ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಸರ್ಕಾರ

wrappixel kit

ಕರ್ನಾಟಕ ಯಕ್ಷಗಾನ ಅಕಾಡೆಮಿ

ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಮೂಲತಃ ಮಂಗಳೂರು, ಕರಾವಳಿ, ಉಡುಪಿ ನೆಲೆಯಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಈ ಪ್ರಾದೇಶಿಕ ಕಲೆ ಕಾಲಕ್ರಮೇಣ ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇಂದು ಜಾಗತಿಕಮಟ್ಟದವರೆಗೂ ಬೆಳವಣಿಗೆ ಕಂಡಿದೆ. ಯಕ್ಷಗಾನ ಸಾಹಿತ್ಯವು ಪದ್ಯರೂಪದಲ್ಲಿದ್ದು ಬಹುತೇಕ ಪ್ರಸಂಗಗಳು ರಾಮಾಯಣ, ಮಹಾಭಾರತದ ಪುರಾಣ ಕಥೆಗಳನ್ನು ಆಧರಿಸಿವೆ. ಯಕ್ಷಗಾನದ ಪಾತ್ರಗಳಿಗೆ ತನ್ನದೇ ಆದ ನಿರ್ಧಿಷ್ಟ ಆಹಾರ್ಯ ಮತ್ತು ಮುಖವರ್ಣಿಕೆಗಳಿವೆ.

 

ಅಕಾಡೆಮಿಯ ಪರಿಚಯ

ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ:273:ಕರಅ:2007, ದಿನಾಂಕ:19.08.2007ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. 2017ರಲ್ಲಿ ಪ್ರತ್ಯೇಕವಾದ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಪ್ರೊ. ಎಂ.ಎ.ಹೆಗಡೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಅವರು ಅಕಾಡೆಮಿಯ ಅಧ್ಯಕ್ಷ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡು, ಅಕಾಡೆಮಿಯ ಕಾರ್ಯಚಟುವಟಿಕೆಗಳನ್ನು ಆರಂಭಿಸಿದರು.

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS