ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2015-16ನೇ ಸಾಲಿನ ಕರ್ನಾಟಕ ಯಕ್ಷಗಾನ ಕಾರ್ಯಕ್ರಮಗಳ ಮಾಹಿತಿ

Home

1.ಯಕ್ಷಗಾನ ಬಯಲಾಟ ರಂಗ ಸಂಭ್ರಮ, ಶಿಡ್ಲಘಟ್ಟ :

2015ರ ಮೇ 2 ಮತ್ತು 3ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಲಂಕಾದಹನ ತೊಗಲುಗೊಂಬೆಯಾಟ, ಭೀಷ್ಮ ಪ್ರತಿಜ್ಞೆ ಬಡಗುತಿಟ್ಟು ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ಸಣ್ಣಾಟ, ಕೇಳಿಕೆ ಮೊದಲಾದ ಕಲಾಪ್ರಕಾರಗಳ ಕಾರ್ಯಕ್ರಮಗಳು ಪ್ರಸ್ತುತಗೊಂಡವು.  ಯಕ್ಷಗಾನ ಬಯಲಾಟ: ಪ್ರಯೋಗ ಮತ್ತು ಪರಿಷ್ಕರಣೆ ಈ ಕುರಿತ ಉಪನ್ಯಾಸ ಹಾಗೂ ಸಂವಾದ ನಡೆಯಿತು.

 

2.ಯಕ್ಷಗಾನ ಬಯಲಾಟ ರಂಗ ಸಂಭ್ರಮ, ಉಡುಪಿ :

2015ರ ಮೇ 7 ಮತ್ತು 8ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.  ಅಕಾಡೆಮಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಮೋಹನ್ ಆಳ್ವ ಅವರು ಉದ್ಘಾಟಿಸಿದರು.  ಯಕ್ಷಗಾನ-ಕಾಲೋಚಿತ ಕಲಾಚಿಂತನೆ ಈ ಕುರಿತ ಉಪನ್ಯಾಸ ನಡೆಯಿತು.  ತಾಳಮದ್ದಳೆ, ಯಕ್ಷಗಾನ, ಸಂಗ್ಯಾಬಾಳ್ಯ ತೆಂಕುತಿಟ್ಟು ಯಕ್ಷಗಾನ ಕಾರ್ಯಕ್ರಮಗಳು ಪ್ರಸ್ತುತಗೊಂಡವು.  

 

3.ಯಕ್ಷೊತ್ಸವ 2015, ಯರಮುಖ :

ದಿನಾಂಕ 26.06.2015ರಂದು ಯರಮುಖದ ಸೋಮೇಶ್ವರ ಸಭಾಭವನದಲ್ಲಿ ಯಕೋತ್ಸವ-2015 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಹಿಳಾ ಯಕ್ಷಗಾನ ಸವಾಲುಗಳು ಮತ್ತು ಸಾಧ್ಯತೆಗಳು ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಶ್ರೀನಿಧಿ ಮಹಿಳಾ ತಾಳಮದ್ದಳೆ ಕೂಟ ನಂದಿಗದ್ದೆ, ಇವರಿಂದ ಸುಧನ್ವಾಜರ್ುನ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ಹಾಗೂ ಸಪ್ತಸ್ವರ ಸೇವಾ ಸಂಸ್ಥೆಯಿಂದ ಸುದರ್ಶನ ವಿಜಯ ಯಕ್ಷಗಾನ ಕಾರ್ಯಕ್ರಮ ನಡೆಯಿತು.

 

4.ಯಕ್ಷಗಾನ ಬಯಲಾಟ ರಂಗಸಂಭ್ರಮ, ಕಾಸರಗೋಡು (ಯಕ್ಷಗಾನ ಬಯಲಾಟ ಕಾರ್ಯಕ್ರಮ, ಪುಸ್ತಕ ಬಹುಮಾನ, ಅಕಾಡೆಮಿ ಅಂತರ್ಜಾಲ ಲೋಕಾರ್ಪಣೆ) :

ದಿನಾಂಕ 18.07.2015 & 19.07.2015    ಶ್ರೀ ಎಡನೀರು ಮಠ, ಕಾಸರಗೋಡು ಮತ್ತು ವಿದ್ಯಾವರ್ಧಕ ಎ.ಯು.ಪಿ. ಶಾಲೆ, ಮೀಯಪದವು ಈ ಎರಡು ಕಡೆಗಳಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ 2011, 2012 ಮತ್ತು 2013ನೇ ಸಾಲಿನ ಪುಸ್ತಕ ಬಹುಮಾನವನ್ನು ಕ್ರಮವಾಗಿ ಶ್ರೀ ಈಶ್ವರಚಂದ್ರ ಬೆಟಗೇರಿ, ಶ್ರೀ ಡಿ.ಎಸ್.ಶ್ರೀಧರ್, ಶ್ರೀ ಜೆಡ್ಡು ಸದಾಶಿವ ಭಟ್ಟ, ದಿ|| ಬಸವರಾಜ ಮಲಶೆಟ್ಟಿ, ಶ್ರೀ ಸುಬ್ರಹ್ಮಣ್ಯ ಬೈಪಡಿತ್ತಾಯ, ಡಾ.ಸದಾಶಿವ ಭಟ್ಟ, ಶ್ರೀ ಮನೋಹರ ಎಸ್.ಕುಂದರ್, ದಿ|| ಸಾಣೂರು ಎಂ.ಶ್ರೀಧರ ಪಾಂಡಿ ಮತ್ತು ಡಾ.ಮೋಹನ ಕುಂಟಾರ್ ಅವರುಗಳಿಗೆ ನೀಡಿ ಪುರಸ್ಕರಿಸಲಾಯಿತು.  ರಾಜ್ಯ ಪ್ರಶ್ತಿ ವಿಜೇತೆ ಫಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘ(ರಿ), ಇವರಿಂದ ಶ್ರೀಕೃಷ್ಣಪಾರಿಜಾತ, ಬಂಡೆ ಬಸವೇಶ್ವರ ಕಲಾತಂಡದಿಂದ ಭಾರ್ಗವ ಪರಶುರಾಮ ಪ್ರಸಂಗದ ದೊಡ್ಡಾಟ ಪ್ರದರ್ಶನ, ಯಕ್ಷಸೌರಭ ಪ್ರವಾಸಿ ಮೇಳ ಇವರಿಂದ ಕಾರ್ತವೀರ್ಯ ಪ್ರಸಂಗದ ಬಡಗುತಿಟ್ಟು ಯಕ್ಷಗಾನ, ಶ್ರೀರಾಮ ನಿಯರ್ಾಣ ಪ್ರಸಂಗದ ಯಕ್ಷಗಾನ ತಾಳಮದ್ದಳೆ, ಶ್ರೀ ರೇಣುಕಾಮಾತೆ ತೊಗಲುಗೊಂಬೆ ಕಲಾತಂಡದಿಂದ ಸುಪ್ರಭೆ ವಿಲಾಸ ಪ್ರಸಂಗದ ತೊಗಲು ಗೊಂಬೆಯಾಟ ಹಾಗೂ ಯಕ್ಷಬಳದ ಹೊಸಂಗಡಿ ಇವರಿಂದ ಘೋಷಯಾತ್ರೆ-ಚಿತ್ರಸೇನ ಕಾಳಗ ಪ್ರಸಂಗದ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳು ನಡೆದವು.  ಅಕಾಡೆಮಿಯ ಅಂತಜರ್ಾಲವನ್ನು ಲೋಕಾರ್ಪಣೆ ಮಾಡಲಾಯಿತು.

 

5.ಸಂಗಮ ಸಂಭ್ರಮ 2015 :

2015ರ ಜುಲೈ 25 ಮತ್ತು 26ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಲ್ಲಾ ಅಕಾಡೆಮಿಗಳು, ಪ್ರಾಧಿಕಾರ ಮತ್ತು ಅಧ್ಯಯನ ಕೇಂದ್ರಗಳ ಸಹಯೋಗದೊಂದಿಗೆ ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದಲ್ಲಿ ವರ್ತಮಾನದ ತಲ್ಲಣಗಳು-ಸಾಂಸ್ಕೃತಿಕ ಪ್ರತಿಕ್ರಿಯೆ ಶೀಷರ್ಿಕೆಯಡಿ ಸಂಗಮ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

 

6.ಯಕ್ಷಗಾನ ತಾಳಮದ್ದಳೆ ಶಿಬಿರ :

2015ರ ಆಗಸ್ಟ್ 12 ರಿಂದ 14ರವರೆಗೆ ಚಿಪಗಿಯ ಶ್ರೀ ಜಗನ್ನಾಥೇಶ್ವರ ದೇವಸ್ಥಾನದ ಸಭಾಭವನದಲ್ಲಿ ಯಕ್ಷಗಾನ ತಾಳಮದ್ದಳೆ ಶಿಬಿರವನ್ನು ಏರ್ಪಡಿಸಲಾಯಿತು.  ತಾಳಮದ್ದಳೆಯೆಂಬ ಆಶುನಾಟಕದ ನಿಮರ್ಾಣ, ತಾಳಮದ್ದಳೆಯಲ್ಲಿ ಅರ್ಥಗಾರಿಕೆ ಹಾಗೂ ಅರ್ಥಗಾರಿಕೆಯ ಆಕರ ಗ್ರಂಥಗಳು ಈ ವಿಷಯಗಳ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಯಿತು.

  

7.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ, ಮುಂಬೈ :

ದಿನಾಂಕ 24.10.2015ರಂದು ಮುಂಬೈ ಕನರ್ಾಟಕ ಸಂಘದ ಸಹಯೋಗದೊಂದಿಗೆ ಡಾ. ಎಂ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ 'ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ'ವನ್ನು ಹಮ್ಮಿಕೊಳ್ಳಲಾಯಿತು.

 

8.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ, ವಾಪಿ :

ದಿನಾಂಕ 25.10.2015ರಂದು ವಾಪಿ ಕನ್ನಡ ಸಂಘದ ಸಹಯೋಗದೊಂದಿಗೆ ವಾಪಿ ಕನ್ನಡ ಸಂಘದ ಮಲ್ಪಪರ್ಪಸ್ ಹಾಲ್ನಲ್ಲಿ 'ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ'ವನ್ನು ಹಮ್ಮಿಕೊಳ್ಳಲಾಯಿತು. ವಾಪಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಯಕ್ಷಗಾನ ಹಾಗೂ ಬಯಲಾಟ ಪ್ರದರ್ಶನಗಳು ನಡೆದವು. 

 

9.ಯಕ್ಷಗಾನ ಬಯಲಾಟ ಕಾರ್ಯಕ್ರಮ, ಹಾವೇರಿ :

2015ರ ಡಿಸೆಂಬರ್ 6ರಂದು ಹಾವೇರಿಯಲ್ಲಿ ಗೆಳೆಯರ ಬಳಗ, ಹಾವೇರಿ ಮತ್ತು ಗ್ರಾಮರಂಗ ಮೂಡಲಪಾಯ ದೊಡ್ಡಾಟ ಸಂಶೋಧನೆ ತರಬೇತಿ ಮತ್ತು ಸಂಸ್ಥೆ, ಇಂಗಳಗಿ ಇವರ ಸಹಯೋಗದೊಂದಿಗೆ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.  

 

10.ಯಕ್ಷಗಾನ ಬಯಲಾಟ ಕಾರ್ಯಕ್ರಮ, ಮಂಡ್ಯ :

2015ರ ಡಿಸೆಂಬರ್ 9ರಂದು ಕ್ಷೀರಸಾಗರ ಮಿತ್ರಕೂಟ(ರಿ), ಕೀಲಾರ, ಮಂಡ್ಯ ಇವರ ಸಹಯೋಗದೊಂದಿಗೆ ಅಕಾಡೆಮಿಯು ಮಂಡ್ಯದ ಸಂತೆಕಸಲಗೆರೆಯ ಮೋರಾಜರ್ಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

11.ಯಕ್ಷಗಾನ ಬಯಲಾಟೋತ್ಸವ, ಬೆಳಗಾವಿ :

2015ರ ಡಿಸೆಂಬರ್ 15ರಂದು ಬೆಳಗಾವಿಯ ಹುಕ್ಕೇರಿಯ ಶ್ರೀ ಅಡವಿಸಿದ್ಧೇಶ್ವರ ಮಠದ ಸಮುದಾಯ ಭವನದಲ್ಲಿ ಯಕ್ಷಗಾನ ಬಯಲಾಟೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.  ಹಿರಿಯ ಸಾಹಿತಿಗಳಾದ ಶ್ರೀ ವಸಂತರಾವ್ ಕುಲಕಣರ್ಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.  

 

12.ಯಕ್ಷಗಾನ ಬಯಲಾಟ ಕಾರ್ಯಕ್ರಮ, ಕೆ.ಜಿ.ಎಫ್. :

2016ರ ಜನವರಿ 30ರಂದು ಕೆ.ಜಿ.ಎಫ್.ನ ಬೆಮೆಲ್ ನಗರದ ಬಿ.ಇ.ಎಂ.ಎಲ್ ಕಲಾಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಯತು.  ಹಿರಿಯ ಜಾನಪದ ವಿದ್ವಾಂಸರಾದ ಡಾ. ಪಿ.ಕೆ.ರಾಜಶೇಖರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಯಕ್ಷಗಾನದ ಪ್ರಕಾರಗಳು ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಯಿತು.  'ಸುಂದರಕಾಂಡ' ತೊಗಲುಗೊಂಬೆಯಾಟ ಹಾಗೂ 'ಮಹಿಷ ಮಧರ್ಿನಿ' ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಾಯಿತು.

 

13.ಯಕ್ಷಗಾನ ಬಯಲಾಟ ಕಾರ್ಯಕ್ರಮ, ಜಗಳೂರು :

2016ರ ಫೆಬ್ರವರಿ 1ರಂದು ಜಗಳೂರಿನ ಹೋ.ಚಿ.ಬೋರಯ್ಯ ಸ್ಮಾರಕ ಪ್ರಥಮ ದಜರ್ೆ ಕಾಲೇಜಿನ ಜ್ಞಾನ ದಶರ್ಿನಿ ಸಭಾಂಗಣದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

 

14.ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮ, ಚೆನ್ನೈ :

2016ರ ಫೆಬ್ರವರಿ 20 ಮತ್ತು 21ರಂದು ಅಕಾಡೆಮಿಯು ಕನರ್ಾಟಕ ಸಂಘ ಚೆನ್ನೈ ಈ ಸಂಸ್ಥೆಯ ಸಹಯೋಗದಲ್ಲಿ ಚೆನ್ನೈನ ಕನರ್ಾಟಕ ಸಂಘದ ಶಾಲೆಯ ಸಭಾಂಗಣದಲ್ಲಿ ಹೊರರಾಜ್ಯ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

 

15.ಯಕ್ಷಗಾನ ಬಯಲಾಟ ಕಾರ್ಯಕ್ರಮ, ಕೊಪ್ಪ, ಚಿಕ್ಕಮಗಳೂರು :

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶೃಂಗೇರಿಯ ಸಹಯೋಗದೊಂದಿಗೆ 2016ರ ಫೆಬ್ರವರಿ 26ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ಬಿ.ಜಿ.ಎಸ್. ಶ್ರೀ ವೆಂಕಟೇಶ್ವರ ವಿದ್ಯಾ ಮಂದಿರದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.  ಶೃಂಗೇರಿಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಶ್ರೀ ಗುಣನಾಥ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಸಿದರು.  ಯಕ್ಷಗಾನದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಾರ್ಪಣೆ ಮಾಡಲಾಯಿತು.  ಸಮುದಾಯದ ಪರಿವರ್ತನೆಯಲ್ಲಿ ಯಕ್ಷಗಾನ ಈ ಕುರಿತ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.  ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನವನ್ನು ಪ್ರಸ್ತುತಪಡಿಸಲಾಯಿತು. 

 

16.ಪಾರ್ತಿಸುಬ್ಬ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿ ಪ್ರದಾನ ಸಮಾರಂಭ :

ದಿನಾಂಕ 14.03.20156ರಂದು ಬೀದರ್ ಜಿಲ್ಲಾ ರಂಗಮಂದಿರದಲ್ಲಿ 2016ನೇ ಸಾಲಿನ ಪಾತರ್ಿಸುಬ್ಬ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು. ಬೀದರ್ ಜಿಲ್ಲೆಯ ಹುಲಸೂರಿನ ಶ್ರೀ ಗುರುಬಸವೇಶ್ವರ ಸಂಸ್ಥಾನಮಠದ ಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದರು. 2016ನೇ ಸಾಲಿನ ಪ್ರತಿಷ್ಠಿತ ಪಾತರ್ಿಸುಬ್ಬ ಪ್ರಶಸ್ತಿಯನ್ನು ಶ್ರೀ ಗುಂಡ್ಲವದ್ದಿಗೇರಿ ತಿಮ್ಮಾರೆಡ್ಡಿ ಅವರಿಗೆ ನೀಡಿ ಪುರಸ್ಕರಿಸಲಾಯಿತು. 2016ನೇ ಸಾಲಿನ ಗೌರವ ಪ್ರಶಸ್ತಿಯನ್ನು ಶ್ರೀ ಕಂದಾವರ ರಘುರಾಮ ಶೆಟ್ಟಿ, ಶ್ರೀ ಹಡಿನಬಾಳ ಶ್ರೀಪಾದ ಹೆಗಡೆ, ಶ್ರೀ ಬೊಟ್ಟಿಗೆರೆ ಪುರುಷೋತ್ತಮ ಪೂಂಜಾ, ಶ್ರೀ ಮೇಗರವಳ್ಳಿ ರಾಮನಾಯ್ಕ, ಶ್ರೀ ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ, ಶ್ರೀಮತಿ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ, ಶ್ರೀಮತಿ ಗೌರಮ್ಮ, ಶ್ರೀಮತಿ ಎಸ್.ಸೊಲ್ಲಮ್ಮ, ಶ್ರೀ ಸಣ್ಣತಿಮ್ಮಯ್ಯ, ಶ್ರೀ ಎ.ಕೆ.ಮಾರಯ್ಯ, ಅವರುಗಳಿಗೆ ನೀಡಿ ಗೌರವಿಸಲಾಯಿತು. ಬಯಲಾಟ ವಾತರ್ಾ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.

 

ಇತ್ತೀಚಿನ ನವೀಕರಣ​ : 21-01-2021 04:31 PM ಅನುಮೋದಕರು: Admin

×
ABOUT DULT ORGANISATIONAL STRUCTURE PROJECTS