ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

2014-15ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

Home

2014-15ನೇ ಸಾಲಿನ ಅಕಾಡೆಮಿ ಕಾರ್ಯಚಟುವಟಿಕೆಗಳ ಸಂಪೂರ್ಣ ವಿವರ

 

1.ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ ತರಬೇತಿ ಕಾರ್ಯಾಗಾರ:

 ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಶ್ರೀ ಧಾರೇಶ್ವರ ಯಕ್ಷ ಬಳಗ ಚಾರಿಟೆಬಲ್ ಟ್ರಸ್ಟ್ ಕಿರಿಮಂಜೇರ್ಶವರ ಈ ಸಂಸ್ಥೆಯ   ಸಹಯೋಗದೊಂದಿಗೆ, 2014ರ ಜುಲೈ 23 ರಿಂದ ಆಗಸ್ಟ್ 01ರವರೆಗೆ ಹತ್ತು ದಿನಗಳ ಕಾಲ ಶ್ರೀ ಗೋಪಾಲಕೃಷ್ಣ ಕಲಾ ಮಂದಿರ, ಒಡೆಯರ   ಮಠ, ಕಿರಿಮಂಜೇಶ್ವರ, ನಾಗೂರು, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ, ಇಲ್ಲಿ ಬಡಗುತಿಟ್ಟು ಯಕ್ಷಗಾನ ವೇಷಭೂಷಣ ತಯಾರಿಕಾ       ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ       ಧರ್ಮದರ್ಶಿಗಳಾದ ಶ್ರೀ ಉಮೇಸ್ ಶ್ಯಾನುಭೋಗ್‍ರವರು ನೆರವೇರಿಸಿದರು. ಹತ್ತು ದಿನಗಳ ಕಾಲ ನಡೆದ ಕಮ್ಮಟದಲ್ಲಿ ಶಿಬಿರಾರ್ಥಿಗಳಿಂದ   ತಯಾರಾದ ಬಡಗುತಿಟ್ಟು ಯಕ್ಷಗಾನದ ವೇಷಭೂಷಣಗಳು ಅಕಾಡೆಮಿ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ.

 

2.ಸೂತ್ರದಗೊಂಬೆ ತಯಾರಿಕಾ ತರಬೇತಿ ಕಾರ್ಯಾಗಾರ:

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಪುತ್ಥಳಿ ಕಲಾರಂಗ, ಬೆಂಗಳೂರು, ಈ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 16.08.2014 ರಿಂದ 25.08.2014ರವರೆಗೆ ಸ್ವಾಮಿ ವಿವೇಕಾನಂದ ಶೈಕ್ಷಣಿಕ ಸಂಸ್ಥೆ, ಬನಶಂಕರಿ, ಬೆಂಗಳೂರು ಇಲ್ಲಿ “ಸೂತ್ರದಗೊಂಬೆ ತಯಾರಿಕಾ ತರಬೇತಿ ಕಾರ್ಯಾಗಾರ”ವನ್ನು ಏರ್ಪಡಿಸಲಾಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಚಿರಂಜೀವಿ ಸಿಂಘ್, ಭಾ.ಆ.ಸೇ(ನಿವೃತ್ತ) ಇವರು ನೆರವೇರಿಸಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಶ್ರೀ ಎಂ.ಆರ್.ರಂಗನಾಥರಾವ್‍ರವರು ಹಾಗೂ ಶ್ರೀ ದತ್ತಾತ್ರೇಯ ಅರಳೀಕಟ್ಟೆಯವರು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಶ್ರೀಮತಿ ಗಾಯತ್ರಿರಾವ್, ಶ್ರೀ ಎ.ಆರ್.ರಂಗನಾಥ್ ಮತ್ತು ಶ್ರೀಮತಿ ಜ್ಯೋತ್ಸ್ನಾರವರು ಸಹಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ತರಬೇತಿ ನಿಡಿದರು. ಹತ್ತು ದಿನಗಳ ಕಾಲ ನಡೆದ ಕಾರ್ಯಗಾರದಲ್ಲಿ ಶಿಬಿರಾರ್ಥಿಗಳಿಂದ ತಯಾರಾದ ಸೂತ್ರದ ಗೊಂಬೆಗಳು ಅಕಾಡೆಮಿ ಕಚೇರಿಯಲ್ಲಿದೆ.

 

3.ವಸಂತ ಸಂಭ್ರಮ:

ಸರ್ಕಾರ ಎಲ್ಲ ಅಕಾಡೆಮಿಗಳನ್ನು ಪುನರ್ರಚಿಸಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿದ್ದು, ಎಲ್ಲ ಅಕಾಡೆಮಿಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ವಸಂತ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ ವಿವಿಧ ಕಲಾತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.
ಅಕಾಡೆಮಿಯ ವ್ಯಾಪ್ತಯಲ್ಲಿ ಬರುವ ಎಲ್ಲ ಪ್ರಾದೇಶಿಕ ಕಲೆಗಳನ್ನು ಪ್ರದರ್ಶಿಸಬೇಕೆಂಬ ಉದ್ದೇಶದಿಂದ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಚಲಿತವಿರುವ ಬಯಲಾಟ ಕಲಾ ಪ್ರಕಾರವನ್ನು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾಪ್ರಕಾರವನ್ನು ಉತ್ತರ ಕರ್ನಾಟಕದ ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ಯಕ್ಷಗಾನ ಬಯಲಾಟ ಕಲಾಪ್ರಕಾರದ ಕುರಿತು ಉಪನ್ಯಾಸ, ಸಂವಾದ, ಚರ್ಚಾಗೋಷ್ಠಿ, ಕಲಾಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿದ್ದು, ಈ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿದೆ. ಕಲಾಪ್ರದರ್ಶನದಿಂದ ಅವಕಾಶ ವಂಚಿತರಾಗಿದ್ದ ಕಲಾವಿದರಿಗೆ ರಂಗ ಸಂಭ್ರಮ ಕಾರ್ಯಕ್ರಮದಲ್ಲಿ ಅವಕಾಶ ನೀಡುತ್ತಿರುವುದರಿಂದ ಕಲಾವಿದರು ಸಂತೃಪ್ತರಾಗಿದ್ದಾರೆ.

 

4.ಯಕ್ಷಗಾನ ಬಯಲಾಟ ಸಂಭ್ರಮ - ಬೆಂಗಳೂರು:

2014ರ ಅಕ್ಟೋಬರ್ 17 ಮತ್ತು 18ರಂದು ಅಕಾಡೆಮಿಯು ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿರುವ ಪರಂಪರಾ ಸಭಾಂಗಣದಲ್ಲಿ ಯಕ್ಷಗಾನ ಬಯಲಾಟ ಸಂಭ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸನ್ಮಾನ್ಯ ಡಾ.ಗೊ.ರುಚನ್ನಬಸಪ್ಪರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಅಕಾಡೆಮಿಯ ಮಾನ್ಯ ಅಧ್ಯಕ್ಷರಾದ ಶ್ರೀ ನಾಡೋಜ ಬೆಳಗಲ್ಲು ವೀರಣ್ಣರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೊಂಬೆಯಾಟದ ಹಿರಿಯ ಕಲಾವಿದರು ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಶ್ರೀ ಎಂ.ಆರ್.ರಂಗನಾಥರಾವ್‍ರವರು ಹಾಗೂ ಯಕ್ಷದೇಗುಲದ ಶ್ರೀ ಕೆ.ಮೋಹನ್‍ರವರು ಭಾಗವಹಿಸಿದ್ದರು. “ಗೊಂಬೆಯಾಟ ಬೆಳೆದು ಬಂದ ದಾರಿ”, “ಗೊಂಬೆಯಾಟದಲ್ಲಿ ವೈಜ್ಞಾನಿಕ ಚಿಂತನೆಗಳು”, “ಮೂಡಲಪಾಯ ಯಕ್ಷಗಾನ ಮತ್ತು ಬಯಲಾಟ ಪರಂಪರೆ”, “ಯಕ್ಷಗಾನ ನಡೆದು ಬಂದ ದಾರಿ ಒಂದು ಅವಲೋಕನ” ಇವುಗಳ ಬಗ್ಗೆ ಉಪನ್ಯಾಸಗಳು ಹಾಗೂ ಯಕ್ಷಗಾನ ಗೊಂಬೆಯಾಟ, ಸೂತ್ರದಗೊಂಬೆಯಾಟ, ಮೂಡಲಪಾಯ ಯಕ್ಷಗಾನ ಮತ್ತು ಪರಂಪರೆಯ ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

 

5.ಯಕ್ಷಗಾನ ಬಯಲಾಟ ರಂಗಸಂಭ್ರಮ – ಬೀದರ್:

2014ರ ಡಿಸೆಂಬರ್ 6 ಮತ್ತು 7ರಂದು ಬೀದರ್‍ನ ಜಿಲ್ಲಾ ರಂಗಮಂದಿರ ಹಾಗೂ ಕರ್ನಾಟಕ ಕಾಲೇಜು ಆಡಿಯೋ ವಿಜ್ಯುಯಲ್ ಸೆಂಟರ್‍ನಲ್ಲಿ ಅಕಾಡೆಮಿಯು ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಹಮ್ಮಿಕೊಂಡಿತ್ತು. ಸನ್ಮಾನ್ಯ ಕನ್ನಡ ಮತ್ತು ಸಂಸ್ಕøತಿ ಸಚಿವರು ದಿನಾಂಕ 06.12.2014 ರಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಜನಪದ ರಂಗಭೂಮಿ ಹೊಸ ಸಾಧ್ಯತೆಗಳು, ಪ್ರಯೋಗ ಮತ್ತು ಪರಿಷ್ಕರಣೆ, ಎದುರಿಸುತ್ತಿರುವ ಸವಾಲುಗಳು ಹಾಗೂ ಕಲಾವಿದರ ಸ್ಥಿತಿಗತಿಗಳು” ಈ ವಿಷಯಗಳ ಕುರಿತು ಉಪನ್ಯಾಸಗಳು ನಡೆಯಿತು. ಕಂಸವಧೆ, ಶ್ರೀಕೃಷ್ಣಪಾರಿಜಾತ, ದಪ್ಪಿನಾಟ, ದೊಡ್ಡಾಟ, ತೊಗಲುಗೊಂಬೆಯಾಟ ಪ್ರದರ್ಶನಗಳು ನಡೆದವು. ದಿನಾಂಕ 07.12.2014ರಂದು ಬೀದರ್‍ನ ಕರ್ನಾಟಕ ಕಾಲೇಜು ಆಡಿಯೋ ವಿಜ್ಯುವಲ್ ಸೆಂಟರ್‍ನಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಂ.ಜಿ.ಬಿರಾದಾರ ಅವರು ವಹಿಸಿದ್ದರು.

 

6.ಯಕ್ಷಗಾನ ಬಯಲಾಟ ರಂಗಸಂಭ್ರಮ – ಬಾಗಲಕೋಟೆ:

2014ರ ಡಿಸೆಂಬರ್ 12 ಮತ್ತು 13ರಂದು ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಸವ ಭವನದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 12.12.2014ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಕೃಷ್ಣಪಾರಿಜಾತ ಕಲಾವಿದರಾದ ನಾಡೋಜ ಶ್ರೀಮತಿ ಯಲ್ಲೂಬಾಯಿ ರೊಡ್ಡಪ್ಪನವರರವರು ನೆರವೇರಿಸಿದರು. “ಬಯಲಾಟ ಅಂದು ಇಂದು”, “ಸಂಗ್ಯಾಬಾಳ್ಯ ಪ್ರಕಾರದ ಅಳಿವು ಉಳಿವು ಒಂದು ವಿಶ್ಲೇಷಣೆ”, “ಶ್ರೀಕೃಷ್ಣಪಾರಿಜಾತ ಕಲೆ ಉಳಿಸುವಲ್ಲಿ ನಮ್ಮ ಜವಾಬ್ದಾರಿ”, “ಯಕ್ಷಗಾನದ ವಿಶ್ವವ್ಯಾಪಿಗೆ ಪೂರಕವಾದ ಅಂಶಗಳು” ಈ ವಿಷಯಗಳ ಬಗ್ಗೆ ಉಪನ್ಯಾಸಗಳು ನಡೆಯಿತು. ಶ್ರೀಕೃಷ್ಣಪಾರಿಜಾತ, ವೀರರಾಣಿ ಕಿತ್ತೂರು ಚೆನ್ನಮ್ಮ’ ಮೂಡಲಪಾಯ ಬಯಲಾಟ, ಗಧಾಯುದ್ಧ ಯಕ್ಷಗಾನ, ಸಣ್ಣಾಟ ಹಾಗೂ ತೊಗಲುಗೊಂಬೆಯಾಟ ಪ್ರದರ್ಶನಗಳು ಪ್ರದರ್ಶನಗೊಂಡವು.

 

7.ಯಕ್ಷಗಾನ ಬಯಲಾಟ ರಂಗಸಂಭ್ರಮ – ಯಾದಗಿರಿ:

2014ರ ಡಿಸೆಂಬರ್ 12 ಮತ್ತು 13ರಂದು ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಸವ ಭವನದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 12.12.2014ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಕೃಷ್ಣಪಾರಿಜಾತ ಕಲಾವಿದರಾದ ನಾಡೋಜ ಶ್ರೀಮತಿ ಯಲ್ಲೂಬಾಯಿ ರೊಡ್ಡಪ್ಪನವರರವರು ನೆರವೇರಿಸಿದರು. “ಬಯಲಾಟ ಅಂದು ಇಂದು”, “ಸಂಗ್ಯಾಬಾಳ್ಯ ಪ್ರಕಾರದ ಅಳಿವು ಉಳಿವು ಒಂದು ವಿಶ್ಲೇಷಣೆ”, “ಶ್ರೀಕೃಷ್ಣಪಾರಿಜಾತ ಕಲೆ ಉಳಿಸುವಲ್ಲಿ ನಮ್ಮ ಜವಾಬ್ದಾರಿ”, “ಯಕ್ಷಗಾನದ ವಿಶ್ವವ್ಯಾಪಿಗೆ ಪೂರಕವಾದ ಅಂಶಗಳು” ಈ ವಿಷಯಗಳ ಬಗ್ಗೆ ಉಪನ್ಯಾಸಗಳು ನಡೆಯಿತು. ಶ್ರೀಕೃಷ್ಣಪಾರಿಜಾತ, ವೀರರಾಣಿ ಕಿತ್ತೂರು ಚೆನ್ನಮ್ಮ’ ಮೂಡಲಪಾಯ ಬಯಲಾಟ, ಗಧಾಯುದ್ಧ ಯಕ್ಷಗಾನ, ಸಣ್ಣಾಟ ಹಾಗೂ ತೊಗಲುಗೊಂಬೆಯಾಟ ಪ್ರದರ್ಶನಗಳು ಪ್ರದರ್ಶನಗೊಂಡವು.

 

8.ಯಕ್ಷಗಾನ ಬಯಲಾಟ ರಂಗಸಂಭ್ರಮ – ಅರೆಭಾವಿ, ಬೆಳಗಾವಿ:

2015ರ ಜನವರಿ 3 ಮತ್ತು 4ರಂದು ಬೆಳಗಾವಿಯ ಗೋಕಾಕ್ ತಾಲೂಕಿನ ಅರಬಾಬಿಯ ಶ್ರೀ ಬಲಭೀಮ ದೇವಸ್ಥಾನ ಆವರಣದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 03.01.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಅಬಕಾರಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿರವರು ನೆರವೇರಿಸಿದರು. “ಬಯಲಾಟ ಕಥೆಗಳಲ್ಲಿ ಸಾಂಸ್ಕøತಿಕ ಮೌಲ್ಯ”, ಕೌಜಲಗಿ ನಿಂಗಮ್ಮ ಹಾಗೂ ಬಯಲಾಟ ಪರಂಪರೆ”, “ಬಯಲಾಟಗಳ ಅಳಿವು-ಉಳಿವು” ಈ ವಿಷಯಗಳ ಕುರಿತು ಉಪನ್ಯಾಸಗಳನ್ನು ಏರ್ಪಡಿಸಲಾಯಿತು. ಯಕ್ಷಗಾನ, ಸಂಗ್ಯಾ ಬಾಳ್ಯ ಸಣ್ಣಾಟ ಕಲಾ ಪ್ರದರ್ಶನ, ಬಬ್ರುವಾಹನ ವಿಜಯ ದೊಡ್ಡಾಟ ಕಲಾ ಪ್ರದರ್ಶನ, ಶ್ರೀಕೃಷ್ಣಪಾರಿಜಾತ, ರಾಧಾನಾಟ ಸಣ್ಣಾಟ ಕಲಾಪ್ರದರ್ಶನಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.

 

9.ರಸಗ್ರಹಣ ಶಿಬಿರ: ‘ವಿದ್ಯಾರ್ಥಿಯೆಡೆಗೆ ನಮ್ಮ ನಡಿಗೆ’:

ಅಕಾಡೆಮಿಯು ದಿನಾಂಕ 07.01.2015ರಂದು ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ “ವಿದ್ಯಾರ್ಥಿಯೆಡೆಗೆ ನಮ್ಮ ನಡಿಗೆ” ರಸಗ್ರಹಣ ಶಿಬಿರವನ್ನು ಹಮ್ಮಿಕೊಂಡಿತ್ತು. ಈ ಶಿಬಿರದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ್‍ನ ಆಡಳಿತಾಧಿಕಾರಿಗಳಾದ ಡಾ. ಹೆಚ್.ಶಾಂತಾರಾಮ್‍ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಂಡಾರ್‍ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎ.ವಿ.ನಾವಡರವರು ಕುಂದಾಪುರದ ಪತ್ರಕರ್ತರಾದ ಶ್ರೀ ಜಾನ್ ಡಿಸೋಜûರವರು ಭಾಗವಹಿಸಿದ್ದರು. ಯಕ್ಷಗಾನ ಗೊಂಬೆಯಾಟ, ಉಪನ್ಯಾಸ ಪ್ರಾತ್ಯಕ್ಷಿಕೆ ಹಾಗೂ ಸಂವಾದಗಳು ಪ್ರಸ್ತುತಗೊಂಡವು.

 

10.ಯಕ್ಷಗಾನ ಬಯಲಾಟ ರಂಗಸಂಭ್ರಮ – ಕಟೀಲು:

2015ರ ಜನವರಿ 9 ಮತ್ತು 10ರಂದು ಶ್ರೀ ದುರ್ಗಾ ಪರವಮೇಶ್ವರಿ ದೇವಸ್ಥಾನ ಕಟೀಲು ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳ(ರಿ), ಕಟೀಲು ಇದರ ಸಹಯೋಗದೊಂದಿಗೆ ಶ್ರೀಕ್ಷೇತ್ರ ಕಟೀಲಿನ ಸರಸ್ವತೀ ಭವನದಲ್ಲಿ ಯಕ್ಷಗಾನ ಬಯಲಾಟ ಸಂಭ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 09.01.2015ರಂದು ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ ಮತ್ತು ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಚಿನ್ನಪ್ಪ ಗೌಡರವರು ನೆರವೇರಿಸಿದರು. ಮಕ್ಕಳ ಮೇಳದ ಹೆಜ್ಜೆ ಗುರುತುಗಳು, ಕಲಾ ಸಂರಕ್ಷಣೆಯಲ್ಲಿ ಮಕ್ಕಳ ಮೇಳದ ಪಾತ್ರ, ಹರಕೆ ಆಟಗಳು ಕಲಾತ್ಮಕತೆ ಮತ್ತು ಕಲಾ ಸಂರಕ್ಷಣೆ, ಹವ್ಯಾಸಿ ಯಕ್ಷಗಾನ ಸಾಧ್ಯತೆ ಮತ್ತು ಸಮಸ್ಯೆ, ಮಹಿಳಾ ಯಕ್ಷಗಾನ ಉಗಮ ಮತ್ತು ವಿಕಾಸ, ಮಹಿಳಾ ಮೇಳ ಕಲಾತ್ಮಕತೆ ಮತ್ತು ಕಲಾ ಪ್ರಸರಣ ಈ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಯಿತು. ಯಕ್ಷಗಾನ ಪಂಚವಟಿ, ಶ್ರೀಕೃಷ್ಣಪಾರಿಜಾತ, ಬಡಗುತಿಟ್ಟು ಯಕ್ಷಗಾನ, ಹವ್ಯಾಸಿ ಯಕ್ಷಗಾನ, ಸಣ್ಣಾಟ ಸಂಗ್ಯಾ ಬಾಳ್ಯ, ಮೂಡಲಪಾಯ ಯಕ್ಷಗಾನ, ಸೂತ್ರದಗೊಂಬೆಯಾಟ, ತಾಳಮದ್ದಳೆ ಮೊದಲಾದವುಗಳು ಪ್ರದರ್ಶನಗೊಂಡವು.

 

11.ಯಕ್ಷಗಾನ ಬಯಲಾಟ ರಂಗಸಂಭ್ರಮ – ಶಿರಸಿ:

ಕಾಡೆಮಿಯು ಉತ್ತರ ಕನ್ನಡ ಜಿಲ್ಲೆಯ ಶಿಬರಸಿ ಯಲ್ಲಾಪುರನಾಕೆ ಬಳಿ ಇರುವ ಸಮುದಾಯ ಭವನದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 10.01.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿಯ ಸಿದ್ಧಾಪುರ ಕ್ಷೇತ್ರದ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆರವರು ನೆರವೇರಿಸಿದರು. ಉತ್ತರ ಕನ್ನಡ ಯಕ್ಷಗಾನ ವಿಶೇಷತೆಗಳು, ಮಹಿಳಾ ಯಕ್ಷಗಾನದ ಸಾಧ್ಯತೆ ಮತ್ತು ಸವಾಲುಗಳು ಇವುಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಶ್ರೀಕೃಷ್ಣಪಾರಿಜಾತ, ಸಣ್ಣಾಟ ಕರ್ಣಪರ್ವ ಮಹಿಳಾ ಯಕ್ಷಗಾನ, ವೀರ ಅಭಿಮನ್ಯು ದೊಡ್ಡಾಟ ಪ್ರದರ್ಶನ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

 

12.ಯಕ್ಷಗಾನ ಬಯಲಾಟ ರಂಗಸಂಭ್ರಮ – ಚಿತ್ರದುರ್ಗ:

ಅಕಾಡೆಮಿಯು 2015ರ ಜನವರಿ 17 ಮತ್ತು 18ರಂದು ತ.ರಾ.ಸು.ರಂಗಮಂದಿರ, ಚಿತ್ರದುರ್ಗದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭವ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 17.01.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಚಿತ್ರದುರ್ಗದ ಶಾಸಕರಾದ ಸನ್ಮಾನ್ಯ ಜಿ.ಹೆಚ್.ತಿಪ್ಪಾರೆಡ್ಡಿ ಅವರು ನೆರವೇರಿಸಿದರು. ತೊಗಲುಗೊಂಬೆಯಾಟ ಪರಂಪರೆ ಮತ್ತು ಆದುನಿಕತೆ, ಯಕ್ಷಗಾನದ ಹೊಸ ಆಯಾಮಗಳು, ಶ್ರೀಕೃಷ್ಣಪಾರಿಜಾತದ ಅಳಿವು ಉಳಿವು, ಸಣ್ಣಾಟಗಳು ಸ್ಥಿತಿಗತಿ ಹಾಗೂ ಬಯಲಾಟಗಳ ಭವಿಷ್ಯ ಈ ವಿಷಯಗಳ ಕುರಿತು ಉಪನ್ಯಾಸಗಳು ನಡೆದವು. ತೊಗಲುಗೆÀಂಬೆಯಾಟ, ಶ್ರೀಕೃಷ್ಣಪಾರಿಜಾತ, ಸಂಗ್ಯಾ ಬಾಳ್ಯ ಸಣ್ಣಾಟ, ಗಿರಿಜಾಕಲ್ಯಾಣ ಬಯಲಾಟ ಕಲೆಗಳು ಪ್ರದರ್ಶನಗೊಂಡವು.

 

13.ಯಕ್ಷಗಾನ ಬಯಲಾಟ ರಂಗಸಂಭ್ರಮ – ಮೈಸೂರು:

ಅಕಾಡೆಮಿಯು 2015ರ ಫೆಬ್ರವರಿ 16 ಮತ್ತು 17ರಂದು ಮೈಸೂರಿನ ಕಲಾಮಂದಿರದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭÀ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 16.02.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ವಿದ್ವಾಂಸರಾದ ಡಾ. ಡಿ.ಕೆ.ರಾಜೇಂದ್ರ ಹಾಗೂ ಖ್ಯಾತ ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ನೆರವೇರಿಸಿದರು. ಚಂಡೆ ಮೇಳ, ಮೂಡಲಪಾಯ ಯಕ್ಷಗಾನ, ತೆಂಕುತಿಟ್ಟು ಯಕ್ಷಗಾನ, ಸೂತ್ರದಗೊಂಬೆಯಾಟ, ಬಡಗುತಿಟ್ಟು ಯಕ್ಷಗಾನ, ಘಟ್ಟದಕೋರೆ ಮೊದಲಾದ ಯಕ್ಷಗಾನ ಬಯಲಾಟ ಪ್ರಸಂಗಗಳು ಪ್ರದರ್ಶನಗೊಂಡವು.

 

14.ಯಕ್ಷಗಾನ ಬಯಲಾಟ ರಂಗಸಂಭ್ರಮ – ಹಾಸನ:

ಅಕಾಡೆಮಿಯು 2015ರ ಫೆಬ್ರವರಿ 20 ಮತ್ತು 21ರಂದು ಹಾಸನದ ಹಾಸನಾಂಬ ಕಲಾಕ್ಷೇತ್ರ್ರದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭÀ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 20.02.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಸಿದ್ಧ ಜಾನಪದ ವಿದ್ವಾಂಸರಾದ ಡಾ. ಮಳಲಿ ವಸಂತಕುಮಾರ್ ಅವರು ನೆರವೇರಿಸಿದರು. ಮೂಡಲಪಾಯ-ರಂಗಸಾಧ್ಯತೆಗಳು ಈ ವಿಷಯ ಕುರಿತ ಉಪನ್ಯಾಸ ನಡೆಯಿತು. ಯಕ್ಷಗಾನ, ತೊಗಲುಗೊಂಬೆಯಾಟ, ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ಯಕ್ಷಗಾನ ತಾಳಮದ್ದಳೆ, ಬಯಲಾಟ, ಯಕ್ಷಗಾನ ಸ್ತ್ರೀವೇಷದ ನೃತ್ಯಪ್ರಾತ್ಯಕ್ಷಿಕೆ, ತೆಂಕುತಿಟ್ಟು ಯಕ್ಷಗಾನ ಮುಂತಾದ ಪ್ರದರ್ಶನಗಳು ಪ್ರಸ್ತುತಗೊಂಡವು.

 

15.ಯಕ್ಷಗಾನ ಬಯಲಾಟ ರಂಗಸಂಭ್ರಮ – ರಾಮನಗರ:

ಅಕಾಡೆಮಿಯು 2015ರ ಮಾರ್ಚ್ 7 ಮತ್ತು 8ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ಪುರಭವನದ ಆವರಣದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭÀ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 07.03.2015ರಂದು ವಿರಕ್ತಮಠದ ಶ್ರೀ ಶ್ರೀ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ್ ಗೌಡ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಯಕ್ಷಗಾನ ಬಯಲಾಟ: ಹೊಸ ಸಾಧ್ಯತೆಗಳು ಈ ಕುರಿತ ಉಪನ್ಯಾಸ ನಡೆಯಿತು. ತೆಂಕುತಿಟ್ಟು ಯಕ್ಷಗಾನ, ಸಂಗ್ಯಾಬಾಳ್ಯ, ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ತೊಗಲುಗೊಂಬೆಯಾಟ ಪ್ರದರ್ಶನಗಳು ಪ್ರಸ್ತುತಗೊಂಡವು.

 

16.ಯಕ್ಷಗಾನ ಬಯಲಾಟ ರಂಗಸಂಭ್ರಮ – ಧಾರವಾಡ:

ಅಕಾಡೆಮಿಯು 2015ರ ಮಾರ್ಚ್ 11 ಮತ್ತು 12ರಂದು ಧಾರವಾಡ ಜಿಲ್ಲೆಯ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭÀ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 11.03.2015ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡಿನ ಹಿರಿಯ ಸಂಶೋಧಕರಾದ ಡಾ. ಎಂ.ಎಂ.ಕಲಬುರ್ಗಿಯವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಅಂಬಳಿಕೆ ಹಿರಿಯಣ್ಣ ಅವರು ವಹಿಸಿದ್ದರು. ಬಯಲಾಟದ ವೈವಿಧ್ಯತೆ ಕುರಿತು ಚಿಂತನೆ ಮತ್ತು ಸಂವಾದ ನಡೆಯಿತು. ತೊಗಲುಗೊಂಬೆಯಾಟ, ಶ್ರೀಕೃಷ್ಣಪಾರಿಜಾತ, ಯಕ್ಷಗಾನ, ಸಣ್ಣಾಟ, ದೊಡ್ಡಾಟ ಪ್ರಸಂಗಗಳು ಪ್ರದರ್ಶನಗೊಂಡವು.

 

17.ರಸಗ್ರಹಣ ಶಿಬಿರ:

ದಿನಾಂಕ 16.03.2015ರಂದು ಬಳ್ಳಾರಿಯ ಶಿರಗುಪ್ಪ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಸಗ್ರಹಣ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಮುದ್ದಟನೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೊನ್ನೂರಮ್ಮರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಶಿರಗುಪ್ಪ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ.ವಿ.ಶ್ರೀನಿವಾಸ ಮೂರ್ತಿ, ರಂಗಭೂಮಿ ಕಲಾವಿದರಾದ ಶ್ರೀ ಕೇತಿನಿ, ಶ್ರೀನಿವಾಸರಾವ್ ಹಾಗೂ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಆಂಜಿನಪ್ಪ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಯಲಾಟದ ಕುರಿತು ವಿಚಾರ ಸಂಕಿರಣ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡವು.

 

18.ರಸಗ್ರಹಣ ಶಿಬಿರ:

ದಿನಾಂಕ 16.03.2015ರಂದು ಬಳ್ಳಾರಿಯ ಶಿರಗುಪ್ಪ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರಸಗ್ರಹಣ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಮುದ್ದಟನೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೊನ್ನೂರಮ್ಮರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಶಿರಗುಪ್ಪ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೆ.ವಿ.ಶ್ರೀನಿವಾಸ ಮೂರ್ತಿ, ರಂಗಭೂಮಿ ಕಲಾವಿದರಾದ ಶ್ರೀ ಕೇತಿನಿ, ಶ್ರೀನಿವಾಸರಾವ್ ಹಾಗೂ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಆಂಜಿನಪ್ಪ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಯಲಾಟದ ಕುರಿತು ವಿಚಾರ ಸಂಕಿರಣ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡವು.

 

19.ಯಕ್ಷಗಾನ ಬಯಲಾಟ ರಂಗಸಂಭ್ರಮ – ಬಳ್ಳಾರಿ:

ಅಕಾಡೆಮಿಯು 2015ರ ಮಾರ್ಚ್ 29 ಮತ್ತು 30ರಂದು ಬಳ್ಳಾರಿ ಜಿಲ್ಲೆಯ ರಾಘವ ಕಲಾಮಂದಿರದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 29.03.2015ರಂದು ಬಳ್ಳಾರಿಯ ಕಮ್ಮರಚೇಡು ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ ಕಲ್ಯಾಣ ಸ್ವಮಿಗಳ ಸಾನಿಧ್ಯದಲ್ಲಿ ಕಲಾವಿದರಾದ ನಾಡೋಜ ಶ್ರೀಮತಿ ಪದ್ಮಮ್ಮ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ಸಣ್ಣಾಟ, ತೊಗಲುಗೊಂಬೆಯಾಟ, ದೊಡ್ಡಾಟ ಮೊದಲಾದ ಯಕ್ಷಗಾನ ಹಾಗೂ ಬಯಲಾಟ ಪ್ರಸಂಗಗಳು ಪ್ರದರ್ಶನಗೊಂಡವು.

 

20.ಯಕ್ಷಗಾನ ಬಯಲಾಟ ರಂಗಸಂಭ್ರಮ – ಶಿಡ್ಲಘಟ್ಟ:

ಅಕಾಡೆಮಿಯು 2015ರ ಮೇ 2 ಮತ್ತು 3ರಂದು ಶಿಡ್ಲಘಟ್ಟದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ಬಯಲಾಟ ರಂಗ ಸಂಭ್ರಮವನ್ನು ಏರ್ಪಡಿಸಲಾಯಿತು. ದಿನಾಂಕ 02.05.2015ರಂದು ಚಿಂತಕರು ಹಾಗೂ ವಿಶ್ರಾಂತ ಪ್ರಧ್ಯಾಪಕರಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ತೊಗಲುಗೊಂಬೆಯಾಟ, ಬಡಗುತಿಟ್ಟು ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ಸಣ್ಣಾಟ ಮತ್ತು ಕೇಳಿಕೆ ಮೊದಲಾದ ಕಲೆಗಳು ಪ್ರದರ್ಶನಗೊಂಡವು.

 

21.ಯಕ್ಷಗಾನ ಬಯಲಾಟ ರಂಗಸಂಭ್ರಮ – ಉಡುಪಿ:

ಅಕಾಡೆಮಿಯು 2015ರ ಮೇ 7 ಮತ್ತು 8ರಂದು ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಏರ್ಪಡಿಸಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಮೋಹನ್ ಆಳ್ವರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಯಕ್ಷಗಾನ-ಕಾಲೋಚಿತ ಕಲೋಚಿತ ಕಲಾಚಿಂತನೆ ಈ ಕುರಿತು ಖ್ಯಾತ ವಿಮರ್ಶಕರಾದ ಡಾ. ಎಂ.ಪ್ರಭಾಕರ ಜೋಷಿಯವರು ಉಪನ್ಯಾಸ ನೀಡಿದರು. ತಾಳಮದ್ದಲೆ, ಯಕ್ಷಗಾನ, ಸಂಗ್ಯಾಬಾಳ್ಯ ಮೊದಲಾದ ಕಲಾಪ್ರಕಾರದ ಪ್ರಸಂಗಗಳು ಪ್ರಸ್ತುತಗೊಂಡವು.

 

 

22.ರಸಗ್ರಹಣ ಶಿಬಿರ:

ದಿನಾಂಕ 17.05.2015ರಂದು ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ರಸಗ್ರಹಣ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಉಜಿರೆಯ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯು. ವಿಜಯರಾಘವ ಪಡ್ಡೆಟ್ನಾಯರವರು ಶಿಬಿರದ ಉದ್ಘಾಟನೆಯನ್ನು ನೆರವೆರಿಸಿದರು. ಯಕ್ಷಗಾನ ಆಹಾರ್ಯ ಕುರಿತು ಡಾ. ಎಂ.ಪ್ರಭಕರ ಜೋಷಿಯವರು ಉಪನ್ಯಾಸ ನೀಡಿದರು ನಂತರ ಮುಖವರ್ಣಿಕೆಗಳ ಪ್ರದರ್ಶನ, ವೇಷರಚನಾ ಪ್ರಾತ್ಯಕ್ಷಿಕೆ ಮತ್ತು ಸಂವಾದ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

 

ಇತ್ತೀಚಿನ ನವೀಕರಣ​ : 21-01-2021 03:54 PM ಅನುಮೋದಕರು: Admin

×
ABOUT DULT ORGANISATIONAL STRUCTURE PROJECTS