ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2016-17ನೇ ಸಾಲಿನ ಕಾರ್ಯಕ್ರಮಗಳ ವಿವರಗಳು

Home

2016-17ನೇ ಸಾಲಿನ ಕಾರ್ಯಕ್ರಮಗಳ ವಿವರಗಳು

 

1.ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭ:

ದಿನಾಂಕ 14.03.2016ರಂದುಬೀದರ್ನಲ್ಲಿ 2015ನೇ ಸಾಲಿನ "ಪಾರ್ತಿಸುಬ್ಬ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿ ಪ್ರದಾನ ಸಮಾರಂಭ " ವನ್ನು ಏರ್ಪಡಿಸಿ ಶ್ರೀ ಗುಂಡ್ಲವದ್ದಿಗೇರಿ ತಿಮ್ಮಾರೆಡ್ಡಿ ಅವರಿಗೆ 2015ನೇ ಸಾಲಿನ ಪ್ರತಿಷ್ಠಿತ ಪಾತರ್ಿಸುಬ್ಬ ಪ್ರಶಸ್ತಿ ಯನ್ನು ಹಾಗೂ ಶ್ರೀ ಕಂದಾವರ ರಘುರಾಮಶೆಟ್ಟಿ, ಶ್ರೀ ಹಡಿನಬಾಳ ಶ್ರೀಪಾದ ಹೆಗಡೆ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ಶ್ರೀ ಮೇಗರವಳ್ಳಿ ರಾಮನಾಯಕ, ಶ್ರೀ ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ, ಶ್ರೀಮತಿ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ, ಶ್ರೀಮತಿ ಗೌರಮ್ಮ, ಶ್ರೀಮತಿ ಎಸ್.ಸೊಲ್ಲಮ್ಮ, ಶ್ರೀ ಸಣ್ಣತಿಮ್ಮಯ್ಯ, ಶ್ರೀ ಎ.ಕೆ.ಮಾರಯ್ಯ ಅವರುಗಳಿಗೆ 2015ನೇ ಗೌರವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.

 

2.ಯಕ್ಷಗಾನ ಬಯಲಾಟ ರಂಗ ಸಂಭ್ರಮ:

ದಿನಾಂಕ 19.06.2016ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಶ್ರೀ ಮ.ನಿಪ್ರ.ಸ್ವ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಗವಿಮಠ, ಕೊಪ್ಪಳ ಇವರ ದಿವ್ಯ ಸಾನಿಧ್ಯದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಗಿದ್ದು, ಯಕ್ಷಗಾನ, ಬಯಲಾಟ, ದಪ್ಪಿನಾಟ, ತೊಗಲುಗೊಂಬೆಯಾಟ  ಮುಂತಾದ ಕಾರ್ಯಕ್ರಮಗಳು ಜರುಗಿದವು.

 

3.ಯಕ್ಷಗಾನ ಬಯಲಾಟ ರಂಗ ಸಂಭ್ರಮ :

ದಿನಾಂಕ 2016ರ ಜೂನ್ 23 ಮತ್ತು 24ರಂದು ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ  ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಗಿದ್ದು, ಯಕ್ಷಗಾನ-ಬಯಲಾಟ-ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೀವನ ಮೌಲ್ಯ ಈ ಕುರಿತ ಉಪನ್ಯಾಸಗಳು ಹಾಗೂ ಯಕ್ಷಗಾನ, ಘಟ್ಟದಕೋರೆ, ಸೂತ್ರದಗೊಂಬೆಯಾಟ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

4.ಯಕ್ಷಗಾನ ಬಯಲಾಟ ರಂಗ ಸಂಭ್ರಮ :

ದಿನಾಂಕ 01.07.2016ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಗಿದ್ದು, ಗದಾಯುದ್ಧ, ಶ್ರೀಕೃಷ್ಣಪಾರಿಜಾತ-ನರಕಾಸುರ ವಧೆ ಎಂಬ ಮಹಿಳಾ ಯಕ್ಷಗಾನ, ಗೊಂಬೆಯಾಟ, ಯಕ್ಷಗಾನ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಮತ್ತು ಕೊಡಗು ಜಿಲ್ಲೆ ಎಂಬ ವಿಷಯದ ಕುರಿತ ಉಪನ್ಯಾಸ ಮೊದಲಾದವು ಜರುಗಿದವು.

 

5.ಯಕ್ಷಗಾನ ಬಯಲಾಟ ರಂಗ ಸಂಭ್ರಮ:

2016ರ ಜುಲೈ 1 ಮತ್ತು 2ರಂದು ಶ್ರೀ ಮ.ನಿ. ಪ್ರ. ಸ್ವ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು, ಅಧ್ಯಕ್ಷರು, ಪವಾಡ ಶ್ರೀ ಬಸವಣ್ಣದೇವರ ಮಠ, ನೆಲಮಂಗಲ ಇವರ ದಿವ್ಯ ಸಾನಿಧ್ಯದಲ್ಲಿ ನೆಲಮಂಗಲದ ಶ್ರೀ ಬಸವಣ್ಣದೇವರ ಮಠದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಗಿದ್ದು, ಸಲಾಕೆಗೊಂಬೆಯಾಟ, ಶ್ರೀಕೃಷ್ಣಪಾರಿಜಾತ, ಮೂಡಲಪಾಯ ಯಕ್ಷಗಾನ, ಬಡಗುತಿಟ್ಟು ಯಕ್ಷಗಾನ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಮತ್ತು ಕೊಡಗು ಜಿಲ್ಲೆ ಎಂಬ ವಿಷಯದ ಕುರಿತ ಉಪನ್ಯಾಸ ಮೊದಲಾದವು ಜರುಗಿದವು.

 

 

 

6.ಯಕ್ಷಗಾನ ಬಯಲಾಟ ರಂಗ ಸಂಭ್ರಮ:

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ 31.07.2016ರಂದು ಕಲಬುರಗಿಯ ಬಾಪುಗೌಡ ದರ್ಶನಾಪುರ ರಂಗಮಂದಿರದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಗಿದ್ದು, ಯಕ್ಷಗಾನ, ಸಣ್ಣಾಟ, ದೊಡ್ಡಾಟ, ಮಹಿಳಾ ತಾಳಮದ್ದಳೆ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

7.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ :

ಕರ್ನಾಟಕ ಸಾಹಿತ್ಯ ಮಂದಿರ, ಹೈದರಾಬಾದ್ ಇವರ ಸಹಕಾರದೊಂದಿಗೆ ದಿನಾಂಕ 29.07.2016ರಂದು ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಹೈದರಾಬಾದಿನ ಕನರ್ಾಟಕ ಸಾಹಿತ್ಯ ಮಂದಿರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು, ಬಡಗುತಿಟ್ಟು ಯಕ್ಷಗಾನ, ಬಯಲಾಟ, ತೆಂಕುತಿಟ್ಟು ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

8.ಗಿರಿಜನ ಉಪಯೋಜನೆಯಡಿ ಯಕ್ಷಗಾನ ಬಯಲಾಟ: ಚಿಂತನಾ ಶಿಬಿರ:

ಚಿತ್ರದುರ್ಗದ ಮಹಾರಾಜ ಮದಕರಿ ನಾಯಕ ಪ್ರಥಮದಜರ್ೆ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಯಕ್ಷಗಾನ ಬಯಲಾಟ: ಚಿಂತನಾ ಶಿಬಿರವನ್ನು ದಿನಾಂಕ 13.11.2016ರಂದು ಏರ್ಪಡಿಸಲಾಗಿದ್ದು, ಬಯಲಾಟದ ಪರಂಪರೆ, ಯಕ್ಷಗಾನದ ವೈಶಿಷ್ಟ್ಯ, ತೊಗಲುಗೊಂಬೆಯಾಟ ಬೆಳವಣಿಗೆ, ಬಯಲಾಟದ ಸಮಕಾಲೀನ ಸವಾಲುಗಳು ಮತ್ತು ಸಾಧ್ಯತೆಗಳು ಕುರಿತ ಗೋಷ್ಠಿಗಳು ಹಾಗೂ ಬಯಲಾಟ ಪ್ರದರ್ಶನ ಜರುಗಿದವು.

 

9.ವಿಶೇಷ ಘಟಕ ಯೋಜನೆಯಡಿ ಬಯಲಾಟ ವಿಚಾರಗೋಷ್ಠಿ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಕೋನಸಾಗರದಲ್ಲಿ ವಿಶೇಷ ಘಟಕ ಯೋಜನೆಯಡಿ ಬಯಲಾಟ ವಿಚಾರಗೋಷ್ಠಿ, ಸಂವಾದ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಬಯಲಾಟ ಕಲಾಪ್ರಕಾರದ ಬಗ್ಗೆ ಮಕ್ಕಳೊಂದಿಗೆ ಸಂವಾದ ಬಯಲಾಟ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

10.ಯಕ್ಷಗಾನ ಹಗೂ ಬಯಲಾಟಗಳ ಪ್ರಚಲಿತ ವಿದ್ಯಮಾನಗಳು ಕುರಿತ ವಿಚಾರಗೋಷ್ಠಿ ಮತ್ತು ಸೂತ್ರದಗೊಂಬೆಯಾಟ ಪ್ರದರ್ಶನ :

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೋಟಗೋಡಿ, ಶಿಗ್ಗಾಂವಿ, ಸಂಸ್ಥೆಯ ಸಹಯೋಗದೊಂದಿಗೆ ಯಕ್ಷಗಾನ ಹಾಗೂ ಬಯಲಾಟಗಳ ಪ್ರಚಲಿತ ವಿದ್ಯಮಾನಗಳು ಕುರಿತ ವಿಚಾರಗೋಷ್ಠಿಯನ್ನು ಗೋಟಗೋಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಬಯಲಾಟ, ಸೂತ್ರದಗೊಂಬೆಯಾಟ, ಯಕ್ಷಗಾನ ಹಾಗೂ ತೊಗಲುಗೊಂಬೆಯಾಟ ಪ್ರಚಲಿತ ವಿದ್ಯಮಾನಗಳು ಕುರಿತ ವಿಚಾರಗೋಷ್ಟಿಗಳು ಹಾಗೂ ಸೂತ್ರದಗೊಂಬೆಯಾಟ ಪ್ರದರ್ಶನ ನಡೆಯಿತು.

 

11.ವಿಚಾರ ಸಂಕಿರಣ (ಯಕ್ಷಗಾನ ಬಯಲಾಟ ಮತ್ತು ಕನ್ನಡ) :

ಯಕ್ಷಗಾನ ಬಯಲಾಟ ಮತ್ತು ಕನ್ನಡ ಕುರಿತ ವಿಚಾರ ಸಂಕಿರಣವನ್ನು ಹುಲೇಕಲ್ಲಿನ ಶ್ರೀದೇವಿ ಕಂಪೋಸಿಟ್ ಜೂನಿಯರ್ ಕಾಲೇಜಿನಲ್ಲಿ ದಿನಾಂಕ 24.11.2016ರಂದು ಹಮ್ಮಿಕೊಳ್ಳಲಾಗಿತ್ತು.  ಯಕ್ಷಗಾನ ಆಶುಸಾಹಿತ್ಯ ಹಾಗೂ ಕನ್ನಡಶಿಷ್ಟ ಸಾಹಿತ್ಯ, ಬಯಲಾಟಗಳ ಸ್ವರೂಪ ಹಾಗೂ ವೈವಿಧ್ಯ ಕುರಿತ ಗೋಷ್ಠಿಗಳು, ತಾಳಮದ್ದಳೆ ಕಾರ್ಯಕ್ರಮಗಳು ಜರುಗಿದವು.

 

12.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ :

ದೆಹಲಿ ಕನರ್ಾಟಕ ಸಂಘದ ಸಹಕಾರದೊಂದಿಗೆ 2016ರ ಡಿಸೆಂಬರ್ 10 ಮತ್ತು 12ರಂದು ದೆಹಲಿ ಕನರ್ಾಟಕ ಸಂಘದಲ್ಲಿ  ಯಕ್ಷಗಾನ ಬಯಲಾಟ ವಿಚಾರ ಸಂಕಿರಣ ಮತ್ತು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕಾಲಮಿತಿ ಯಕ್ಷಗಾನ ಬಯಲಾಟದ ಸಾಧಕ-ಬಾಧಕಗಳು ವಿಷಯದ ಕುರಿತ ವಿಚಾರಗೋಷ್ಠಿ ಹಾಗೂ ತೆಂಕುತಿಟ್ಟು ಯಕ್ಷಗಾನ, ತಾಳಮದ್ದಳೆ, ಬಯಲಾಟ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

13.ಯಕ್ಷಗಾನ ಬಯಲಾಟದ ವಿಚಾರ ಸಂಕಿರಣ ಮತ್ತು ಯಕ್ಷಗಾನ  :

ದಿನಾಂಕ 17.12.2016ರಂದು ಹೊನ್ನಾವರದ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ, ಇವರ ಸಹಕಾರದೊಂದಿಗೆ ಹೊನ್ನಾವರದ ಮೂಡುಗಣಪತಿ ಕಲ್ಯಾಣ ಮಂಟಪದಲ್ಲಿ ಯಕ್ಷಗಾನ ಬಯಲಟದ ವಿಚಾರ ಸಂಕಿರಣ ಹಾಗೂ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಬಡಗುತಿಟ್ಟಿನ ಯಕ್ಷಗಾನ ಪ್ರಯೋಗ ಮತ್ತು ಪರಂಪರೆ ಕುರಿತ ವಿಚಾರ ಸಂಕಿರಣ, ಬಯಲಾಟದ ವಿಚಾರ ಸಂಕಿರಣ ಮೊದಲಾದ ಗೋಷ್ಠಿಗಳನ್ನು ನಡೆಸಲಾಯಿತು.

 

14.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ : 

ದಿನಾಂಕ 25.12.2016ರಂದು ಕಾಸರಗೋಡಿನ ಮಂಜೇಶ್ವರದ ಹಿಲ್ಸೈಡ್ ಸಭಾಭವನದಲ್ಲಿ ಯಕ್ಷಬಳಗ, ಹೊಸಂಗಡಿ ಇವರ ಸಹಕಾರದೊಂದಿಗೆ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಮಕ್ಕಳ ಯಕ್ಷಗಾನ, ಬಡಗುತಿಟ್ಟು ಯಕ್ಷಗಾನ, ಹಗೂ ಮೂಡಲಪಾಯ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

15.ಯಕ್ಷಗಾನೋತ್ಸವ   :

2017ರ ಜನವರಿ 18 ಮತ್ತು 19ರಂದು ಶ್ರೀಕೃಷ್ಣ ಮಠ, ಪಯರ್ಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಸಹಕಾರದೊಂದಿಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಾಳಮದ್ದಳೆ, ಬಡಗುತಿಟ್ಟು ಯಕ್ಷಗಾನ, ಮೊದಲಾದ ಕಾರ್ಯಕ್ರಮಗಳು, ಉಪನ್ಯಾಸಗಳು ಜರುಗಿದವು.

 

16.ಯಕ್ಷಗಾನೋತ್ಸವ  :

2017ರ ಜನವರಿ 23 ತಮ್ತು 24ರಂದು ಶ್ರೀ ಸಪ್ತಸ್ವರ ಸೇವಾ ಸಂಸ್ಥೆ, ಜೋಯಿಡಾ ಇವರ ಸಹಕಾರದೊಂದಿಗೆ ಜೋಯಿಡಾ ತಾಲೂಕಿನ ಯರಮುಖದಲ್ಲಿನ ಸೋಮೇಶ್ವರ ಸಭಾ ಭವನದಲ್ಲಿ ಯಕ್ಷಗಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಲಾಯಿತು. ತಾಳಮದ್ದಳೆ ಕುರಿತ ಉಪನ್ಯಾಸ, ತಾಳಮದ್ದಳೆ, ಮಕ್ಕಳ ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಜರುಗಿದವು.

 

ಇತ್ತೀಚಿನ ನವೀಕರಣ​ : 21-01-2021 04:34 PM ಅನುಮೋದಕರು: Admin

 
×
ABOUT DULT ORGANISATIONAL STRUCTURE PROJECTS