ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2017-18ನೇ ಸಾಲಿನ ಅಕಾಡೆಮಿ ಕಾರ್ಯಕ್ರಮಗಳ ಸಂಪೂರ್ಣ ವಿವರ

Home

2017-18ನೇ ಸಾಲಿನ ಅಕಾಡೆಮಿ ಕಾರ್ಯಕ್ರಮಗಳ ಸಂಪೂರ್ಣ ವಿವರ

 

1.ನೆನಪಿನೋಕುಳಿ :

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ 2017ರ ಮೇ 10 ರಿಂದ 14ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನೆನಪಿನೋಕುಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ 12.05.2017ರಂದು ಕನರ್ಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಲಲಿತ ಕಲಾ ಅಕಾಡೆಮಿ ಜೊತೆಗೂಡಿ 'ಹಿಂದಿನ ಅಧ್ಯಕ್ಷರುಗಳ ಸಂವಾದ ಮತ್ತು ಗೌರವ ಸಮರ್ಪಣೆ' ಕಾರ್ಯಕ್ರಮವನ್ನು ನಡೆಸಲಾಯಿತು.

 

2.ಪುಸ್ತಕಗಳು ಹಾಗೂ ಸಾಕ್ಷ್ಯಚಿತ್ರಗಳ ಅನಾವರಣ ಕಾರ್ಯಕ್ರಮ, ಶಿರಸಿ :

ಅಕಾಡೆಮಿಯಿಂದ ದಿನಾಂಕ 24.05.2017ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ 'ಪುಸ್ತಕಗಳು ಹಾಗೂ ಸಾಕ್ಷ್ಯಚಿತ್ರಗಳ ಅನಾವರಣ' ಕಾರ್ಯಕ್ರಮವನ್ನು ಅಕಾಡೆಮಿಯ ಸದಸ್ಯರಾದ ಡಾ. ವಿಜಯ ನಳಿನಿ ರಮೇಶ, ಇವರ ಸಂಚಾಲಕತ್ವದಲ್ಲಿ ನಡೆಸಲಾಯಿತು. 

 

3.ತೆಂಕನಾಡ ಗ್ರಂಥ ಲೋಕಾರ್ಪಣಾ ಸಮಾರಂಭ, ಕಾಸರಗೋಡು :

ಅಕಾಡೆಮಿಯು ದಿನಾಂಕ 28.05.2017ರಂದು ಶ್ರೀ ಎಡನೀರು ಮಠದ ಸಹಕಾರದೊಂದಿಗೆ ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಅಕಾಡೆಮಿ ಪ್ರಕಟಿಸಿದ ಡಾ. ಉಪ್ಪಂಗಳ ಶಂಕರನಾರಾಯಣ ಭಟ್ ಅವರು ರಚಿಸಿರುವ ತೆಂಕನಾಡ ಯಕ್ಷಗಾನ ಗ್ರಂಥ ಲೋಕಾರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

 

4.ಯಕ್ಷಗಾನ ಕಲಾ ಸಂಭ್ರಮ, ಕಾರ್ಕಳ :

2017ರ ಜುಲೈ 29 ಮತ್ತು 30ರಂದು ಕಾರ್ಕಳದ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಕ್ಷೇತ್ರ ಕಟೀಲಿನ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಡಗುತಿಟ್ಟು ಹೂವಿನಕೋಲು ಪ್ರದರ್ಶನವನ್ನು ಯಶಸ್ವಿ ಕಲಾತಂಡದವರು ಹಾಗೂ ಭೀಷ್ಮ ಪ್ರತಿಜ್ಞೆ ಪ್ರಸಂಗದ ಬಡಗುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಶಶಿಕಾಂತ ಶೆಟ್ಟಿ ಮತ್ತು ತಂಡದವರು ಪ್ರಸ್ತುತಪಡಿಸಿದರು.  ದಿನಾಂಕ 30.07.2017ರಂದು ಕಲಾರೂಪಾಂತರ ವಾದ ಸಂವಾದ ಕಾರ್ಯಕ್ರಮ ನಡೆಯಿತು. ಶ್ರೀ ಶಿಮಂತೂರು ನಾರಾಯಣ ಶೆಟ್ಟಿಯವರ ದೀಕ್ಷಾ ಕಂಕಣ ಪುಸ್ತಕವನ್ನು ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು, ಇವರು ಬಿಡುಗಡೆಗೊಳಿಸಿದರು.

 

5.ಪುಸ್ತಕ ಬಹುಮಾನ ಪ್ರದಾನ ಸಮಾರಂಭ, ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ :

ದಿನಾಂಕ 05.08.2017ರಂದು ಬಾಗಲಕೋಟದ ನವನಗರದ ಡಾ. ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಹುಮಾನ ಪ್ರದಾನ, ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಶಾಸಕರಾದ ಹೆಚ್.ವೈ.ಮೇಟಿ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪುಸ್ತಕ ಬಹುಮಾನ ಪುರಸ್ಕೃತರನ್ನು ಪುರಸ್ಕೃರಿಸಿದರು. 

 

6.ಯಕ್ಷಗಾನ ಕಲಾ ಸಂಭ್ರಮ :

ದಿನಾಂಕ 20.08.2017ರಂದು ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ತಾನದಲ್ಲಿ ಯಕ್ಷಗಾನ ಕಲಾ ಸಂಭ್ರಮವನ್ನು ಹಮ್ಮಿಕೊಳ್ಳಲಾಯಿತು.  ತುಳುನಾಡ ಬಲಿಯೇಂದ್ರ ಪ್ರಸಂಗದ ತುಳು ಯಕ್ಷಗಾನ ತಾಳಮದ್ದಳೆ ಪ್ರಸ್ತುತಪಡಿಸಲಾಯಿತು. ಬಡಗುತಿಟ್ಟಿನ ಯಕ್ಷಗಾನ ಚಿಕ್ಕಮೇಳ ಪ್ರಸ್ತುತಪಡಿಸಲಾಯಿತು. ತೆಂಕುತಿಟ್ಟಿನ ಶ್ರೀ ಕೃಷ್ಣ ಲೀಲಾಮೃತಂ ಪ್ರಸಂಗದ ಯಕ್ಷಗಾನ ಪ್ರಸ್ತುತಪಡಿಸಲಾಯಿತು.

 

7.ಬಡಗುತಿಟ್ಟುಯಕ್ಷಗಾನ ದಂತಕಥೆ ಹಾರಾಡಿ ಕುಷ್ಟ ಗಾಣಿಗರ ಜನ್ಮಶತಮಾನೋತ್ಸವ ಆಚರಣೆ :

ದಿನಾಂಕ 20.08.2017ರಂದು ಬಡಗುತಿಟ್ಟು ಯಕ್ಷಗಾನದ ದಂತಕಥೆ ಹಾರಾಡಿ ಕುಷ್ಟ ಗಾಣಿಗರ ಜನ್ಮಶತಮಾನೋತ್ಸವ ಆಚರಣೆ ಮಾಡಲಾಯಿತು.

 

8.ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದರ ಅಳಿಕೆ ರಾಮಯ್ಯ ರೈಯವರ ಜನ್ಮಶತಮಾನೋತ್ಸವ ಆಚರಣೆ:

ಅಕಾಡೆಮಿಯು ದಿನಾಂಕ 22.08.2017ರಂದು ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ರಂಗಮಂಟಪದಲ್ಲಿ ಏರ್ಪಡಿಸಿದ್ದ ತೆಂಕತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದ ಅಳಿಕೆ ರಾಮಯ್ಯ ರೈಯವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.

 

9.ಯಕ್ಷ ಸೌರಭ:

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಗೋವಾ ಕನ್ನಡ ಸಮಾಜ ಪಣಜಿ ಇವರ ಸಹಕಾರದೊಂದಿಗೆ ಪಣಜಿಯ ಗೋಮಂತಕ ಮರಾಠಾ ಸಮಾಜದ ಸಭಾಂಗಣದಲ್ಲಿ ದಿನಾಂಕ 24.12.2017ರಂದು ಹಮ್ಮಿಕೊಂಡಿದ್ದ ಯಕ್ಷಗಾನ ಸೌರಭ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕರಾದ ಶ್ರೀ ಬಲವಂತರಾವ್ ಪಾಟೀಲ ಹಾಗೂ ಪ್ರಸಂಗಕರ್ತರು ಅರ್ಥಧಾರಿಗಳಾದ ಪ್ರೊ. ಪವನ್ ಕಿರಣ್ಕೆರೆ ಉದ್ಘಾಟಿಸಿದರು.  ಹಡಗಲಿ ಸಕರ್ಾರಿ ಪ್ರಥಮದಜರ್ೆ ಕಾಲೇಜಿನ ನಿವೃತ್ತ ಪ್ರಾಂಶುಪಲರಾದ ಡಾ. ಕರಿಶೆಟ್ಟಿ ರುದ್ರಪ್ಪ, ಗೋವಾ ಕನ್ನಡ ಸಮಾಜದ ಅಧ್ಯಕ್ಷರಾದ ಮಲ್ಲಿಕಾಜರ್ುನ ಬಾದಾಮಿ ಅವರು ಉಪಸ್ಥಿತರಿದ್ದರು.  ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀ ಎಸ್.ಹೆಚ್.ಶಿವರುದ್ರಪ್ಪ ಅವರು ಸ್ವಾಗತಿಸಿದರು. ಸುಮತಿ ಜವಳಿ ತಂಡದವರು ನಾಡಗೀತೆ ಹಾಡಿದರು. ಗೋವಾ ಕನ್ನಡ ಸಮಾಜದ ಕಾರ್ಯದಶರ್ಿಗಳಾದ ಶ್ರೀ ಅರುಣ್ ಕುಮಾರ್ ಅವರು ವಂದಿಸಿದರು.  ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿಯಿಂದ ಕವಿರತ್ನ ಕಾಳಿದಾಸ ಯಕ್ಷಗಾನ ಪ್ರದರ್ಶನ ನಡೆಯಿತು.

 

10.ಯಕ್ಷ ಸಂಭ್ರಮ, ದಾವಣಗೆರೆ :

2017ರ ಡಿಸೆಂಬರ್ 30 ಮತ್ತು 31ರಂದು ದಾಣಗೆರೆಯ ಸಿದ್ದಗಂಗಾ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಯಕ್ಷಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಗಳಾದ ಶ್ರೀ ಡಿ.ಎಸ್.ರಮೇಶ್ ನೆರವೇರಿಸಿದರು.

 

11.ಯಕ್ಷ ಸಂಭ್ರಮ, ಕಾಸರಗೋಡು:

ದಿನಾಂಕ 18.02.2018ರಂದು ಕಾಸರಗೋಡಿನ ಮಂಜೇಶ್ವರದ ಗಿಳಿವಿಂಡು ಗೋವಿಂದ ಪೈ ಸ್ಮಾರಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಯಕ್ಷಸಂಭ್ರಮ ಕಾರ್ಯಕ್ರಮವನ್ನು ಯಕ್ಷಗಾನ ಅರ್ಥಧಾರಿಗಳಾದ ಡಾ. ರಮಾನಂದ ಬನಾರಿ ಅವರು ನೆರವೇರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕರಾದ ಶ್ರೀ ಬಲವಂತರಾವ್ ಪಾಟೀಲ್ ಅವರು ಉಪಸ್ಥಿತರಿದ್ದರು. ಶ್ರೀ ನಾಗರಾಜ ಪದಕಣ್ಣಾಯ ಅವರು ಜಾಂಬವತಿ ಕಲ್ಯಾಣ ಪ್ರಸಂಗದ ಯಕ್ಷಗಾನ ಪ್ರದಶರ್ಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು. ಯಕ್ಷಗಾನ ವಿಚಾರ ಸಂಕಿರಣದಲ್ಲಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಕುಂಬ್ಳೆ ಸುಂದರರಾವ್ ಅವರು ಉಪನ್ಯಾಸ ನೀಡಿದರು. 

ಇತ್ತೀಚಿನ ನವೀಕರಣ​ : 21-01-2021 04:36 PM ಅನುಮೋದಕರು: Admin

×
ABOUT DULT ORGANISATIONAL STRUCTURE PROJECTS