ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2018-19ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

2018-19ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ1.ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮ ಶತಮಾನೋತ್ಸವ ಆಚರಣೆ:

2018ರ ಏಪ್ರಿಲ್ 7ರಂದು ಮತ್ತು 8ರಂದು ಕೇರಳ ಸಕರ್ಾರದ ಭಾರತ್ ಭವನ್ ಹಾಗೂ ಶೇಣಿ ರಂಗಜಂಗಮ ಟ್ರಸ್ಟ್(ರಿ) ಈ ಸಂಸ್ಥೆಗಳ ಸಹಯೋಗದೊಂದಿಗೆ ಕ್ರಮವಾಗಿ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಹಾಗೂ ಕೂಡ್ಲು ಕುತ್ಯಾಳ ಶ್ರೀ ಗೋಪಾಲೃಷ್ಣ ದೇವಸ್ಥಾನದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

 

2.ಕಡಂದೇಲು ಪುರುಷೋತ್ತಮ ಭಟ್ ಜನ್ಮ ಶತಮಾನೋತ್ಸವ ಆಚರಣೆ:

ದಿನಾಂಕ 08.04.2018ರಂದು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳ(ರಿ) ಕಟೀಲು ಈ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಕಡಂದೇಲು ಪುರುಷೋತ್ತಮಭಟ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

 

3.ಯಕ್ಷಸಂಭ್ರಮ :

2018ರ ಮೇ 23 ಮತ್ತು 24ರಂದು ಸಪ್ತ ಸ್ವರ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ಜೋಯಿಡಾದ ಗುಂದದಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆ ಅವರು ನೆರವೇರಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ರವರಾದ ಶ್ರೀ ಎಸ್.ಹೆಚ್.ಶಿವರುದ್ರಪ್ಪ, ಅಕಾಡೆಮಿಯ ಸದಸ್ಯರಾದ ಡಾ. ರಾಮಕೃಷ್ಣ ಗುಂದಿ ಮೊದಲಾದವರು ಉಪಸ್ಥಿತರಿದ್ದರು.  ಯಕ್ಷಗಾನ ಕುರಿತ ವಿಚಾರಗೋಷ್ಠಿ ಯಕ್ಷಗಾನ ಪ್ರಸಂಗಗಳು ಪ್ರಸ್ತುತಗೊಂಡವು.

 

4.ಯಕ್ಷಸಂಭ್ರಮ :

2018ರ ಜುಲೈ 28 & 29ರಂದು ಶ್ರೀ ಮಾರಿಕಾಂಬ ಯಕ್ಷಗಾನ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಘ, ಬೋಳೆ ಈ ಸಂಸ್ಥೆಯ ಸಹಯೋಗದೊಂದಿಗೆ ಅಂಕೋಲಾದ ಭಾಸಗೋಡಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮವನ್ನು ಅಂಕೋಲಾ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಗಾಂವಕರ ಅವರು ಉದ್ಘಾಟಿಸಿ  ಯುವ ಜನರಿಗೆ ಯಕ್ಷಗಾನದತ್ತ ಹೆಚ್ಚು ಒಲವು ತೋರಿಸುವ ಮೂಲಕ ಯಕ್ಷಗಾನ ಕಲೆಯನ್ನು ಬೆಳಸಬೇಕು ಎಂದು ಹೇಳಿದರು. 

 

5.ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟ :

ದಿನಾಂಕ24.10.2018ರಂದು ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಈ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳೂರಿನ ಮಂಗಳಗಂಗೋತ್ರಿಯ ಯಕ್ಷಗಾನ ಕಲಾಕೇಂದ್ರದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟವನ್ನು ಏರ್ಪಡಿಸಲಾಯಿತು.

 

6.ಶೇಣಿಭಾರತ ದರ್ಶನ, ವಿಚಾರ ಸಂಕಿರಣ :

ದಿನಾಂಕ:04.11.2018ರಂದು ಯಕ್ಷಗಾನ ಸಂಶೋಧನಾ ಕೇಂದ್ರ(ರಿ), ಕುಮಟಾ ಈ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಶೇಣಿಭಾರತ ದರ್ಶನ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಯಲ್ಲಾಪುರದ ಸಂಕಲ್ಪೋತ್ಸವ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.

 

7.ಮಹಾಭಾರತ ಯಕ್ಷಗಾನ ಪ್ರದರ್ಶನಗಳ ರಂಗ ಭಾಷೆ ಕೃತಿ ಬಿಡುಗಡೆ ಸಮಾರಂಭ :

ದಿನಾಂಕ 15.11.2018ರಂದು ಯಕ್ಷಾಂಗಣ ಮಂಗಳೂರು ಈ ಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಂಗಣದಲ್ಲಿ ಡಾ. ಚಂದ್ರಶೇಖರ ದಾಮ್ಲೆ ಅವರ ಮಹಾಭಾರತ ಯಕ್ಷಗಾನ ಪ್ರದರ್ಶನಗಳ ರಂಗ ಭಾಷೆ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು. 'ರತಿಕಲ್ಯಾಣ' ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತಪಡಿಸಲಾಯಿತು. 

 

8.ಯಕ್ಷಸಂಭ್ರಮ, ಪುಣೆ :

ದಿನಾಂಕ 23.12.2018ರಂದು ಶ್ರೀ ಅಯ್ಯಪ್ಪಸ್ವಾಮಿ ಯಕ್ಷಗಾನ ಮಂಡಳಿ ಪುಣೆ ಸಂಸ್ಥೆಯ ಸಹಕಾರದೊಂದಿಗೆ ಪುಣೆಯ ಡಾ. ಕಲ್ಮಾಡಿ ಶ್ಯಾಮ್ರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಯಿತು. 

 

9.ಪ್ರಾಚಾರ್ಯ ಮಾವರ್ಿ ನಾರ್ಣಪ್ಪ ಉಪ್ಪೂರ ಜನ್ಮ ಶತಮಾನೋತ್ಸವ :

2019ರ ಫೆಬ್ರವರಿ 9 ಮತ್ತು 10ರಂದು ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಪ್ರಾಚಾರ್ಯ ಮಾವರ್ಿ ನಾರ್ಣಪ್ಪ ಉಪ್ಪೂರ ಅವರ ಜನ್ಮ ಶತಮಾನೋತ್ಸವವನ್ನು ನಡೆಸಲಾಯಿತು.

 

10.ಬಡಗುತಿಟ್ಟಿನ ಗಾಯನ ವಾದನ ಪರಂಪರೆ ಮತ್ತು ಔಚಿತ್ಯ ಕಾಯರ್ಾಗಾರ ಮತ್ತು ದಾಖಲಾತಿ :

13.02.2019 ರಿಂದ 17.02.2019ರವರೆಗೆ ಶಿರಸಿಯ ಅಭಿನವ ರಂಗ ಮಂದಿರ ಪುಟ್ಟನಮನೆಯಲ್ಲಿ ಯಕ್ಷಗಾನದಲ್ಲಿ ಕಳೆದು ಹೋಗುತ್ತಿರುವ ಅಪರೂಪದ ತಿಟ್ಟಿನ ಮಟ್ಟಿನ ಪದ್ಯಗಳ ಹಾಡುಗಾರಿಕೆ, ವಾದನಗಳ ಶೈಲಿಯ ದಾಖಲೀಕರಣ ನಡೆಯಿತು.

 

11.ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರದಾನ ಸಮಾರಂಭ :

ದಿನಾಂಕ 23.02.2019ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿವಮೊಗ್ಗದ ಗೋಕುಲ ಸರ್ಕಲ್ ನಿಂದ ಕುವೆಂಪು ಸಭಾಭವನದವರೆಗೆ ಪ್ರಶಸ್ತಿ ಪುರಸ್ಕೃತರ ಹಾಗೂ ಕಲಾತಂಡಗಳ ಮೆರವಣಿಗೆಯ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಭಾಗವಹಿಸಿದರು.

 

12.ಮೂಡಲಪಾಯ ಯಕ್ಷಸಂಭ್ರಮ :

2019ರ ಮಾಚರ್್ 2 ಮತ್ತು 3ರಂದು ದೊಡ್ಡಬಳ್ಳಾಪುರದ ಡಾ. ರಾಜ್ರಕುಮಾರ್ ವೇದಿಕೆಯಲ್ಲಿ ಮೂಡಲಪಾಯ ಯಕ್ಷಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಯಿತು. ನಗರಸಭೆ ಅಧ್ಯಕ್ಷರಾದ ಶ್ರೀ ಟಿ.ಎನ್.ಪ್ರಭುದೇವ್ ಅವರ ಉದ್ಘಾಟಿಸಿದರು.  ರಾಮಾಂಜನೇಯ ಯುದ್ಧ ಪ್ರಸಂಗದ ಕೇಳಿಕೆ ಪ್ರದರ್ಶನ, ಕರಿರಾಜ ಚರಿತ್ರೆ ಪ್ರಸಂಗದ ಮೂಡಲಪಾಯ ಯಕ್ಷಗಾನ, ಏಕಲವ್ಯ ಪ್ರಸಂಗದ ಯಕ್ಷಗಾನ ಗೊಂಬೆಯಾಟ, ರತಿಕಲ್ಯಾಣ ಪ್ರಸಂಗ ಕುರಿತ ಮೂಡಲಪಾಯ ಯಕ್ಷಗಾನ ಪ್ರದರ್ಶನಗಳು ಪ್ರಸ್ತುತಗೊಂಡಿತು.

 

13.ಮಹಿಳಾ ದಿನಾಚರಣೆ ಮತ್ತು ಯಕ್ಷಸೌರಭ :

ದಿನಾಂಕ 10.03.2019ರಂದು ಗೋವಾ ಕನ್ನಡ ಸಮಾಜದ ಸಹಯೋಗದೊಂದಿಗೆ ಪಣಜಿಯಲ್ಲಿ ಮಹಿಳಾ ದಿನಾಚರಣೆ ಹಾಗೂ ಯಕ್ಷಸೌರಭ ಕಾರ್ಯಕ್ರಮವನ್ನು ನಡೆಸಲಾಯಿತು.

 

14.ಯಕ್ಷಸಂಭ್ರಮ ಮತ್ತು ಯಕ್ಷಗಾನ ತರಬೇತಿಯ ಆರಂಭೋತ್ಸವ :

ಅಕಾಡೆಮಿಯು ಕನ್ನಡ ನಾಟ್ಯರಂಗ(ರಿ), ಹೈದರಾಬಾದ್, ಈ ಸಂಸ್ಥೆಯ ಸಹಯೋಗದೊಂದಿಗೆ ಯಕ್ಷಸಂಭ್ರಮ ಮತ್ತು ಯಕ್ಷಗಾನ ತರಬೇತಿಯ ಆರಂಭೋತ್ಸವ ಕಾರ್ಯಕ್ರಮವನ್ನು ದಿನಾಂಕ 31.03.2019ರಂದು ಹೈದರಾಬಾದ್ನ ಬಾಗ್ ಲಿಂಗಂಪಲ್ಲಿಯ ಸುಂದರಯ್ಯ ಕಲಾ ನಿಲಯದಲ್ಲಿ ಹಮ್ಮಿಕೊಳ್ಳಲಾಯಿತು.

 

15.ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ :

ಅಕಾಡೆಮಿಯು ಯಕ್ಷಗಾನ ಕೇಂದ್ರ, ಇಂದ್ರಾಳಿ ಈ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 22.06.2019ರಂದು ಯಕ್ಷಗಾನ ಕೇಂದ್ರ, ಇಂದ್ರಾಳಿಯಲ್ಲಿ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರದಲ್ಲಿ ಶ್ರೀ ಅಂಬಾತನಯ ಮುದ್ರಾಡಿಯವರ 'ಪಂಚಭೂತ ಪ್ರಪಂಚ' ಹಾಗೂ ಶ್ರೀ ಕಂದಾವರ ರಘುರಾಮ ಶೆಟ್ಟಿಯವರ 'ಯಕ್ಷಗಾನ ಪ್ರಸಂಗ ಪಂಚಮಿ'ಪುಸ್ತಕಗಳನ್ನು ಯಕ್ಷಗಾನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಅವರು ಬಿಡುಗಡೆ ಮಾಡಿದರು.

 

16.ಮೂಡಲಪಾಯ ಯಕ್ಷಗಾನ - ಯಕ್ಷಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ, ಹಾವೇರಿ :

ಅಕಾಡೆಮಿಯು ಹಾವೇರಿ ಜಿಲ್ಲಾ ದುಗರ್ಾದೇವಿ ಮೂಡಲಪಾಯ/ದೊಡ್ಡಾಟ ಪ್ರದರ್ಶನ ಮತ್ತು ತರಬೇತಿ ಕಲಾಮಂಡಳಿ ಸಂಸ್ಥೆಯ ಸಹಯೋಗದೊಂದಿಗೆ 2019ರ ಜೂನ್ 29 ಮತ್ತು 30ರಂದು ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಮೂಡಲಪಾಯ ಯಕ್ಷಗಾನ-ಯಕ್ಷಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಿರಿಜಾ ಕಲ್ಯಾಣ ಪ್ರಸಂಗದ ಮೂಡಲಪಾಯ ಯಕ್ಷಗಾನ ಹಾಗೂ ಸುಧನ್ವಾಜರ್ುನ ಪ್ರಸಂಗದ ಯಕ್ಷಗಾನ ಪ್ರಸಂಗಗಳು ಪ್ರಸ್ತುತಗೊಂಡಿತು.  

 

17.ಯಕ್ಷೊತ್ಸವ, ಮುಂಬಯಿ:

ಕನರ್ಾಟಕ ಯಕ್ಷಗಾನ ಅಕಾಡೆಮಿಯು ಕನ್ನಡ ಕಲಾ ಕೇಂದ್ರ, ಮುಂಬಯಿ ಹಾಗೂ ಶ್ರೀ ಶನೀಶ್ವರ ಸೇವಾ ಸಮಿತಿ, ನೆರೊಳ್ ಈ ಸಂಸ್ಥೆಗಳ ಸಹಕಾರದೊಂದಿಗೆ 2019ರ ಆಗಸ್ಟ್ 21 ಮತ್ತು 22ರಂದು ನವಿ ಮುಂಬಯಿನ ನೆರೂಳ್ನ ನಗರಪಾಲಿಕ ಸಭಾಗೃಹದಲ್ಲಿ 'ಯಕ್ಷೊತ್ಸವ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

 

18.ಯಕ್ಷಸಂಭ್ರಮ, ಕೊಯಂಬತ್ತೂರು :

ಅಕಾಡೆಮಿಯು ಶ್ರೀ ವಿಶ್ವ ಶಿಲ್ಪ ಸಂಘ(ರಿ), ಕೊಯಂಬತ್ತೂರು ಈ ಸಂಸ್ಥೆಯ ಸಹಯೋಗದೊಂದಿಗೆ 22.09.2019ರಂದು ಕೊಯಂಬತ್ತೂರಿನ ಆರ್.ಟಿ.ಎಂ.ತಿರುಮಣ ಮಂಟಪಂನಲ್ಲಿ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನವನ್ನು ಪ್ರಸ್ತುತಪಡಿಸಿದರು.

 

19.ಯಕ್ಷಗಾನ ಗೊಂಬೆಯಾಟ ಉತ್ಸವ-ಯಕ್ಷಸಂಭ್ರಮ ವಿಚಾರ ಸಂಕಿರಣ :

ಅಕಾಡೆಮಿಯು ಹಳಿಯಾಳ ನಗರದ ಕೆನರಾ ಬ್ಯಾಂಕ ಆರ್ಸೆಟಿ ಸಭಾ ಭವನದಲ್ಲಿ ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ನಡೆದ ಯಕ್ಷಗಾನ ಗೊಂಬೆಯಾಟ ಉತ್ಸವ, ಯಕ್ಷ ಸಂಭ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂದರ್ಭದಲ್ಲಿ ತೆಂಕುತಿಟ್ಟು ಯಕ್ಷಗಾನ, ಬಡಗುತಿಟ್ಟು, ಯಕ್ಷಗಾನ ಗೊಂಬೆಯಾಟ, ತಾಳಮದ್ದಲೆ ಮತ್ತು ಮೂಡಲಪಾಯ ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಂಡವು.

 

ಇತ್ತೀಚಿನ ನವೀಕರಣ​ : 21-01-2021 04:39 PM ಅನುಮೋದಕರು: Admin

 
×
ABOUT DULT ORGANISATIONAL STRUCTURE PROJECTS