುಬ್ಬನ ಪದ ಪ್ರಯೋಗ ವೈಶಿಷ್ಟö್ಯಗಳು – ಶ್ರೀ ವಾಸುದೇವ ರಂಗ ಭಟ್, ಯಕ್ಷಗಾನ ಕಲಾವಿದರು

೨. ಪಾರ್ತಿಸುಬ್ಬನ ಇತಿಹಾಸ ಹಾಗೂ ಐತಿಹ್ಯಗಳು - ಶ್ರೀ ಎಂ.ನಾ. ಚಂಬಲ್ತಿಮಾರ್, ಸಂಪಾದಕರು, ಕಣಿಪುರ

   ಯಕ್ಷಗಾನ ಮಾಸಪತ್ರಿಕೆ

 

ಗೋಷ್ಠಿ - ೩

ಅಧ್ಯಕ್ಷತೆ : ಡಾ. ಕೆ. ಕಮಲಾಕ್ಷ, ವಿಶ್ರಾಂತ ಪ್ರಾಧ್ಯಾಪಕರು, ಸರ್ಕಾರಿ ಕಾಲೇಜು, ಕಾಸರಗೋಡು

೧. ಪಾರ್ತಿಸುಬ್ಬನ ಕೃತಿ ಪರಿಚಯ – ಡಾ. ಆನಂದರಾಮ ಉಪಾಧ್ಯ, ಯಕ್ಷಗಾನ ಹಿರಿಯ ವಿದ್ವಾಂಸರು,

    ಬೆಂಗಳೂರು

೨. ಪಾರ್ತಿಸುಬ್ಬನ ಮಟ್ಟುಗಳು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ-ಶ್ರೀ ಶ್ರೀಧರ್.ಡಿ.ಎಸ್., ಯಕ್ಷಗಾನ ಹಿರಿಯ

   ವಿದ್ವಾಂಸರು ಹಾಗೂ ಕಲಾವಿದರು.

 

ಗೋಷ್ಠಿ - ೪

ಅಧ್ಯಕ್ಷತೆ : ಡಾ. ರಾಘವ ನಂಬಿಯಾರ್, ಯಕ್ಷಗಾನ ಹಿರಿಯ ವಿದ್ವಾಂಸರು ಹಾಗೂ ಕಲಾವಿದರು

೧. ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು

  – ಡಾ. ಧನಂಜಯ ಕುಂಬ್ಳೆ, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಂಗಳೂರು ವಿ.ವಿ.

ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಶಿವಶಂಕರ ಭಟ್ ಹಾಗೂ ಬಳಗದವರು ಕಾರ್ಯಕ್ರಮದ ದಾಖಲೀಕರಣ ಪ್ರಸ್ತುತಿಯನ್ನು ನೆರವೇರಿಸಿದರು.

 

ಸಂಕಿರಣದ ಸಮಾರೋಪ ಭಾಷಣವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಯಕ್ಷಗಾನ ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಲ್. ಸಾಮಗ ಅವರು ಮಾಡುತ್ತಾ, ಪಾರ್ತಿಸುಬ್ಬನ ಬದುಕು ಮತ್ತು ಬರಹಗಳ ಬಗ್ಗೆ ಚರ್ಚಿಸುವ ಈ ಹೊತ್ತಲ್ಲಿ ಬದುಕಿಗಿಂತ ಬರಹಗಳು ಹೆಚ್ಚು ಅಧ್ಯಯನ ಯೋಗ್ಯವಾಗಿರುತ್ತದೆ ಎಂಬ ಪಾರಿಪಾಠ ಬೆಳೆದುಬಂದಿದೆ. ಆದರೆ ಪ್ರಸಂಗ ಬರಹಗಳ ಜೊತೆಗೆ ಕವಿಯ ಬಗೆಗೂ ಉಲ್ಲೇಖಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಇತರ ರಂಗಭೂಮಿಯAತೆ ಆರಂಭದಲ್ಲಿ ಕವಿಯ ಬಗೆಗೂ ಹೆಸರನ್ನು ಉಲ್ಲೇಖಿಸುವ ಅಗತ್ಯ ಇದೆ. ಕವಿಗೆ ನ್ಯಾಯ ದೊರಕಿಸುವಲ್ಲಿ ಯಕ್ಷಗಾನವನ್ನು ಹೇಗೆ ರೂಪಿಸಬಹುದು ಎಂಬುದನ್ನು ಸಾಧ್ಯವಿದ್ದಷ್ಟು ಜವಾಬ್ದಾರಿಯುತವಾಗಿ ರೂಪಿಸಬೇಕು. ಹೃದಯ ತಟ್ಟುವ, ನೇರ ವಾಕ್ಯಗಳ ಮೂಲಕ ಭಾಷೆಯನ್ನು ಕಟ್ಟಿಕೊಡುವ ಪಾರ್ತಿಸುಬ್ಬನ ಪ್ರಸಂಗ ಅತ್ಯಪೂರ್ವವಾದುದು. ಹೆಚ್ಚು ಬಳಕೆಗೆ ಬಾರದ ಪಾರ್ತಿಸುಬ್ಬನ ಇತರ ಪ್ರಸಂಗಗಳ ಪ್ರದರ್ಶನಗಳು ಹೆಚ್ಚೆಚ್ಚು ಆಗುವುದರ ಮೂಲಕ ಹೊಸ ಹೊಳಹುಗಳಿಗೆ ದಾರಿಯಾಗುವುದೆಂದು ತಿಳಿಸಿದರು. ಸಮಾರೋಪದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ವಹಿಸಿದ್ದರು. ಕೇರಳ ತುಳು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಉಮೇಶ್ ಸಾಲ್ಯಾನ್ ಅವರು, ಮಂಜೇಶ್ವರದ ಯಕ್ಷಗಾನ ತಾಳ ಮದ್ದಲೆ ಹಿರಿಯ ಅರ್ಥದಾರಿಗಳಾದ ಡಾ. ರಮಾನಂದ ಬನಾರಿ ಅವರು, ಕಾಸರಗೋಡಿನ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಜಾತ ಎಸ್. ಅವರು ಹಾಗೂ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಕಾರ್ಯದರ್ಶಿಗಳಾದ  ಶ್ರೀ ಸಂಕಬೈಲ್ ಸತೀಶ್ ಅಡಪ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಯಕ್ಷಗಾನ ತಾಳಮದ್ದಲೆ ಪ್ರಸಂಗ ಪಾರ್ತಿಸುಬ್ಬ ವಿರಚಿತ “ವಾಲಿಮೋಕ್ಷ”

ಪ್ರಸ್ತುತಿ - ಶ್ರೀ ನಾಗರಾಜ ಪದಕಣ್ಣಾಯ ಮತ್ತು ಬಳಗ

 

ಹಿಮ್ಮೇಳ : ಭಾಗವತರು - ಶ್ರೀ ದೇವಿಪ್ರಸಾದ ಆಳ್ವ ತಲಪಾಡಿ, ಚೆಂಡೆ : ರೋಹಿತ್ ಉಚ್ಚಿಲ,

              ಮದ್ದಳೆ : ಭಾಸ್ಕರ ಕೋಳ್ಯೂರು

ಅರ್ಥದಾರಿಗಳು : ಡಾ. ಎಂ.ಪ್ರಭಾಕರ ಜೋಷಿ, ರಾಧಾಕೃಷ್ಣ ಕಲ್ಚಾರ್, ಸದಾಶಿವ ಆಳ್ವ ತಲಪಾಡಿ,

               ನಾಗರಾಜ ಪದಕಣ್ಣಾಯ

 

 

ಯಕ್ಷಗಾನ ಬಯಲಾಟ ಪ್ರಸಂಗ ಪಾರ್ತಿಸುಬ್ಬ ವಿರಚಿತ “ಪಂಚವಟಿ”

ಪ್ರಸ್ತುತಿ : ವಿಠಲ್‌ಭಟ್ ಮತ್ತು ಬಳಗ, ಕೋಳೂರು ಮೀಯಪದವು

ಹಿಮ್ಮೇಳ :  ಭಾಗವತರು : ಶ್ರೀ ಸಿರಿಬಾಗಿಲು ರಾಮಕೃಷ್ಣಮಯ್ಯ, ಚೆಂಡೆ : ಮುರಾರಿ ಕಡಂಬಳಿತ್ತಾಯ, ಮದ್ದಳೆ :

               ಲವ ಆಚಾರ್ಯ ಐಲ

 

ಪಾತ್ರವರ್ಗ :

ಶ್ರೀರಾಮ : ತಾರಾನಾಥ ಬಲ್ಯಾಯ ವರ್ಕಾಡಿ, ಲಕ್ಷö್ಮಣ : ಗುಂಡಿಮಜಲು ಗೋಪಾಲ ಭಟ್, ಸೀತೆ :  ಕಿರಣ್

                 ಕುದ್ರೆ ಕೋಡ್ಲು

ಶೂರ್ಪನಖಿ : ಉಬರಡ್ಕ ಉಮೇಶ ಶೆಟ್ಟಿ, ಮಾಯಾ ಶೂರ್ಪನಖಿ : ಕು. ಆಜ್ಞಾ ಸೋಹಂ, ಋಷಿಗಳು : ದೇವಕಾನ

                ಶ್ರೀಕೃಷ್ಣ ಭಟ್, ಸತೀಶ ಅಡಪ ಸಂಕಬೈಲು

 

ಯಕ್ಷ ಸಂಭ್ರಮ, ಗೋವಾ

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಗೋವಾ ಕನ್ನಡ ಸಮಾಜ, ಪಣಜಿ ಇವರ ಸಹಯೋಗದಲ್ಲಿ ೨೦೨೦ರ ಮಾರ್ಚ್ ೧ರಂದು ಮೆನೆಝೆಸ್ ಭ್ರಗಾಂಜ ಸಭಾಂಗಣ, ಪಣಜಿಯಲ್ಲಿ “ಯಕ್ಷ ಸಂಭ್ರಮ” ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಯಕ್ಷಗಾನ ಕಲಾವಿದರು ಹಾಗೂ ಮೂಡಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಶ್ರೀ ರಜನೀಶ್ ಹೊಳ್ಳ ಅವರು ನೆರವೇರಿಸಿ, ಹೊರನಾಡು ಗೋವಾದಲ್ಲಿ ಹತ್ತಾರು ಕನ್ನಡ ಸಂಘಗಳು ಕನ್ನಡಿಗರನ್ನು ಒಗ್ಗೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಗೋವಾದಲ್ಲಿ ಯಕ್ಷಗಾನ ಕಲಾಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿದ್ದು, ಗೋವಾ ಕನ್ನಡಿಗರು ನಾಡು, ನುಡಿ, ಕನ್ನಡ ಮತ್ತು ಕಲೆಯನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಪಣಜಿಯ ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ  ಶ್ರೀ ಮಲ್ಲಿಕಾರ್ಜುನ್ ವಿ. ಬದಾಮಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಗೋವಾ ಬಂಟ್ಸ್ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಶ್ರೀ ಮುರಳಿಮೋಹನ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಗೋವಾದಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ಸಂಘಟನೆಗಳಿಗೆ ಏಕೈಕ ವೇದಿಕೆಯಾಗಲು ಬಹುದಿನಗಳ ಕನ್ನಡಿಗರ ಬೇಡಿಕೆಯಾಗಿರುವ ಕನ್ನಡ ಭವನ ನಿರ್ಮಾಣಗೊಳ್ಳಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್ ಅವರು ಯಕ್ಷಗಾನ ಉಳಿವಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಗೋವಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗೋವಾ ಕನ್ನಡ ಸಮಾಜದ ಸಹಕಾರದೊಂದಿಗೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.  ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ. ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಗೋವಾ ಕನ್ನಡ ಸಮಾಜವು ಸ್ವಂತ ಕಚೇರಿ ಖರೀದಿಸಿರುವುದು ಮಹತ್ವದ ಸಾಧನೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಚನ್ನಕೇಶವ ಯಕ್ಷ ಬಳಗ ಇವರಿಂದ ತಾಳಮದ್ದಲೆ – ಜಾಂಭವತಿ ಕಲ್ಯಾಣ ಹಾಗೂ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ, ಹಳ್ಳುವಳ್ಳಿ ಇವರಿಂದ ಯಕ್ಷಗಾನ ಪ್ರದರ್ಶನ – ಕಂಸವಧೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು.

 

ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ - ೧೦

ಕರ್ನಾಟಕ ಯಕ್ಷಗಾನ ಅಕಾಡೆಮಿಯು ನಮ ತುಳುವೆರ್ ಕಲಾ ಸಂಘಟನೆ (ರಿ), ನಾಟ್ಕದೂರು, ಮುದ್ರಾಡಿ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ೨೦೨೦ರ ಮಾರ್ಚ್ ೧೧ರಂದು ನಾಟ್ಕದೂರು, ಹೆಬ್ರಿ ತಾಲೂಕು, ಮುದ್ರಾಡಿ, ಉಡುಪಿ ಇಲ್ಲಿ “ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-೧೦” ಎಂಬ ಕಾರ್ಯಕ್ರಮ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರಕಟಿಸಿರುವ ಕುಮಾರ ಶಂಕರನಾರಾಯಣರವರ “ಸ್ತ್ರೀ ಸ್ವಗತ” ಹಾಗೂ ಶ್ರೀ ಶಾ.ಮಂ.ಕೃಷ್ಣರಾಯರ “ಮಂಜಯ್ಯ ಗಣಪತಿ ಶೇಣ್ವೆಯವರ ಎರಡು ಪ್ರಸಂಗಗಳು” ಎಂಬ ಪುಸ್ತಕಗಳ ಲೋರ್ಕಾಪಣೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆಯನ್ನು ಹಿರಿಯ ಸಾಹಿತಿಗಳು ಹಾಗೂ ಯಕ್ಷಗಾನ ವಿದ್ವಾಂಸರಾದ ಶ್ರೀ ಅಂಬಾತನಯ ಮುದ್ರಾಡಿ ಅವರು ನೆರವೇರಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಕೆ.ಎಂ.ಶೇಖರ್, ಪುಸ್ತಕಗಳ ಲೇಖಕರುಗಳಾದ ಶ್ರೀ ಕುಮಾರ ಶಂಕರನಾರಾಯಣ ಮತ್ತು ಶ್ರೀ ಶಾ.ಮಂ.ಕೃಷ್ಣರಾಯ ಅವರುಗಳು, ಮುದ್ರಾಡಿಯ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಶಶಿಲಾ ಡಿ. ಪೂಜಾರಿ ಅವರು, ಮುದ್ರಾಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ಶ್ರೀ ಶುಭದರ ಶೆಟ್ಟಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗಾನ ವಿದ್ವಾಂಸರಾದ ಶ್ರೀ ಬೇಳೂರು ರಾಘವಶೆಟ್ಟಿ ಅವರು ಬಿಡುಗಡೆಗೊಂಡ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ಪ್ರಸಿದ್ಧ ವೇಷದಾರಿಗಳಾದ ಶ್ರೀ ಎಂ.ಎ.ನಾಯ್ಕ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಗಣೇಶ್ ಬ್ರಹ್ಮಾವರ ಮತ್ತು ಬಳಗದವರಿಂದ “ಶಿವಭಕ್ತ ವೀರಮಣಿ” ಎಂಬ ಯಕ್ಷಗಾನ ಪ್ರದರ್ಶನವನ್ನು ಸಾದರಪಡಿಸಲಾಯಿತು.

 

ಯಕ್ಷಗಾನ ತರಬೇತಿಗಳು

೨೦೧೯-೨೦ನೇ ಸಾಲಿನಲ್ಲಿ ಎರಡು ತಿಂಗಳ ಯಕ್ಷಗಾನ ತರಬೇತಿಗೆ ಅವಕಾಶ ನೀಡಿರುವ ಜಿಲ್ಲಾವಾರು ಸಂಸ್ಥೆಗಳು 

 

ಕ್ರ. ಸಂ.

ಸಂಸ್ಥೆಯ ಹೆಸರು & ವಿಳಾಸ

ಕ್ರ. ಸಂ.

ಸಂಸ್ಥೆಯ ಹೆಸರು & ವಿಳಾಸ

ಉಡುಪಿ

1.

ಯಶಸ್ವಿ ಕಲಾವೃಂದ (ರಿ) ಕೊಮೆ, ತೆಕ್ಕಟ್ಟೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ದೂ: ೯೯೪೫೯೪೭೭೭೧

2.

ಶ್ರೀ ಯಕ್ಷದೇಗುಲ ಕಾಂತಾವರ (ರಿ), ಕಾಂತಾವರ ಅಂಚೆ-೫೭೪ ೧೨೯, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ

ದೂ: ೯೯೭೨೯೯೩೨೯೯

3.

ಶ್ರೀ ಜಗನ್ನಾಥಗಾಣಿಗ, ನಮ್ಮ ಯಕ್ಷಭೂಮಿ ಸಾಂಸ್ಕೃತಿಕ ವೇದಿಕೆ(ರಿ), ಕೆನ್ಯಾನ, ಕುಂದಾಪುರ ತಾಲೂಕು, ಉಡುಪಿ

ದೂ:೯೭೩೧೭೮೩೩೦೯

4.

ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ (ರಿ), ನಾಗೂರು, ಕಿರಿಮಂಜೇಶ್ವರ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ

ದೂ:೯೭೪೧೯೫೪೪೫೦

5.

ಅಧ್ಯಕ್ಷರು, ಶ್ರೀ ಕನ್ನಿಕಾ ಪರಮೇಶ್ವರಿ ಯಕ್ಷಗಾನ ಕಲಾ ಸಂಘ(ರಿ), ಕಂಡ್ಲೂರು ಕುಂದಾಪುರ, ಉಡುಪಿ ಜಿಲ್ಲೆ ದೂ:೯೪೪೯೪೫೦೦೭೭/ ೯೪೮೧೪೪೫೪೫೮

6.

ಗಜಾನನ ಯಕ್ಷಗಾನ ವೇಷಭೂಷಣ ಮತ್ತು ಯಕ್ಷಗಾನ ತರಬೇತಿ ಸಂಸ್ಥೆ, ಆಕಾಶವಾಣಿ ಬಳಿ, ಬಾರ್ಕೂರು ರಸ್ತೆ, ಹಂದಾಡಿ, ಬ್ರಹ್ಮಾವರ-೫೭೬೨೧೩, ಉಡುಪಿ ಜಿಲ್ಲೆ ದೂ: ೯೯೦೦೩೭೭೫೮೯ / ೦೮೨೦-೨೫೬೩೪೪೯

7.

ಸಾಲಿಕೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ (ರಿ), ಹಾರಾಡಿ-ಸಾಲಿಕೇರಿ, ಬ್ರಹ್ಮಾವರ, ಉಡುಪಿ ಜಿಲ್ಲೆ ದೂ:೯೯೪೫೦೧೯೩೮೯

   

ಉತ್ತರ ಕನ್ನಡ

8.

ಅಧ್ಯಕ್ಷರು, ಹೊಸಪಟ್ಟಣ ಕಲಾವೃಂದ (ರಿ), ಅಂಚೆ: ಹೊಸಪಟ್ಟಣ, ತಾಲೂಕು ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ ದೂ:೮೧೯೭೦೨೧೬೫೯ /

೯೧೦೮೭೭೮೦೩೪

9.

ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆರ್ಟ್ಸ್ ಅಕಾಡೆಮಿ ಚಾರಿಟೆಬಲ್ ಟ್ರಸ್ಟ್, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ದೂ: ೮೨೧೭೦೬೮೦೯೮

10.

ಶ್ರೀ ರಮಾನಂದ ಗ. ಹೆಗಡೆ ಹಲ್ಲೆಕೊಪ್ಪ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಕಂಜಿಕೈ, ಅಂಚೆ: ಪಂಚಲಿಂಗ, ಶಿರಸಿ ತಾಲೂಕು, ಉತ್ತರ ಕನ್ನಡ-೫೮೧೪೦೧ ದೂ: ೯೪೮೧೮೦೦೮೮೬

11.

ಶ್ರೀ ಲಕ್ಷ್ಮೀ ನಾರಾಯಣ ಕೃಪಾಪೋಷಿತ ಯಕ್ಷಗಾನ ಮತ್ತು ಜಾನಪದ ಕಲಾಮಂಡಳಿ, ಹೆಮ್ಮನಬೈಲು, ಅಂಚೆ:ಸೋವಿನಕೊಪ್ಪ, ಸಿದ್ಧಾಪುರ ತಾಲೂಕು, ಉತ್ತರ ಕನ್ನಡ-೫೮೧ ೩೫೫

12.

ಶ್ರೀ ಉಮೇಶ ಕೆ, ನಾಯಕ, ಶ್ರೀ ವೀರ ಮಾರುತಿ ಯಕ್ಷ ಮಂಡಳಿ, ಪುನರ್ವಸತಿ ಅಂಚೆ: ಪುನರ್ವಸತಿ ತೋಡುರು, ಕಾರವಾರ ದೂ: ೯೬೮೬೨೪೧೯೫೬

13.

ಅಧ್ಯಕ್ಷರು, ಶ್ರೇಯಾ ಅಭಿವೃದ್ಧಿ ಟ್ರಸ್ಟ್ (ರಿ), ದಾಂಡೇಲಿ, ಉತ್ತರ ಕನ್ನಡ, ದೂ: ೯೪೪೮೦೮೯೯೮೫

 

14.

ಶ್ರೀ ಗಜಾನನ ನಾ. ಭಟ್ಟ, ಅಧ್ಯಕ್ಷರು, ಎಸ್.ಡಿ.ಎಂ.ಸಿ. ಹಿತ್ಲಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿತ್ಲಳ್ಳಿ ಅಂಚೆ, ಯಲ್ಲಾಪುರ ತಾಲೂಕು-೫೮೧೩೪೭, ಉತ್ತರ ಕನ್ನಡ ಮೊ:೯೪೮೨೬೫೨೬೦೬

   

ದಕ್ಷಿಣ ಕನ್ನಡ

15.

ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನ (ರಿ), ಬೊಳುವಾರು, ಪುತ್ತೂರು, ದಕ್ಷಿಣ ಕನ್ನಡ ದೂ:೯೧೬೪೨೭೧೬೨೮ /

೯೪೮೨೧೮೩೧೬೦

16.

ಶ್ರೀ ದಿನಕರ ಪಿ,, # ೩೩೬, ದೇವಿಕೃಪಾ ಪಚ್ಚನಾಡಿ, ಬೋಂದೆಲ್ ಅಂಚೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ದೂ:೯೮೪೪೯೫೨೦೫೭

17.

ಥೀಂ ಕಿಟ ಯಕ್ಷಕಲಾ ಕೇಂದ್ರ, ಮೊಡಂಕಾಪು ಊರು ಮತ್ತು ಅಂಚೆ, ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ದೂ:೯೧೬೪೫೬೧೮೬೩ /

೯೯೦೦೯೭೪೯೯೬

 

   

ಕಾಸರಗೋಡು

18.

ಶ್ರೀ ಮಹಾಲಿಂಗೇಶ್ವರ ಕೃಪಾ ಪೋಷಿತ ಯಕ್ಷಗಾನ ಸಂಘ & ಅಧ್ಯಯನ ಕೇಂದ್ರ, ಕುಂಜತ್ತೂರು, ಮಂಜೇಶ್ವರ, ಕಾಸರಗೋಡು ದೂ: ೭೩೫೩೧೩೫೨೧೦

19.

ಶ್ರೀ ರಾಮ ಸಾಲಿಯಾನ್ ಮಂಗಲಪಾಡಿ, ಶ್ರೀ ರಕ್ಷಾ ಮನೆ, ಪ್ರತಾಪ ನಗರ, ಅಂಚೆ: ಮಂಗಲಪಾಡಿ, ಮಂಜೇಶ್ವರ ತಾಲೂಕು, ಕಾಸರಗೋಡು

ಬೆಂಗಳೂರು

20.

ಯಕ್ಷ ಸಂಭ್ರಮ, #೧೦, ೨ನೇ ಕ್ರಾಸ್, ಅವನಿ ಶೃಂಗೇರಿ ನಗರ, ಬೇಗೂರು ಅಂಚೆ, ಬೆಂಗಳೂರು ದೂ: ೯೮೮೦೨೩೬೧೬೧

21.

ಶ್ರೀ ಪ್ರಿಯಾಂಕ ಕೆ ಮೋಹನ, #೫೫, ಕರಿಶಮ್ ಹಿಲ್ಯ, ಗುಬ್ಬಲಾಲ ಅಂಚೆ, ಬೆಂಗಳೂರು ದೂ: ೯೮೪೪೦೦೮೬೫೧

22.

ಯಕ್ಷಕಲಾ ಅಕಾಡೆಮಿ (ರಿ), #೪೫, ೫ನೇ ಕ್ರಾಸ್, ೧೪ನೇ ಬ್ಲಾಕ್, ೨ನೇ ಸ್ಟೇಜ್, ನಾಗರಭಾವಿ, ಬೆಂಗಳೂರು ದೂ:೯೪೪೮೫೧೦೫೮೧

23.

ಪ್ರಧಾನ ಕಾರ್ಯದರ್ಶಿ, ಬಿ.ಇ.ಎಂ.ಎಲ್. ಲಲಿತಕಲಾ ಸಂಘ, ಹೊಸ ತಿಪ್ಪಸಂದ್ರ, ಬೆಂಗಳೂರು-೫೬೦೦೭೫ ದೂ:೦೮೦-೨೫೦೨೨೬೪೪ / ೭೦೧೯೦೮೧೦೫೪

ಶಿವಮೊಗ್ಗ

24.

ಶ್ರೀ ಭಾರತೀ ಕಲಾ ಪ್ರತಿಷ್ಠಾನ (ರಿ), ಹೊಸೂರು, ಅಂಚೆ: ವರದಾಮೂಲ, ಸಾಗರ ತಾಲೂಕು, ಶಿವಮೊಗ್ಗ, ದೂ:೯೪೪೯೪೯೪೫೨೯ / ೯೬೮೬೬೨೬೬೯೯

25

ಯಕ್ಷ ಕುಟೀರ ಸಂಸ್ಥೆ, ೧ನೇ ತಿರುವು, ಗಾಂಧಿನಗರ, ಬಿ. ಬ್ಲಾಕ್, ಶಿವಮೊಗ್ಗ ದೂ: ೯೮೪೫೩೨೭೩೬೩ / ೦೮೧೮೨೨೭೨೧೮೮

26.

ಶ್ರೀ ಜ್ಞಾನೇಂದ್ರ ಎಂ.ವೈ,, ಎಂ. ಮೇಲಿನಕೇವಿ, ನೊಣಬೂರು ಅಂಚೆ: ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ, ದೂ:೭೮೯೯೫೮೦೫೪೮ / ೭೭೬೦೮೨೦೬೧೨

   

ಚಿಕ್ಕಮಗಳೂರು

27.

ಶ್ರೀಮತಿ ಶುಭಮತಿ, ತಿ/o ನರೇಂದ್ರ ಎಂ, ಮುನ್ನೂರು ಪಾಲೆ, ಬಾಳೆಹೊಳೆ ಅಂಚೆ, ಮೂಡಿಗೆರೆ ತಾಲೂಕು-೫೭೭ ೧೭೯, ಚಿಕ್ಕಮಗಳೂರು ಜಿಲ್ಲೆ ದೂ: ೯೪೮೦೪೭೩೬೪೦

   

ಮಂಡ್ಯ

28.

ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ (ರಿ), ಸಿ.ಎಂ.ಸಿ. ಕಾಂಪ್ಲೆಕ್ಸ್, ೧ನೇ ಮಹಡಿ, ಮಹಾವೀರ ಸರ್ಕಲ್, ವಿ.ವಿ.ರಸ್ತೆ, ಮಂಡ್ಯ ದೂ: ೯೪೪೮೪೬೩೨೩೩

   

೨೦೧೯-೨೦ನೇ ಸಾಲಿನಲ್ಲಿ ಎರಡು ತಿಂಗಳ ಮೂಡಲಪಾಯ ಯಕ್ಷಗಾನ ತರಬೇತಿಗೆ ಅವಕಾಶ ನೀಡಿರುವ ಸಂಸ್ಥೆಗಳು

1.

ಶ್ರೀ ಚೆನ್ನಕೇಶವ ಮೂಡಲಪಾಯ ಭಾಗವತ ಯಕ್ಷಗಾನ ಮಂಡಳಿ, ಮಲ್ಲಾತಹಳ್ಳಿ ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೂ: ೭೨೦೪೩೪೬೬೬೭

2.

ಅಧ್ಯಕ್ಷರು, ಗಾಂಧೀಜಿ ಸೇವಾ ಸಂಸ್ಥೆ (ರಿ), ಕೊಂಬಳಿ, ಹೂವಿನಹಡಗಲಿ, ಬಳ್ಳಾರಿ, ದೂ: ೯೪೮೦೦೪೫೯೧೦/ ೯೪೪೮೯೦೧೬೮೨

3.

ಶ್ರೀ ಕಲ್ಮನೆ ನಂಜಪ್ಪ, ಮೂಡಲಪಾಯ ಯಕ್ಷಗಾನ ಭಾಗವತರು, ಅರಳಗುಪ್ಪೆ, ತಿಪಟೂರು ತಾಲೂಕು, ತುಮಕೂರು ದೂ:೯೭೪೦೨೩೫೫೦೭

4.

ಶ್ರೀ ಎಂ.ಆರ್.ನಾಗರಾಜು, ಮಾಡಬಾಳ್ ಹೋಬಳಿ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ ದೂ: ೯೯೦೨೩೦೪೮೧೨

5.

ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಂಡಳಿ (ರಿ), ಕಲಾಸಿಪಾಳ್ಯ, ದೊಡ್ಡಬಳ್ಳಾಪುರ-೫೬೧ ೨೦೩ ದೂ:೯೦೦೮೮೦೮೦೯೧

6.

ಶ್ರೀ ಕರಿಯಣ್ಣ, ಶ್ರೀ ಆಂಜನೇಯಸ್ವಾಮಿ ಮೂಡಲಪಾಯ ಭಾಗವತ ಯಕ್ಷಗಾನ ಮಂಡಳಿ, ಸಾದೇನಹಳ್ಳಿ, ಹೆಸರಘಟ್ಟ ಹೋಬಳಿ, ಯಲಹಂಕ ತಾಲೂಕು, ಬೆಂಗಳೂರು ಉತ್ತರ-೫೬೨ ೧೧೦ ದೂ: ೯೯೦೦೪-೪೫೦೩೩

7.

ಸಂಪ್ರದಾಯ ಟ್ರಸ್ಟ್ (ರಿ), ನಂ.೮೪೧, ೧೨ನೇ ವಾರ್ಡು, ಉಪ್ಪಾರಕೇರೆ, ಹಡಗಲಿ ರಸ್ತೆ, ಹರಪನಹಳ್ಳಿ-೫೮೩೧೩೧, ಬಳ್ಳಾರಿ ಜಿಲ್ಲೆ

 

8.

ಶ್ರೀ ವಿ.ನಿಂಗಪ್ಪ ಬಿನ್ ದೊಡ್ಡಕಾಟಪ್ಪ, ಶ್ರೀ ಮೆಲ್ಲೇಶ್ವರ ಮೂಡಲಪಾಯ ಯಕ್ಷಗಾನ ನಾಟಕ ಕಲಾ ಸಂಘ, ತೋರಣಗಟ್ಟೆ, ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ ದೂ: ೯೯೭೨೪೫೪೨೩೮

 

9.

ಶ್ರೀ ಎ.ಸಿ.ಯೋಗೇಶ್, ಅರಳುಗುಪ್ಪೆ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ ದೂ: ೮೧೩೪೨೬೧೦೪೪

10.

ಶ್ರೀ ಎ. ಎಂ ಶಿವಶಂಕರಯ್ಯ, ಕಲ್ಲೇಶ್ವರ ಕಲಾ ಮಂಡಳಿ, ಅರಳಗುಪ್ಪೆ ಗ್ರಾಮ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ ದೂ:೮೪೫೩೨೪೫೮೫೩

11.

ವೇ|| ಬ್ರ || ಶ್ರೀ ಮೂರ್ತಾಚಾರ್ಯ, ನೆಲ್ಲಿಗೆರೆ, ನಾಗಮಂಡಲ ತಾಲೂಕು, ಮಂಡ್ಯ ಜಿಲ್ಲೆ-೫೭೧ ೪೧೮ ದೂ: ೯೯೬೪೩೯೪೬೨೬ / ೮೬೧೮೮೯೪೯೬೩

12.

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ, ಮದ್ದೇರಿ ಗ್ರಾಮ ಮತ್ತು ಅಂಚೆ, ವೇಮಗಲ್ ಹೋಬಳಿ, ಕೋಲಾರ ದೂ: ೯೯೦೦೩೭೯೫೫೦ / ೦೮೧೫೨-೨೩೫೨೨೭

೨೦೧೯-೨೦ನೇ ಸಾಲಿನಲ್ಲಿ ಹಿರಿಯರ ನೆನಪು ಯೋಜನೆಯಡಿ ಒಂದು ಕಾರ್ಯಕ್ರಮಕ್ಕೆ ಅವಕಾಶ ನೀಡಿರುವ ಜಿಲ್ಲಾವಾರು ಸಂಸ್ಥೆಗಳು

ಉಡುಪಿ

1.

ಶ್ರೀ ಬಾಲಕೃಷ್ಣ ಬಿರ್ತಿ, ಅಧ್ಯಕ್ಷರು, ಅಜಪುರ ಯಕ್ಷಗಾನ ಸಂಘ (ನೋಂ), “ಯಕ್ಷ ಸೌರಭ” ಮಟಪಾಡಿ ರಸ್ತೆ, ಚಾಂತಾರು ಗ್ರಾಮ ಬ್ರಹ್ಮಾವರ ೫೭೬ ೨೧೩, ಉಡುಪಿ ಜಿಲ್ಲೆ ದೂ: ೯೭೪೧೮೨೪೨೮೯ / ೯೪೮೨೪೬೭೫೩೫

2.

ಶ್ರೀ ಶಿವಾನಂದ ಕೋಟ, ಶ್ರೀ ಹಿರೇ ಮಹಾಲಿಂಗೇಶ್ವರ ಕಲಾ ಸಂಘ ಗಿಳಿಯಾರು, ಅಂಚೆ: ಕೋಟ, ಬ್ರಹ್ಮಾವರ ತಾಲೂಕು, ಉಡುಪಿ-೫೭೬ ೨೨೧ ದೂ: ೯೮೪೫೭೬೦೧೫೭

3.

ಶ್ರೀ ಸುಬ್ರಮಣ್ಯ ಧಾರೇಶ್ವರ, ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರಸ್ಟ್, ಕಿರಿಮಂಜೇಶ್ವರ ಅಂಚೆ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ೫೭೬ ೨೧೯ ದೂ: ೯೪೪೮೩೨೧೮೭೧

   

ಉತ್ತರ ಕನ್ನಡ

4.

ಶ್ರೀ ವೀರಭದ್ರೇಶ್ವರ ಸೇವಾ ಮತ್ತು ಸಾಂಸ್ಕೃತಿಕ ಕಲಾ ಬಳಗ (ರಿ), ಹೊನ್ನಗದ್ದೆ, ಅಂಚೆ: ವಜ್ರಳ್ಳಿ ಯಲ್ಲಾಪುರ ತಾಲೂಕು, ಉತ್ತರ ಕನ್ನಡ ದೂ: ೮೨೭೭೦೦೪೨೩೦ / ೮೭೬೨೧೫೧೦೮೬ / ೯೪೮೧೯೪೨೫೧೮

5.

ಯಕ್ಷಲೋಕ (ರಿ), ‘ಯಕ್ಷಾನುಗ್ರಹ’, ಕುಂಬಾರಮಕ್ಕಿ, ಹಳದೀಪುರ, ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ-೫೮೧೩೨೭ ದೂ:೮೭೬೨೭೮೬೮೫೬ / ೯೧೮೩೮೭-೨೫೪೧೫೬

6.

ಶ್ರೀ ಪ್ರಸನ್ನ ಗಣಪತಿ ಭಟ್ಟ, ಅಧ್ಯಕ್ಷರು, ಶ್ರೀ ಮಹಾಗಣಪತಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ(ರಿ), ಹೆಗ್ಗಾರ (ಪುನರ್ವಸತಿ ಕೇಂದ್ರ), ಅಂಕೋಲಾ ತಾಲೂಕು, ಉತ್ತರ ಕನ್ನಡ ೫೮೧೩೧೪ ದೂ: ೯೪೪೯೪೫೩೪೦೮

   

ದಕ್ಷಿಣ ಕನ್ನಡ

7.

ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ - ಬೆಟ್ಟಂಪಾಡಿ, ಅಂಚೆ: ಬೆಟ್ಟಂಪಾಡಿ ೫೭೪ ೨೫೯ ಪುತ್ತೂರು, ದಕ್ಷಿಣ ಕನ್ನಡ ದೂ:೯೪೪೮೭೫೫೯೫೮ / ೯೪೮೧೦೯೪೪೬೪

8.

ಶ್ರೀ ಹರಿಕಿರಣ್, ಅಧ್ಯಕ್ಷರು, ಯಕ್ಷನಂದನ ಕಲಾ ಸಂಘ, ಗೋಕುಲನಗರ, ಅಂಚೆ: ಕೆ.ಸಿ.ಫಾರ್ಮ್, ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ದೂ: ೯೯೦೧೨೧೬೨೩೪ / ೯೪೪೯೮೩೮೩೨೫

9.

ಯಕ್ಷರಂಗ (ರಿ) ಬೆಳ್ಳಾರೆ, ಅಂಚೆ: ಬೆಳ್ಳಾರೆ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ದೂ: ೯೪೪೮೬೨೫೪೪೧/ ೯೪೪೮೭೨೫೪೨೫

10.

ಶ್ರೀ ಮಹೇಶ, ಸಂಚಾಲಕರು, ಯಕ್ಷಭಾರತಿ, ಸೇವಾನಿಕೇತನ, ಕನ್ಯಾಡಿ II, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ದೂ: ೮೨೭೭೭೭೩೭೯೯

11.

ಶ್ರೀ ಗುಡ್ಡಪ್ಪ ಗೌಡ ಬಲ್ಯ, ಅಧ್ಯಕ್ಷರು, ಶ್ರೀ ಶಬರೀಶ ಯಕ್ಷಗಾನ ಕಲಾವೃಂದ, ಅಂಚೆ: ನೆಲ್ಯಾಡಿ, ಕಡಬಾ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ೫೭೪ ೨೨೯ ದೂ: ೯೪೮೧೯೨೦೪೫೯

   

ಶಿವಮೊಗ್ಗ

12.

ಶ್ರೀ ಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನ (ರಿ) ಕೇಡಲಸರ, ಭೀನಕೋಣೆ ಅಂಚೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ ದೂ: ೮೭೬೨೫೪೭೮೩೭

13.

ಶ್ರೀ ಆನಂದ ಶೆಟ್ಟಿ, ಅಧ್ಯಕ್ಷರು, ಯಕ್ಷ ಸಂವರ್ಧನಾ (ರಿ), ‘ಧರ್ಮನಿಧಿ’ ೫ನೇ ತಿರುವು, ವಿ-ಬ್ಲಾಕ್, ಶರಾವತಿ ನಗರ, ಶಿವಮೊಗ್ಗ ಜಿಲ್ಲೆ ದೂ: ೯೬೩೨೯೫೨೦೧೫ / ೯೭೪೩೦೦೨೨೯೪

ಚಿಕ್ಕಮಗಳೂರು

14.

ಶ್ರೀ ಕೆ. ಎಸ್ ಮಂಜುನಾಥ, ಅಧ್ಯಕ್ಷರು, ಯಕ್ಷವೇದಿಕೆ, ಶಾಂತಿನಗರ, ಹರಿಹರಪುರ, ಕೊಪ್ಪ ತಾಲೂಕು, ಚಿಕ್ಕಮಗಳೂರು-೫೭೭೧೨೦ ದೂ: ೯೪೪೯೮೩೮೧೯೮

   

ಮಂಡ್ಯ

15.

ವೇ|| ಬ್ರ || ಶ್ರೀ ಮೂರ್ತಾಚಾರ್ಯ, ಶ್ರೀ ಕಾಳಿಕಾಂಬ ಪ್ರಸನ್ನ ಪುತ್ಥಳಿ ಬೊಂಬೆ ಪ್ರದರ್ಶನ ಯುವಜನ ಯಕ್ಷಗಾನ ಮಂಡಳಿ, ನೆಲ್ಲಿಗೆರೆ, ನಾಗಮಂಗಲ ತಾಲೂಕು, ಮಂಡ್ಯ ಜಿಲ್ಲೆ

16.

ಶ್ರೀ ವಾಸುದೇವಾ ಸಾಮಗ, ಸಂಚಾಲಕರು, ಸಂಯಮಂ (ನೋಂ), ಕೋಟೇಶ್ವರ-೫೭೬೨೨೨

 

17.

ಶ್ರೀಮತಿ ಬಿ.ಪಿ. ಕೋಮಲಾ ರಾಜ್, ಅಧ್ಯಕ್ಷರು, ಕೋಮಲಾ ಸಾಂಸ್ಕೃತಿಕ ಕಲಾನಿಕೇತನ (ರಿ), ರಾಜಾಜಿನಗರ, ಬೆಂಗಳೂರು-೧೦ ದೂ:೮೨೧೭೦೩೧೦೫೬ / ೯೭೪೩೫೦೦೮೬೫

18.

ಶ್ರೀ ಶಿವಶಂಕರ ದಿವಾಣ, ಅಧ್ಯಕ್ಷರು, ಸ್ವಸ್ತಿಶ್ರೀ ಕಲಾಪ್ರತಿಷ್ಠಾನ, ಎಡನಾಡು ಅಂಚೆ, ಎಡನಾಡು ಗ್ರಾಮ, ವಯಾ: ಕುಂಬಳೆ, ಕಾಸರಗೋಡು-೬೭೧೩೨೧ ದೂ: ೯೯೯೫೨೪೨೦೯೪

19.

ಡಾ|| ರತ್ನಾಕರ ಮಲ್ಲಮೂಲೆ, ಸಂಯೋಜನಾಧಿಕಾರಿ, ಯಕ್ಷಗಾನ ಸಂಶೋಧನಾ ಕೇಂದ್ರ ಮತ್ತು ಗ್ರಂಥಾಲಯ, ಸರ್ಕಾರಿ ಕಾಲೇಜು, ಕಾಸರಗೋಡು, ವಿದ್ಯಾನಗರ ಅಂಚೆ-೬೭೧೧೨೩ ದೂ: ೯೪೪೬೦೯೫೫೪೩

   

೨೦೧೮-೧೯ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ೫ ತಿಂಗಳ ತರಬೇತಿ ಏರ್ಪಡಿಸಲು ಅವಕಾಶ ನೀಡಿರುವ ಶಿಬಿರಾರ್ಥಿಗಳು

1.

ಶ್ರೀ ಎ.ಆರ್.ಪುಟ್ಟಸ್ವಾಮಿ, ತಂದೆ ರಾಮದಾಸಯ್ಯ, ಅರಳಗುಪ್ಪೆ-೫೭೨೨೧೨, ಕಿಬ್ಬಿನಹಳ್ಳಿ ಹೋಬಳಿ, ತಿಪಟೂರು ತಾಲೂಕು ತುಮಕೂರು ಜಿಲ್ಲೆ, ದೂ:೯೯೭೨೧೪೧೯೫೬

2.

ಶ್ರೀ ಶಿವಯ್ಯ, ತಂದೆ ಲೇಟ್ ಚನ್ನಯ್ಯ, ಹೆಗ್ಗೆರೆ ಗ್ರಾಮ, ನೀರಗುಂದ ಅಂಚೆ, ತುರುವೇಕೆರೆ ತಾಲೂಕು ತುಮಕೂರು ಜಿಲ್ಲೆ

3.

ಶ್ರೀ ಜಟ್ಟಿ ನಾಗು ಮುಕ್ರಿ, ಕಡಬಾಳ ಅಂಚೆ, ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ, ದೂ:೯೪೮೧೦೪೮೯೨೧

3.

ಶ್ರೀ ಪ್ರಕಾಶ ಶಂಕರ್ ಅಗೇರ, ಮುಕ್ಕಾಂ: ಹೆಬ್ರಿಗದ್ದೆ, ಹಿಲ್ಲೂರ ಅಂಚೆ, ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ

೨೦೧೮-೧೯ನೇ ಸಾಲಿನಲ್ಲಿ ವಿಶೇಷ ಘಟಕ (ಸಾಮಾನ್ಯ) ಯೋಜನೆಯಡಿ ೫ ತಿಂಗಳ ತರಬೇತಿ ಏರ್ಪಡಿಸಲು ಅವಕಾಶ ನೀಡಿರುವ ಶಿಬಿರಾರ್ಥಿಗಳು

5.

ಶ್ರೀ ಮಾಗೇರಿ ವೆಂಕಟೇಶ್, ಮಾಗೇರಿ ಗ್ರಾಮ, ಸೂಲಿಕುಂಟೆ ಅಂಚೆ, ಬಂಗಾರಪೇಟೆ ತಾಲೂಕು, ಕೋಲಾರ ಜಿಲ್ಲೆ ದೂ:೯೬೩೨೪೦೬೬೨೯

6.

ಶ್ರೀ ಟಿ. ತಿಪ್ಪೇರುದ್ರಪ್ಪ, ಹಗರಿಬೊಮ್ಮನಹಳ್ಳಿ ಅಂಚೆ, ಬಳ್ಳಾರಿ ಜಿಲ್ಲೆ ದೂ: ೯೯೬೪೨೭೭೨೨೨ / ೯೭೪೨೭೫೧೩೬೩

7.

ಶ್ರೀ ಪುನೀತ್ ಜಿ.ಎ., ಕೇರಾಫ್ ಪೃಥ್ವಿ ರಂಗ ಶಾಲೆ, (ಹಳೇ ಸಮತಾ ಹೋಟೆಲ್), ಕೊಟ್ಟೂರು ರಸ್ತೆ, ಹರಪನಹಳ್ಳಿ, ಬಳ್ಳಾರಿ

8.

ಶ್ರೀ ವಸಂತ್ ಕುಮಾರ್ ಎ.ಸಿ., ತಂದೆ ಚನ್ನಕೇಶಯ್ಯ, ಅರಳಗುಪ್ಪೆ ಗ್ರಾಮ & ಅಂಚೆ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ, ದೂ: ೮೭೬೨೪೭೦೧೦೧

9.

ಶ್ರೀ ಲಕ್ಷ್ಮಣ ಕುಮಾರ ಮರಕಡ, #೪-೧೫೦, ಕುಮೇರ್ ಹೌಸ್, ಮರಕಡ, ಕುಂಜತ್ತಬೈಲು ಅಂಚೆ, ಮಂಗಳೂರು-೫೭೫೦೧೫

   

೨೦೧೮-೧೯ನೇ ಸಾಲಿನಲ್ಲಿ ಗಿರಿಜನ ಉಪ ಯೋಜನೆಯಡಿ ೫ ತಿಂಗಳ ತರಬೇತಿ ಏರ್ಪಡಿಸಲು ಅವಕಾಶ ನೀಡಿರುವ ಸಂಸ್ಥೆಗಳು

10.

ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ, ರಂಜಲ್ ಕಾಂಪ್ಲೆಕ್ಸ್, ಪೋಸ್ಟ್ ಆಫೀಸ್ ಹತ್ತಿರ, ಮಾರುತಿ ಗಲ್ಲಿ, ಹಳಿಯಾಳ-೫೮೧೩೨೯, ಉತ್ತರ ಕನ್ನಡ ದೂ: ೯೯೪೫೬೯೪೬೪೨ /

೯೪೮೦೨೬೮೧೩೧

11.

ಶ್ರೀ ರಮೇಶ ಬಿ, ಭೈರಕಟ್ಟ ಮನೆ, ಶಿಶಿಲ ಅಂಚೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ದೂ: ೯೪೪೯೯-೦೩೦೨೦೧೦

೨೦೧೮-೧೯ನೇ ಸಾಲಿನಲ್ಲಿ ಗಿರಿಜನ ಉಪ (ಸಾಮಾನ್ಯ) ಯೋಜನೆಯಡಿ ೫ ತಿಂಗಳ ತರಬೇತಿ ಏರ್ಪಡಿಸಲು ಅವಕಾಶ ನೀಡಿರುವ ಸಂಸ್ಥೆಗಳು

12.

ಶ್ರೀ ಚೌಡಯ್ಯ [ವಿಜಯ ಬಿ.], #೧೨, ೧೨ನೇ ಮುಖ್ಯರಸ್ತೆ, ಪುಟ್ಟಯ್ಯ ರಸ್ತೆ, ಕಾಮಾಕ್ಷಿಪಾಳ್ಯ, ಬೆಂಗಳೂರು ದೂ:೯೬೩೨೭೨೨೭೩೬

13.

ಶ್ರೀ ಚುಕ್ಕನಕಲ್ ರಾಮಪ್ಪ, ಕಾವ್ಯವಾಹಿನಿ ಗಾಯನ ಸಂಸ್ಥೆ (ರಿ), ರಾಮನಗರ ಕೂಡ್ಲಿಗಿ ಸರ್ಕಲ್ ಹತ್ತಿರ, ಭೀಮಾಸ್ಟಿಲ್ ಹಿಂಭಾಗ, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ ದೂ: ೯೯೬೪೨೭೭೨೨೨ / ೯೭೪೨೭೫೧೩೬೩

14.

ಶ್ರೀಮತಿ ಎ.ಜಿ. ಸುನಂದ [ಪರಶುರಾಮಪ್ಪ], ಶ್ರೀ ರೂಪದರ್ಶಿ ಕಲಾತಂಡ (ರಿ), ಜಯದೇವ ಡೆಂಟಲ್ ಆಸ್ಪತ್ರೆ ಹಿಂಭಾಗ, ಕೋಟೆ ರಸ್ತೆ, ಹೊನ್ನಾಳಿ-೫೭೭೨೧೭, ದಾವಣಗೆರೆ ಜಿಲ್ಲೆ ದೂ: ೯೮೮೦೧೪೪೩೧೬

   
 

ಇತ್ತೀಚಿನ ನವೀಕರಣ​ : 21-01-2021 04:44 PM ಅನುಮೋದಕರು: Admin

×
ABOUT DULT ORGANISATIONAL STRUCTURE PROJECTS